ಸುಮ್ನೆ ಹೀಗೆ-೧೨

ಸುಮ್ನೆ ಹೀಗೆ-೧೨

ಮಳೆಗಾಲದಲಿ
ಎಲ್ಲೆಲ್ಲೂ ನೀರು,
ತುಂಬಿ ಹಳ್ಳ ನದಿಗಳು
ಕಡಲ ಸೇರಿ ಉಪ್ಪಾಗುತಿದೆ

ಬೆಪ್ಪ ಮನುಜ,
ತನ್ನ ಸಂಖ್ಯೆಯನ್ನಷ್ಟೇ ಹೆಚ್ಚಿಸಿ,
ಇದ್ದ ಕೆರೆಬಾವಿಗಳನು ಮುಚ್ಚಿಸಿ,
ಹೋರಾಡುವನು ಹನಿ ನೀರಿಗಾಗಿ
ಮತ್ತೆ ಬೇಸಿಗೆಯಲಿ

Rating
No votes yet

Comments

Submitted by nageshamysore Wed, 07/31/2013 - 14:59

ಪ್ರೇಮಾಶ್ರೀಯವರೆ, ಯಾಕಿನ್ನು 'ಹೀಗೆ ಸುಮ್ನೆ' ಕಾಣ್ಲಿಲ್ಲ ಅನ್ಕೊತಿರುವಾಗಲೆ , ಇವತ್ತು ಕಾಣಿಸಿಬಿಡ್ತು. ಎಂದಿನಂತೆ ಪಂಚ್ ಚೆನ್ನಾಗಿದೆ :-)
ಹಳ್ಳಕೊಳ್ಳಕ್ಕು ಉಂಟು
ಸಮಯೋಚಿತ, ಸಾಮಾನ್ಯ ಜ್ಞಾನ
ಮನುಜಗೆ ಮಾತ್ರ
ಅಜ್ಞಾನವೆ ವಿಜ್ಞಾನ, ಹಾಹಾಕಾರ! ಭೂಷಣ

Submitted by ಗಣೇಶ Wed, 07/31/2013 - 23:49

ಕವನ ಚೆನ್ನಾಗಿದೆ. ನದಿ ಸಮುದ್ರ ಸೇರಿ ಉಪ್ಪಾಗುವುದು ಬೇಡ ಎಂದು ನೇತ್ರಾವತಿಯನ್ನು ಪೂರ್ವಕ್ಕೆ ತಿರುಗಿಸ ಹೊರಟರೆ ಈ ಕರಾವಳಿ ಜನ ತಿರುಗಿಬೀಳುತ್ತಾರಲ್ಲಾ?
ಇದ್ದ ಕೆರೆಬಾವಿಗಳನು ಮುಚ್ಚಿಸಿ, ಯಾಕೆಂದರೆ-ಹೆಚ್ಚಿದ ಜನಕ್ಕೆ ಉಳಕೊಳ್ಳಲು, ಸೈಟು ಮನೆ ಮಾಡಲು.:)

Submitted by Premashri Thu, 08/01/2013 - 15:04

In reply to by ಗಣೇಶ

<<ನೇತ್ರಾವತಿಯನ್ನು ಪೂರ್ವಕ್ಕೆ ತಿರುಗಿಸ ಹೊರಟರೆ ಈ ಕರಾವಳಿ ಜನ ತಿರುಗಿಬೀಳುತ್ತಾರಲ್ಲಾ? :) >>>:) ಕರಾವಳಿ ಜನರ ಜೀವನದಿ ನೇತ್ರಾವತಿಯಲ್ಲವೇ?
<<<ಇದ್ದ ಕೆರೆಬಾವಿಗಳನು ಮುಚ್ಚಿಸಿ, ಯಾಕೆಂದರೆ-ಹೆಚ್ಚಿದ ಜನಕ್ಕೆ ಉಳಕೊಳ್ಳಲು, ಸೈಟು ಮನೆ ಮಾಡಲು.:)>>>
:)ಮುಂದಾಲೋಚನೆಯಿಲ್ಲದ ಸ್ವಾರ್ಥಿ ಮಾನವ.
ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು ಗಣೇಶ್ ಅವರೆ.