ಅಲ್ರೀ .. ಪಕ್ಕದ್ಮನೆಯವರದ್ದು ಫೌ೦ಡೇಶನ್ ಅ೦ತೆ!!
ಅಲ್ರೀ.. ಪಕ್ಕದ್ಮನೆಯವರದ್ದು ಇವತ್ತು ಫೌ೦ಡೇಶನ್
ಅ೦ತೆ ಕಣ್ರೀ... ನಮ್ಮದೇನ್ರೀ ಕಥೆ?
ಮನೆ ಕಟ್ಟೋದಿರ್ಲಿ, ಸೈಟೇ ತಗೊ೦ಡಿಲ್ವಲ್ಲೆ|
ಬರೋ ಸ೦ಬಳ ಊಟಕ್ಕೇ ಸಾಕಾಗದಿರುವಾಗ
ಸೈಟೆಲ್ಲಿ೦ದ ತಗೋಳ್ಳೋದೆ?
ನೀನೇನಾದ್ರೂ ಉಳಿಸಿದ್ಯೇನೆ?
ಎಷ್ಟಿದೆ? ಏನ್ಕಥೆ?
ಏನೇ... ನೆನಪು ಮಾಡಿಕೋ, ಆ ದಿವಸ
ಸಮುದ್ರದ ದಡದಲ್ಲಿ ಮರಳಲ್ಲಿ ನಾನೊ೦ದು ಮನೆ ಕಟ್ಟಿದ್ದೆನಲ್ಲ
ಕ್ಷಣ ಮಾತ್ರದಲ್ಲಿ ನೀರಿನಲಿ ಕರಗಿ ಹೋದ ಆ ಕನಸಿನ ಸೌಧವ..
ನಮ್ಮೀಗಿನ ಪರಿಸ್ಥಿತಿಯೂ ಅದಕ್ಕಿ೦ತ ಭಿನ್ನವೇನಲ್ಲ!
ಬೇಡ ಬಿಡ್ರಿ.. ನಮ್ಮದೂ ಅ೦ತ ಮನೆ ಬೇಕು..
ಸರಿ.. ಅದ್ರೆ ಅದು ಅ೦ಥ೦ಥವರಿಗೆ ಮಾತ್ರ|
ಎಲ್ಲರೂ ಕಾಣೊ ಕನಸಲ್ಲ ಅದು?
ಕೊನೇವರೆಗೂ ಆರೋಗ್ಯ ಭಾಗ್ಯವಿದ್ದರೆ ಎಲ್ಲಿಯಾದರೂ
ಬಾಡಿಗೆ ಮನೆಯಲ್ಲಾದ್ರೂ ಇರಬಹುದು ರೀ..
ಬೇಸರ ಮಾಡಿಕೋಬೇಡ್ವೇ.. ನಮಗೂ ಒಳ್ಳೆಯ ಕಾಲ
ಬರುತ್ತೆ.. ನಮ್ಮ ಕನಸು ಸಮುದ್ರದ ಪಾಲಾಗೋಲ್ಲ|
ಈದಿನ ಕತ್ತಲೆ ಅಹುದು.. ನಾಳೆ ಸೂರ್ಯ ಹುಟ್ಟೇ ಹುಟ್ತಾನೆ..
ನಾವೂ ನಮ್ಮ ಸ್ವ೦ತ ಸೂರನ್ನು ಕಟ್ಟೇ ಕಟ್ತೀವಿ..
Rating
Comments
ನಾಡಿಗರೆ
ನಾಡಿಗರೆ
ಬಿಡಿ ಖಂಡೀತ ನಿಮದು ಮನೆ ಆಗುತ್ತೆ.
’ತಲ್ಲಣಿಸದಿರು ಕಂಡ್ಯ್ಹ ತಾಳು ಮನವೆ......"
.
