ಕಲ್ಲಿಗೆ ಹಾಲೆರೆಯುವುದು ತರವೆ?
ಕಲ್ಲಿಗೆ ಹಾಲೆರೆಯುವುದು ತರವೆ?
==================
ಅದೇಕೊ ಈ ನಡುವೆ ಫೇಸ್ ಬುಕ್ , ಮುದ್ರಣ ಮಾಧ್ಯಮ , ಅಥವ ಯಾವುದೆ ಮಾಧ್ಯಮದಲ್ಲು. ನಮ್ಮ ಎಲ್ಲ ಸಂಪ್ರದಾಯದ ಆಚರಣೆಗಳನ್ನು ವಿಭಿನ್ನ ದೃಷಿಕೋನದಿಂದ ನೋಡಲಾಗುತ್ತಿದೆ. ತಮ್ಮ ತಕ್ಷಣದ ಭಾವನೆಗಳನ್ನೆಲ್ಲ ಯಾವುದೆ ವಿಮರ್ಷೆ ಇಲ್ಲದೆ ಬರೆಯಲಾಗುತ್ತೆ . ದೇವರಿಗೆ ನೈವೇಧ್ಯ, ಅಭಿಷೇಕವಾಗಲಿ, ಹಾವಿಗೆ ಹಾಲೆರೆಯುವದಾಗಲಿ ಕಡೆಗೊಮ್ಮೆ ಪಟಾಕಿ ಹಚ್ಚುವದಾಗಲಿ ಎಲ್ಲ ಸಂದರ್ಭದಲ್ಲು ತಕ್ಷಣವೆ ಲೇಖನಗಳು ಕಾಣಿಸಿಕೊಳ್ಳುತ್ತವೆ.
ಹಾವಿಗೆ ಹಾಲೆರೆಯುವುದು ಎಂದಾಕ್ಷಣ, ಹಲವು ವಾದಗಳು, ಅದರಿಂದ ಏನು ಲಾಭ? ಅದು ಮೂಢನಂಭಿಕೆ. ಅದೆ ಬಡವರು ಮಕ್ಕಳು ಹಾಲಿಲ್ಲದೆ ಇರುವಾಗ ಕಲ್ಲು ನಾಗರಕ್ಕೆ ಹಾಲೆರೆಯುವುದು ತರವೆ ಈ ರೀತಿ ಬುದ್ದಿವಂತಿಕೆಯ ಪ್ರಶ್ನೆಗಳು.
ಧಾರ್ಮಿಕ ನಂಭಿಕೆಗಳೆ ಹಾಗೆ ಅವಕ್ಕೆ ಯಾವುದೆ ಆದಾರವಾಗಲಿ ತರ್ಕವಾಗಲಿ ಇರುವದಿಲ್ಲ ಎನ್ನುವುದು ಸತ್ಯ. ಅದು ಯಾವುದೆ ಧರ್ಮವಾಗಿರಬಹುದು ಇಂತ ಆಚರಣೆಗಳನ್ನೆಲ್ಲ ಯಾರು ತಪ್ಪಿಸಲಾಗಲ್ಲ. ಹಾಗೆಂದ ಮಾತ್ರಕ್ಕೆ ಎಲ್ಲ ಧಾರ್ಮಿಕ ಆಚರಣೆಗಳು ಸಹ ಉಪಯೋಗ ಇಲ್ಲದವೆ ? ಎನ್ನುವ ಅನುಮಾನ ಕಾಡುತ್ತದೆ.
ಸಾವಿರಾರು ವರುಷಗಳ ಇತಿಹಾಸದಲ್ಲಿ , ಬೆಳೆದು ಬಂದಿರುವ ಆಚರಣೆಗಳು ಕಾಲಘಟ್ತದಲ್ಲಿ ಮಾರ್ಪಾಡಾಗುತ್ತಲೆ ಬಂದಿದೆ. ಯಾವುದೊ ಕಾರಣಕ್ಕೆ ಪ್ರಾರಂಬವಾಗಿ, ನಂತರ ಅದೆ ಮೂಢನಂಬಿಕೆಯಾಗಿ, ನಂತರ ಮೂಡನಂಭಿಕೆಯು ಕಳೆದು ಅದು ಒಂದು ಪ್ರತಿಷ್ಟೆಯ ಆಚರಣೆಯಾಗಿ ಬದಲಾಗಿರುವದಿದೆ. ಅಲ್ಲೆಲ್ಲ ಯಾವ ತರ್ಕವು ಸಿಗುವದಿಲ್ಲ.
