ಕಲಿಯಲು  ಎಲ್ಲಿದೆ  ಬಿಡುವು?

ಕಲಿಯಲು  ಎಲ್ಲಿದೆ  ಬಿಡುವು?

ಸಂಪದದಲ್ಲಿ ಚಿಣ್ಣರಿಗೆಂದೆ ಬರುವ ಕನ್ನಡ ಬರಹಗಳು ಕಡಿಮೆಯೆಂದು ಕಾಣುತ್ತದೆ. ಏನಾದರೂ ಬರೆಯಲು ಯತ್ನಿಸಬೇಕು ಅಂದುಕೊಳ್ಳುತ್ತಿರುವಾಗಲೆ, ಸರಿಸುಮಾರು ಇಪ್ಪತ್ತೊಂದು ವರ್ಷದ ಹಿಂದೆ ಬರೆದಿದ್ದ ಈ ಮಕ್ಕಳ ಕವನ ಕಣ್ಣಿಗೆ ಬಿತ್ತು. ಅಂದ ಹಾಗೆ ಆ ದಿನಗಳಲ್ಲಿ 'ಬಾಲ ಮಂಗಳ'ದಲ್ಲಿ ಈ ಕವನ ಪ್ರಕಟವಾಗಿತ್ತು. ನನ್ನ ಹಳೆಯ ಕಡತಗಳ ಪ್ರಕಾರ ೧೫.ಆಗಸ್ಟ್.೧೯೯೨ ರ ಸಂಚಿಕೆಯಲ್ಲಿ (ನನ್ನಲ್ಲಿ ಆ ಸಂಚಿಕೆಯ ಪ್ರತಿಯಿಲ್ಲವಾಗಿ ತಾಳೆ ನೋಡಲು ಸಾಧ್ಯವಾಗಲಿಲ್ಲ). ಕನ್ನಡದ ಚಿಣ್ಣರಿಗೆ ಸರಾಗವಾಗಿ ಓದಲು ಆಗುವಂತೆ ಸರಳವಾಗಿದೆಯಾಗಿ 'ಕಾನ್ವೆಂಟು' ಕನ್ನಡ ಮಕ್ಕಳು ಹೆಚ್ಚು ತ್ರಾಸ ಪಡದೆ ಓದಬಹುದೆಂದುಕೊಳ್ಳುತ್ತೇನೆ - ಕನಿಷ್ಟ ಕನ್ನಡ ಬಲ್ಲ ಅಪ್ಪ, ಅಮ್ಮಂದಿರು ಓದಿಯಾದರೂ ಹೇಳಬಹುದು - ಅದರಲ್ಲೂ ಕನ್ನಡ ವಾತಾವರಣವಿರದ ಅನಿವಾಸಿ ಕನ್ನಡಿಗರ ಮಕ್ಕಳಿಗೆ :-)

ಕಲಿಯಲು  ಎಲ್ಲಿದೆ  ಬಿಡುವು?
---------------------------------------------------------
(೧೫.ಆಗಸ್ಟ್.೧೯೯೨ ರ 'ಬಾಲ ಮಂಗಳ' ದಲ್ಲಿ ಪ್ರಕಟಿತ)

ನಾನು ಪ್ರೈಮರಿ ಶಾಲೆ 
ಬರದು ಅಕ್ಷರ ಮಾಲೆ 
ನನಗೆ ನನ್ನದೇ ಜಗವು 
ಕಲಿಯಲು ಎಲ್ಲಿದೆ ಬಿಡುವು?                        || ೦೧ ||

ಆರಕೆ ಏಳಲು ಪೆದ್ದೆ?
ಬೆಳಗಿನ ಸಕ್ಕರೆ ನಿದ್ದೆ
ಗಂಟೆ ಬಾರಿಸೆ ಎಂಟೇ
'ದಢ ದಢ' ಶಾಲೆಗೇ ಹೊರಟೆ                          || ೦೨ ||

ಮೇಡಂ ಅಂದರು 'ಡಾಂಕಿ'
ಕೋಲಲಿ ಬಿಗಿದರು ಬಾಕಿ
'ಹೋಂ ವರ್ಕ್' ಬರೆಯದ ದಡ್ಡ 
ಬೆಂಚಿನ ಮೇಲಿರು ಹೆಡ್ಡ!                              || ೦೩ ||

ಅಂತೂ ಹೊಡೆಯಿತು ಗಂಟೆ 
ಸಧ್ಯ ! ತೀರಿತು ತಂಟೆ..
ಓಡುವೆ ಊಟಕೆ ಮೊದಲು 
ನಂತರ ಆಟದ ಬಯಲು..                            || ೦೪ ||

