SUmUಕತೆ : ಭಾಗ - ೧

SUmUಕತೆ : ಭಾಗ - ೧

 

ಅದು ವಿಶಾಲವಾದ ವೇದಿಕೆ. ಅಷ್ಟು ದೊಡ್ಡ ಸ್ಟೇಜ್ ನಾನು ನೋಡೇ ಇರಲ್ಲಿಲ್ಲ, ಇದೆ ಮೊದಲ ಸಲ. ವೇದಿಕೆಯಲ್ಲಿ ಭಾರತದ ರಾಷ್ಟ್ರಪತಿಗಳು, ಉಪ-ರಾಷ್ಟ್ರಪತಿಗಳು, ಉತ್ತರ ಪ್ರದೇಶದ ಮುಖ್ಯಮಂತ್ರಿ, ಅನೇಕ ಮಂತ್ರಿಗಳು, ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವರೂ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಅವಳು ವೇದಿಕೆ ಹತ್ತುತ್ತಾಳೆ. ನಾನು ವೇದಿಕೆಯ ಮುಂಭಾಗದಲ್ಲಿ ಕೈಯಲ್ಲಿ ಮೊಬೈಲ್ ಕ್ಯಾಮೆರಾ ಹಿಡಿದು ಆ ವಿಶೇಷ ಸನ್ನಿವೇಶವನ್ನು ಸೆರೆ ಹಿಡಿಯಲು ಕಾಯುತ್ತಿದ್ದೆನೆ. ರಾಷ್ಟ್ರಪತಿಗಳು ಪದಕ ತೊಡಿಸಲಿದ್ದಾರೆ ಅವಳಿಗೆ. ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ನಾನು ಕಾತರನಾಗಿದ್ದೇನೆ. ಅಂತೂ ಆ ಸಮಯ ಬಂದೇ ಬಿಟ್ಟಿತು. ಅವಳು ವೇದಿಕೆ ಹತ್ತಿ ಪದಕ ಸ್ವೀಕರಿಸುತ್ತಿರುವ ದೃಶ್ಯ ಸೆರೆ ಹಿಡಿದ ಮರು ಘಳಿಗೆಯಲ್ಲೇ ನನ್ನ ಮೊಬೈಲ್ ರಿಂಗಣಿಸಿತು. ಅನಾಮಧೇಯ ನಂಬರ್ ಅದು. ನಾನು ಕರೆ ಸ್ವೀಕರಿಸಿದೆ. ಮೈಕಿನ ಅಬ್ಬರದಲ್ಲಿ ಮತ್ತು ಚಪ್ಪಾಳೆಯ ಸದ್ದಿನಲ್ಲಿ ಏನೂ ಸರಿಯಾಗಿ ಕೇಳಿಸುತ್ತಿರಲ್ಲಿಲ್ಲ. ಒಂದು ಕಿವಿಯನ್ನು ಗಟ್ಟಿಯಾಗಿ ಮುಚ್ಚಿ ಹಿಡಿದು, ವೇದಿಕೆಯ ಬಲಭಾಗದಲ್ಲಿ ಸ್ಪೀಕರ್ ಇಲ್ಲದ ಜಾಗದಲ್ಲಿ ನಿಂತು ಆಲಿಸಿದೆ. ಅತ್ತ ಕಡೆ ಧ್ವನಿ ನಡಗುತ್ತಾ 'ಬೆಳಗ್ಗೆ  ....  ಹೀಗಾಗಿ ಬಿಟ್ಟಿದೆ.. .. 'ಎಂದಿತು. ನಾವು ಈ ಕ್ಷಣ ಹೊರಟು ಬರ್ತೀವಿ, ಬರೋವರ್ಗು ದಯಮಾಡಿ ನೋಡಿಕೊಳ್ಳಿ ಎಂದು ಹೇಳಿ ಲೈನ್ ಕಟ್ ಮಾಡಿ ಅರೆಘಳಿಗೆ ತಟಸ್ಥನಾಗಿ ನಿಂತುಬಿಟ್ಟೆ, ನಂತರ ಸಾವರಿಸಿಕೊಂಡು, ವೇದಿಕೆಯ ಮುಂದುಗಡೆ ಮೊದಲ ಸಾಲಿನಲ್ಲೇ ಕುಳಿತಿದ್ದ ಅವಳಮ್ಮನ ಹತ್ತಿರ ಹೋಗಿ ನೀವು ಇಲ್ಲೇ ಇರಿ, ನಾನು ಈಗ ಬಂದೆ ಎಂದು ಹೇಳಿ ಹೊರಬಂದೆ.

