ಸ್ವಸ್ತಿಕ್ ಚಿಹ್ನೆ-ಬಳಕೆ ಏಕೆ ?

ಸ್ವಸ್ತಿಕ್ ಚಿಹ್ನೆ-ಬಳಕೆ ಏಕೆ ?

ಹಿಂದೂಗಳಲ್ಲಿ ಸ್ವಸ್ತಿಕ್ ಚಿಹ್ನೆ ಪವಿತ್ರವಾದ ಶುಭ ಚಿಹ್ನೆಯಾಗಿ ಬೆಳೆದು ಬಂದಿದೆ.ಇದಕ್ಕೆ ಕಾರಣ ಇದರಲ್ಲಿ ಅಡಗಿರುವ


ಗೂಢ ಶಕ್ತಿ. ಈ ಚಿಹ್ನೆ ವಾಸ್ತು ರಚನಾ ಶಾಸ್ತ್ರದಲ್ಲಿಯೂ ಅಪಾರವಾದ ಮಾಹಿತಿ ನೀಡುತ್ತದೆ. ನಮ್ಮ ಪುರಾತನರು ಈ ಚಿಹ್ನೆಯನ್ನು


ಹೆಚ್ಚಾಗಿ ಬಳಸುತ್ತ  ಅದರ ಶುಭ ಫಲಗಳನ್ನು ನೋಡಿ ಸಂಪ್ರದಾಯವಾಗಿ ಬೆಳೆಸಿಕೊಂಡು ಬಂದರು.


                  ಜರ್ಮನ್ ಭೂಗೋಳ ಶಾಸ್ತ್ರಜ್ಞ ಅರ್ನೆಸ್ಟ್ ಹರ್ಟಮನ್  ಎಂಬಾತ ತನ್ನ "ಲಂಬಾ ಅಂಟೇನಾ" ಎಂಬ ಉಪಕರಣದ


ಸಹಾಯದಿಂದ "ಸ್ವಸ್ತಿಕ್" ಚಿಹ್ನೆಯು 1 ಲಕ್ಷ ಬೋವೀಸ್ ಮಾಪನದಷ್ಟು ಕಂಪನದ ಶುಭ ಶಕ್ತಿಯನ್ನು ಹೊರಸೂಸುತ್ತದೆ


ಎಂಬುದನ್ನು ತೋರಿಸಿಕೊಟ್ಟ. ನಕಾರಾತ್ಮಕ ಶಕ್ತಿಯನ್ನು ಸಕಾರಾತ್ಮಕವಾಗಿ ಪರಿವರ್ತಿಸುವ  ಅತಿ ಹೆಚ್ಚಿನ ಶಕ್ತಿ ಇರುವ


ಚಿಹ್ನೆಯೆಂದರೆ ಅದು ಸ್ವಸ್ತಿಕ್.


ನಮ್ಮ ಹಿಂದಿನವರ ಅನುಭವದ ಪ್ರಕಾರ.. ಮನೆಯಲ್ಲಿ ಒಂದೇ ರೇಖೆಯಲ್ಲಿ ಮೂರು ಬಾಗಿಲು ಬಂದರೆ ಮಧ್ಯದ ಬಾಗಿಲಿಗೆ


ಸ್ವಸ್ತಿಕ್ ಚಿಹ್ನೆ ಬಳಸಿದರೆ ಶುಭ ಫಲಗಳುಂಟಾಗುವುದೆಂಬ ನಂಬಿಕೆ ಇದೆ. ವ್ಯಾಪಾರ ವ್ಯವಹಾರಗಳಲ್ಲಿ ಅಂಗಡಿಗಳಲ್ಲಿ ಈ


ಚಿಹ್ನೆಯ ಬಳಕೆಯಿಂದ   ಅಭಿವೃದ್ಧಿ ಕಾಣಲು ಸಾಧ್ಯ ೆಂಬ ನಂಬಿಕೆಯೂ ಚಾಲ್ತಿಯಲ್ಲಿದೆ.


 ಅಷ್ಟಕ್ಕೂ ಇದು ನಮ್ಮ ಶ್ರೀ ಗಣೇಶನ ಚಿಹ್ನೆಯಾಗಿದೆ.