ಅಯ್ಯೋ! ಬರುತಿದೆ ನಿದ್ದೆ..
ಹಗಲಿದು ಕಳೆದರೆ ಗೆದ್ದೆ
ಯಾರಿಗೆ ಬೇಕಿ ಓದು 
ಬೇಡವೇ ಟಿವಿಯ ಜಾದೂ                            || ೦೫ ||

ಪಾಠವ ಬರೆಯುವ ಬದಲು 
ಟಿವಿಯ ನೋಡುವೆ ಮೊದಲು
ಊಟದ ನಂತರ ಪಾಠ 
ಬರೆದರೆ, ಮುಗಿಯಿತು ಕಾಟ!                        || ೦೬ ||

ಪುಸ್ತಕ ಹಿಡಿಯಲು ಎದ್ದೆ 
ಕಣ್ಣನು ಎಳೆದಿದೆ ನಿದ್ದೆ 
ಓದಲು, ಎಲ್ಲ ಮರೆವು
ಕಲಿಯಲು ಎಲ್ಲಿದೆ ಬಿಡುವು?                        || ೦೭ ||

 

‍‍‍‍ನಾಗೇಶ ಮೈಸೂರು

Comments

Submitted by partha1059 Mon, 07/22/2013 - 13:58

ಕವನ : ಪುಟ್ಟನ ನಾಯಿಮರಿ (ಮಕ್ಕಳಿಗಾಗಿ) February 17, 2011 - 10:35am partha1059 0 ಪುಟ್ಟನ ನಾಯಿಮರಿ ನಾಯಿಯೊಂದು ಓಡಿಬಂದು ಕಲ್ಲ ಮೇಲೆ ಕುಳಿತು ಕೊಂಡು ಸುತ್ತ ಮುತ್ತ ಎದ್ದು ನೋಡಿ ಕೂಗ ತೊಡಗಿತು| ಬೀದಿ ನಾಯಿ ಎಲ್ಲ ಸೇರಿ ಬಾಲಎಳೆದು ಕಿವಿಯ ಕಚ್ಚಿ ಹಿಂದೆ ಮುಂದೆ ಸೇರಿ ಅದನು ಕಾಡತೊಡಗಲು| ಗೆಳೆಯರೊಡನೆ ಆಡುತಿದ್ದ ಮುದ್ದು ಪುಟ್ಟ ಓಡಿಬಂದು ಕಲ್ಲು ಎಸೆದು ಎಲ್ಲ ನಾಯ ದೂರ ಕಳಿಸಿದ| ನಾಯಿಮರಿಯ ತಲೆಯ ಸವರಿ ಎರಡು ಕೈಲಿ ಎತ್ತಿ ಹಿಡಿದು ಮನೆಯದೆಲ್ಲಿ ಏಕೆ ಇಲ್ಲಿ ಬಂದೆ ಎಂದನು | ತನ್ನ ಒಡೆಯ ತನ್ನ ತೊರೆದ ಬೀದಿಯಲ್ಲಿ ನೂಕಿ ಹೋದ ಎಂದು ನುಡಿದು ಮರಿಯು ಕಣ್ಣ ನೀರ ಸುರಿಸಿತು| ಕೊರಗ ಬೇಡ ಮರಿಯೆ ನಿನ್ನ ನನ್ನ ಮನೆಗೆ ಓಯ್ವೆನೆಂದು ಪುಟ್ಟ ಮರಿಯ ಕಣ್ಣ ನೀರ ತಾನು ಒರೆಸಿದ| ಗೆಳೆಯರೊಡನೆ ಕೂಡಿಕೊಂಡು ನಾಯ ಕೊರಳಿಗೊಂದು ದಾರ ಕಟ್ಟಿ ಮನೆಗೆ ಓಯ್ದು ಒಳಗೆ ಗಿಡದ ಬುಡಕ್ಕೆ ಕಟ್ಟಿದ| ಎಲ್ಲಿ ತಂದೆ ಇದನು ಮೊದಲು ಹೊರಗೆ ಕಳಿಸು ಎಂದು ನುಡಿದ ತಾಯಿ ಅವನ ಕರೆದು ಬೆನ್ನ ಮೇಲೆ ಹೊಡೆದಳು| ಮರಿಯ ಹೊರಗೆ ದೂಡೆ ತನಗೆ ರಾತ್ರಿ ಊಟ ಬೇಡವೆಂದು ಬಿಡದೆ ಚಂಡಿ ಹಿಡಿದ ಪುಟ್ಟ ಹೊರಗೆ ಕುಳಿತನು| ಮಗನ ಹಿಡಿದ ಹಟವ ಕಂಡು ಹೊರಗೆ ಬಂದೆ ಅವನ ತಂದೆ ಮರಿಯು ಇರಲಿ ಒಳಗೆ ಬರಲಿ ಎಂದು ನುಡಿದನು| ತಂದೆ ನುಡಿದ ಮಾತು ಕೇಳಿ ಬಿಂಕದಿಂದ ತಾಯ ನೋಡಿ ಮರಿಯ ಹೊತ್ತು ಕುಣಿದ ಪುಟ್ಟ ಒಳಗೆ ನಡೆದನು|| ಸೂಚನೆ: ಇದನ್ನು ತಿರುಕನೋರ್ವ ಊರಮುಂದೆ/ಕಾಗೆಯೊಂದು ಹಾರಿಬಂದು ಎನ್ನುವ ಪದ್ಯದ ರೀತಿ ಓದಿಕೊಳ್ಳಬಹುದು
Submitted by nageshamysore Tue, 07/23/2013 - 20:16

