ಕಲಿಯಲು ಎಲ್ಲಿದೆ ಬಿಡುವು?
ಸಂಪದದಲ್ಲಿ ಚಿಣ್ಣರಿಗೆಂದೆ ಬರುವ ಕನ್ನಡ ಬರಹಗಳು ಕಡಿಮೆಯೆಂದು ಕಾಣುತ್ತದೆ. ಏನಾದರೂ ಬರೆಯಲು ಯತ್ನಿಸಬೇಕು ಅಂದುಕೊಳ್ಳುತ್ತಿರುವಾಗಲೆ, ಸರಿಸುಮಾರು ಇಪ್ಪತ್ತೊಂದು ವರ್ಷದ ಹಿಂದೆ ಬರೆದಿದ್ದ ಈ ಮಕ್ಕಳ ಕವನ ಕಣ್ಣಿಗೆ ಬಿತ್ತು. ಅಂದ ಹಾಗೆ ಆ ದಿನಗಳಲ್ಲಿ 'ಬಾಲ ಮಂಗಳ'ದಲ್ಲಿ ಈ ಕವನ ಪ್ರಕಟವಾಗಿತ್ತು. ನನ್ನ ಹಳೆಯ ಕಡತಗಳ ಪ್ರಕಾರ ೧೫.ಆಗಸ್ಟ್.೧೯೯೨ ರ ಸಂಚಿಕೆಯಲ್ಲಿ (ನನ್ನಲ್ಲಿ ಆ ಸಂಚಿಕೆಯ ಪ್ರತಿಯಿಲ್ಲವಾಗಿ ತಾಳೆ ನೋಡಲು ಸಾಧ್ಯವಾಗಲಿಲ್ಲ). ಕನ್ನಡದ ಚಿಣ್ಣರಿಗೆ ಸರಾಗವಾಗಿ ಓದಲು ಆಗುವಂತೆ ಸರಳವಾಗಿದೆಯಾಗಿ 'ಕಾನ್ವೆಂಟು' ಕನ್ನಡ ಮಕ್ಕಳು ಹೆಚ್ಚು ತ್ರಾಸ ಪಡದೆ ಓದಬಹುದೆಂದುಕೊಳ್ಳುತ್ತೇನೆ - ಕನಿಷ್ಟ ಕನ್ನಡ ಬಲ್ಲ ಅಪ್ಪ, ಅಮ್ಮಂದಿರು ಓದಿಯಾದರೂ ಹೇಳಬಹುದು - ಅದರಲ್ಲೂ ಕನ್ನಡ ವಾತಾವರಣವಿರದ ಅನಿವಾಸಿ ಕನ್ನಡಿಗರ ಮಕ್ಕಳಿಗೆ :-)
ಕಲಿಯಲು ಎಲ್ಲಿದೆ ಬಿಡುವು?
---------------------------------------------------------
(೧೫.ಆಗಸ್ಟ್.೧೯೯೨ ರ 'ಬಾಲ ಮಂಗಳ' ದಲ್ಲಿ ಪ್ರಕಟಿತ)
ನಾನು ಪ್ರೈಮರಿ ಶಾಲೆ
ಬರದು ಅಕ್ಷರ ಮಾಲೆ
ನನಗೆ ನನ್ನದೇ ಜಗವು
ಕಲಿಯಲು ಎಲ್ಲಿದೆ ಬಿಡುವು? || ೦೧ ||
ಆರಕೆ ಏಳಲು ಪೆದ್ದೆ?
ಬೆಳಗಿನ ಸಕ್ಕರೆ ನಿದ್ದೆ
ಗಂಟೆ ಬಾರಿಸೆ ಎಂಟೇ
'ದಢ ದಢ' ಶಾಲೆಗೇ ಹೊರಟೆ || ೦೨ ||
ಮೇಡಂ ಅಂದರು 'ಡಾಂಕಿ'
ಕೋಲಲಿ ಬಿಗಿದರು ಬಾಕಿ
'ಹೋಂ ವರ್ಕ್' ಬರೆಯದ ದಡ್ಡ
ಬೆಂಚಿನ ಮೇಲಿರು ಹೆಡ್ಡ! || ೦೩ ||
ಅಂತೂ ಹೊಡೆಯಿತು ಗಂಟೆ
ಸಧ್ಯ ! ತೀರಿತು ತಂಟೆ..