               ಈ ಚಿಹ್ನೆಯ ತಪ್ಪು ಬಳಕೆಯಿಂದಲೂ ದುರಂತವಾಗುವುದೆಂಬುದಕ್ಕೆ "ಹಿಟ್ಲರ್"ನೇ ನಮ್ಮ ಕಣ್ಣೆದುರಿಗಿರುವ


ಐತಿಹಾಸಿಕ ಸಾಕ್ಷಿ.

Comments

Submitted by H A Patil Tue, 05/14/2013 - 13:13

ಭಾಗ್ವತ ರವರಿಗೆ ವಂದನೆಗಳು ' ಸ್ವಸ್ತಿಕ್ ' ಚಿನ್ಹೆ ಕುರಿತು ತಾವು ಬರೆದ ಲೇಖನ ಹಲವು ಉಪಯುಕ್ತ ಮಾಹಿತಿಗಳನ್ನು ನೀಡಿತು, ಈ ಲೇಖನ ಓದಿದ ಮೇಲೆ ನನ್ನನ್ನು ಒಂದು ಸಂಶಯ ಕಾಡುತ್ತಿದೆ. ಹಿಟ್ಲರ್ ಸ್ವಸ್ತಿಕ್ ಚಿನ್ಹೆಯನ್ನು ಏಕೆ ಬಳಸಿದ, ಆತ ಧರ್ಮಭೀರು ಆಗಿದ್ದನೆ? ಈಗ ಸ್ವಸ್ತಿಕ್ ನ ಪೂರ್ವಾಪರ ಗೊತ್ತಿಲ್ಲ ದವರಿಗೆ ಅದೊಂದು ಕೇಡಿನ ಸಂಕೇತವಾಗಿ ಕಂಡರೆ ಅಚ್ಚರಿ ಇಲ್ಲ, ಕಾರಣ ಸ್ವಸ್ತಿಕ್ ಚಿನ್ಹೆಯನ್ನು ಜಹಿಟ್ಲರ್ ಬಳಿಸದ್ದು. ಉತ್ತ ಮ ಲೇಖನ ನೀಡಿದ್ದಿರಿ ಧನ್ಯವಾದಗಳು.
Submitted by ಭಾಗ್ವತ Tue, 05/14/2013 - 19:17

In reply to by H A Patil

ಪಾಟೀಲರವರೆ ವಂದನೆಗಳು. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. << ಹಿಟ್ಲರ್ ಸ್ವಸ್ತಿಕ್ ಚಿನ್ಹೆಯನ್ನು ಏಕೆ ಬಳಸಿದ, ಆತ ಧರ್ಮಭೀರು ಆಗಿದ್ದನೆ?ಅದೊಂದು ಕೇಡಿನ ಸಂಕೇತವಾಗಿ ಕಂಡರೆ ಅಚ್ಚರಿ ಇಲ್ಲ>> ತಮ್ಮ ಸಂದೇಹಗಳಿಗೆ ಪಾರ್ಥರವರು ನೀಡಿದ ಕೊಂಡಿ ವಿವರವಾದ ಮಾಹಿತಿ ನೀಡುತ್ತದೆ.
Submitted by partha1059 Tue, 05/14/2013 - 16:37

ಒಳ್ಳೆ ಮಾಹಿತಿ, ವೀಕಿಪೀಡಿಯಾದಲ್ಲಿ ವಿವರಗಳು ಸಿಗುತ್ತವೆ, ಹಿಟ್ಲರ್ ಬಳಸಿದ್ದು ೪೫ ಡಿಗ್ರಿ ತಿರುಗಿದ ಬಲತಿರುವಿನ ಸ್ವಸ್ತಿಕ್ , ಹಾಗೆಯೆ ಸ್ವಸ್ತಿಕ್ ನಲ್ಲಿ ಹಲವು ಬಗೆ ಇದೆ ವಿವರಗಳಿಗಾಗಿ ನೋಡಿ ಸ್ವಸ್ತಿಕ್ ವಿವರಗಳು
Submitted by ಭಾಗ್ವತ Tue, 05/14/2013 - 19:21

