ಮರಗಳಲ್ಲಿ ಲಿಂಗ ಬೇಧ

ಮರಗಳಲ್ಲಿ ಲಿಂಗ ಬೇಧ

ವಾಸ್ತು ಶಾಸ್ತ್ರದಲ್ಲಿ ನಾವು ಮನೆ ನಿರ್ಮಿಸಲು ಬಳಸುವ ಮರಗಳನ್ನು ಪುರುಷ,ಸ್ತ್ರೀ,ನಪುಂಸಕ ಮರಗಳೆಂಬ ಬೇಧಗಳನ್ನು ವಿವರಿಸಿದೆ


ಇದರಲ್ಲಿ ಮೂರು ವಿಭಾಗಗಳನ್ನು ಈರೀತಿ ವಿವರಿಸಲಾಗಿದೆ.


ಪುರುಷ ಜಾತಿಯ ಮರ...


ಯಾವುದೇ ಮರದ ಎಲೆಯನ್ನು ಪರಿಶೀಲಿಸಿದಾಗ ಆ ಎಲೆಯ ಮಧ್ಯಭಾಗದಲ್ಲಿ ರೇಖೆಯ ಮಾದರಿಯ ಸಣ್ಣ ನಾರು ಹಾದು ಎಲೆಯ ತುದಿಯನ್ನು ಸೆರುತ್ತದೆ.


ಈ ನಾರಿನ  ಎರಡೂ ಪಕ್ಕಗಳಲ್ಲಿರುವ ಸಣ್ಣ ನರಗಳನ್ನು ಲೆಕ್ಕ ಹಾಕಿದಾಗ ಬಲ ಪಾಶ್ವದಲ್ಲಿರುವ ಉಪನಾರುಗಳು


ಸಮ ಸಂಖ್ಯೆಯಲ್ಲಿಯೂ ಎಡ ಪಾಶ್ವದಲ್ಲಿರುವ  ಉಪನರಗಳು ಬೆಸ ಸಂಖ್ಯೆಯಲ್ಲಿಯೂ ಇದ್ದರೆ ಅದು ಪುರುಷ ಜಾತಿಯ ಮರ


ಸ್ತ್ರೀ ಜಾತಿಯ ಮರ...


ಮರದ ಎಲೆಯನ್ನು ಪರಿಶೀಲಿಸಿದಾಗ ಆ ಎಲೆಯ ಮಧ್ಯಭಾಗದಲ್ಲಿ ರೇಖೆಯ ಮಾದರಿಯ ಸಣ್ಣ ನಾರು ಹಾದು ಎಲೆಯ ತುದಿಯನ್ನು ಸೆರುತ್ತದೆ.


ಈ ನಾರಿನ  ಎರಡೂ ಪಕ್ಕಗಳಲ್ಲಿರುವ ಸಣ್ಣ ನರಗಳನ್ನು ಲೆಕ್ಕ ಹಾಕಿದಾಗ  ಎಡ ಪಾಶ್ವದಲ್ಲಿರುವ ಉಪನಾರುಗಳು


ಸಮ ಸಂಖ್ಯೆಯಲ್ಲಿಯೂ  ಬಲ ಪಾಶ್ವದಲ್ಲಿರುವ  ಉಪನರಗಳು ಬೆಸ ಸಂಖ್ಯೆಯಲ್ಲಿಯೂ ಇದ್ದರೆ ಅದು ಸ್ತ್ರೀ ಜಾತಿಯ ಮರ


ನಪುಂಸಕ ಜಾತಿಯ ಮರ...


ಈ ನಾರಿನ  ಎರಡೂ ಪಕ್ಕಗಳಲ್ಲಿರುವ ಸಣ್ಣ ನರಗಳನ್ನು ಲೆಕ್ಕ ಹಾಕಿದಾಗ  ಎಡ ಪಾಶ್ವದಲ್ಲಿರುವ ಉಪನಾರುಗಳು


ಸಮ ಸಂಖ್ಯೆಯಲ್ಲಿ ಇದ್ದರೆ ಅದು ನಪುಂಸಕ ಜಾತಿಯ ಮರ.


ನಪುಂಸಕ ಜಾತಿಯ ಮರಗಳನ್ನು ದೇವಾಲಯ  ಆಶ್ರಮ ಮತ್ತು ಧಾರ್ಮಿಕ ಕಟ್ಟಡಗಳಿಗೆ ಉಪಯೋಗಿಸ ಬೇಕು.


