ಪಚ್ಚೆಲಿಂಗ
ಚಿತ್ರ
ಪಚ್ಚೆಲಿಂಗ
======
ಕಳೆದ ಬಾನುವಾರ ನಮ್ಮ ಚಿಕ್ಕಪ್ಪನ ಮಗ ನಮ್ಮ ಮನೆಗೆ ಬಂದಿದ್ದ ಅವರ ತಾಯಿಯ ಜೊತೆ. ನಮ್ಮ ಮನೆಯಿಂದ ಅವರಿಬ್ಬರಿಗೆ ಮತ್ತೊಂದು ಕಾರ್ಯಕ್ರಮವಿತ್ತು. ನಮ್ಮ ಮನೆಯ ಹತ್ತಿರದಲ್ಲಿಯೆ ಇರುವ ಅವರ ದೂರದ ನೆಂಟರೊಬ್ಬರ ಮನೆಯನ್ನು ಹುಡುಕುತ್ತ ಅವರು ಹೊರಟಿದ್ದರು. ನಮ್ಮ ಮನೆಗೆ ಹತ್ತಿರ ಎನ್ನುವ ಕಾರಣಕ್ಕೆ ನನ್ನನ್ನು ಅವರ ಜೊತೆ ಕರೆದರು. ನನಗು ಕುಳಿತು ಬೇಸರವಾಗಿದ್ದು ಸರಿ ಎಂದು ಹೊರಟೆ. ಸುಲುಭದಲ್ಲಿಯೆ ಅವರ ಮನೆ ಸಿಕ್ಕಿತು ಎನ್ನಿ.
ನಮ್ಮ ಚಿಕ್ಕಮ್ಮನಿಗೆ ಸಂತಸ ಅವರ ಜೊತೆಯವರು ಸಿಕ್ಕಿದ್ದಾರೆ ಎಂದು. ಹಳೆಯ ನೆನಪುಗಳ ಜೊತೆ ಯಾವುದೊ ಮಾತು ಬಂದು ಹೇಳಿದರು,
'ನಿಮ್ಮ ಮನೆಯಲ್ಲೊಂದು ಹಳೆಯ ಕಾಲದ ಪಚ್ಚೆಲಿಂಗ ಇತ್ತಲ್ಲ ಈಗಲು ಇದೆಯ?" ಎಂದು
ಅದಕ್ಕೆ ಮನೆಯಾತ
"ಇಲ್ಲದೆ ಏನು ಈಗಲು ಪೂಜಿಸುತ್ತೇವೆ , ದೇವರ ಮನೆಯಲ್ಲಿದೆ " ಎಂದರು
ನಮ್ಮ ಚಿಕ್ಕಪ್ಪನ ಮಗ ಮತ್ತು ನಾನು ಸಹ ಅದನ್ನು ನೋಡುವ ಕುತೂಹಲ ವ್ಯಕ್ತಪಡಿಸಿದಾಗ ಅವರು ಅದಕ್ಕೇನು ಬನ್ನಿ ಎಂದು ದೇವರ ಮನೆಗೆ ಕರೆದೋಯ್ದರು. ಸೀದ ಹೋದವರೆ ದೇವರ ಮುಂದಿದ್ದ ಒಂದು ಗೌರಿ ಪೆಟ್ಟೆಗೆಯಂತದನ್ನು ಕೈಗೆ ತೆಗೆದುಕೊಂಡು, ಮುಚ್ಚಲ ತೆಗೆದರೆ ಅದರಲ್ಲಿ ಒಂದು ಲಿಂಗವಿತ್ತು, ಲಿಂಗದ ಮೇಲಿದ್ದ ಕವಚ ತೆಗೆದು ಲಿಂಗವನ್ನು ಹಿಡಿದು 'ನೋಡಿ' ಎನ್ನುತ್ತ ನಮ್ಮ ಕೈಗೆ ಕೊಟ್ಟರು
ಯಾವ ಅಳುಕು , ಅಥವ ಭಕ್ತಿಯ ಆಡಂಭರವಿಲ್ಲದೆ ಆತ ಸರಳವಾಗಿ ನಮ್ಮ ಕೈಗೆ ಕೊಟ್ಟಾಗ ನಮಗೆ ಸಂತಸವೆನಿಸಿತು.