In reply to by partha1059

ಪಾರ್ಥ ಸಾರ್, 'ತಿರುಕನ ಕನಸು' ಲಹರಿಯಲ್ಲಿ ಓದಬೇಕು ಅಂತ ಹೇಳದಿದ್ದರೂ ಮೊದಲ ಕೆಲವು ಸಾಲು ಓದುತ್ತಿದ್ದಂತೆ, ತಂತಾನೆ 'ತಿರುಕನೋರ್ವ...' ಪದ್ಯದ ರಾಗ ಆಯಾಚಿತವಾಗಿ ಬಂತು! ಪದ್ಯ ಚೆನ್ನಾಗಿದೆ ( ಸಾಲುಗಳು ಮಿಕ್ಸ್ ಆಗದಿದ್ದರೆ ಇನ್ನು ಚೆಂದ ಕಾಣುತ್ತಿತ್ತು)
Submitted by nageshamysore Thu, 07/25/2013 - 09:28

In reply to by partha1059

Last attempt in a different way : ಪುಟ್ಟನ ನಾಯಿಮರಿ --------------------- ನಾಯಿಯೊಂದು ಓಡಿಬಂದು ಕಲ್ಲ ಮೇಲೆ ಕುಳಿತು ಕೊಂಡು ಸುತ್ತ ಮುತ್ತ ಎದ್ದು ನೋಡಿ ಕೂಗ ತೊಡಗಿತು| ಬೀದಿ ನಾಯಿ ಎಲ್ಲ ಸೇರಿ ಬಾಲಎಳೆದು ಕಿವಿಯ ಕಚ್ಚಿ ಹಿಂದೆ ಮುಂದೆ ಸೇರಿ ಅದನು ಕಾಡತೊಡಗಳು| ಗೆಳೆಯರೊಡನೆ ಆಡುತಿದ್ದ ಮುದ್ದು ಪುಟ್ಟ ಓಡಿಬಂದು ಕಲ್ಲು ಎಸೆದು ಎಲ್ಲ ನಾಯ ದೂರ ಕಳಿಸಿದ| ನಾಯಿಮರಿಯ ತಲೆಯ ಸವರಿ ಎರಡು ಕೈಲಿ ಎತ್ತಿ ಹಿಡಿದು ಮನೆಯದೆಲ್ಲಿ ಏಕೆ ಇಲ್ಲಿ ಬಂದೆ ಎಂದನು | ತನ್ನ ಒಡೆಯ ತನ್ನ ತೊರೆದ ಬೀದಿಯಲ್ಲಿ ನೂಕಿ ಹೋದ ಎಂದು ನುಡಿದು ಮರಿಯು ಕಣ್ಣ ನೀರ ಸುರಿಸಿತು| ಕೊರಗ ಬೇಡ ಮರಿಯೆ ನಿನ್ನ ನನ್ನ ಮನೆಗೆ ಓಯ್ವೆನೆಂದು ಪುಟ್ಟ ಮರಿಯ ಕಣ್ಣ ನೀರ ತಾನು ಒರೆಸಿದ| ಗೆಳೆಯರೊಡನೆ ಕೂಡಿಕೊಂಡು ನಾಯ ಕೊರಳಿಗೊಂದು ದಾರ ಕಟ್ಟಿ ಮನೆಗೆ ಓಯ್ದು ಒಳಗೆ ಗಿಡದ ಬುಡಕ್ಕೆ ಕಟ್ಟಿದ| ಎಲ್ಲಿ ತಂದೆ ಇದನು ಮೊದಲು ಹೊರಗೆ ಕಳಿಸು ಎಂದು ನುಡಿದ ತಾಯಿ ಅವನ ಕರೆದು ಬೆನ್ನ ಮೇಲೆ ಹೊಡೆದಳು| ಮರಿಯ ಹೊರಗೆ ದೂಡೆ ತನಗೆ ರಾತ್ರಿ ಊಟ ಬೇಡವೆಂದು ಬಿಡದೆ ಚಂಡಿ ಹಿಡಿದ ಪುಟ್ಟ ಹೊರಗೆ ಕುಳಿತನು| ಮಗನ ಹಿಡಿದ ಹಟವ ಕಂಡು ಹೊರಗೆ ಬಂದೆ ಅವನ ತಂದೆ ಮರಿಯು ಇರಲಿ ಒಳಗೆ ಬರಲಿ ಎಂದು ನುಡಿದನು| ತಂದೆ ನುಡಿದ ಮಾತು ಕೇಳಿ ಬಿಂಕದಿಂದ ತಾಯ ನೋಡಿ ಮರಿಯ ಹೊತ್ತು ಕುಣಿದ ಪುಟ್ಟ ಒಳಗೆ ನಡೆದನು|| ಸೂಚನೆ: ಇದನ್ನು ತಿರುಕನೋರ್ವ ಊರಮುಂದೆ/ಕಾಗೆಯೊಂದು ಹಾರಿಬಂದು ಎನ್ನುವ ಪದ್ಯದ ರೀತಿ ಓದಿಕೊಳ್ಳಬಹುದು
Submitted by venkatb83 Wed, 07/24/2013 - 12:22

