ಲೆಮನ್ ಯೆಲ್ಲೋ, ರೆಡ್ ವೈನ್

ಲೆಮನ್ ಯೆಲ್ಲೋ, ರೆಡ್ ವೈನ್

ಚಿತ್ರ

 ಸಂಪದಿಗ ಗಣೇಶರು ನನ್ನ ನೆನ್ನೆಯ ಬರಹ ಓದಿ  ಲೆಮನ್ ಯೆಲ್ಲೋ ರೆಡ್ ವೈನ್ - ಈ ನಾಲ್ಕು ಪದಗಳನ್ನು ಬಳಸಿ ರಾಮಾಯಣದ ಕಥೆಯ ಯಾವುದಾದರೂ ಒಂದು ಸಂದರ್ಭಕ್ಕೆ ಪದ್ಯ ಬರೆಯಿರೆಂದು   ಬರೆದದ್ದನ್ನು ಓದಿ ಬರೆದ ಚೌಪದಿ ಇದು. 

 
(ಮಾಯಾ ಮೃಗದ ಸಂದರ್ಭ. ಗಂಡಸರ ಎಡಗಣ್ಣು, ಹೆಂಗಸರ ಬಲಗಣ್ಣು ಅದುರಿದರೆ ಅಶುಭ ಶಕುನವೆಂಬುದು ಕವಿಸಮಯ. ರಾಮಾಯಣದಲ್ಲಿ ಮಾರೀಚನನ್ನು ಹಿಡಿಯಲು ಹೋದಾಗ ರಾಮನಿಗೆ ಎಡಗಣ್ಣದುರಿದ ಕಥೆ ಇದೆಯೋ ಇಲ್ಲವೋ ಗೊತ್ತಿಲ್ಲ :-) ಅದು ನನ್ನ ಕಲ್ಪನೆ)
 
ಕಾನಲ್ಲಿ ಸೀತೆಯೆಲ್ಲೋ ನೀರು ತರುವಾಗ
ವೈನಾದ ಹೊನ್ನಜಿಂಕೆಯ ನೋಡಿ ಬಯಸೆ
ತಾನಲ್ಲೆ ಮನದನ್ನೆಯಾಸೆ ತೀರಿಸೆ ರಾಮ
ಚಿನ್ನಮಿಗಕೆಳಸಿರೆಡಗಣ್ಣದುರಿತವಗೆ
 
-ಹಂಸಾನಂದಿ
 
ಕೊ: ಮೊದಲಸಾಲನ್ನು  ಕಾನಲೆಲ್ಲೋ ಸೀತೆ ನೀರುತರಹೋದಾಗ ಅಂತ ಕೂಡ ಓದಿಕೊಳ್ಳಬಹುದು.
ಕೊ.ಕೊ: ರೆಡ್ ಪದ ಅಷ್ಟು ಚೆನ್ನಾಗಿ ಮೂಡಿ ಬಂದಿಲ್ಲವಾದರೂ ಹಾಕಿಬಿಟ್ಟೆ
 

 

Rating
No votes yet

Comments

Submitted by nageshamysore Sat, 07/06/2013 - 07:22

ಹಂಸಾನಂದಿಯವರೆ, ಛಂಧಸ್ಸಿನ ಬಂಧದಲ್ಲಿ ರಚಿಸುವ ನಿರ್ಬಂಧವನ್ನು ಪರಿಗಣಿಸಿ ನೋಡಿದರೆ 'ರೆಡ್'ಪದದ ಸಂಯೋಜನೆ ಸೊಗಸಾಗಿ ಬಂದಿದೆ - ಅಮೇಜಿಂಗ್!  ಹಳತಿನ ಒಳಿತನ್ನು ಹಾಗೆ ಉಳಿಸಿಕೊಂಡು ಬರುತ್ತಿರುವ ನಿಮಗೂ ಹ್ಯಾಟ್ಸಾಫ್! - ನಾಗೇಶ ಮೈಸೂರು

Submitted by venkatb83 Sat, 07/06/2013 - 16:40

In reply to by nageshamysore

+1

ಅಬ್ಬಬ್ಬ ಅಮೋಘ ... ಸೂಪರ್ ಮಾರರೆ ..
ರೆಡ್ದು , ವೈನು ,ಎಲ್ಲೊ ಸಂಯೋಜನೆ ಸಖತ್
ಸಖತ್ ಇಷ್ಟ
ಆಯ್ತು
ಶುಭವಾಗಲಿ

\।

Submitted by kpbolumbu Sat, 07/06/2013 - 15:39

ಹಂಸಾನಂದಿಗಳೇ, ಪದ್ಯ ಚೆನ್ನಾಗಿದೆ. ಪುತ್ತೂರಿಗೆ ಶತಾವಧಾನ ನೋಡಲು ಹೋಗಿದ್ದಾಗಲೂ ನಿಮ್ಮ ಪದ್ಯ ಓದಲು ದೊರೆಯಿತು.
ಕಾನಲ್ಲಿ ಸೀತೆ / ಕಾನಲೆಲ್ಲೋ ಸೀತೆಯ ಬದಲು 'ಕಾನನದೆ ಸೀತೆ' ಯಾಕಾಗಬಾರದು?

