ಯುಗಾದಿಯೂ ಮತ್ತು ನನ್ನ ಬೋಳುತಲೆಯೂ..
ಯುಗಾದಿ ಹಬ್ಬ ಬಂದಾಗಲೆಲ್ಲಾ ನನಗೆ ಒಂದು ಅನುಮಾನ ಕಾಡುತ್ತಲೇ ಇರುತ್ತದೆ. ಈ ಯುಗಾದಿ ಹಬ್ಬದ ಪರಿಣಾಮವೇ ಇರಬಹುದು ಇಂದು ನಾನು ಬೋಳುತಲೆಯವನಾಗಿರಲು ಕಾರಣ ಎಂದು. ನಾನು ಚಿಕ್ಕವನಿದ್ದಾಗ ನನ್ನ ಅಮ್ಮ ಪ್ರತಿ ಯುಗಾದಿಯಂದು ನನ್ನ ಮೈಕೈಯಿಗೆಲ್ಲಾ ಉಗುರುಬೆಚ್ಚಗಿನ ಹರಳೆಣ್ಣೆ ಹಚ್ಚಿ ಹುಡುಗಿಯರ ಕೂದಲಿನಂತೆ ಸೊಂಪಾಗಿದ್ದ ನನ್ನ ತಲೆಗೂ ಹರಳೆಣ್ಣೆ ತಿಕ್ಕಿ ಸೀಗೆ ಕಾಯಿ ಪುಡಿ ಹಾಕಿ ಉಜ್ಜಿ ಉಜ್ಜಿ ಸ್ನಾನ ಮಾಡಿಸುತ್ತಿದ್ದುದರಿಂದಲೇ ಇಂದು ನಾನು ಅಮ್ಮ ಹಾಗೆ ಉಜ್ಜುತಿದ್ದ ನೆತ್ತಿಯ ಭಾಗದಿಂದ ಹಿಡಿದು ಹಣೆಯವರೆಗೆ ಬೋಳು ತಲೆಯವನಾಗಿಬಿಟ್ಟಿದ್ದೇನೆ ಅನಿಸುತ್ತದೆ. ಮೊನ್ನೆ ಊರಿಗೆ ಹೋದಾಗ ಮುನಿಸಿನಿಂದ ಅದೇ ವಿಷಯವನ್ನು ಅಮ್ಮನಿಗೆ ಹೇಳಿ ನನ್ನ ಅಸಮಾಧಾನ ವ್ಯಕ್ತಪಡಿಸಿದೆ. ಅಮ್ಮ ನಗುತ್ತಲೇ ನಿನಗಾದರೂ ಅಕ್ಕಪಕ್ಕ ಇಷ್ಟಾದರೂ ಕೂದಲಿದೆ.. ನಿನ್ನ ಮುತ್ತಾತನ ತಲೆ ಪೂರ್ತೀ ತಾಮ್ರದ ಬಿಂದಿಗೆಯಾಗಿ ಬಿಸಿಲಿಗೆ ಲಕ ಲಕ ಅಂತ ಹೊಳೆಯುತಿತ್ತು ಅಂದಾಗ ಅಮ್ಮ ಹೇಳುವುದರಲ್ಲಿ ಅರ್ಥವಿದೆ ಅನ್ನಿಸಿತ್ತು. ಅಮ್ಮ ನಾನು ಅಂದಿದ್ದಕ್ಕೆ ನನ್ನ ಮಗ ಬೇಜಾರು ಮಾಡಿಕೊಂಡನೋ ಏನೋ ಅಂದುಕೊಂಡು ತಕ್ಷಣವೇ ತಲೆ ಮೇಲೆ ಕೂದಲಿಲ್ಲದೇ ಇದ್ರೆ ಏನಾಯ್ತ ಬಿಡೋ ತಲೆ ಒಳಗಡೆ ಚೆನ್ನಾಗಿರೋದೈತಲ್ಲಾ.. ಅಂದಾಗ ಇನ್ನೂ ನನ್ನನ್ನು ಚಿಕ್ಕಮಗುವೆಂದುಕೊಳ್ಳುವ ಅಮ್ಮನ ಪ್ರೀತಿಗೆ ನನ್ನ ಕಣ್ಣು ಮಂಜಾಗಿತ್ತು. ಏನೇ ಆದರೂ ಯುಗಾದಿಯ ದಿನ ಮತ್ತೆ ಮತ್ತೆ ಅಮ್ಮನೇ ನನ್ನ ತಲೆ ಬೋಳಾಗಲು ಕಾರಣ ಅಂತ ಅನ್ನಿಸಲು ಶುರುವಾಗುತ್ತದೆ.