In reply to by partha1059

ಎರಡು ಪುಟಾಣಿಗಳ‌ ಪದ್ಯಗಳು ಸೂಪರ್. @ನಾಗೇಶ್ಹ್ ಅವರೆ ‍ ನಿಜ‌ ಸಂಪದದಲ್ಲಿ ಮಕ್ಕಳ‌ ಬರಹಗಳು ಕಡಿಮೆ.. ಪ್ರೋತ್ಸ್ಸಾಹ‌ ಇಲ್ಲದಿರುವಿಕೆ ಕಾರಣ‌ ಅನ್ಸುತ್ತೆ. ಶ್ಹುಭವಾಗಲಿ \|
Submitted by nageshamysore Thu, 07/25/2013 - 04:08

In reply to by venkatb83

ನಿಮ್ಮ ಮಾತು ನಿಜ - ಮಕ್ಕಳು ತಾವಾಗೆ ಸಂಪದದಲ್ಲಿ ಓದುವ ಸಾಧ್ಯತೆ ಕಮ್ಮಿ. ಪೋಷಕರು ಓದಿ ಹೇಳಿವುದೊ , ಜತೆ ಕೂತು ಓದಿಸುವುದೊ ಆದರಷ್ಟೆ ಸಾಧ್ಯವೆಂದು ಕಾಣುತ್ತದೆ :-)
Submitted by nageshamysore Thu, 07/25/2013 - 09:19

