ಅಶೋಕ್ ಕುಮಾರ್ ಇನ್ನಿಲ್ಲ

ಅಶೋಕ್ ಕುಮಾರ್ ಇನ್ನಿಲ್ಲ

ಶನಿವಾರದ ಈ ಮಧ್ಯಾಹ್ನ ಸುಮ್ಮನೆ ಫೇಸ್ ಬುಕ್ ಮೇಲೆ ಕಣ್ಣಾಡಿಸುತ್ತಿದ್ದಾಗ ಕಂಡದ್ದು ಈ ಶಾಕಿಂಗ್ ಸುದ್ದಿ. ತಮ್ಮ

"ಓದಿದ್ದು ಕೇಳಿದ್ದು ನೋಡಿದ್ದು" ಅಂಕಣದ ಮೂಲಕ ಸಂಪದಿಗರಿಗೆ ಚಿರಪರಿಚಿತರಾಗಿದ್ದ ನಿಟ್ಟೆಯ ಪ್ರೊ.ಅಶೋಕ್ ಕುಮಾರ್ ಇನ್ನಿಲ್ಲ! 

ನಾನು ಅಶೋಕರನ್ನು ಮುಖತ: ಭೇಟಿಯಾದದ್ದು ಎರಡು ಬಾರಿ ಮಾತ್ರ. ಒಮ್ಮೆ ನಿಟ್ಟೆಯಲ್ಲಿ ನಡೆದಿದ್ದ ಲಿನಕ್ಸ್ ಹಬ್ಬದಲ್ಲಿ.ಮತ್ತೊಮ್ಮೆ ಮಂಗಳೂರಿನಲ್ಲಿ ನಡೆದ "ನೀರು ಸಂರಕ್ಷಣೆ" ಕಾರ್ಯಗಾರದಲ್ಲಿ. ಈ ಎರಡೇ ಭೇಟಿಗಳಲ್ಲಿ ಅವರ ಸ್ನೇಹ, ಸೌಜನ್ಯ,ನಿಗರ್ವಗಳ ಸಮ್ಯಕ್ ಪರಿಚಯವಾಗಿತ್ತು. ನಾನು ಅವರ ಉದಯವಾಣಿ ಅಂಕಣ "ನಿಸ್ತಂತು ಸಂಸಾರ"ದ ಖಾಯಂ ಓದುಗ.ನಿಟ್ಟೆಯಲ್ಲಿ ಓದಿದ ನನ್ನ ಸಹದ್ಯೋಗಿ ಮಿತ್ರರು ಅಶೋಕರನ್ನು ಒಬ್ಬ ಶ್ರೇಷ್ಥ ಶಿಕ್ಷಕರಾಗಿ ನೆನಯುತ್ತಾರೆ. ಎಳವೆಯಲ್ಲೇ ಒಬ್ಬ ಅತ್ತ್ಯುತ್ತಮ ಮನುಷ್ಯನ್ನ ಕಳೆದುಕೊಂಡಿದ್ದೇವೆ. ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ :-(

 

Comments

Submitted by ananthesha nempu Sat, 04/27/2013 - 17:17

ಅವರ‌ ಬ್ಲಾಗಿನ‌ ನಿಯಮಿತ‌ ಓದುಗನಾಗಿದ್ದೆ ನಾನು, ಅನೇಕ‌ ಪತ್ರಿಕೆಗಳ‌ ಪ್ರಮುಖ‌ ಸುದ್ದಿಯನ್ನು ಓದಲು ಅವರಿಮ್ದ‌ ಸಹಾಯವಾಗುತ್ತಿತ್ತು. ಉತ್ತಮ‌ ಮಾಹಿತಿಯುಳ್ಳ‌ ಅವರ‌ ಲೇಖನಗಳು ಎಲ್ಲರ‌ ಮೆಚ್ಚುಗೆಗೆ ಪಾತ್ರವಾಗಿದ್ದವು. ಸಮ್ಪದದಲ್ಲೂ ಕೂಡ‌ ತಮ್ಮ‌ ಸೌಜನ್ಯಯುತ‌ ಪ್ರತಿಕ್ರಿಯೆಗಳಿಮ್ದ‌ ಸಕ್ರಿಯರಾಗಿದ್ದರು. ಇಮ್ತವರು ನಮ್ಮನ್ನಗಲಿದ್ದು ಬಹಳ‌ ಬೇಸರದ‌ ಸಮ್ಗತಿ :(
Submitted by swara kamath Sat, 04/27/2013 - 17:49