ಹೊರ ಬಂದವನೇ ಆಟೋ ಹತ್ತಿದೆ.  ಕಿದರ್ ಸಾಬ್ ಅಂದವನಿಗೆ ಎಂ ಎಂ ರೋಡ್ ಜಾನ ಹೈ ಎಂದು ಹೇಳಿ, ನನ್ನ ಮೊಬೈಲ್ ಜಿಪಿಎಸ್ ಆನ್ ಮಾಡಿದೆ. ಏರ್ ಟಿಕೆಟ್ ಬುಕಿಂಗ್ ನಿಯರ್ಬೈ ಎಂದು ಸರ್ಚಿಸಿದೆ. ಗ್ಲೋಬಲ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ . 7/11 1st  ಫ್ಲೋರ್, 3rd  ಮೇನ್, 2nd  ಕ್ರಾಸ್  MM ರೋಡ್, ಕಾನ್ಪುರ್. Distance - 3 Kms ಫ್ರಮ್ ಹಿಯರ್. ನಾನು ಆಟೋದವನಿಗೆ ಇದರ್ ಲೆಫ್ಟ್ ಲೆಲೋ, ಉದರ್ ರೈಟ್ ಲೆಲೋ  ಅಂತ ಹೇಳುತ್ತಾ  ಗ್ಲೋಬಲ್ ಏವಿಯೇಷನ್ ಹತ್ತಿರ ಇಳಿದು ಸರ ಸರ ಮೆಟ್ಟಿಲುಗಳನ್ನು ಏರಿದೆ. ಬಾಗಿಲಲ್ಲಿ ಸೆಕ್ಯೂರಿಟಿ ಗಾರ್ಡ್ ತಡೆದು ನನ್ನ ಇಡೀ ದೇಹವನ್ನೊಮ್ಮೆ ಜಾಲಾಡಿದ. ಎಷ್ಟೇ ಅವಸರದಲ್ಲಿದ್ದರೂ ಅವನ ಕರ್ತವ್ಯ ಮಾಡಲಿ ಎಂದು ತಪಾಸಣೆಗೆ ಸಹಕರಿಸಿದೆ. ಒಳ ಬಂದೊಡನೆಯೇ ರಿಸೆಪ್ಶನಿಸ್ಟ್ ಹೌ ಕ್ಯಾನ್ ಐ ಹೆಲ್ಪ್ ಯು ಸರ್ ಅಂದಳು. ಐ ವಾಂಟ್ ಟು ಬುಕ್ ಟಿಕೆಟ್ಸ್ ಟು ಬೆಂಗಳೂರು ಅಂದೆ. ಪ್ಲೀಸ್ ಗೋ ಟು ಕೌಂಟರ್ ೭ ಅಂದಳು. ಅವಳತ್ತ ಕಿರುನಗೆ ಬೀರಿ ಥ್ಯಾಂಕ್ಯೂ ಹೇಳಿ ಕೌಂಟರ್ ೭ ರ ಹತ್ತಿರ ನಿಂತೆ. ನನ್ನ ಮುಂದೆ ನಿಂತಿದ್ದ ದಡೂತಿ ಮಹಿಳೆ, ನಾನೆಲ್ಲಿ ಮುನ್ನುಗ್ಗಿ ಬಿಡುವೆನೋ ಎಂದು ನನ್ನ ಕಡೆ ವಾರೆ ನೋಟ ಬೀರಿ ಮುಂದೆ ಮುಂದೆ ಜರುಗಿ, ಮುಂದೆ ನಿಂತಿದ್ದ ಯುವತಿಗೆ ತಾಗಿದಳು. ಅಷ್ಟಕ್ಕೇ ಆ ಯುವತಿ ಹಿಂದೆ ತಿರುಗಿ ಪ್ಲೀಸ್ ಮೈಂಟೈನ್ ಡಿಸ್ಟೆನ್ಸ್ ಅಂತ UK ಆಕ್ಸೆಂಟಿನಲಿ ಅರಚಿದಳು. ಅಂತೂ ಇವರಿಬ್ಬರ ಸರದಿ ಮುಗಿದು ನಾನು ಬಂದಾಗ ಮಧ್ಯಾನ್ಹ ೧೨ :೩೧ ಆಗಿತ್ತು.