ಅಂತ ಮೂಢನಂಭಿಕೆಗಳನ್ನು ಎತ್ತಿ ಹಾಡಿ ಖಂಡಿಸುವ ಕೆಲಸ ಶ್ರೀ ಬಸವಣ್ಣನವರ ಕಾಲ ಹಾಗು ಅದಕ್ಕೆ ಹಿಂದಿನಿಂದಲೆ ಬೆಳೆದು ಬಂದಿದೆ.
ಹಾಲು ಎರೆದಾಗಲೆಲ್ಲ ಬಡವರ ಮಕ್ಕಳನ್ನು ನೆನಪಿಸಿಕೊಂಡು ಬರೆಯುವ ನಾವು , ಮರುದಿನ ನಾವು ಊಟಕ್ಕೆ ಕುಳಿತು, ಹೊಟ್ಟೆಗೆ ಜಾಸ್ತಿಯಾಗಿ ಎಲೆಯಲ್ಲಿ ಅನ್ನವನ್ನು ಚೆಲ್ಲುವಾಗ ಅದೆ ಬಡಮಕ್ಕಳನ್ನು ನೆನೆಯುವದಿಲ್ಲ ಅನ್ನುವುದು ಸಹ ವ್ಯಂಗ್ಯವೆ . ಹಾಲೆರೆಯುವುದನ್ನು ಖಂಡಿಸುವದಕ್ಕಷ್ಟೆ ನಮ್ಮ ವಿರೋದ ಸೀಮಿತ ನಂತರ ಬಡಮಕ್ಕಳ ಹಾಲಿಗೆ ? ಏನು ಮಾಡಬೇಕು ಅದಕ್ಕೆ ಸರ್ಕಾರ ವಿದೆಯಲ್ಲ ಅದು ಸರಿ ಮಾಡಬೇಕು, ಇದು ನಮ್ಮ ದೋರಣೆ. (ಅದಕ್ಕಾಗಿ ಸರ್ಕಾರ ಸಹ ಶಾಲೆಯ ಮಕ್ಕಳಿಗೆ ವಾರಕ್ಕೆ ಮೂರು ದಿನ ಹಾಲಿನ ಏರ್ಪಾಡು ಮಾಡಿದೆ ಬಿಡಿ)
ಇದೆಲ್ಲಕ್ಕು ಹೊರತಾಗಿಯು ಪ್ರತಿ ಆಚರಣೆಯು ಮೂಢನಂಭಿಕೆಯು ತನ್ನದೆ ಆದ ಪ್ರಾಂತಿಯ ಸೊಗಡನ್ನು ಹೊಂದಿದೆ. ನಮ್ಮಲ್ಲಿರುವ ವಸ್ತುಗಳು ಅನ್ನಾಹಾರಗಳು ಕೇವಲ ತಿನ್ನುವದಕ್ಕೆ ಕುಡಿಯುವದಕ್ಕೆ ಅಲ್ಲ, ಕೆಲವು ಅಮೋದ ಪ್ರಮೋದಗಳಿಗು, ಹಲವು ನಂಭಿಕೆಗಳಿಗು ಆಚರಣೆಗಳಿಗು ವಿನಿಯೋಗವಾಗುತ್ತದೆ, ಹಾಗಾಗೆ ಹೋಮ ಹವನಗಳಿಗೆ ತಿನ್ನುವ ವಸ್ತುಗಳಾದ ತುಪ್ಪ, ಅನ್ನ, ಬೆಲ್ಲ ಅಲ್ಲದೆ ಬಟ್ಟೆಗಳನ್ನೆಲ್ಲ ಹಾಕಲಾಗುತ್ತದೆ. ದೇವರಿಗೆ ನೈವೇಧ್ಯವೆಂದು ಅವನ ಮುಂದು ಅಹಾರಗಳನ್ನಿಟ್ಟು ನಂತರ ನಾವೆ ಅದನ್ನು ತಿನ್ನುವುದು ಇದೆ. ಹಾಗೆ ನೋಡಿದರೆ ತಿನ್ನುವುದು ಕುಡಿಯುವುದು ಬಿಟ್ಟಲ್ಲಿ ಎಲ್ಲವು ವ್ಯರ್ಥವೆ, ದುಂದುಗಾರಿಕೆಯೆ.