ರಾಮ ಕುಮಾರ್ ಅವರೆ , 'ಎ.ಅಶೋಕ್ ಕುಮಾರ್ ' ಇನ್ನಿಲ್ಲ ವೆಂದು ತಿಳಿದು ಮನಸ್ಸಿಗೆ ಬೇಸರವಾಯಿತು. ಹಲವು ಉಪಯುಕ್ತ ಲೇಖನಗಳಿಂದ ಸಂಪದ ಓದುಗರಿಗೆ ತುಂಬಾ ಆಪ್ತವಾಗಿದ್ದರು . ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ಯನ್ನು ದಯಪಾಲಿಸಲಿ ಎಂದು ಬೇಡುತ್ತೇನೆ, ವಂದನೆಗಳು......ರಮೇಶ್ ಕಾಮತ್.
Submitted by venkatb83 Sat, 04/27/2013 - 18:09

ಎ ಅಶೋಕ್ ಕುಮಾರ್ ಅವರ ಬರಹಗಳನ್ನು ಸಂಪದದಲ್ಲಿ ಮತ್ತು ದಿನಪತ್ರಿಕೆಯಲ್ಲಿ ಅಲ್ಲದೆ ಅವರ ಬ್ಲಾಗ್ನಲ್ಲೂ ಓದುತ್ತಿದ್ದೆ . ಮಾಹಿತಿ ತಂತ್ರಜ್ಞಾನ ವಿಜ್ಞಾನ ಸಂಶೋಧನೆಗಳ ಬಗ್ಗೆ ಬರಹಗಳನ್ನು ಅತಿ ಸರಳವಾಗಿ ಓದುಗರಿಗೆ ಅರ್ಥವಾಗುವ ಹಾಗೆ ಮತ್ತು ನಿಯಮಿತವಾಗಿ ಬರೆಯುತ್ತಿದ್ದ ಅವರು ಈ ಮೊದಲು ಸಂಪದದಲ್ಲಿ ಸಕ್ರಿಯರಾಗಿದ್ದು ಆಗ ಬರುತ್ತಿದ್ದ ಹಲವು ಬರಹಗಳಿಗೆ ಪ್ರತಿಕ್ರಿಯಿಸುತ್ತಿದ್ದರು. ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಬರು ಬರುತ್ತಾ ಅವರ ಕೆಲಸದೊತ್ತಡದ ಮಧ್ಯೆ ಇಲ್ಲಿನ ಬರಹಗಳನ್ನು ಓದಲು ಸಾಧ್ಯವಾದರೂ ಪ್ರತಿಕ್ರಿಯಿಸಲು ಆಗುತ್ತಿರಲಿಲ್ಲ ಅನ್ನಿಸುತ್ತಿದೆ , ಆ ಬಗ್ಗೆ ಅವ್ರಿಗೆ ನಾ ದೂರಿ ಒಮ್ಮೆ ಬರೆದಿದ್ದೆ ..!! ಅವರ ಪ್ರತಿಕ್ರಿಯೆಗಳನ್ನು ನನ್ನ ಮೊದಲ ( ೪ ವರ್ಷ ಹಿಂದಿನ ಬರಹಗಳನ್ನು ) ಬರಹಗಳು ಮತ್ತು ಗಣೇಶ್ ಅಣ್ಣ ಅವರ ಬರಹಗಳನ್ನು ಗಮನಿಸಿದ್ದರೆ ಅಶೋಕ್ ಕುಮಾರ್ ಅವರು ಅಲ್ಲಿ ಪ್ರತಿಕ್ರಿಯಿಸಿದ್ದು ತಿಳಿವದು.. ಅಶೋಕ್ ಕುಮಾರ್ ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಮನೆಯವರ್ಗೆ ನೀಡಲಿ .. \।
Submitted by partha1059 Sat, 04/27/2013 - 19:54

