ಕನ್ನಡದಲ್ಲಿ ನಞ್ ತತ್ಪುರುಷ?

0

’ಅಸಾಮಾನ್ಯ’ , ’ಅಸುರ’, ’ಅನಾದಿ’ , ’ಅನಂತ’, ’ಅವ್ಯಯ’, ’ಅಚ್ಯುತ’ - ಇವೆಲ್ಲ ನ+ಸಾಮಾನ್ಯ, ನ+ಅಂತ, ನ+ಸುರ - ಎಂಬ ನಿಷೇಧಾರ್ಥಕ ಅವ್ಯಯ ಸೇರಿ ಉಂಟಾದ ಸಂಸ್ಕ್ರೃತ ಪದಗಳು. ಕನ್ನಡದಲ್ಲಿ ಈ ರೀತಿಯ ಪ್ರಯೋಗ ಇರುವ ಬಗ್ಗೆ ಯಾರಿಗಾದರೂ ಗೊತ್ತೆ? ಇಂಥ ಪ್ರತ್ಯಯ ಇದ್ದಿದ್ದರೆ ಹೊಸ ಶಬ್ದಗಳನ್ನು ರೂಪಿಸಲು ಸುಲಭವಾಗುತ್ತಿತ್ತಲ್ಲವೆ?

ಬಿಝಿ ಶಬ್ದಕ್ಕೆ ಕನ್ನಡ ಸಮಾನಾರ್ಥಕವಾಗಿ ’ಬಿಡುವಿಲ್ಲ’ ಎಂಬ ಪದವನ್ನು ನೋಡಿದಾಗ ಈ ಯೋಚನೆ ಬಂದಿತು ನನಗೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಲಭ ಅಂದ್ರೆ ಯಾವ ಅರ್ಥದಲ್ಲಿ ಹೇಳ್ತಿದೀರಿ? ಸುಲಭ ಒಂದೇ ಆದರೆ ಸಾಲದಲ್ಲ!! ಹೆಚ್ಚಿನ ಕನ್ನಡಿಗರಿಗೆ ಅದು ಒಪ್ಪಿಗೆಯೂ ಆಗಬೇಕಲ್ಲ? ಒಂದು ಭಾಷೆಯ parameter ಮತ್ತೊಂದಕ್ಕೆ ಸಾರಾಸಗಟು ಅನ್ವಯಿಸಕ್ಕೆ ಬರಲ್ಲ. ಯಾರೋ "ಅಇಷ್ಟ" ಅಂತ ಕೆಟ್ಟದಾಗಿ ಪ್ರಯೋಗ ಮಾಡಿ ಮನಸ್ಸಿಗೆ ಕಿರಿಕಿರಿಯಾದದ್ದಿದೆ. ಹೊಸ ಪದ ಕಟ್ಟುವಾಗ ಏನೆಲ್ಲ ಗಮನದಲ್ಲಿರಬೇಕು ಅಂತ ನಿಮಗೆ ಅನ್ನಿಸುತ್ತದೆ?

"ಏರಿದವನು ಚಿಕ್ಕವನಿರಬೇಕು"

ರಮೇಶರೆ.
ನಾನು ಕೊಟ್ಟ ಶಬ್ದಗಳು ಕೇವಲ ಉದಾಹರಣೆಗಷ್ಟೆ. ಕನ್ನಡ ಶಬ್ದಗಳಿಗೆ ’ಅ’ ಪ್ರತ್ಯಯವನ್ನು ನಿಷೇಧಾರ್ಥಕವಾಗಿ ಬಳಸಬೇಕೆಂದು ನನ್ನ ಉದ್ದೇಶವಲ್ಲ. ಅಂಥ ಶಬ್ದಗಳು ಕೇಳಲು ಅಸಹ್ಯವಾಗಿರುತ್ತವೆ ಎಂದು ನನಗೂ ಗೊತ್ತಿದೆ. ನನ್ನ ಪ್ರಶ್ನೆ ಏನೆಂದರೆ, ಸಂಸ್ಕೃತದಲ್ಲಿ ಇರುವಂತೆ ಕನ್ನಡದಲ್ಲೂ ನಿಷೇಧಾರ್ಥಕ ಪ್ರತ್ಯಯಗಳು ಯಾವುದಾದರೂ ಇದೆಯೇ ಎಂದಷ್ಟೆ. ಇದ್ದಿದ್ದರೆ ಚೆನ್ನಾಗಿತ್ತು; ಸರಳವಾಗಿ, ಸುಲಭವಾಗಿ ಶಬ್ದಗಳನ್ನು ರಚಿಸಲು ಅನುಕೂಲವಾಗುತ್ತಿತ್ತು ಎಂದು ಅಭಿಪ್ರಾಯ.
ಸಂಸ್ಕೃತ ಪ್ರತ್ಯಯವನ್ನು ಕನ್ನಡ ಪದಗಳ ಮೇಲೆ ಹೇರುವ ಯಾವುದೇ ಉದ್ದೇಶವಿಲ್ಲ ನನಗೆ. ಬೇಸರಿಸಬೇಡಿ.