ಪಾರ್ಥಾ ಸಾರ್, ಅದು ನಿಮ್ಮ ಕೈವಾಡವಲ್ಲ - ಎಡಿಟರಿನ ಚತುರತೆಯೆಂದು ಕಾಣುತ್ತದೆ-ನಾನೂ ಒಮ್ಮೆ ಪ್ರಯತ್ನಿಸಿ ನೋಡುತ್ತೇನೆ:-) ಪುಟ್ಟನ ನಾಯಿಮರಿ --------------------- ನಾಯಿಯೊಂದು ಓಡಿಬಂದು ಕಲ್ಲ ಮೇಲೆ ಕುಳಿತು ಕೊಂಡು ಸುತ್ತ ಮುತ್ತ ಎದ್ದು ನೋಡಿ ಕೂಗ ತೊಡಗಿತು| ಬೀದಿ ನಾಯಿ ಎಲ್ಲ ಸೇರಿ ಬಾಲಎಳೆದು ಕಿವಿಯ ಕಚ್ಚಿ ಹಿಂದೆ ಮುಂದೆ ಸೇರಿ ಅದನು ಕಾಡತೊಡಗಳು| ಗೆಳೆಯರೊಡನೆ ಆಡುತಿದ್ದ ಮುದ್ದು ಪುಟ್ಟ ಓಡಿಬಂದು ಕಲ್ಲು ಎಸೆದು ಎಲ್ಲ ನಾಯ ದೂರ ಕಳಿಸಿದ| ನಾಯಿಮರಿಯ ತಲೆಯ ಸವರಿ ಎರಡು ಕೈಲಿ ಎತ್ತಿ ಹಿಡಿದು ಮನೆಯದೆಲ್ಲಿ ಏಕೆ ಇಲ್ಲಿ ಬಂದೆ ಎಂದನು | ತನ್ನ ಒಡೆಯ ತನ್ನ ತೊರೆದ ಬೀದಿಯಲ್ಲಿ ನೂಕಿ ಹೋದ ಎಂದು ನುಡಿದು ಮರಿಯು ಕಣ್ಣ ನೀರ ಸುರಿಸಿತು| ಕೊರಗ ಬೇಡ ಮರಿಯೆ ನಿನ್ನ ನನ್ನ ಮನೆಗೆ ಓಯ್ವೆನೆಂದು ಪುಟ್ಟ ಮರಿಯ ಕಣ್ಣ ನೀರ ತಾನು ಒರೆಸಿದ| ಗೆಳೆಯರೊಡನೆ ಕೂಡಿಕೊಂಡು ನಾಯ ಕೊರಳಿಗೊಂದು ದಾರ ಕಟ್ಟಿ ಮನೆಗೆ ಓಯ್ದು ಒಳಗೆ ಗಿಡದ ಬುಡಕ್ಕೆ ಕಟ್ಟಿದ| ಎಲ್ಲಿ ತಂದೆ ಇದನು ಮೊದಲು ಹೊರಗೆ ಕಳಿಸು ಎಂದು ನುಡಿದ ತಾಯಿ ಅವನ ಕರೆದು ಬೆನ್ನ ಮೇಲೆ ಹೊಡೆದಳು| ಮರಿಯ ಹೊರಗೆ ದೂಡೆ ತನಗೆ ರಾತ್ರಿ ಊಟ ಬೇಡವೆಂದು ಬಿಡದೆ ಚಂಡಿ ಹಿಡಿದ ಪುಟ್ಟ ಹೊರಗೆ ಕುಳಿತನು| ಮಗನ ಹಿಡಿದ ಹಟವ ಕಂಡು ಹೊರಗೆ ಬಂದೆ ಅವನ ತಂದೆ ಮರಿಯು ಇರಲಿ ಒಳಗೆ ಬರಲಿ ಎಂದು ನುಡಿದನು| ತಂದೆ ನುಡಿದ ಮಾತು ಕೇಳಿ ಬಿಂಕದಿಂದ ತಾಯ ನೋಡಿ ಮರಿಯ ಹೊತ್ತು ಕುಣಿದ ಪುಟ್ಟ ಒಳಗೆ ನಡೆದನು|| ಸೂಚನೆ: ಇದನ್ನು ತಿರುಕನೋರ್ವ ಊರಮುಂದೆ/ಕಾಗೆಯೊಂದು ಹಾರಿಬಂದು ಎನ್ನುವ ಪದ್ಯದ ರೀತಿ ಓದಿಕೊಳ್ಳಬಹುದು
Submitted by partha1059 Thu, 07/25/2013 - 21:46