ಮೊದಲು ನಮ್ಮ ಚಿಕ್ಕಪ್ಪನ ಮಗ ನಂತರ ನಾನು ಕೈಲಿ ಹಿಡಿದು ನೋಡಿದೆವು.
ಸುಮಾರು ೧೨-೧೫ ಸೆಂ ಮಿ ಎತ್ತರವಿರಬಹುದಾದ , ಶಿವಲಿಂಗ ಹತ್ತಿರ ಹತ್ತಿರ ಪಾಚಿ ಹಸಿರು ಬಣ್ಣದ ಕಲ್ಲಿನದು, ಅತಿ ಶುಬ್ರವಾಗಿದ್ದು ತಣ್ಣಗೆ ಎರಡು ಕೈ ತುಂಬಾ ಕುಳಿತ್ತಿದ್ದು ಮನದಲ್ಲಿ ಒಂದು ವಿಶೇಷ ಭಾವನೆ ಮೂಡಿಸಿತು. ಅವರ ಅದನ್ನು ಪುನಃ ಪಡೆದು ಮೊದಲಿನಿನಂತೆ ಗೌರಿ ಪೆಟ್ಟಿಗೆಯಲ್ಲಿಟ್ಟು ದೇವರ ಮುಂದಿಟ್ಟರು. ಆಗ ಗಮನಿಸಿದೆ, ದೇವರ ಮುಂದೆ ಸ್ಪಟಿಕದ ಲಿಂಗ ಒಂದಿತ್ತು, ಆದರೆ ಅದು ಪೂರ್ತಿ ಲಿಂಗದ ಆಕಾರದಲ್ಲಿಲ್ಲದೆ, ಕೆತ್ತಿ ಆಕಾರದ ಕೊಡದೆ ಇರುವ ಕಲ್ಲಿನಂತಿತ್ತು ಸ್ಪಟಿಕ ಎಂದು ತಿಳಿಯುವಂತಿತ್ತು. ನಮಸ್ಕರಿಸಿ ಹೊರಬಂದೆವು. ಪಚ್ಚೆ ಲಿಂಗವೊಂದನ್ನು ಕೈಯಲ್ಲಿ ಸ್ಪರ್ಶಿಸಿದ , ವಂದಿಸಿದ ಧನ್ಯಭಾವದೊಂದಿಗೆ ಹೊರಬಂದೆವು.
ಅವರು ಅದರ ಇತಿಹಾಸ ತಿಳಿಸಿದರು. ಅವರ ಪತ್ನಿಯ ಮುತ್ತಜ್ಜಿಯ ಮುತ್ತಜ್ಜಿ ಕಾಲದಿಂದಲು ಅವರ ಮನೆಯಲ್ಲಿ ಪೂಜಿಸಲ್ಪಡುತ್ತಿದೆ ಎಂದು ತಿಳಿಸಿದರು. ಸುಮಾರು ಇನ್ನೂರು ವರ್ಷಗಳಿಗು ಹಿಂದಿನದು ಇರಬಹುದೆಂದು ನಾನು ಲೆಕ್ಕ ಹಾಕಿಕೊಂಡೆ. ಪಚ್ಚೆ ಎಂದರೆ ಯಾವ ಕಲ್ಲು ಎಂಬ ಕುತೂಹಲ ಕೆರಳಿತು
ಇಂಟರ್ನೆಟ್ ನಲ್ಲಿ ಪಜ್ಜೆಯ ಬಗ್ಗೆ ಸಾಕಷ್ಟು ವಿವರಗಳಿವೆ
ಪಚ್ಚೆ ಅಥವ ಆಂಗ್ಲದಲ್ಲಿ ಎಮರಾಲ್ಡ್ ಎಂದು ಕರೆಯುವ ಈ ಕಲ್ಲು ವೈಜ್ಞಾನಿಕವಾಗಿ ಬೆರೆಲಿಯಂಗ ಅಲ್ಯೂಮಿನಿಯಂ ಹಾಗು ಸಿಲಿಕೇಟ್ ನಿಂದ ಕೂಡಿದ ವಸ್ತುವಾಗಿದ್ದು ಹಸಿರು ವರ್ಣದಿಂದ ಕೂಡಿದೆ. ಅದು ಹೆಚ್ಚು ಹೆಚ್ಚು ಪಾರದರ್ಶಕವಾಗಿದ್ದಷ್ಟು ಅದರ ಶ್ರೇಷ್ಟತೆ ಹೆಚ್ಚು ಎಂದು ವರ್ಗಿಕರಿಸಲಾಗುತ್ತೆ. ಕಾಠಿಣ್ಯತೆಯಲ್ಲಿ ವಜ್ರಕ್ಕಿಂತ ಕಡೆಮೆ ಶ್ರೇಣಿಯಲ್ಲಿದೆ.