ಛೆ!! ಈ ತಿಂಗಳು ಏಕೊ ಬೇಸರವೆನಿಸಿತು , ಬರಿ ಅಶುಭ ಸುದ್ದಿಗಳು, ಮನಸಿಗೆ ಎಂತದೊ ಕ್ಲೇಶ, ಆಶೋಕ ಕುಮಾರರ ಲೇಖನಗಳನ್ನು ನಾನು ಬಹಳ ಹಿಂದಿನಿಂದಲೆ ಓದುತ್ತಿದ್ದೆ, ಸಂಪದದಲ್ಲಿ ಅಲ್ಲದೆ, ಪತ್ರಿಕೆಗಳಲ್ಲು ಸಹ ಬಹುಷಃ ಸಂಪದದಲ್ಲಿ ಅವರ ಕಡೆಯ ಪ್ರಕಟಣೆ: ಮಾರ್ಚಿ ೨೫ ರಂದ್ಉ 'ಕಣ್ಣ ನೋಟದಲ್ಲಿ ಗಾಲಕ್ಸಿಯ ನಿಯಂತ್ರಿಸು; ಇಲ್ಲಿದೆ ಕಣನೋಟದಲ್ಲೆ...
Submitted by makara Sat, 04/27/2013 - 21:46

ಮಾಹಿತಿ ತಂತ್ರಜ್ಞಾನದ ಅಪ್-ಡೇಟ್ಗ್‌ಗಳನ್ನು ತಿಳಿದು ಕೊಳ್ಳಬೇಕಾದರೆ ನೆರವಾಗುತ್ತಿದ್ದುದು ಖಂಡಿತಾ ಅಶೋಕ್ ಕುಮಾರ್ ಅವರ ಅಂಕಣ ಬರಹಗಳು. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ.
Submitted by ಗಣೇಶ Sun, 04/28/2013 - 00:31

ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ :-( ನಮ್ಮೆಲ್ಲರ ನೆಚ್ಚಿನ ಅಶೋಕ್ ಇನ್ನಿಲ್ಲ -ಬಹಳ ಬೇಸರದ ಸುದ್ದಿ. ಎಲ್ಲರಂತೇ ನಾನೂ ಅವರ "ಓಕೇನೋ"( http://sampada.net/… ) ದ ಅಭಿಮಾನಿಯಾಗಿದ್ದೆ. ಮೊದಲೆಲ್ಲಾ ಬೇರೆ ಬೇರೆ ಪತ್ರಿಕೆಗಳ ಉತ್ತಮ ಉಪಯುಕ್ತ ಸುದ್ದಿಗಳು ಜೊತೆಗೆ ವ್ಯಂಗ್ಯಚಿತ್ರಗಳ ತುಣುಕುಗಳನ್ನು ಸೇರಿಸಿ "ಓಕೇನೋ" ಬರೆಯುತ್ತಿದ್ದರು. ಎಲ್ಲಾ ಪತ್ರಿಕೆಗಳಿಂದ ವಿಷಯ ಸಂಗ್ರಹಿಸಿ ನಮಗೆ ಉಣಬಡಿಸುತ್ತಿದ್ದುದಕ್ಕೆ ಧನ್ಯವಾದಗಳನ್ನೂ, ಜತೆಗೆ ೨೦೦ ತಲುಪಿದಕ್ಕೆ ಶುಭಾಶಯನೂ ಹೇಳಲು ಸ್ವಲ್ಪ ಹಾಸ್ಯ ಬೆರೆಸಿ (ಅವರ ಒಪ್ಪಿಗೆ ಪಡೆದು) http://sampada.net/… ಸಂಪದದಲ್ಲಿ ಬರೆದಿದ್ದೆ; ಇನ್ನೂ ನಂಬಲಾಗುತ್ತಿಲ್ಲ.ನಿನ್ನೆ ಮಿಶ್ರಿಕೋಟಿಯವರ ಲೇಖನ http://sampada.net/… ಓದಿದಾಗ, ಅದಕ್ಕೆ ಪಾರ್ಥರ ಪ್ರತಿಕ್ರಿಯೆ- " ಹಾಗೆ ನಮ್ಮ ಜೀವನದ ಚಿಕ್ಕ ದೊಡ್ಡ ಗುರಿಗಳು ಇರುತ್ತವೆ (ನೀವು ಹೇಳಿರುವುದು ಎಲ್ಲವು ಸೇರಿ) ಅದನ್ನೆಲ್ಲ ಮಾಡಿ ಮುಗಿಸುವೆವೊ ಇಲ್ಲವೊ ಗೊತ್ತಿಲ್ಲ . ಕಡೆಗೊಮ್ಮೆ ಕಂಡೆಕ್ಟರ್ ಕೂಗಿದಾಗ ಅರ್ದ ನಿದ್ರೆಯಲ್ಲಿದ್ದರು ಸರಿ, ಎದ್ದು ಬಸ್ಸನ್ನು ಇಳಿದು ಹೋಗಲೆ ಬೇಕು. ಅರ್ದ ನಿದ್ರೆಯಿಂದ ಮತ್ತೊಂದು ನಿದ್ರೆಗೆ ....ಅಮೋಘ್ಹ ನಿದ್ರೆಗೆ .. " ಓದಿದಾಗ ಏನೋ ಒಂಥರ ತಳಮಳ ಬೇಸರ ಆಯಿತು. ಸಾಯಬೇಕೆಂದಿದ್ದವರು ಸಾಯುವುದಿಲ್ಲ,ಸಾಧಿಸಬೇಕೆಂದಿದ್ದವರು ಸಾಯುವರು..:( ದೇವರು ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಅವರ ಮನೆಯವರಿಗೆ ನೀಡಲಿ.
Submitted by hamsanandi Sun, 04/28/2013 - 20:42

ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ :( ಅಶೋಕ್ ಅವರನ್ನು ನೇರವಾಗಿ ನೋಡಿರದಿದ್ದರೂ, ಅವರ ಓಕೇನೋ ಮತ್ತಿತರ ಅಂಕಣಗಳಿಂದ ಬಹಳ ಪರಿಚಿತರೇ ಆಗಿದ್ದರು. ಮೊನ್ನೆ ಟ್ವಿಟರ್ ನಲ್ಲಿ ವಾಸುದೇವ್ ಕಾಮತ್ ಹಾಕಿದ ಈ ಸುದ್ದಿಯನ್ನು ನೋಡಿದೊಡನೆ ಬಹಳ ಬೇಸರವಾಯಿತು. ನಾನು ಮರುಳಾಗಿದ್ದ ಬ್ಲಾಗುಗಳಲ್ಲಿ ಅವರ ಓಕೇನೋ ಕೂಡ ಒಂದು - http://hamsanada.bl…
Submitted by H A Patil Sun, 04/28/2013 - 20:56

ರಾಮ ಕುಮಾರರಿಗೆ ವಂದನೆಗಳು ಅಶೋಕ ಕುಮಾರರ ಅಗಲಿಕೆ ಕನ್ನಡ ಸಾರಸ್ವತಲೋಕಕ್ಕೆ ಒಂದು ತುಂಬ ಲಾಗದ ನಷ್ಟ. ಅವರಿಗೆ ಸದ್ಗತಿ ಪ್ರಾಪ್ತವಾಗಲಿ.
Submitted by VeerendraC Mon, 04/29/2013 - 10:34