ಪ್ಲೀಸ್ ಟೆಲ್ ಮಿ ಸರ್.

ಐ ವಾಂಟ್ ಟು ಬುಕ್ ೩ ಟಿಕೆಟ್ಸ್ ಟು ಬೆಂಗಳೂರು.

ಡೇಟ್ ಟೈಮ್ ಕ್ಯಾರಿಯರ್ ಸರ್?

ಟುಡೇ, ಐ ವಾಂಟ್ ಟು ಟ್ರಾವೆಲ್ ಇಮ್ಮಿಡಿಯಟ್ಲಿ, ಎನಿ ಫ್ಲೈಟ್ ಇಸ್ ಓಕೆ ಫಾರ್ ಮಿ.

ನೆಕ್ಸ್ಟ್ ಇಮ್ಮಿಡಿಯೆಟ್  ಫ್ಲೈಟ್ ಇಸ್ ಅಟ್ 3'o ಕ್ಲಾಕ್, ಕಿಂಗ್ ಫಿಷರ್ ಏರ್ಲೈನ್ಸ್, ಐ ಡೌಟ್ ಆನ್ ೩ ಅವೈಲಬಲ್ ಟಿಕೆಟ್ಸ್. ಪ್ಲೀಸ್ ಚೆಕ್, ಐ ವಾಂಟ್ ೩ ಆರ್ ಚೆಕ್ ಫಾರ್ ನೆಕ್ಸ್ಟ್ ಫ್ಲೈಟ್.

ಲೆಟ್ ಮಿ ಚೆಕ್ ಸರ್.

ಶ್ಯೂರ್.

ಯೂರ್ ಲಕ್, ಲಾಸ್ಟ್ ೩ ಅವೈಲಬಲ್.

ಪ್ಲೀಸ್ ಲಾಕ್ ದೊಸ್ ಫಾರ್ ಮಿ

ದೊಸ್ ಆರ್ ಫಾರ್ ಯು, ಕ್ಯಾಶ್ ಆರ್ ಕಾರ್ಡ್ ಸರ್

ಕಾರ್ಡ್

ಇಲವೆನ್ ಥೌಸಂಡ್ ಸೆವೆನ್ ಹಂಡ್ರೆಡ್ ಅಂಡ್  ಯೈಟಿಫೋರ್ ಇಂಕ್ಲುಡಿಂಗ್ ಟ್ಯಾಕ್ಸ್

ಫೈನ್

ಕಾರ್ಡ್ ಉಜ್ಜಿ ನನ್ನ ಸಹಿ ಪಡೆದವಳು, ಪ್ಲೀಸ್ ಮೇಕ್ ಶ್ಯೂರ್ ಯು ವಿಲ್ ಬಿ ದೇರ್ ಬೈ 2'o ಕ್ಲಾಕ್ ಸರ್

ಯಾ..ಎಂದು ಕಣ್ಣು ಮಿಟುಕಿಸುತ್ತಾ , ಐ ವಿಲ್ ಮ್ಯಾನೇಜ್. ಥ್ಯಾಂಕ್ಯು. ಎಂದೆ.

ಯೂರ್ ಟಿಕೇಟ್ ಸರ್ , ಏಕ ಗವಾಕ್ಷಿಯ ಕಿಂಡಿಯಿಂದ ಕೈ ಆಚೆ ಚಾಚಿ ನೀಡಿದಳು.

