ಆಸೆಗಳು ನೂರಾರು ...
ಗಾನ ಲೋಕದಲ್ಲಿ ವಿಹರಿಸುತ್ತಿರಲು
ಸಂಗೀತಲೋಕದೆಲ್ಲ ಜ್ಞ್ನಾನ ಪಡೆಯುವಾಸೆ
ವಾದ್ಯಗಳ ಮಾಧುರ್ಯ ಆಲಿಸುತ್ತಿರಲು
ಸಕಲ ವಾದ್ಯಗಳನ್ನೂ ನುಡಿಸುವಾಸೆ
ನೃತ್ಯ ಕಾರ್ಯಕ್ರಮ ನೋಡುತ್ತಿರಲು
ನಾಟ್ಯ ಪ್ರೌಢಿಮೆ ಪಡೆಯುವಾಸೆ
ಸಿನಿಮಾ, ನಾಟಕ ವೀಕ್ಷಿಸುತ್ತಿರಲು
ರಂಗದ ಮೇಲೆ ಅಭಿನಯಿಸುವಾಸೆ
ಅವಿಷ್ಕಾರಗಳ ಬಗ್ಗೆ ತಿಳಿಯುತ್ತಿರಲು
ಎನಗೂ ಅವರಂತೆ ಸೃಷ್ಟಿಸುವಾಸೆ
ಸಾಹಿತ್ಯ ಲೋಕದಿ ಅಡ್ಡಾಡುತಿರಲು
ಎನಗೂ ನಾಲ್ಕಕ್ಷರ ಬರೆಯುವಾಸೆ
ಧಾರ್ಮಿಕ ಕಾರ್ಯಕ್ರಮದಲ್ಲಿ ಕುಳಿತಿರಲು
ಎನಗೂ ಮಂತ್ರೋಚ್ಚಾರ ಮಾಡುವಾಸೆ
ವಾಣಿಜ್ಯ ದಿಗ್ಗಜರ ನುಡಿಗಲಾಲಿಸುತ್ತಿರಲು
ಎನಗೂ ಏನಾದರೂ ಸಾಧಿಸುವಾಸೆ
ಎಲ್ಲೆಲ್ಲೂ ಇರುವಾಸೆ,
ಎಲ್ಲವನ್ನೂ ಅರಿಯುವಾಸೆ
ಆಸೆಯ ಬಲೆಗೆ ಸಿಲುಕಿ ಒದ್ದಾಡುತಿರಲು
ಯಾವುದನ್ನೂ ಸಾಧಿಸದೆ ಕಳೆದುಹೋಗುತ್ತಿರಲು
ಎನ್ನ ಮಿತಿಯನ್ನು ತಿಳಿಯುವಾಸೆ,
ನನ್ನನ್ನೇ ನಾ ಅರಿಯುವಾಸೆ
Comments
ಉ: ಆಸೆಗಳು ನೂರಾರು ...
In reply to ಉ: ಆಸೆಗಳು ನೂರಾರು ... by kavinagaraj
ಉ: ಆಸೆಗಳು ನೂರಾರು ...
ಉ: ಆಸೆಗಳು ನೂರಾರು ...
In reply to ಉ: ಆಸೆಗಳು ನೂರಾರು ... by venkatb83
ಉ: ಆಸೆಗಳು ನೂರಾರು ...
ಉ: ಆಸೆಗಳು ನೂರಾರು ...
In reply to ಉ: ಆಸೆಗಳು ನೂರಾರು ... by partha1059
ಉ: ಆಸೆಗಳು ನೂರಾರು ...
In reply to ಉ: ಆಸೆಗಳು ನೂರಾರು ... by bhalle
ಉ: ಆಸೆಗಳು ನೂರಾರು ...
In reply to ಉ: ಆಸೆಗಳು ನೂರಾರು ... by ಗಣೇಶ
ಉ: ಆಸೆಗಳು ನೂರಾರು ...
ಉ: ಆಸೆಗಳು ನೂರಾರು ...
In reply to ಉ: ಆಸೆಗಳು ನೂರಾರು ... by Vinutha B K
ಉ: ಆಸೆಗಳು ನೂರಾರು ...
ಉ: ಆಸೆಗಳು ನೂರಾರು ...
In reply to ಉ: ಆಸೆಗಳು ನೂರಾರು ... by jp.nevara
ಉ: ಆಸೆಗಳು ನೂರಾರು ...