In reply to by partha1059

ಪಾರ್ಥರವರಿಗೆ ವಂದನೆಗಳು. ತಮ್ಮ ಮೆಚ್ಚುಗೆಗೆ ಹಾಗೂ ನನ್ನ ಈ ಮಾಹಿತಿಗೆ ಪೂರಕವಾದ ಕೊಂಡಿಯನ್ನು ನೀಡಿ ಹೆಚ್ಚಿನ ವಿಷಯ ದೊರಕಿಸಿದ್ದಕ್ಕಾಗಿ ಧನ್ಯವಾದಗಳು
Submitted by makara Wed, 05/15/2013 - 07:44

ಭಾಗ್ವತರೆ, ......ಮನೆಯಲ್ಲಿ ಒಂದೇ ರೇಖೆಯಲ್ಲಿ ಮೂರು ಬಾಗಿಲು ಬಂದರೆ ಮಧ್ಯದ ಬಾಗಿಲಿಗೆ ಸ್ವಸ್ತಿಕ್ ಚಿಹ್ನೆ ಬಳಸಿದರೆ ಶುಭ ಫಲಗಳುಂಟಾಗುವುದೆಂಬ ನಂಬಿಕೆ ಇದೆ..... ನಿಮ್ಮ ಚಿತ್ರದಲ್ಲಿ ಬಳಸಿರುವುದು ಬಲಮುರಿಯ (ಬಲಗಡೆ ಹೊರಳಿರುವ) ಸ್ವಸ್ತಿಕ್; ಒಂದು ವೇಳೆ ಎಡಮುರಿಯ ಸ್ವಸ್ತಿಕ್ ಬಳಸಿದರೆ ಅಶುಭ ಫಲಗಳೇನಾದರೂ ಉಂಟಾಗಬಹುದೇ? ಈ ಪ್ರಶ್ನೆಗೆ ಪಾರ್ಥರ ಕೊಂಡಿಯಲ್ಲಿ ಸಹ ಉತ್ತರ ಸಿಗಲಿಲ್ಲ. ನಿಮಗೇನಾದರೂ ಅದರ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
Submitted by ಭಾಗ್ವತ Wed, 05/15/2013 - 08:38

In reply to by makara

ಶ್ರೀಧರವರಿಗೆ ವಂದನೆಗಳು ಮನೆಯಲ್ಲಿ ಒಂದೇ ರೇಖೆಯಲ್ಲಿ ಮೂರು ಬಾಗಿಲು ಬರಬಾರದು ಇದರಿಂದುಂಟಾಗುವ ನಕಾರಾತ್ಮಕ ಶಕ್ತಿಯನ್ನು ಕಡಿಮೆಗೊಳಸಿ ಶುಭ ಫಲಗಳನ್ನು ಪಡೆಯಲು ಬಲಮುರಿಯ (ಬಲಗಡೆ ಹೊರಳಿರುವ) ಸ್ವಸ್ತಿಕ್ ಬಳಸಬೇಕು. ಹಾಗೆಯೇ ಈ ರೀತಿಯ ರಚನೆಯೇ ಸ್ವಸ್ತಿಕ್ ನ ಕ್ರಮಬದ್ಧ ರಚನೆಯಾಗಿದೆ.
Submitted by makara Wed, 05/15/2013 - 09:21

In reply to by partha1059

ಸ್ವಸ್ತಿಕದ ಬಗೆಗೆ ಸಂಪೂರ್ಣ ಮಾಹಿತಿ ಒದಗಿಸಿದ್ದರಿಂದ ಈಗ ಮನಸ್ಸು ಸ್ವಸ್ತವಾಯಿತು :) ಕೊಂಡಿಗೆ ಧನ್ಯವಾದಗಳು ಪಾರ್ಥರೆ. ಬೌದ್ಧರು ವಾಮ ತಂತ್ರಗಳ ಅನುಯಾಯಿಗಳಾಗಿರುವುದರಿಂದ ಬಹುಶಃ ಅವರು ಎಡಮುರಿ ಅಥವಾ ವಾಮವಾಗಿ (ಎಡಕ್ಕೆ) ತಿರುಗಿರುವ ಸ್ವಸ್ತಿಕ ಅಥವಾ ಸೌವಸ್ತಿಕಾವನ್ನು ಶುಭಪ್ರದವೆನ್ನುವ ನಂಬಿಕೆಯಿಂದ ಬಳಸುತ್ತಿರಬಹುದು.