 

ನಾನು ಟಿಕೆಟ್ ಪಡೆದು, ಅಲ್ಲೇ ನಿಲ್ಲಿಸಿದ್ದ ಆಟೋ ಹತ್ತಿ ಕಾರ್ಯಕ್ರಮ ನಡಿತಿದ್ದ ಜಾಗ ತಲುಪಿದೆ. ನನ್ನ ಬಳಿ ಇದ್ದ VIP ಪಾಸ್ ತೋರಿಸಿ ಒಳ ಹೋದಾಗ ರಾಷ್ಟ್ರಪತಿಗಳ ಭಾಷಣ ಮುಗಿಯುವ ಹಂತ ತಲುಪಿತ್ತು. ಅವಳು ಅವಳಮ್ಮನ ಪಕ್ಕ ಕೂತಿದ್ದಳು. ಅದರ ಪಕ್ಕದ್ದೆ ನನ್ನ ಸೀಟು. ನಾನು ಅಲ್ಲಿ ಹೋಗಿ ಕೂರುತ್ತಿದ್ದಂತೆ, ಯೆಯ್ ಏನಾಯ್ತು? ಯಾಕೆ ನೀನು ಸಡನ್ ಆಗಿ ಆ ಕಡೆ ಹೋಗ್ಬಿಟ್ಟೆ? ನಾನ್ ಮೆಡಲ್ ತೊಗೊಂಡಿದ್ದು ನೋಡ್ಧೆ ತಾನೆ ಅಂತ ಪ್ರಶ್ನೆಗಳ ಸರಮಾಲೆ ಹಾಕಿದಳು, ಅವಳಮ್ಮನೂ  ಈಗ ಬರ್ತೀನಿ ಅಂದು ಎಲ್ಲಿ ಹೋಗಿದ್ದಪ್ಪ. ನಾನು ಇಬ್ಬರ ಮುಖವನ್ನು ಒಮ್ಮೆ ನೋಡಿ, ನಾನು ಫ್ಲೈಟ್ ಟಿಕೆಟ್ಸ್ ಬುಕ್ ಮಾಡಲು ಹೋಗಿದ್ದೆ. ಈಗ ಮೂರು ಗಂಟೆಗೆ ಫ್ಲೈಟ್, ಇಲ್ಲಿಂದ ಏರ್ಪೋರ್ಟ್ ಗೆ ಹೋಗಲು ಕನಿಷ್ಠ ೪೫ ನಿಮಿಷ ಬೇಕು, ಆದರಿಂದ ನಾವು ತಕ್ಷಣ ಹೊರಡಬೇಕು ಎಂದೆ. ಏನಪ್ಪಾ ಸಮಾಚಾರ ಎಲ್ಲಾರು ಕ್ಷೇಮ ತಾನೇ? ಯಾಕೆ ನಾವು ಈಗಲೇ ಹೊರಡಬೇಕು?.. ಯೆಹ್, ಏನೋ ಇದು, ನಾಳೆ ರಾತ್ರಿಗೆ ತಾನೇ ನಾವು ಟ್ರೈನ್ ಟಿಕೆಟ್ ಬುಕ್ ಮಾಡಿರದು? ಇನ್ನು JK ಟೆಂಪಲ್, ವಾಲ್ಮೀಕಿ ಆಶ್ರಮ ನೋಡೋದಿದೆ. ನಾನು ಖರಗ್ಪುರಕ್ಕೆ ವಾಪಸ್ ಹೋಗದೆ ಇರೋದ್ರಿಂದ ನನ್ನ ಫ್ರೆಂಡ್ಸ್ ಎಲ್ಲ ಸೇರಿ ರಾತ್ರಿ ಇಲ್ಲೇ ಪಾರ್ಟಿ ಅರೆಂಜ್ ಮಾಡಿದಾರೆ. ನೀನ್ ನೋಡುದ್ರೆ ಈಗಲೇ ಹೋಗಬೇಕು ಅಂತಿದ್ಯ, ಏನಾಯ್ತು ನಿಂಗೆ?