ಓಡುವೆ ಊಟಕೆ ಮೊದಲು
ನಂತರ ಆಟದ ಬಯಲು.. || ೦೪ ||
ಅಯ್ಯೋ! ಬರುತಿದೆ ನಿದ್ದೆ..
ಹಗಲಿದು ಕಳೆದರೆ ಗೆದ್ದೆ
ಯಾರಿಗೆ ಬೇಕಿ ಓದು
ಬೇಡವೇ ಟಿವಿಯ ಜಾದೂ || ೦೫ ||
ಪಾಠವ ಬರೆಯುವ ಬದಲು
ಟಿವಿಯ ನೋಡುವೆ ಮೊದಲು
ಊಟದ ನಂತರ ಪಾಠ
ಬರೆದರೆ, ಮುಗಿಯಿತು ಕಾಟ! || ೦೬ ||
ಪುಸ್ತಕ ಹಿಡಿಯಲು ಎದ್ದೆ
ಕಣ್ಣನು ಎಳೆದಿದೆ ನಿದ್ದೆ
ಓದಲು, ಎಲ್ಲ ಮರೆವು
ಕಲಿಯಲು ಎಲ್ಲಿದೆ ಬಿಡುವು? || ೦೭ ||
ನಾಗೇಶ ಮೈಸೂರು
Comments
ಉ: ಕಲಿಯಲು ಎಲ್ಲಿದೆ ಬಿಡುವು?
In reply to ಉ: ಕಲಿಯಲು ಎಲ್ಲಿದೆ ಬಿಡುವು? by partha1059
ಉ: ಕಲಿಯಲು ಎಲ್ಲಿದೆ ಬಿಡುವು?
In reply to ಉ: ಕಲಿಯಲು ಎಲ್ಲಿದೆ ಬಿಡುವು? by nageshamysore
ಉ: ಕಲಿಯಲು ಎಲ್ಲಿದೆ ಬಿಡುವು?
In reply to ಉ: ಕಲಿಯಲು ಎಲ್ಲಿದೆ ಬಿಡುವು? by partha1059
ಉ: ಕಲಿಯಲು ಎಲ್ಲಿದೆ ಬಿಡುವು?
In reply to ಉ: ಕಲಿಯಲು ಎಲ್ಲಿದೆ ಬಿಡುವು? by nageshamysore
ಉ: ಕಲಿಯಲು ಎಲ್ಲಿದೆ ಬಿಡುವು?
In reply to ಉ: ಕಲಿಯಲು ಎಲ್ಲಿದೆ ಬಿಡುವು? by partha1059
ಉ: ಕಲಿಯಲು ಎಲ್ಲಿದೆ ಬಿಡುವು?
In reply to ಉ: ಕಲಿಯಲು ಎಲ್ಲಿದೆ ಬಿಡುವು? by venkatb83
ಉ: ಕಲಿಯಲು ಎಲ್ಲಿದೆ ಬಿಡುವು?
ಉ: ಕಲಿಯಲು ಎಲ್ಲಿದೆ ಬಿಡುವು?
In reply to ಉ: ಕಲಿಯಲು ಎಲ್ಲಿದೆ ಬಿಡುವು? by nageshamysore
ಉ: ಕಲಿಯಲು ಎಲ್ಲಿದೆ ಬಿಡುವು?