Submitted by hamsanandi Sat, 07/06/2013 - 21:23

In reply to by kpbolumbu

ಧನ್ಯವಾದಗಳು ಕೃಷ್ಣಪ್ರಕಾಶರೆ. ಕಾನನದಿ ಎಂದರೆ, ಪ್ರಾಸ ಕೆಡುತ್ತದೆ. ಅಲ್ಲದೆ "ಯೆಲ್ಲೋ" ಎಲ್ಲೋ ಹೋಗಿಬಿಡುತ್ತಲ್ಲ!

Submitted by makara Tue, 07/09/2013 - 19:02

In reply to by hamsanandi

ಹಂಸಾನಂದಿ/ಕೃಷ್ಣ ಬೊಳುಂಬು ಅವರೆ,
ನಿಮ್ಮಿಬ್ಬರಿಗೂ ಛಂದಸ್ಸು ಹಾಗು ವ್ಯಾಕರಣಗಳ ಒಳ್ಳೆಯ ಜ್ಞಾನವಿದೆ. ನನಗೆ ಶತಾಕ್ಷರಿ ಮಂತ್ರದ ಅಕ್ಷರಗಳ/ಛಂದಸ್ಸಿನ ಕುರಿತಾದ ಒಂದು ಅನುಮಾನವಿದೆ. ಅದನ್ನು ಸ್ವಲ್ಪ ಪರಿಷ್ಕರಿಸಿ ಕೊಡಿ. ಸಮಸ್ಯೆಯ ಕೊಂಡಿ ಇಲ್ಲಿದೆ ನೋಡಿ. http://sampada.net/comment/181755#comment-181755
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by partha1059 Tue, 07/09/2013 - 19:10

In reply to by makara

ಬಂಡ್ರಿಯವರೆ ನಿಮ್ಮ ಲಿಂಕ್ ಕ್ಲಿಕ್ ಮಾಡಿದರೆ ಈ ರೀತಿ ಬರುತ್ತಿದೆ
" ಅನುಮತಿಯಿಲ್ಲ
ನೀವು ಕೋರಿದ ಪುಟ ವೀಕ್ಷಿಸಲು ನಿಮಗೆ ಅನುಮತಿಯಿಲ್ಲ"

Submitted by makara Wed, 07/10/2013 - 09:52

In reply to by partha1059

ಪಾರ್ಥ ಸರ್,
ಬಹುಶಃ ನಾನೇ ಯೂಸರ್ ಆಗಿರುವುದರಿಂದ ಬಹುಶಃ ಆ ಕೊಂಡಿ ನನ್ನ ಬ್ರೌಸರಿನಲ್ಲಿ ಓಪನ್ ಆಗುತ್ತಿದೆಯೇನೋ. ವಿವರಗಳಿಗಾಗಿ ಲಲಿತಾಸಹಸ್ರನಾಮದ ವಿವರಣೆಯ ೫೯ನೇ ಲೇಖನದ ಕೆಳಗಿನ ಕೊಂಡಿಯನ್ನು ನೋಡಿ. ನಾಮ ೧೯೦ರಲ್ಲಿ ಆ ಶತಾಕ್ಷರೀ ಮಂತ್ರವಿದೆ.
http://sampada.net/blog/%E0%B3%AB%E0%B3%AF-%E0%B2%B6%E0%B3%8D%E0%B2%B0%…
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by ಶ್ರೀನಿವಾಸ ವೀ. ಬ೦ಗೋಡಿ Wed, 07/10/2013 - 11:19

In reply to by partha1059

ಪಾರ್ಥರವರೆ, ಲಾಗಿನ್ ಆಗದೆ ಕೊಂಡಿಯನ್ನು ಚಿಟುಕಿಸಿದರೆ ಆ ಸಂದೇಶ ಬರುತ್ತದೆ. ಲಾಗಿನ್ ಆಗಿ ಇನ್ನೊಮ್ಮೆ ಪ್ರಯತ್ನಿಸಿ.