ಪುರುಷ ಜಾತಿಗೆ ಸೇರಿದ ಮರಗಳನ್ನು ಬಳಸಿದ ಮನೆಯಲ್ಲಿ ಪುರುಷರ  ಅಧಿಕಾರ ಜಾಸ್ತಿ ಹಾಗೂ ಸ್ತ್ರೀ ಜಾತಿಗೆ


ಸೇರಿದ ಮರಗಳನ್ನು ಬಳಸಿದ ಮನೆಗಳಲ್ಲಿ ಸ್ತ್ರೀ ಅಧಿಕಾರವೇ ಹೆಚ್ಚಾಗಿರುವುದಂತೆ.


" ಈ ಮಾಹಿತಿ  ಓದಿದ ಮೇಲೆ ನಿಮ್ಮ ಮನೆಯಲ್ಲಿ ಉಪಯೋಗಿಸಿದ ಕಟ್ಟಿಗೆಯ ಎಲೆ ಹುಡುಕಲು ಹೋಗಬೇಡಿ"


  : )))


 


ಚಿತ್ರಕೃಪೆ-ಗೂಗಲ್

Comments

Submitted by ಭಾಗ್ವತ Fri, 05/10/2013 - 22:38

ಒಂದು ಪುಟ್ಟ ತಿದ್ದುಪಡಿ..... ನಪುಂಸಕ ಜಾತಿಯ ಮರದ ಎಲೆಗಳಲ್ಲಿಯ... ನಾರಿನ ಎರಡೂ ಪಕ್ಕಗಳಲ್ಲಿರುವ ಸಣ್ಣ ನರಗಳನ್ನು ಲೆಕ್ಕ ಹಾಕಿದಾಗ ಎರಡೂ ಪಾಶ್ವದಲ್ಲಿರುವ ಉಪನಾರುಗಳು ಸಮ ಸಂಖ್ಯೆಯಲ್ಲಿ ಇದ್ದರೆ ಅದು ನಪುಂಸಕ ಜಾತಿಯ ಮರ.
Submitted by ಗಣೇಶ Fri, 05/10/2013 - 23:08

>>"ಈ ಮಾಹಿತಿ ಓದಿದ ಮೇಲೆ ನಿಮ್ಮ ಮನೆಯಲ್ಲಿ ಉಪಯೋಗಿಸಿದ ಕಟ್ಟಿಗೆಯ ಎಲೆ ಹುಡುಕಲು ಹೋಗಬೇಡಿ"-- ಹೋಗಬೇಕಾಗಿಯೇ ಇಲ್ಲ! ನೋಡದೇ ಹೇಳಬಲ್ಲೆ! ಆ ಎಲೆಯ ಎಡ ಪಾಶ್ವದಲ್ಲಿರುವ ಉಪನಾರುಗಳು ಸಮ ಸಂಖ್ಯೆಯಲ್ಲಿಯೂ ಬಲ ಪಾಶ್ವದಲ್ಲಿರುವ ಉಪನರಗಳು ಬೆಸ ಸಂಖ್ಯೆಯಲ್ಲಿಯೂ ಇದೆ. ಹೊಸದಾಗಿ ಮನೆ ಕಟ್ಟುವವರು ಭಾಗ್ವತರ ಸಲಹೆ ಕಡೆ ಗಮನ ಕೊಡಿ. :)
Submitted by nageshamysore Sat, 05/11/2013 - 19:32

ನಮಸ್ಕಾರ ಭಾಗ್ವತರೆ, ಬಹಳ ಕುತೂಹಲಕಾರಿ ಮಾಹಿತಿ ಕೊಟ್ಟಿದ್ದೀರಿ ಆದರೊಂದು ಸಂದೇಹ ಉಳಿಸಿಬಿಟ್ಟಿರಿ - ಎಲೆಯನ್ನು ಎದುರಿಗಿಟ್ಟು ನೋಡುತ್ತಾ,  ಬಲಪಕ್ಕವೆಂದರೆ ಎಲೆಯ ಬಲಕ್ಕೊ ಅಥವಾ ನೋಡುವವರ ಬಲಕ್ಕೊ - ಅನ್ನುವುದನ್ನು ಇನ್ನಷ್ಟು ವಿವರಿಸಬೇಕಿತ್ತು..ಈಗಲೂ ಪರವಾಗಿಲ್ಲಾ ಬಿಡಿ, ಅನುಕೂಲಕ್ಕೆ ತಕ್ಕಂತೆ ಅರ್ಥೈಸಿಕೊಳ್ಳಬಹುದು! - ನಾಗೇಶ ಸಿಂಗಾಪುರದಿಂದ
Submitted by ಭಾಗ್ವತ Sat, 05/11/2013 - 20:30