ಈಜಿಪ್ಟ್ ಆಷ್ಟ್ರಿಯ ಪಾಕಿಸ್ತಾನದ ಸ್ವಾತ್ ನಲ್ಲಿ ಗಣಿಗಾರಿಕೆ ಮಾಡಲಾಗುತ್ತೆ. ಕೊಲಂಬಿಯಾದ ಗಣಿಗಳಲ್ಲಿ ಉನ್ನತ ಶ್ರೇಣಿಯಾದ ಟ್ರಾಫಿಕ್ ಪಜ್ಜೆ ಸಿಗುತ್ತದೆ.
ಸಾಂಪ್ರದಾಯಿಕವಾಗಿ ಪಚ್ಚೆಯನ್ನು ಮೇ ತಿಂಗಳಲ್ಲಿ ಹುಟ್ಟಿದವರ ಅದೃಷ್ಟದ ಕಲ್ಲು ಎಂದು ಭಾವಿಸಲಾಗುತ್ತದೆ. ಕೆಲವು ಸಂಸ್ಕೃತಿಯಲ್ಲಿ ಅವರ ೫೫ ನೆ ವರ್ಷದ ಹುಟ್ಟು ಹಬ್ಬದಲ್ಲಿ ಪಜ್ಜೆಯ ಹರಳನ್ನು ಕೊಡುತ್ತಾರಂತೆ. ಇವೆಲ್ಲ ವೀಕಿಪೀಡಿಯಾದ ವಿವರಗಳು.
ತುಂಬ ಹಿಂದೊಮ್ಮೆ ಓದಿದ ನೆನಪು ,ನಮ್ಮ ಬೆಂಗಳೂರು ಸಹ ಪ್ರಪಂಚದ ಶ್ರೇಶ್ಟ ಪಜ್ಜೆಯ ಗಣಿಗಳನ್ನು ಹೊಂದಿದ ಪ್ರದೇಶವಾಗಿತ್ತು. ಬೆಂಗಳೂರಿನ ಯಡಿಯೂರು ಕೆರೆಯ ಸುತ್ತಮುತ್ತ ಪಚ್ಚೆ ಗಣಿಗಾರಿಕೆ ನಡೆಯುತ್ತಿತ್ತು, (ಈಗಿನ ಎನ್ ಅರ್ ಕಾಲೊನಿ ಮುಂತಾದ ಪ್ರದೇಶ) ಎಂದು ಓದಿದ್ದೆ ಆದರೆ ಅದರ ವಿವರ ಎಲ್ಲಿಯು ಸಿಗುತ್ತಿಲ್ಲ. ಯಾರಿಗಾದರು ತಿಳಿದಿದ್ದಲ್ಲಿ ವಿವರ ಇಲ್ಲಿ ಹಂಚಿಕೊಳ್ಳಿ
-----
-----
ಚಿತ್ರದ ಮೂಲ : ವೀಕಿಪೀಡಿಯದ ಈ ಚಿತ್ರ
ಹೆಚ್ಚಿನ ವಿವರ ಇಲ್ಲಿ ನೋಡಿ : ವೀಕಿಪೀಡಿಯ
Rating
Comments
ಶಿಕಾರಿಪುರ ತಾಲ್ಲೂಕಿನಲ್ಲಿ
ಶಿಕಾರಿಪುರ ತಾಲ್ಲೂಕಿನಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ದೊಡ್ಡಗಾತ್ರದ ಪಚ್ಚೆಲಿಂಗವಿದೆ. ಇದನ್ನು ಕಳ್ಳರು ಹೊತ್ತೊಯ್ಯಲು ದೇವಸ್ಥಾನದಿಂದ ಸುಮಾರು ದೂರ ಎಳೆದೊಯ್ದರೂ, ತೆಗೆದುಕೊಂಡು ಹೋಗಲಾಗದೆ ಬಿಟ್ಟು ಹೋಗಿದ್ದರು.