ನಾನೆಲ್ಲೊ ಶೀರ್ಷಿಕೆ ನೋಡುವಾಗ ... ನಿಮ್ಮ ಸೈಟಿನಲ್ಲಿ ಪಕ್ಕದ ಮನೆಯವ ಫೌಂಡೇಶನ್ ಹಾಕಿದರೇನೊ ಅಂತ ಗಾಭರಿ ಯಾಗಿದ್ದೆ,
ಅವರದೆ ಸೈಟಿನಲ್ಲಿ ತಾನೆ ಹಾಕಿಕೊಳ್ಳಲಿ ಬಿಡಿ ...
:)))))
ಪಾರ್ಥಸಾರಥಿ
In reply to ನಾಡಿಗರೆ by partha1059
ನಾವಡರೆ ದಯಮಾಡಿ ಕ್ಷಮಿಸಿ,
ನಾವಡರೆ ದಯಮಾಡಿ ಕ್ಷಮಿಸಿ, ಆತುರದಲ್ಲಿ ನಾವಡರೆ ಹೋಗಿ ನಾಡಿಗರೆ ಆಗಿದೆ, ನೀವು ಹಾಗು ನಾಡಿಗರು ಇಬ್ಬರು ಕ್ಷಮಿಸಲಿ
In reply to ನಾಡಿಗರೆ by partha1059
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು..
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.. ಪಾರ್ಥರೇ,
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಬಂದೇ ಬರುತಾವ ಆ ದಿನ
ಬಂದೇ ಬರುತಾವ ಆ ದಿನ
ಮೂರು ಮಾಡಿ ಕಟ್ಟೋ ಸುದಿನ
In reply to ಬಂದೇ ಬರುತಾವ ಆ ದಿನ by bhalle
ಬರಲಿ.. ಕಾಯುತ್ತಿದ್ದೇನೆ...
ಬರಲಿ.. ಕಾಯುತ್ತಿದ್ದೇನೆ...
ನಿಮ್ಮ ಮೆಚ್ಚುಗೆಗೆ ಧನ್ಯಾದಗಳು ಭಲ್ಲೇಜಿ..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ರಾಘವೇಂದ್ರ ನಾವಡರೇ, ಮಧ್ಯಮ ವರ್ಗದ
ರಾಘವೇಂದ್ರ ನಾವಡರೇ, ಮಧ್ಯಮ ವರ್ಗದ ಬವಣೆಗಳಲ್ಲಿ ಮನೆಯ ಕನಸು ಕಾಣುವುದೇ ಅಪರಾಧವೇನೋ ಎನ್ನುವಷ್ಟರ ಮಟ್ಟಿಗೆ ಸೂರು ನಮ್ಮಿಂದ ದೂರವಾಗುತ್ತಿರುವುದು, ಇನ್ಮುಂದೆ ಮರಳ ಗೂಡುಗಳಲ್ಲೇ ಸಂತೃಪ್ತಿ ಕಾಣಬಹುದೇನೋ ....ಮುಂದಿನ ದಿನಗಳು ಇನ್ನೂ ಕಠಿಣ ನಮ್ಮಂಥವರ ಪಾಲಿಗೆ, ಕಾಲಾಯ ತಸ್ಮಾಯ ನಮ:...ಉತ್ತಮ ಬರಹ..
In reply to ರಾಘವೇಂದ್ರ ನಾವಡರೇ, ಮಧ್ಯಮ ವರ್ಗದ by lpitnal@gmail.com
ನೀವು ಹೇಳಿದ ಮಾತು ಸತ್ಯ..
ನೀವು ಹೇಳಿದ ಮಾತು ಸತ್ಯ.. ಗ್ರಾಮೀಣ ಭಾಗಗಳಲ್ಲಿಯೇ ಸ್ವ೦ತ ಸೂರನ್ನು ಹೊ೦ದುವುದು ಕಷ್ಟವಾಗಿರುವಾಗ ನಗರವಾಸಿ ಗಳ ಗತಿ?
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಇಟ್ನಾಳರೇ..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಬಂದೇ ಬರತಾವ ಕಾಲ!!
ಬಂದೇ ಬರತಾವ ಕಾಲ!!