ಇತ್ತಿಚೆಗಂತೂ ಬಿಸಿಲು ಜಾಸ್ತಿಯಾಗಿ ಯಾರಾದರೂ ನನ್ನ ತಲೆ ನೋಡುತ್ತಲೇ ಏನ್ಸಾರ್ ತುಂಬಾ ಬಿಸಿಲು ಅಂದಾಗ ನನಗೆ ತಡೆಯಲಾಗದ ಕೋಪ ಬರುತ್ತದೆ. ಬಿಸಿಲು ಸೂರ್ಯನಿಂದ ಬರ್ತಾ ಇದೇರಿ.. ನನ್ನ ತಲೆಯಿಂದ ಅಲ್ಲ ಅಂತ ಹೇಳಬೇಕೆನಿಸಿದರೂ ಹೇಳಲಾಗದೇ ಸುಮ್ಮನಾಗಿ ಪೆಚ್ಚು ನಗೆ ನಗುತ್ತೇನೆ. ಕೆಲವರಂತೂ ನನ್ನ ಬೋಳುತಲೆಯನ್ನೇ ದಿಟ್ಟಿಸಿ ಇನ್ನೂ ಎಷ್ಟು ವರ್ಷ ಇದೆ ಸಾರ್ ಸರ್ವೀಸು ಎಂದಾಗ ಯಾವ ಸರ್ವೀಸಪ್ಪಾ ಭೂಮಿ ಮೇಲಿನದೋ.. ಅಥವಾ ನನ್ನ ಕೆಲಸದ್ದೋ ಎಂದು ಅನುಮಾನವಾಗುತ್ತದೆ. ರೀ ಸ್ವಾಮೀ.. ನನಗೆ ಇನ್ನೂ ಹದಿಮೂರು ವರ್ಷ ಇದೆ ಕೆಲಸದಿಂದ ರಿಟೈರ್ ಆಗೋದಿಕ್ಕೆ ಅಂತ ಹೇಳಿ ಮನಸ್ಸಿನಲ್ಲಿಯೇ ಅಲ್ಲಿಯವರೆಗೂ ನಿಮ್ಮಂಗೆ ಕೇಳೋರಿಗೆಲ್ಲಾ ಪಾಠ ಮಾಡ್ತಾನೇ ಇರ್ಬೇಕು.. ಅಂದುಕೊಳ್ಳುತ್ತೇನೆ. ಅಷ್ಟೋಂದು ಇದೆಯಾ ಸಾರ್ ಅಂತ ನಾನೇನಾದರೂ ನನ್ನ ಜನ್ಮ ದಿನಾಂಕವನ್ನು ತಪ್ಪು ಕೊಟ್ಟಿರಬಹದೇನೋ ಎಂದು ಸಂಶಯ ವ್ಯಕ್ತಪಡಿಸುವ ಜನರನ್ನು ಕಂಡಾಗ ನನಗೆ ನನ್ನ ಅಮ್ಮನ ನೆನಪಾಗುತ್ತದೆ.