In reply to by nageshamysore

ನಾಗೇಶರವರೆ, ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಎಲೆಯನ್ನು ಎದುರಿಗಿಟ್ಟು ನೋಡುತ್ತಾ, ಬಲಪಕ್ಕವೆಂದರೆ ನೋಡುವವರ ಬಲಕ್ಕೆ....)))
Submitted by makara Sat, 05/11/2013 - 23:42

ಭಾಗ್ವತರೆ, ಕುತೂಹಲಕರ ಮಾಹಿತಿಗೆ ಧನ್ಯವಾದಗಳು. ನೀವು ಹೇಳಿದ ಹಾಗೆ ಒಂದು ಮರದ ಎಲ್ಲಾ ಎಲೆಗಳು ಒಂದೇ ರೀತಿ ಇರುತ್ತವೆಯೇ? ಅದನ್ನೇನಾದರೂ ಪರೀಕ್ಷಿಸಿದ್ದೀರ? ಒಂದು ವೇಳೆ ಪರೀಕ್ಷಿಸಿದ್ದರೆ ಅದರ ಬಗ್ಗೆ ಮಾಹಿತಿ ಕೊಡಿ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
Submitted by ಭಾಗ್ವತ Mon, 05/13/2013 - 16:52

In reply to by makara

ಶ್ರೀಧರವರೆ, ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.ಸಾಮಾನ್ಯವಾಗಿ ಯಾವ ಲಿಂಗಕ್ಕೆ ಮರ ಸೇರಿದೆಯೋ ಅದರ ಎಲೆಗಳ ನರಗಳ ಸಂಖ್ಯೆ ಒಂದೇ ರೀತಿ ಯಾಗಿರುವುದು ಅಂದರೆ ನರಗಳ ಸಂಖ್ಯೆಗಳಲ್ಲಿ ವ್ಯತ್ಯಾಸವಾದರೂ ಮೇಲೆ ವಿವರಿಸಿದಂತೆ ಸಮ ಬೆಸಗಳಲ್ಲಿಯ ತುಲನಾತ್ಮಕ ಹೊಂದಾಣಿಕೆ ಒಂದೇ ತೆರನಾಗಿರುವುದು. ಸಾಮಾನ್ಯವಾಗಿ ಮನೆ ನಿರ್ಮಿಸುವಾಗ ಹೊನ್ನೆ ಮತ್ತಿ ಸಾಗವಾನಿ(ತೇಗ) ಅಶೋಕ ಬೇವು ಹಲಸು ಇವುಗಳ ಬಳಕೆ ಹೆಚ್ಚಾಗಿರುವುದು ಹೊನ್ನೆ ಮತ್ತು ಬೇವಿನ ಮರಗಳು ಹಿಂದೂ ಸಮುದಾಯಕ್ಕೆ ದೇವತಾ ಮರಗಳೆಂಬ ಭಾವನೆ ಇರುವುದರಿಂದ ಇವನ್ನು ಕಾಲಿನಿಂದ ತುಳಿಯಬಾರದೆಂಬ ಕಾರಣದಿಂದ ಹೊಸಲುಗಳಿಗೆ (ಹೊಸ್ತಿಲು) ಇವುಗಳ ಬಳಕೆ ಮಾಡುವುದಿಲ್ಲ. ಇನ್ನು ಬೇವು ಕಹಿ ಯಾಗಿರುವುದರಿಂದ ಇದನ್ನುಮಂಚ ತಯಾರಿಸಲು ಬಳಸುವುದಿಲ್ಲ.ಅದರ ಮೇಲೆ ಮಲಗಿದವರ ಬದುಕೂ ಕಹಿಯಾಗುವುದೆಂಬ ಭಾವನೆ ಇದೆ.