ಉರುಳಿದ್ದಂದು ಬರೀ ಎರಡು ಕಂಬಗಳಲ್ಲ !

ಉರುಳಿದ್ದಂದು ಬರೀ ಎರಡು ಕಂಬಗಳಲ್ಲ !

ಉರುಳಿದ್ದಂದು ಬರೀ ಎರಡು ಕಂಬಗಳಲ್ಲ

ಉಡುಗಿದ್ದು ಆರ್ಥಿಕ ವ್ಯವಸ್ಥೆಯ ನಿತಂಬಗಳು

ಉರುಳಿದ್ದಂದು ಬರೀ ಎರಡು ಕಂಬಗಳಲ್ಲ
ಎದ್ದು ತೋರಿದ್ದು ಕ್ರೂರತನದ ಬಿಂಬಗಳು

ಉರುಳಿದ್ದಂದು ಬರೀ ಎರಡು ಕಂಬಗಳಲ್ಲ
ನಿಜದಿ ಭಂಗವಾಗಿದ್ದು ಹಲವರ ಜಂಬಗಳು

ಉರುಳಿದ್ದಂದು ಬರೀ ಎರಡು ಕಂಬಗಳಲ್ಲ
ಎಣೆಯಿಲ್ಲದೆ ಮುರಿದಿದ್ದು ಆಧಾರ ಸ್ಥಂಬಗಳು

ಉರುಳಿದ್ದಂದು ಬರೀ ಎರಡು ಕಂಬಗಳಲ್ಲ
ಬೀದಿ ಕಂಡಿದ್ದು ಹಲವು ಕುಟುಂಬಗಳು

ಉರುಳಿದ್ದಂದು ಬರೀ ಎರಡು ಕಂಬಗಳಲ್ಲ
ಇಂದಿಗೂ ಹೊತ್ತಿರಿಯುತಿದೆ ಅದರ ಪ್ರತಿಬಿಂಬಗಳು

 

Comments

Submitted by makara Fri, 09/13/2013 - 13:50

ಭಲ್ಲೇಜಿ, ವಿಪರ್ಯಾಸ ನೋಡಿ ಅದೇ ಸೆಪ್ಟಂಬರ್ ೧೨ರಂದು ಸ್ವಾಮೀಜಿ ಅಮೇರಿಕಾದಲ್ಲಿ ತಮ್ಮ ಮಾತಿನ ಮೂಲಕ ವಿಶ್ವವನ್ನೇ ಗೆದ್ದರು, ಯಾವುದೇ ಜೀವ ಹಾನಿ ಮಾಡದೆ.
Submitted by bhalle Fri, 09/13/2013 - 16:29

In reply to by makara

ನಿಜ ಶ್ರೀಧರರೇ ಒಬ್ಬರು ಸಂಬಂಧವಿಲ್ಲದವರನ್ನು "ಸೋದರ, ಸೋದರಿ" ಎಂದು ಸಂಬೋಧಿಸಿ ಖ್ಯಾತರಾದರು ಮತ್ತೊಬ್ಬರು ಒಂದು ರೀತ್ಯಾ ಸೋದರ ಸೋದರಿಯರ ಜೀವನಕ್ಕೇ ಬೆಂಕಿಯಿಟ್ಟು ಕುಖ್ಯಾತರಾದರು
Submitted by venkatb83 Fri, 09/13/2013 - 14:24

ಕವನ ಸಕಾಲಿಕ .. ಭಲ್ಲೆ ಅವರೇ ಸೆಪ್ಟಂಬರ್ ಬಂದರೆ ನೆನಪಾಗೋದು -ಅಮೇರಿಕ ಧಾಳಿ ಮುಂಬೈ ಧಾಳಿ ...;((( ಅಂದು ಎರಡು ಕಡೆ ಆದ ಸಾವು ನೋವು -ಅದರ ಜಾಗತಿಕ ಪರಿಣಾಮ - ಆರ್ಥಿಕ ಹಿಂಜರಿತ -ಯುದ್ಧ-ಫಲಿತಾಂಶ ಎಲ್ಲವೂ ;(((( ಮುಂದೆಂದೂ ಈ ರೀತಿ ಆಗದಿರಲಿ ಎಂಬ ಆಶಯ ಶುಭವಾಗಲಿ \।