Submitted by partha1059 Sat, 07/06/2013 - 21:09

ಲೆಮನ್ ಎಲ್ಲೊ, ರೆಡ್ ವೈನ್ ನನಗೆ ಇದು ನಾಲಕ್ಕು ಪದದಂತೆ ಬಾಸವಾಗದೆ ಎರಡೆ ಪದದಂತೆ ಅಂದರೆ ನಿಂಬೆಯ ಹಳದಿ, ಕೆಂಪು ವೈನ್ ಅನ್ನುವಂತೆ ಭಾಸವಾಯಿತು. ನಿಮ್ಮ ಚೌಪದಿಯು ಚೆನ್ನಾಗಿದೆ !

Submitted by ಗಣೇಶ Sun, 07/07/2013 - 22:31

In reply to by partha1059

>>>..ಇದು ನಾಲಕ್ಕು ಪದದಂತೆ ಬಾಸವಾಗದೆ ಎರಡೆ ಪದದಂತೆ... ವೈನ್ ಪ್ರಭಾವ!:) ಕೆಂಪು ವೈನ್ ಮೇಲೇ ಪಾರ್ಥರ ಕಣ್ಣು ಬಿತ್ತು ನೋಡಿ. :) ವೈನ್ ಕಲರ್‌ಗಳ ಬಗ್ಗೆ- http://www.riedel.com/wine-tastings/the-wine-colors/

Submitted by ಗಣೇಶ Sun, 07/07/2013 - 22:19

ಬೆಳಗ್ಗಿಂದ ಬಲಗಣ್ಣು ಅದುರುತ್ತಿತ್ತು.:) ಸುಂದರ ಸೂಪರ್ ಕವನಕ್ಕಾಗಿ ಹಂಸಾನಂದಿಯವರಿಗೆ ಧನ್ಯವಾದಗಳು. ಸಂಪದ ಸೇರಿದಾಗಿನಿಂದಲೂ ನಾನು ಹಂಸಾನಂದಿಯವರ ಅಭಿಮಾನಿ. ಅವರು ಯಾವುದೇ ಶಬ್ದಗಳನ್ನು ಕೊಟ್ಟರೂ ಕವಿತೆ ರಚಿಸುವರು ಎಂಬುದರಲ್ಲಿ ನನಗೆ ಅನುಮಾನವೇ ಇರಲಿಲ್ಲ.
"ಪದ್ಯಪಾನ"ದಲ್ಲಿ ಕವಿಗಳೇ ಸೇರಿರುವುದು. ಅವರು "ದತ್ತಪದ"ಗಳಿಂದ ಮೊದಲೇ ಕವಿತೆ ರಚಿಸಲಾಗುವುದೋ ಎಂದು ಪ್ರಯತ್ನಿಸಿ, ನಂತರ ಕೊಡಬಹುದು ಎಂಬ ಸಂಶಯ ನನ್ನಲ್ಲಿ ಬಂದಿತ್ತು. ಹಾಗೇ ಅನೇಕರಿಗೆ ಬಂದಿರಬಹುದು. ಅದನ್ನು ನಿವಾರಿಸಲು ನಾನೇ ಶಬ್ದಗಳನ್ನು ಕೊಟ್ಟು ಪ್ರಯತ್ನಿಸಬಾರದೇಕೆ ಎಂದು ಅನಿಸಿತು. ಸಂಪದ ಮಿತ್ರರಾದ ಹಂಸಾನಂದಿಯವರು ಬೇಸರಿಸಲಾರರು ಎಂಬ ನಂಬಿಕೆಯೊಂದಿಗೆ, ನಾಲ್ಕು ಶಬ್ದ ಆ ಕ್ಷಣದಲ್ಲಿ ನೆನಪಿಗೆ ಬಂದುದನ್ನು ಬರೆದೆ.:)
ಧೂಮಪಾನ/ಮದ್ಯಪಾನ ಚಟ ಮಾನಸಿಕವಾಗಿ ದೈಹಿಕವಾಗಿ ಹಾನಿಕರ- ಬಿಟ್ಟುಬಿಡಿ.
ಮನಸ್ಸನ್ನು ಚುರುಕು ಮಾಡುವ "ಪದ್ಯಪಾನ" ನಮ್ಗೆಲ್ಲಾ ಒದಗಿಸುತ್ತಿರುವ ಹಂಸಾನಂದಿಯವರಿಗೆ ಮತ್ತೊಮ್ಮೆ ಧನ್ಯವಾದಗಳು.
-ಗಣೇಶ.