In reply to by nageshamysore

ನಾಯಿಯೊಂದು ಓಡಿಬಂದು

ಕಲ್ಲ ಮೇಲೆ ಕುಳಿತು ಕೊಂಡು

ಸುತ್ತ ಮುತ್ತ ಎದ್ದು ನೋಡಿ ಕೂಗ ತೊಡಗಿತು|

ಬೀದಿ ನಾಯಿ ಎಲ್ಲ ಸೇರಿ

ಬಾಲಎಳೆದು ಕಿವಿಯ ಕಚ್ಚಿ

ಹಿಂದೆ ಮುಂದೆ ಸೇರಿ ಅದನು ಕಾಡತೊಡಗಳು|

ಗೆಳೆಯರೊಡನೆ ಆಡುತಿದ್ದ

ಮುದ್ದು ಪುಟ್ಟ ಓಡಿಬಂದು

ಕಲ್ಲು ಎಸೆದು ಎಲ್ಲ ನಾಯ ದೂರ ಕಳಿಸಿದ|

ನಾಯಿಮರಿಯ ತಲೆಯ ಸವರಿ

ಎರಡು ಕೈಲಿ ಎತ್ತಿ ಹಿಡಿದು

ಮನೆಯದೆಲ್ಲಿ ಏಕೆ ಇಲ್ಲಿ ಬಂದೆ ಎಂದನು |

ತನ್ನ ಒಡೆಯ ತನ್ನ ತೊರೆದ

ಬೀದಿಯಲ್ಲಿ ನೂಕಿ ಹೋದ

ಎಂದು ನುಡಿದು ಮರಿಯು ಕಣ್ಣ ನೀರ ಸುರಿಸಿತು|

ಕೊರಗ ಬೇಡ ಮರಿಯೆ

ನಿನ್ನ ನನ್ನ ಮನೆಗೆ ಓಯ್ವೆನೆಂದು

ಪುಟ್ಟ ಮರಿಯ ಕಣ್ಣ ನೀರ ತಾನು ಒರೆಸಿದ|

ಗೆಳೆಯರೊಡನೆ ಕೂಡಿಕೊಂಡು

ನಾಯ ಕೊರಳಿಗೊಂದು ದಾರ ಕಟ್ಟಿ

ಮನೆಗೆ ಓಯ್ದು ಒಳಗೆ ಗಿಡದ ಬುಡಕ್ಕೆ ಕಟ್ಟಿದ|

ಎಲ್ಲಿ ತಂದೆ ಇದನು ಮೊದಲು

ಹೊರಗೆ ಕಳಿಸು ಎಂದು ನುಡಿದ

ತಾಯಿ ಅವನ ಕರೆದು ಬೆನ್ನ ಮೇಲೆ ಹೊಡೆದಳು|

ಮರಿಯ ಹೊರಗೆ ದೂಡೆ

ತನಗೆ ರಾತ್ರಿ ಊಟ ಬೇಡವೆಂದು

ಬಿಡದೆ ಚಂಡಿ ಹಿಡಿದ ಪುಟ್ಟ ಹೊರಗೆ ಕುಳಿತನು|

ಮಗನ ಹಿಡಿದ ಹಟವ ಕಂಡು

ಹೊರಗೆ ಬಂದೆ ಅವನ ತಂದೆ

ಮರಿಯು ಇರಲಿ ಒಳಗೆ ಬರಲಿ ಎಂದು ನುಡಿದನು|

ತಂದೆ ನುಡಿದ ಮಾತು ಕೇಳಿ

ಬಿಂಕದಿಂದ ತಾಯ ನೋಡಿ

ಮರಿಯ ಹೊತ್ತು ಕುಣಿದ ಪುಟ್ಟ ಒಳಗೆ ನಡೆದನು||

Submitted by nageshamysore Fri, 07/26/2013 - 18:41

In reply to by ಗಣೇಶ

ಇಪ್ಪತ್ತು ವರ್ಷಕ್ಕು ಹೆಚ್ಚು ಹಳೆಯದು - ಇನ್ನು ಪ್ರಸ್ತುತವಿರುತ್ತದೆಯೊ ಇಲ್ಲವೊ ಕೊಂಚ ಅನುಮಾನವಿತ್ತು. ಈ ಪ್ರತಿಕ್ರಿಯೆಯೆಲ್ಲ ನೋಡಿದ ಮೇಲೆ ಚಿಣ್ಣರ ಸಾಹಿತ್ಯಕ್ಕೆ ಮತ್ತಷ್ಟು ಯತ್ನಿಸುವ ಪ್ರೇರಣೆಯಾಗುತ್ತಿದೆ...ಧನ್ಯವಾದಗಳು ಗಣೇಶ್ ಜಿ ಮತ್ತು ಸರಿಯಾದ ರೂಪದಲ್ಲಿ ಕವನ ಸೇರಿಸಿದ್ದಕ್ಕೆ  ಪಾರ್ಥರಿಗೂ ಧನ್ಯವಾದಗಳು.
Submitted by partha1059 Fri, 07/26/2013 - 20:25

In reply to by nageshamysore

ನಿಮ್ಮ ಪ್ರತಿಕ್ರಿಯೆಯ ಬಾಕ್ಸ್ ಕೆಳಗೆ More information about text formats ಎಂದು ಅಂಗ್ಲದಲ್ಲಿ ಇರುತ್ತದೆ ಅದರ‌ ತಲೆಯ‌ ಮೇಲೆ ಕುಟ್ಟಿ ಸಹಾಯ‌ ಬರುತ್ತದೆ :-)