ನಾಯಿಯೊಂದು ಓಡಿಬಂದು
ಕಲ್ಲ ಮೇಲೆ ಕುಳಿತು ಕೊಂಡು
ಸುತ್ತ ಮುತ್ತ ಎದ್ದು ನೋಡಿ ಕೂಗ ತೊಡಗಿತು|
ಬೀದಿ ನಾಯಿ ಎಲ್ಲ ಸೇರಿ
ಬಾಲಎಳೆದು ಕಿವಿಯ ಕಚ್ಚಿ
ಹಿಂದೆ ಮುಂದೆ ಸೇರಿ ಅದನು ಕಾಡತೊಡಗಳು|
ಗೆಳೆಯರೊಡನೆ ಆಡುತಿದ್ದ
ಮುದ್ದು ಪುಟ್ಟ ಓಡಿಬಂದು
ಕಲ್ಲು ಎಸೆದು ಎಲ್ಲ ನಾಯ ದೂರ ಕಳಿಸಿದ|
ನಾಯಿಮರಿಯ ತಲೆಯ ಸವರಿ
ಎರಡು ಕೈಲಿ ಎತ್ತಿ ಹಿಡಿದು
ಮನೆಯದೆಲ್ಲಿ ಏಕೆ ಇಲ್ಲಿ ಬಂದೆ ಎಂದನು |
ತನ್ನ ಒಡೆಯ ತನ್ನ ತೊರೆದ
ಬೀದಿಯಲ್ಲಿ ನೂಕಿ ಹೋದ
ಎಂದು ನುಡಿದು ಮರಿಯು ಕಣ್ಣ ನೀರ ಸುರಿಸಿತು|
ಕೊರಗ ಬೇಡ ಮರಿಯೆ
ನಿನ್ನ ನನ್ನ ಮನೆಗೆ ಓಯ್ವೆನೆಂದು
ಪುಟ್ಟ ಮರಿಯ ಕಣ್ಣ ನೀರ ತಾನು ಒರೆಸಿದ|
ಗೆಳೆಯರೊಡನೆ ಕೂಡಿಕೊಂಡು
ನಾಯ ಕೊರಳಿಗೊಂದು ದಾರ ಕಟ್ಟಿ
ಮನೆಗೆ ಓಯ್ದು ಒಳಗೆ ಗಿಡದ ಬುಡಕ್ಕೆ ಕಟ್ಟಿದ|
ಎಲ್ಲಿ ತಂದೆ ಇದನು ಮೊದಲು
ಹೊರಗೆ ಕಳಿಸು ಎಂದು ನುಡಿದ
ತಾಯಿ ಅವನ ಕರೆದು ಬೆನ್ನ ಮೇಲೆ ಹೊಡೆದಳು|
ಮರಿಯ ಹೊರಗೆ ದೂಡೆ
ತನಗೆ ರಾತ್ರಿ ಊಟ ಬೇಡವೆಂದು
ಬಿಡದೆ ಚಂಡಿ ಹಿಡಿದ ಪುಟ್ಟ ಹೊರಗೆ ಕುಳಿತನು|
ಮಗನ ಹಿಡಿದ ಹಟವ ಕಂಡು
ಹೊರಗೆ ಬಂದೆ ಅವನ ತಂದೆ
ಮರಿಯು ಇರಲಿ ಒಳಗೆ ಬರಲಿ ಎಂದು ನುಡಿದನು|
ತಂದೆ ನುಡಿದ ಮಾತು ಕೇಳಿ
ಬಿಂಕದಿಂದ ತಾಯ ನೋಡಿ
ಮರಿಯ ಹೊತ್ತು ಕುಣಿದ ಪುಟ್ಟ ಒಳಗೆ ನಡೆದನು||
ಉ: ಕಲಿಯಲು ಎಲ್ಲಿದೆ ಬಿಡುವು?
In reply to ಉ: ಕಲಿಯಲು ಎಲ್ಲಿದೆ ಬಿಡುವು? by ಗಣೇಶ
ಉ: ಕಲಿಯಲು ಎಲ್ಲಿದೆ ಬಿಡುವು?
In reply to ಉ: ಕಲಿಯಲು ಎಲ್ಲಿದೆ ಬಿಡುವು? by nageshamysore
ಉ: ಕಲಿಯಲು ಎಲ್ಲಿದೆ ಬಿಡುವು?