ನಾನು ಇಬ್ಬರನ್ನು ಎಬ್ಬಿಸಿಕೊಂಡು, ಗೆಸ್ಟ್ ಹೌಸ್ಗೆ ತೆರಳಿ ಲಗೇಜ್ ಪ್ಯಾಕ್ ಮಾಡಿಸಿದೆ. ನಡುವೆ ಸಿಟಿ ಟ್ಯಾಕ್ಸಿಗೆ ಕಾಲ್ ಮಾಡಿ ೧:೩೦ರ ಸುಮಾರಿಗೆ ಕಾಲೇಜ್ ಕ್ಯಾಂಪಸ್ ಬಳಿ ಬರಲು ತಿಳಿಸಿದೆ. ಸಂಯುಕ್ತಾಳಿಗೆ ಕಣ್ಣು ಹೊಡೆದು ಹೊರ ಕಳಿಸಿ, ಸರಸು ಅತ್ತೆಗೆ, ಅತ್ತೆ ಇಲ್ಲಿ ಯಾವುದೋ ಟೆರರಿಸ್ಟ್ ಅಟ್ಯಾಕ್ ಆಗೋ ಸಾಧ್ಯತೆಗಳಿದೆಯಂತೆ. ಹಾಗಾಗಿ ನಾವು ತಕ್ಷಣ ಹೊರಡುವುದು ಕ್ಷೇಮ, ನೀವೇನು ಚಿಂತಿಸಬೇಡಿ, ನಾನು ಎಲ್ಲ ವ್ಯವಸ್ಥೆ ಮಾಡಿದ್ದೇನೆ. ಇನ್ನೈದು ನಿಮಿಷದಲ್ಲಿ ಕಾರು ಬರುತ್ತದೆ, ರೆಡಿ ಆಗಿ ಅಂತ ಹೇಳಿ ಅವರನ್ನು ಬಚ್ಚಲು ಮನೆಗೆ ಕಳುಹಿಸಿ, ಸಂಯುಕ್ತಾಳನ್ನು ಕರೆದು, ಹಣೆಗೊಂದು ಮುತ್ತು ಕೊಟ್ಟು ಅತ್ತೆಗೆ ಹೇಳಿದ್ದನ್ನೇ ಮತ್ತೆ ಹೇಳಿದೆ. ನಾನು ಹೇಳುತ್ತಿರುವುದು ಸುಳ್ಳು ಎಂದು ಗೊತ್ತಿದ್ದರೂ, ನನ್ನ ಬಲಗೈಯನ್ನು ತನ್ನ ಎರಡು ಕೈಗಳ ಮಧ್ಯ ಹಿಡಿದು ಕಣ್ಣು ಮುಚ್ಚಿ ಮೆಲ್ಲಗೆ ತಲೆಯಾಡಿಸಿದಳು. ಹೊರಗಡೆ ಏನೂ ತಿನ್ನದ ಅತ್ತೆ, ಐದೇ ನಿಮಿಷದಲ್ಲಿ ಬುತ್ತಿ ತಂದಿದ್ದ ಚಪಾತಿ ಚಟ್ನಿಪುಡಿ ತಿಂದು ಮುಗಿಸಿ ರೆಡಿ ಆಗಿ ನಿಂತರು. ಕಾರು ಬಂದೊಡನೆ ಮೂರು ಬ್ಯಾಗ್ಗಳನ್ನ ತುರುಕಿ, ಭೈಯ್ಯ ತೀನ್ ಭಜೆ ಕಾ ಫ್ಲೈಟ್ ಹೈ, ಜಲ್ದಿ ಜಾನ ಹೈ ಅಂದೆ. ಫಿಕರ್ ಮತ್ ಕೀಜಿಯೇ ಸಾಬ್, ಆದ ಗಂಟಾ ಮೇ ಜಾಯೇಗ ಅಂದು ಬರ್ರ್ ಅಂತ ಕ್ಯಾಂಪಸ್ ಆಚೆ ಎಡಬದಿಗೆ ಗಾಡಿ ತಿರುಗಿಸಿದ. ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ಮೇನ್ ರೋಡಿನ ಬಲತುದಿಯಲ್ಲಿ Airport 30 Kms ಎನ್ನುವ ದಾರಿ ಫಲಕ ಕಂಡಿತು. ಆ ಕ್ಷಣ ನಾನು ಗಡಿಯಾರ ನೋಡಿದಾಗ ಗಂಟೆ ಮಧ್ಯಾನ್ಹ  ೧:೪೫.