ಧಾರ್ಮಿಕ ಆಚರಣೆಗಳು ಮಾತ್ರ ವಲ್ಲದೆ ಅಧುನಿಕತೆಯ ಹೆಸರಿನಲ್ಲಿ ನಡೆಯುವ ಹಲವು ಆಚರಣೆಗಳು ಸಹ ಮೂಢನಂಭಿಕೆಯೆ ಅಲ್ಲವೆ, ಹಿಂದೊಮ್ಮೆ ಬೆಂಗಳೂರಿನಲ್ಲಿ ವಿದೇಶಿಯರಂತೆ ಟಮೋಟೋ ಡೆ ಎಂದು ಆಚರಿಸಲು ನೋಡಲಿಲ್ಲವೆ, ವಿದೇಶದಲ್ಲಿ ಲಾರಿ ಲಾರಿ ಲೋಡು ಟಮೋಟವನ್ನು ರಸ್ತೆಯಲ್ಲಿ ಇದಕ್ಕಾಗಿ ಸುರಿಯುವುದು ಸಹ ಮೂಢನಂಭಿಕೆಯು ಅದು ಸಹ ಅಹಾರವೆ. ಹಾಗೆ ಅಮೇರಿಕದವರು ಹಲವು ಲೋಡ್ ಗೋದಿ ಮುಂತಾದ ಧಾನ್ಯಗಳನ್ನು ಮೀನುಗಾರಿಕೆ ಹೆಸರಲ್ಲಿ ಸಮುದ್ರಕ್ಕೆ ಸುರಿಯುವುದು ಸಹ ತಪ್ಪೆ ಅಲ್ಲವೆ ಅದು ಸಹ ಬಡವರ ಅಹಾರವೆ.
ಬರಿ ಹಾಲು ನಮ್ಮ ಅಹಾರವಷ್ಟೆ ಏಕೆ ಪಶುಗಳಿಗೆ ಪ್ರಾಣಿಗಳಿಗೆ ಸಹ ಅಮೂಲ್ಯವಾದ ಕೆಲವು ಅಹಾರಗಳನ್ನು, ಹುಲ್ಲು ಮುಂತಾದವು ನಾವು ಅನ್ಯ ಉದ್ದೇಶಗಳಿಗೆ ಬಳಸಿದರೆ ಅದು ಸಹ ತಪ್ಪೆ ಅಲ್ಲವೆ.
ಇಂತಹ ದುಂದು ತಪ್ಪು ಎನ್ನುವದಾದರೆ, ತಿನ್ನಲು ಕುಡಿಯಲು ಸಹ ಇಲ್ಲದ ಸಾವಿರ ಸಾವಿರ ಬಡವರಿರುವ ಈ ನಾಡಿನಲ್ಲಿ ಕ್ರಿಕೇಟಿನಂತ ದುಂದುಗಾರಿಕೆ ಬೇಕೆ ?. ರೈತರಿಗೆ ಕೊಡಲು ವಿಧ್ಯುತ್ ಇಲ್ಲದಿರುವಾಗ ಅರ್ಧರಾತ್ರಿಯಲ್ಲಿ ಸೂರ್ಯನು ನಾಚುವಂತೆ ವಿಧ್ಯುತ್ ದೀಪ ಬೆಳಗಿಸಿ ಆಡುವ ಆ ಕ್ರಿಕೇಟ್ ಯಾವ ಪುರುಷಾರ್ಥಕ್ಕೆ
ನಮ್ಮಲ್ಲಿ ಹಣ ಇದೆಯೆಂಬ ಕಾರಣಕ್ಕೆ ಇಪ್ಪತ್ತು ರೂಪಾಯಿ ಊಟಕ್ಕೆ ಸ್ಟಾರ್ ಹೋಟಲಿನಲ್ಲಿ ಸಾವಿರಾರು ರೂಪಾಯಿ ಸುರಿದು , ಅಹಾರವನ್ನೆಲ್ಲ ಚೆಲ್ಲಿ ದುಂದು ಮಾಡುವುದು ಸಹ ಮೂಢನಂಭಿಕೆಯಲ್ಲವೆ. ಹಾಲು ಎರೆದರೆ ದಂಡವಾಗುತ್ತೆ ಅನ್ನುವಾಗ , ನಮ್ಮ ಮನೆಗಳಲ್ಲಿ ನಡೆಸುವ ಮದುವೆ ಎಂಬ ಕಾರ್ಯಕ್ರಮದಲ್ಲಿ ಛತ್ರದ ಹಿಂದಿನ ತೊಟ್ಟಿಗಳಲ್ಲಿ ಬೀಳುವ ಅಹಾರಕ್ಕೆ ಲೆಕ್ಕ ಇಟ್ಟಿದ್ದೇವ.