ನೆನ್ನೆ ದಿನ ಬೇವಿನ ಸೊಪ್ಪು, ಮಾವಿನ ಸೊಪ್ಪು ತರಲು ಮೈನ್ ರೋಡಿಗೆ ಹೋದಾಗ ಅದನ್ನು ಮಾರುತ್ತಿದ್ದ ಹೆಂಗಸು ‘ಏನ್ಸಾಮಿ ಇಷ್ಟೊಂದು ಬಿಸಿಲು.. ಟೋಪಿನಾದ್ರೂ ಹಾಕ್ಕೊಂಡು ಬರಬಾರದಿತ್ತಾ..’ ಎಂದು ಆಕೆ ನಿಜವಾದ ಕಾಳಜಿ ವ್ಯಕ್ತಪಡಿಸಿದರೂ ನನಗೆ ಸಿಟ್ಟು ಬರದೇ ಇರಲಿಲ್ಲ. ವ್ಯಾಪಾರ ಮಾಡೋದಿಕ್ಕೆ ಕುಂತಿದೀಯೋ.. ತಲೆ ನೋಡೋದಿಕ್ಕೆ ಕುಂತಿದೀಯೋ..’ ಅಂತ ರೇಗಿಬಿಟ್ಟೆ. ಆಕೆಯೇನೂ ಬೇಸರ ಮಾಡಿಕೊಳ್ಳಲಿಲ್ಲ. ‘ನಮ್ಮ ಯಜಮಾನಂಗೂ ನಿಮ್ಮ ತರಾನೇ ತಲೆ ಬೋಳಾಗದೆ ಅದುಕ್ಕೇ ಹೇಳಿದೆ..’ ಅಂದು ಕಿಸಕ್ಕನೇ ನಕ್ಕಾಗ ನನಗೆ ಅಳಬೇಕೋ ನಗಬೇಕೋ ತಿಳಿಯಲಿಲ್ಲ. ತೆಪ್ಪಗೆ ಬೇವು-ಮಾವು ಎರಡನ್ನೂ ಮನೆಗೆ ತಂದೆ.
Comments
ಕೂದಲೆಲ್ರೀ- ಅಂದರೆ "ತಿಮ್ಮಪ್ಪ
In reply to ಕೂದಲೆಲ್ರೀ- ಅಂದರೆ "ತಿಮ್ಮಪ್ಪ by ಗಣೇಶ
ಗಣೇಶ್ ರವರೇ.. ಸುಮ್ಮನೆ
;()))
In reply to ;())) by venkatb83
ಸಪ್ತಗಿರಿವಾಸಿ ವೆ೦ಕಟೇಶ್ ರವರೇ..
In reply to ಸಪ್ತಗಿರಿವಾಸಿ ವೆ೦ಕಟೇಶ್ ರವರೇ.. by tthimmappa
"ಬಾಹ್ಯ ರೂಪಕ್ಕಿ೦ತ ಆ೦ತರಿಕ
In reply to "ಬಾಹ್ಯ ರೂಪಕ್ಕಿ೦ತ ಆ೦ತರಿಕ by venkatb83
.........> ಈಗೆಲ್ಲಾ ಚೆನ್ನಾಗಿ
In reply to .........> ಈಗೆಲ್ಲಾ ಚೆನ್ನಾಗಿ by Shreekar
ಶ್ರೀಕರ್ ರವರೇ ನೀವು ಮು೦ದಿನ
In reply to .........> ಈಗೆಲ್ಲಾ ಚೆನ್ನಾಗಿ by Shreekar
" ಬೋಡು ತಲೆಯವರಿಗೆ ಸೆಕ್ಸ್
In reply to " ಬೋಡು ತಲೆಯವರಿಗೆ ಸೆಕ್ಸ್ by venkatb83
ನುಣ್ಣಗೆ ಬೋಡು ಹೊಡೆಸಿದ ಶ್ರೀಕರ್
In reply to "ಬಾಹ್ಯ ರೂಪಕ್ಕಿ೦ತ ಆ೦ತರಿಕ by venkatb83
ಎಲ್ಲವೂ ಎಲ್ಲರಿಗೂ
In reply to ಎಲ್ಲವೂ ಎಲ್ಲರಿಗೂ by tthimmappa
;()00