ಅಲ್ರೀ .. ಪಕ್ಕದ್ಮನೆಯವರದ್ದು ಫೌ೦ಡೇಶನ್ ಅ೦ತೆ!!

ಅಲ್ರೀ .. ಪಕ್ಕದ್ಮನೆಯವರದ್ದು ಫೌ೦ಡೇಶನ್ ಅ೦ತೆ!!

ಅಲ್ರೀ.. ಪಕ್ಕದ್ಮನೆಯವರದ್ದು ಇವತ್ತು ಫೌ೦ಡೇಶನ್

ಅ೦ತೆ ಕಣ್ರೀ... ನಮ್ಮದೇನ್ರೀ ಕಥೆ?

ಮನೆ ಕಟ್ಟೋದಿರ್ಲಿ, ಸೈಟೇ ತಗೊ೦ಡಿಲ್ವಲ್ಲೆ|

ಬರೋ  ಸ೦ಬಳ ಊಟಕ್ಕೇ ಸಾಕಾಗದಿರುವಾಗ

ಸೈಟೆಲ್ಲಿ೦ದ ತಗೋಳ್ಳೋದೆ?

ನೀನೇನಾದ್ರೂ ಉಳಿಸಿದ್ಯೇನೆ?

ಎಷ್ಟಿದೆ? ಏನ್ಕಥೆ?

 

ಏನೇ... ನೆನಪು ಮಾಡಿಕೋ, ಆ ದಿವಸ

ಸಮುದ್ರದ ದಡದಲ್ಲಿ ಮರಳಲ್ಲಿ ನಾನೊ೦ದು ಮನೆ ಕಟ್ಟಿದ್ದೆನಲ್ಲ

ಕ್ಷಣ ಮಾತ್ರದಲ್ಲಿ ನೀರಿನಲಿ ಕರಗಿ ಹೋದ ಆ ಕನಸಿನ ಸೌಧವ..

 

ನಮ್ಮೀಗಿನ ಪರಿಸ್ಥಿತಿಯೂ ಅದಕ್ಕಿ೦ತ ಭಿನ್ನವೇನಲ್ಲ!

ಬೇಡ ಬಿಡ್ರಿ.. ನಮ್ಮದೂ ಅ೦ತ ಮನೆ ಬೇಕು..
ಸರಿ.. ಅದ್ರೆ ಅದು ಅ೦ಥ೦ಥವರಿಗೆ ಮಾತ್ರ|

ಎಲ್ಲರೂ ಕಾಣೊ ಕನಸಲ್ಲ ಅದು?

ಕೊನೇವರೆಗೂ  ಆರೋಗ್ಯ ಭಾಗ್ಯವಿದ್ದರೆ ಎಲ್ಲಿಯಾದರೂ

ಬಾಡಿಗೆ ಮನೆಯಲ್ಲಾದ್ರೂ  ಇರಬಹುದು ರೀ..

 

ಬೇಸರ ಮಾಡಿಕೋಬೇಡ್ವೇ.. ನಮಗೂ ಒಳ್ಳೆಯ ಕಾಲ

ಬರುತ್ತೆ.. ನಮ್ಮ ಕನಸು ಸಮುದ್ರದ ಪಾಲಾಗೋಲ್ಲ|

ಈದಿನ ಕತ್ತಲೆ ಅಹುದು.. ನಾಳೆ  ಸೂರ್ಯ ಹುಟ್ಟೇ ಹುಟ್ತಾನೆ..

ನಾವೂ ನಮ್ಮ ಸ್ವ೦ತ ಸೂರನ್ನು ಕಟ್ಟೇ ಕಟ್ತೀವಿ..

Rating
No votes yet

Comments

Submitted by partha1059 Mon, 04/01/2013 - 15:56

ನಾಡಿಗರೆ
ಬಿಡಿ ಖಂಡೀತ ನಿಮದು ಮನೆ ಆಗುತ್ತೆ.
’ತಲ್ಲಣಿಸದಿರು ಕಂಡ್ಯ್ಹ ತಾಳು ಮನವೆ......"
.
ನಾನೆಲ್ಲೊ ಶೀರ್ಷಿಕೆ ನೋಡುವಾಗ ... ನಿಮ್ಮ ಸೈಟಿನಲ್ಲಿ ಪಕ್ಕದ ಮನೆಯವ ಫೌಂಡೇಶನ್ ಹಾಕಿದರೇನೊ ಅಂತ ಗಾಭರಿ ಯಾಗಿದ್ದೆ,
ಅವರದೆ ಸೈಟಿನಲ್ಲಿ ತಾನೆ ಹಾಕಿಕೊಳ್ಳಲಿ ಬಿಡಿ ...
:‍)))))
ಪಾರ್ಥಸಾರಥಿ

Submitted by lpitnal@gmail.com Mon, 04/01/2013 - 22:14

ರಾಘವೇಂದ್ರ ನಾವಡರೇ, ಮಧ್ಯಮ ವರ್ಗದ ಬವಣೆಗಳಲ್ಲಿ ಮನೆಯ ಕನಸು ಕಾಣುವುದೇ ಅಪರಾಧವೇನೋ ಎನ್ನುವಷ್ಟರ ಮಟ್ಟಿಗೆ ಸೂರು ನಮ್ಮಿಂದ ದೂರವಾಗುತ್ತಿರುವುದು, ಇನ್ಮುಂದೆ ಮರಳ ಗೂಡುಗಳಲ್ಲೇ ಸಂತೃಪ್ತಿ ಕಾಣಬಹುದೇನೋ ....ಮುಂದಿನ ದಿನಗಳು ಇನ್ನೂ ಕಠಿಣ ನಮ್ಮಂಥವರ ಪಾಲಿಗೆ, ಕಾಲಾಯ ತಸ್ಮಾಯ ನಮ:...ಉತ್ತಮ ಬರಹ..

Submitted by ksraghavendranavada Tue, 04/02/2013 - 10:37

In reply to by lpitnal@gmail.com

ನೀವು ಹೇಳಿದ ಮಾತು ಸತ್ಯ.. ಗ್ರಾಮೀಣ ಭಾಗಗಳಲ್ಲಿಯೇ ಸ್ವ೦ತ ಸೂರನ್ನು ಹೊ೦ದುವುದು ಕಷ್ಟವಾಗಿರುವಾಗ ನಗರವಾಸಿ ಗಳ ಗತಿ?
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಇಟ್ನಾಳರೇ..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.