ಧೂಮ-ಸಾಹಿತ್ಯ...!
ಭೂಮ್ಯಾಕಾಶಾಂತರ್ಗತ ಕವಲೆ
ನಾನಾಕಾರ ಹಾಹಾಕಾರ ತಿರುಳೆ
ದೇಹ ಹೋಮ ಕುಂಡವಾಗಿ
ಸಿಗರೇಟನು ಹಚ್ಚಿತೆ ಅಗ್ನಿ?
ಕೈ ಬಾಯಿಯ ಜುಗಲ್ ಬಂಧಿ
ಬಿಟ್ಟು ಬಿಡದೆಲ್ಲ ಸಂದಿ ಗೊಂದಿ
ಪುಸು ಪುಸು ಬುಸು ಬುಸು ಸರ್ಪ
ನುಗ್ಗಿದ ಕಡೆಯೆಲ್ಲಾ ಒಣ ದರ್ಪ..!
ಗುರುತ್ವವನೆ ಬೆಚ್ಚಿಸೊ ಬಯಲೆ
ನಾನಾ ನರ್ತನ ಮೇಲೇರಲೆ
ಪಿಶಾಚ ರೂಪ ಕರಿ ನೀಲ ಬಿಳುಪ
ಕಲಸಿದ್ದೆ ಹಗುರ ಕಾಡೆ ಮಾಲೆ!
ಕೆಮ್ಮಿದ್ದರು ದಮ್ಮಿರಬೇಕು ಪಕ್ಕ
ಶೈಲಿ ವಿನ್ಯಾಸಗಳ ರಂಗಿನ ಸುಖ
ಹೇಳಿದ ಮಾತ ಕೇಳದ ಸಂಸಾರ
ಸುಟ್ಟರು ವಿಧೇಯ ಇವನೊಂಥರ!
ಬೆಚ್ಚಗಿರಿಸುವನೊ ಕೊಚ್ಚುವನೊ
ಒತ್ತಡಗಳನಳಿಸುವ ಕೊರಮನೊ
ಹಂಗಿಗೆ ಬಿದ್ದರೆ ಅವನದೆ ರಾಜ್ಯ
ರಂಗಿಲ್ಲದ ಹೊಗೆಯಡಿ ದಾಸ್ಯ!
ಜತೆಗಾರರ ಜತೆ ಸಖ್ಯ ಸುಖ
ಕುಡಿತ ಕುಣಿತ ಜೊತೆ ಪಾನಕ
ಒಂದನೊಂದು ಸೇರಿಸುವ ಚೊಕ್ಕ
ಹೆಣ್ಣೊಂದು ಸಿಕ್ಕೆ ಮುಗಿಯಿತೆ ಲೆಕ್ಕ!
ಬರಿ ಕೂರಲಾಗದ ಚಡಪಡಿಕೆ ಗುದಿ
ಕೈ ಹಿಡಿಯಬೇಕೆ ಸಿಗರೇಟಿನ ತುದಿ
ಆರಂಭ ಶೋಕಿ ಸೇದಲಿರದಾ ಅಗತ್ಯ
ಸೇದಿಟ್ಟ ದೇಹ ಸಿಗರೇಟಿನ ಸಾಹಿತ್ಯ!
- ನಾಗೇಶ ಮೈಸೂರು
Comments
ಸಾಮಾನ್ಯವಾಗಿ ಧೂಮಪಾನಿಗಳು
In reply to ಸಾಮಾನ್ಯವಾಗಿ ಧೂಮಪಾನಿಗಳು by kavinagaraj
ಕವಿ ನಾಗರಾಜರೆ, ಎಲ್ಲಾ
ಧೂಮಲೀಲೆ ಚೆನ್ನಾಗಿದೆ!
In reply to ಧೂಮಲೀಲೆ ಚೆನ್ನಾಗಿದೆ! by ರಾಮಕುಮಾರ್
"ನಾ ಸುಟ್ಟ ಸಿಗರೇಟುಗಳ ಲೆಕ್ಕ..."
In reply to "ನಾ ಸುಟ್ಟ ಸಿಗರೇಟುಗಳ ಲೆಕ್ಕ..." by ರಾಮಕುಮಾರ್
ರಾಮಕುಮಾರರೆ ನಮಸ್ಕಾರ. ನನಗೆ
ಸರಿ ಸ್ವಾಮಿ... ಇದನ್ನು
In reply to ಸರಿ ಸ್ವಾಮಿ... ಇದನ್ನು by ksraghavendranavada
ನಾವಡರೆ ನಮಸ್ಕಾರ...ಒಂದಾನೊಂದು
In reply to ನಾವಡರೆ ನಮಸ್ಕಾರ...ಒಂದಾನೊಂದು by nageshamysore
ಸಿಗರೇಟು ಬಿಡುವುದು ಸುಮಾರು
In reply to ಸಿಗರೇಟು ಬಿಡುವುದು ಸುಮಾರು by ರಾಮಕುಮಾರ್
ಸಿಗರೇಟು ಬಿಡುವ ಬಗ್ಗೆ ಮಾತೆ
In reply to ಸಿಗರೇಟು ಬಿಡುವ ಬಗ್ಗೆ ಮಾತೆ by nageshamysore
೨-ಎರಡು ಧೂಮಪಾನಕವನ ... ಬರೀ
In reply to ೨-ಎರಡು ಧೂಮಪಾನಕವನ ... ಬರೀ by venkatb83
ಅಂದ್ ಹಾಗೆ ನಾವೂ ಒಮ್ಮೆ ಈ ಬಗ್ಗೆ
In reply to ಅಂದ್ ಹಾಗೆ ನಾವೂ ಒಮ್ಮೆ ಈ ಬಗ್ಗೆ by venkatb83
ಸಪ್ತಗಿರಿಯವರೆ ಹಳೆ ಕೊಂಡಿಯ