ಮಧ್ಯಾನ್ಹದ  ಸಮಯವಾದ್ದರಿಂದ ಟ್ರಾಫಿಕ್ ಇರಲ್ಲಿಲ್ಲ, ಸರಿಯಾಗಿ ೨:೧೫ಕ್ಕೆ ಏರ್ಪೋರ್ಟ್ ತಲುಪಿದ್ದೆವು. ಚೆಕ್ ಇನ್ ಮಾಡಿ ಬೋರ್ಡಿಂಗ್ ಪಾಸ್ ಪಡೆದೆ. ತಿನ್ನಲು ಹಾಳು-ಮೂಳು ತೊಗೊಂಡು, ಫ್ಲೈಟಿನ ಕಡೆ ಸೀಟಿನಲ್ಲಿ ಆಸೀನರಾದಾಗ ೨:೪೫ ಆಗಿತ್ತು. ನಾನು ಅಪ್ಸರೆಯಂತಿರುವ ಆ ಗಗನ ಸಖಿಯರನ್ನು ಕಣ್ಣು ಮಿಟುಕಿಸದೆ ನೋಡುತ್ತಿದ್ದರೆ, ಸಂಯುಕ್ತಾ ಕೋತಿ ಅನ್ನುತ್ತಾ ನನ್ನ ತೊಡೆಗೆ ಜಿಗುಟಿದಳು. ನಾನು ಸ್ವಲ್ಪ ಜೋರಾಗೆ ಆಹ್ ಹ್ ಎಂದಾಗ ಹತ್ತಿರದಲ್ಲೆ ಇದ್ದ ತರುಣಿ ಆರ್ ಯು ಓಕೆ? ಅಂದಾಗ ಸಂಯುಕ್ತಾಳ ಮುಖ ನೋಡಬೇಕಿತ್ತು :P ಚಿಪ್ಸು, ಜ್ಯೂಸು, MTR ಅವಲಕ್ಕಿ ಮಿಕ್ಸು ಎಲ್ಲ ತಿಂದು ಹೊಟ್ಟೆ ತುಂಬಿದಾಗ, ಬೆಳಗ್ಗೆ ನಾಕಕ್ಕೆ ಎದ್ದಿದ್ದ ನಮ್ಮನ್ನು ಕಣ್ಣು  ನಿದ್ರಾಲೋಕಕ್ಕೆ ಕರೆಯುತ್ತಿತ್ತು. ಅಷ್ಟರಲ್ಲಾಗಲೇ ಅತ್ತೆ ಸೀಟಿಗೊರಗಿ ಕಣ್ಣು ಮುಚ್ಚಿದ್ದರು, ಸಂಯುಕ್ತಾ ನನ್ನ ಹೆಗಲ ಮೇಲೆ ತಲೆ ಇಟ್ಟು ಮೆಲ್ಲಗೆ ಏನಾಯಿತು ಎಂದಳು. ನಾನು ಏನಾಗಿಲ್ಲ, ನಥಿಂಗ್ ಟು ವರಿ ಡಿಯರ್, ನಿದ್ದೆ ಮಾಡು ಊರಿಗೆ ಹೋಗ್ತಿದೀವಲ ಎಲ್ಲ ಗೊತ್ತಾಗತ್ತೆ ಅಂದೆ. ಅವಳು ನಿದ್ರೆಗೆ ಜಾರಿದಳು, ನಾನು ಹೊರಗಣ್ಣು ಮುಚ್ಚಿದ್ದೆ,  ಆದರೆ ಒಳಗಣ್ಣು ಮನಃಪಟಲದ ಮೇಲೆ ಮೂಡುತ್ತಿದ್ದ ಚಿತ್ರವನ್ನು ನೋಡುತ್ತಿತ್ತು.

 

                                             *************************************

Rating
No votes yet

Comments

Submitted by ಸುಧೀ೦ದ್ರ Thu, 05/16/2013 - 21:15

SUmUಕತೆ : SU ಅಂದರೆ ನಾನೇ, ಇನ್ನು U ಅಂದರೆ ನಾವೆಲ್ಲರೂ ಪ್ರತಿನಿಧಿಸುವ ಈ ದೇಶ,ರಾಜ್ಯ ಮತ್ತು ಸಮಾಜ ಇವುಗಳ ಕತೆ ಅಂತ ಒಂದು, ಒಟ್ಟಾರೆಯಾಗಿ ಓದಿದಾಗ ಸಂಯುಕ್ತೆ ಅಥವಾ ಸಂಯುಕ್ತಾ, ಅದರಲ್ಲಿ SU ಮತ್ತೆ ನಾನೇ, ಹಾಗಾಗಿ ಇದು ನಮ್ಮಿಬ್ಬರ ಕತೆನೂ ಹೌದು. ಈ ಸಂಯುಕ್ತಾ ಯಾರು ಏನು ಅಂತ ತಲೆ ಕೆಡಿಸಿಕೊಳ್ಳಬೇಡಿ.
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Submitted by ಸುಧೀ೦ದ್ರ Sun, 05/19/2013 - 20:46