ಒಡೆಯಲು ಪ್ರಯತ್ನಿಸಿದ ಬಗ್ಗೆ ಸುತ್ತಿಗೆಯ ಏಟುಗಳೂ ಲಿಂಗದ ಮೇಲಿದ್ದವು. ಅದನ್ನು ಊರಿನ ಒಳಗೆ ಇರುವ ಇನ್ನೊಂದು ದೇವಸ್ಥಾನಕ್ಕೆ ತಂದಿಟ್ಟು ಆ ದೇವಸ್ಥಾನವನ್ನೂ ನವೀಕರಿಸಲಾಯಿತು. ನಾನು ಶಿಕಾರಿಪುರದಲ್ಲಿ ತಹಸೀಲ್ದಾರನಾಗಿದ್ದಾಗ ನವೀಕರಣ ಕಾರ್ಯ ಮುಗಿದು ಉದ್ಘಾಟನೆಯಾಗಿತ್ತು. ಮುಂದೊಮ್ಮೆ ಅಲ್ಲಿಗೆ ಹೋಗಿ ಚಿತ್ರಗಳನ್ನೂ ತೆಗೆದು ಲೇಖನ ಮಾಡಬೇಕೆಂದು ನಿಮ್ಮ ಈ ಬರಹ ಪ್ರೇರಿಸಿದೆ. ಧನ್ಯವಾದ ಪಾರ್ಥರೇ.
In reply to ಶಿಕಾರಿಪುರ ತಾಲ್ಲೂಕಿನಲ್ಲಿ by kavinagaraj
ಪಚ್ಚೆ ಲಿಂಗ ಕಳವು ಪ್ರಕರಣ- http:
ಪಚ್ಚೆ ಲಿಂಗ ಕಳವು ಪ್ರಕರಣ- http://www.hindu.com/2005/06/15/stories/2005061511760300.htm ಇದಾ? ಬಳ್ಳಿಗಾವೆ, ಮಾರನಕೊಪ್ಪ ಸಮೀಪ ಅನೇಕ ಪಾಳು ಬಿದ್ದ ದೇವಾಲಯಗಳನ್ನು ಶಿವ ವಿಗ್ರಹಗಳನ್ನು ನೋಡಿದ್ದೆ. ಪಚ್ಚೆಕಲ್ಲು ಶಿವ ದೇವಾಲಯಗಳ ಬಗ್ಗೆ- http://en.wikipedia.org/wiki/Emerald_Statues ನೋಡಿದಾಗ ನಂಜನಗೂಡು ನಂಜುಂಡನ ವಿವರ ಸಿಕ್ಕಿತು.
ಪಾರ್ಥರೆ,
"ಶರಣು ಶರಣಯ್ಯ ಶರಣು ಗಣಪ...ಪಚ್ಚೆಕಲ್ಲು ಪಾಣಿಮೆಟ್ಲು ಒಪ್ಪುವ ವಿಘ್ನೇಶ್ವರ ನಿನಗೆ ೨೧ ನಮಸ್ಕಾರಗಳು" ಹಾಡು ನೆನಪಾಯಿತು.