ಹೀಗೆ ಪ್ರಶ್ನೆಗಳ ಸರಮಾಲೆ ಮೂಡುತ್ತಲೆ ಹೋಗುತ್ತದೆ, ಆದರೆ ಅದೆಲ್ಲ ಉಫ್ ಬೆಳಗ್ಗೆ ಆಫೀಸಿಗೆ ಓಡುವಾಗ ಮಾಯವಾಗುತ್ತದೆ,
ಮುಂದಿನ ವರ್ಷ ಮತ್ತೆ ನಾಗರಪಂಚಮಿ ಬಂದಾಗ ಲೇಖನ ಒಂದು ಕಾಣಿಸುತ್ತದೆ... ಕಲ್ಲಿಗೆ ಹಾಲೆರೆಯುವುದು ತರವೆ, ಹಲವು ಬಡಮಕ್ಕಳು ಹಾಲಿಲ್ಲದೆ ಸಾಯುವಾಗ ? ಎನ್ನುವ ಶೀರ್ಷಿಕೆಯ ಜೊತೆ.
Comments
ಉ: ಕಲ್ಲಿಗೆ ಹಾಲೆರೆಯುವುದು ತರವೆ?
ಉ: ಕಲ್ಲಿಗೆ ಹಾಲೆರೆಯುವುದು ತರವೆ?
ಉ: ಕಲ್ಲಿಗೆ ಹಾಲೆರೆಯುವುದು ತರವೆ?
ಉ: ಕಲ್ಲಿಗೆ ಹಾಲೆರೆಯುವುದು ತರವೆ?
ಉ: ಕಲ್ಲಿಗೆ ಹಾಲೆರೆಯುವುದು ತರವೆ?
In reply to ಉ: ಕಲ್ಲಿಗೆ ಹಾಲೆರೆಯುವುದು ತರವೆ? by anand33
ಉ: ಕಲ್ಲಿಗೆ ಹಾಲೆರೆಯುವುದು ತರವೆ?
ಉ: ಕಲ್ಲಿಗೆ ಹಾಲೆರೆಯುವುದು ತರವೆ?
In reply to ಉ: ಕಲ್ಲಿಗೆ ಹಾಲೆರೆಯುವುದು ತರವೆ? by anand33
ಉ: ಕಲ್ಲಿಗೆ ಹಾಲೆರೆಯುವುದು ತರವೆ?
In reply to ಉ: ಕಲ್ಲಿಗೆ ಹಾಲೆರೆಯುವುದು ತರವೆ? by partha1059
ಉ: ಕಲ್ಲಿಗೆ ಹಾಲೆರೆಯುವುದು ತರವೆ?
ಉ: ಕಲ್ಲಿಗೆ ಹಾಲೆರೆಯುವುದು ತರವೆ?
ಉ: ಕಲ್ಲಿಗೆ ಹಾಲೆರೆಯುವುದು ತರವೆ?
ಉ: ಕಲ್ಲಿಗೆ ಹಾಲೆರೆಯುವುದು ತರವೆ?
ಉ: ಕಲ್ಲಿಗೆ ಹಾಲೆರೆಯುವುದು ತರವೆ?