ಓ ...... ದೇವರೇ ನ0ಬಲ್ಲಿಕ್ಕೆ ಸಾದ್ಯವಾಗುತ್ತಿಲ್ಲ್... ಪ್ರತಿವಾರವು ಅವರ‌ ಅ0ಕಣವು ಸ0ಪದಲ್ಲಿ ತಪ್ಪದೇ ಓದುತ್ತಿದ್ದೆ.. ಅವರನ್ನು ಕಳೆದುಕೊ0ಡು ಸ0ಪದ ಬಡವಾಗಿದೆ.. ಅವರ ಆತ್ಮಕ್ಕೆ ದೇವರು ಚಿರಶಾ0ತಿಯನ್ನು ಕೊಡಲಿ
Submitted by kavinagaraj Mon, 04/29/2013 - 16:34

ವಿಷಯ ತಿಳಿದು ಗರಬಡಿದಂತಾಯಿತು. ಅವರ ಪರಿಚಯಾತ್ಮಕ ಲೇಖನವನ್ನು ಯಾರಾದರೂ ಬರೆಯಲೆಂದು ಆಶಿಸುವೆ. ಅವರ ಆತ್ಮಕ್ಕೆ ಶಾಂತಿಯಿರಲಿ.
Submitted by lpitnal@gmail.com Mon, 04/29/2013 - 19:50

ಪ್ರೊ. ಅಶೋಕಕುಮಾರ ರವರ ಆತ್ಮಕ್ಕೆ ಶಾಂತಿ ಕೋರುವೆ, ಅವರ ಅಗಲಿಕೆಯ ದು:ಖವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸುವೆ..
Submitted by abdul Thu, 05/02/2013 - 19:16

ನನ್ನ 'ಹಳೇ ಸೇತುವೆ' ಬ್ಲಾಗ್ ಗೆ ನಿರೀಕ್ಷೆಗಿಂತ ಹೆಚ್ಚಿನ ಟ್ರಾಫಿಕ್ ಗಮನಿಸಿದಾಗ ತಿಳಿಯಿತು 'ನಿಸ್ತಂತು ಸಂಸಾರ' ದ ತಮ್ಮ ಅಂಕಣದಲ್ಲಿ ಶ್ರೀಯುತ ಅಶೋಕ್ ನನ್ನ ಬ್ಲಾಗ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದರು ಎಂದು. 'ಟ್ವಿಟ್ಟರ್' ನ ಲ್ಲೂ ಕೂಡ ಕೆಲವೊಮ್ಮೆ ನನ್ನ ಟ್ವೀಟ್ ಗಳಿಗೆ ಪ್ರತಿಕ್ರಯಿಸಿದ್ದರು ಅಶೋಕ್. ಅಶೋಕ್ ರಂಥ ದೊಡ್ಡ ಮನುಷ್ಯ ನನ್ನಂಥ ಚಿಕ್ಕ ಮಟ್ಟದ ಬ್ಲಾಗಿ ಗಳನ್ನು ಪ್ರೋತ್ಸಾಹಿಸಿದ್ದು ನನಗೆ ಖುಷಿ ಕೊಟ್ಟಿತ್ತು. ಆದರೆ ಅದಕ್ಕಾಗಿ ಅವರಿಗೆ ಧನ್ಯವಾದ ಹೇಳಲಾಗಲಿಲ್ಲ, ಅದೇ ಸಮಯ ಅವರ ಅಕಾಲಿಕ ಸಾವಿಗೆ ಶೋಕ ವ್ಯಕ್ತ ಪಡಿಸುವ ದೌರ್ಭಾಗ್ಯ ನನಗೆ ಬರುತ್ತೆ ಎಂದು ಎಣಿಸಿರಲಿಲ್ಲ. ಅವರ ಆತ್ಮಕ್ಕೆ ಶಾಂತಿಯನ್ನೂ, ಅವರ ಮನೆಯವರಿಗೆ ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನೂ ಭಗವಂತ ದಯಪಾಲಿಸಲಿ ಎಂದು ನನ್ನ ದುಃಖ ಭರಿತ ಪ್ರಾರ್ಥನೆ.