ಪಾರ್ಥ ಸರ್,
ಪಾರ್ಥ ಸರ್,
ಅದೇನು ಕಾಕತಾಳೀಯವೋ ಏನೋ , ೬೨. ಶ್ರೀ ಲಲಿತಾ ಸಹಸ್ರನಾಮ ೨೦೮ರಿಂದ ೨೧೩ನೇ ನಾಮಗಳ ವಿವರಣೆಯಲ್ಲಿ ವಿವಿಧ ರತ್ನ ಹಾಗೂ ಹರಳುಗಳ ಕುರಿತ ಪ್ರಸ್ತಾಪವಿದೆ. ಅದರ ಕುರಿತಾದ ಕೆಲವೊಂದು ಗೊಂದಲಗಳನ್ನು ನಾನು ಶ್ರೀಯುತ ವಿ. ರವಿಯವರಿಂದ ಪರಿಹರಿಸಿಕೊಂಡೆ.
೨೧೩. ಮಹಾಪೂಜ್ಯಾ http://sampada.net/blog/%E0%B3%AC%E0%B3%A8-%E0%B2%B6%E0%B3%8D%E0%B2%B0%…
:
;
;
ದೇವಿಯನ್ನು ಮಂತ್ರ, ಲೋಹ ಮತ್ತು ಅನರ್ಘ್ಯ ರತ್ನಗಳಿಂದ ಪೂಜಿಸುವ ದೇವಾನುದೇವತೆಗಳು ಮತ್ತು ಇತರರ ಬಗೆಗೆ ಹಲವಾರು ಉಲ್ಲೇಖಗಳಿವೆ. ಅವು ಈ ರೀತಿಯಾಗಿವೆ. ೧. ಶಿವ - ಮಂತ್ರ, ೨.ಬ್ರಹ್ಮ- ಶೈಲ ಅಥವಾ ಶಿಲೆ ೩. ವಿಷ್ಣು - ನೀಲಿ ಶಿಲೆ (ಹರಳು), ೪. ಕುಬೇರ - ಸುವರ್ಣ (ಬಂಗಾರ), ೫.ವಿಶ್ವೇದೇವತೆಗಳು - ಬೆಳ್ಳಿ (ರಜತ), ೬. ವಾಯು - ತಾಮ್ರ, ೭. ವಸು - ಹಿತ್ತಾಳೆ, ೮. ವರುಣ - ಸ್ಪಟಿಕ, ೯. ಅಗ್ನಿ - ರತ್ನಗಳು, ೧೦. ಶಕ್ರ (ಇಂದ್ರ) - ಮುತ್ತುಗಳು, ೧೧. ಸೂರ್ಯ - ಹವಳ, ೧೨. ಸೋಮ (ಚಂದ್ರ) - ಇಂದ್ರ ನೀಲವೆನ್ನುವ ಒಂದು ರೀತಿಯಾದ ನೀಲಿ ಹರಳು, ೧೩. ಗ್ರಹಗಳು - ಇತರೇ ಹರಳುಗಳು, ೧೪. ರಾಕ್ಷಸರು - ತವರ (Tin), ೧೫. ಪಿಶಾಚರು - ವಜ್ರ ಅಥವಾ ವಜ್ರದಂತೆ ಗಟ್ಟಿಯಾಗಿರುವ ರತ್ನಗಳು ೧೬. ಮಾತೃಗಣಗಳು - ಕಬ್ಬಿಣ.
ಮೇಲಿನ ವಿವರಣೆಯನ್ನು ಕನ್ನಡೀಕರಿಸುವಾಗ ನವರತ್ನಗಳ ಬಗೆಗಿನ ವಿವರಣೆಯನ್ನು ನೋಡುವಾಗ Emeraldಗೆ ಪಚ್ಚೆ ಎಂದೂ ಮತ್ತು ಅದನ್ನು ಸಂಸ್ಕೃತದಲ್ಲಿ ಮರಕತ ಎನ್ನುತ್ತಾರೆ ಎನ್ನುವ ವಿಷಯ ತಿಳಿಯಿತು. ಇರಲಿ ಬಿಡಿ ನಿಮ್ಮಿಂದ ಪಚ್ಚೆಗಳ ಕುರಿತಾದ ಒಂದು ಕುತೂಹಲಕರ ಮಾಹಿತಿಯಂತೂ ತಿಳಿಯಿತು.
ಧನ್ಯವಾದಗಳೊಂದಿಗೆ, ಶ್ರೀಧರ್ ಬಂಡ್ರಿ