In reply to by ಸುಧೀ೦ದ್ರ

ಮೇಲಿನ ಪ್ರತಿಕ್ರಿಯೆಯಲ್ಲಿ ಸಂಯುಕ್ತಾ ಬಗ್ಗೆ ಹೆಚ್ಚು ತಿಳಿಯಬೇಕೆಂದರೆ, ನಾನು ಹಿಂದೆ ಬರೆದಿದ್ದ ಕಥೆಯನ್ನು ಓದಲು, ನನ್ನ ಸ್ವಂತ ಬ್ಲಾಗಿನ ಕೊಂಡಿಯನ್ನು ಕೊಟ್ಟಿದ್ದೆ. ಅದು ನಿಯಮಕ್ಕೆ ವಿರುದ್ದವಾದ್ದರಿಂದ ಅದನ್ನು ಅಳಿಸಲಾಗಿದೆ ಎಂದು ಭಾವಿಸಿದ್ದೇನೆ. ಈ ಮೊದಲು ಆ ಕಥೆಗಳನ್ನು ಸಂಪದದಲ್ಲೂ ಪ್ರಕಟಮಾಡಿದ್ದೆನು. ಈಗ ಸಂಪದದ ಕೊಂಡಿಯನ್ನು ನೀಡುತ್ತಿದ್ದೇನೆ.

ಅವಳ ಕಾಲ್ ಬರುತ್ತಾ?? - ಭಾಗ ೧೨ [ಕೊನೆ ಭಾಗದಲ್ಲಿ ಉಳಿದ ಭಾಗಗಳ ಕೊಂಡಿ ಇರುವುದರಿಂದ] - http://sampada.net/blog/%E0%B2%85%E0%B2%B5%E0%B2%B3-%E0%B2%95%E0%B2%BE%…

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೧೨ [ಕೊನೆ ಭಾಗದಲ್ಲಿ ಉಳಿದ ಭಾಗಗಳ ಕೊಂಡಿ ಇರುವುದರಿಂದ] - http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E…

ಸ್ವಂತ ಬ್ಲಾಗಿನ ಕೊಂಡಿಯನ್ನು ಸಂಪದದಲ್ಲಿ ಪ್ರಕಟಿಸುವ ಬರಹದಲ್ಲಿ ಕೊಡಬಾರದೆಂಬ ನಿಯಮ ನಾನು ಪಾಲಿಸಿರಲ್ಲಿಲ್ಲ. ಅದಕ್ಕೆ ಕ್ಷಮೆ ಇರಲಿ.

Submitted by nageshamysore Sun, 05/19/2013 - 22:14

In reply to by ಸುಧೀ೦ದ್ರ

ನಮಸ್ಕಾರ ಸುಧೀಂದ್ರರವರೆ,
ಸ್ವಂತದ ಕೊಂಡಿಗಳನ್ನು ಹಾಕಬಾರದೆನ್ನುವ ನಿಯಮ ನಾನೂ ಗಮನಿಸಿರಲಿಲ್ಲ, ನಿಮ್ಮಿಂದ ಅರಿಯುವಂತಾಯ್ತು -  ಧನ್ಯವಾದಗಳು
- ನಾಗೇಶ ಮೈಸೂರು, ಸಿಂಗಾಪುರದಿಂದ

Submitted by ಸುಧೀ೦ದ್ರ Mon, 05/20/2013 - 12:08

In reply to by nageshamysore

ಸ್ವಾಗತ ನಾಗೇಶರವರೇ. ಮೊದಲು ನಾನು ಕೂಡ ಗಮನಿಸಿರಲ್ಲಿಲ್ಲ... 'ಸಂಪದದಲ್ಲಿ ಬರೆಯುವ ಮುನ್ನ' ಲೇಖನವನ್ನು ಸಂಪೂರ್ಣ ಓದಿದ ಮೇಲೆ ತಿಳಿಯಿತು.