ಮೈಸೂರು ಅರಸರಿಗೆ.........

ಮೈಸೂರು ಅರಸರಿಗೆ.........

ತಲಕಾಡು ಮರಳಾದದ್ದೇಕೆ ಎಂಬ ಬಗ್ಗೆ ಸುಂದರವಾದ ಐತಿಹ್ಯವೊಂದಿದೆ. ಏಳನೇ ಶತಮಾನದಲ್ಲಿ ರಂಗಮ್ಮ ಎಂಬ ರಾಣಿಯಿದ್ದಳು. ಮೈಸೂರ ಅರಸರಿಗೂ ಈ ರಾಜ್ಯದವರಿಗೂ ನಡೆದ ಘನ ಘೋರ ಯುದ್ಧದಲ್ಲಿ ಆಕೆಯ ಪತಿ ವೀರ ಸ್ವರ್ಗ ಸೇರಿದ. ಇದರಿಂದ ಮನನೊಂದ ಆಕೆ ತನ್ನ ಸೆರಗಲ್ಲಿ ಮಣ್ಣು ಕಟ್ಟಿಕೊಂಡು, “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ” ಎಂದು ಶಪಿಸಿ, ತಾಯಿ ಕಾವೇರಿ ಮಡಿಲಿಗೆ ಧುಮುಕಿದಳಂತೆ. ಇಂದಿಗೂ ಆಕೆಯ ಶಾಪ ಬಾಧಿಸುತ್ತದೆ ಎಂದು ಪ್ರತೀತಿ. ಮೈಸೂರು ಅರಸರಿಗೆ ಇಂದಿಗೂ ನೇರ ಸಂತಾನವಿಲ್ಲ. ಪ್ರತಿ ಬಾರಿ ಉತ್ಖನನ ಮಾಡಿ ಹೊರತೆಗೆದ ಸ್ವಲ್ಪ ದಿನಗಳಿಗೆ ಎಲ್ಲ ದೇವಾಲಯಗಳನ್ನೂ ಮತ್ತೆ ಮರಳು ಆವರಿಸಿಬಿಡುತ್ತದೆ......
ಈ ಬರಹ ಈದೀಗ ಓದುತ್ತಿದ್ದೆ
ತಲಕಾಡಿನ ವಿಷಯ ಬಿಟ್ಟು ಬಿಡೋಣ ಅದು ಪ್ರಕೃತ್ತಿದತ್ತ ಎಂದು ಕೊಳ್ಳೋಣ
ಆದರೆ ಮೈಸೂರು ಅರಸರಿಗೆ ಮಕ್ಕಳಾಗದ ವಿಷಯ ಅದು ಪ್ರಕೃತ್ತಿದತ್ತ ಆಗಲು ಹೇಗೆ ಸಾದ್ಯ? ಏಕೆಂದರೆ ಪ್ರತಿ ಬಾರಿಯು ಅವರು ದತ್ತು ತೆಗೆದುಕೊಂಡಾಗಲು ಆ ಮಗು ಸಂತಾನಹೀನನಾಗಲು ಸಾದ್ಯವಿದೆಯೆ?
ಈದೀಗ ಈ ದಿನ ನಿಧನರಾದ ಮಹಾರಾಜ ವಂಶಸ್ತ ಒಡೆಯರ್ ಅವರಿಗೆ ಸಂತಾನವಿದೆಯೆ ? ತಿಳಿಯದು

ಈಗ ಮೂಡನಂಭಿಕೆ ವಿರೋದಿಗಳಿಗೆ ಒಂದು ಅವಕಾಶ, ಬುದ್ದಿಜೀವಿಗಳು ಆದ ಅವರು ಇಂತಹ ಒಂದು ಸಂದರ್ಭಕ್ಕೆ ಏನು ತರ್ಕಬದ್ಧ ಉತ್ತರ ನೀಡುವರು ಇದು ಹೇಗೆ ಸಾದ್ಯವಾಗಿದೆ. ಶಾಪ ಅನ್ನುವುದು ಪಲಿಸಿದೆಯೆ ? ಅಥವ ಇಲ್ಲವೆ?
ನನಗಂತೂ ಶಾಪಗಳಲ್ಲಿ ನಂಭಿಕೆ ಇಲ್ಲ. ಆದರೆ ಇಂತಹ ಸಾದ್ಯತೆಗೆ ಉತ್ತರ ಯಾರು ಕೊಡುವರು ನನಗೆ ತಿಳಿಯದು.

ಆದರೆ ಈ ಸಂದರ್ಭದಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನವಾಗಿರುವದರ ಹೊರತು ಅನ್ಯಥಾ ಅವಕಾಶವಿಲ್ಲ.

http://sampada.net/blog/hpn/23/09/2008/12011

Rating
No votes yet

Comments

Submitted by H A Patil Tue, 12/10/2013 - 20:55

ಪಾರ್ಥಸಾರಥಿ ಯವರಿಗೆ ವಂದನೆಗಳು
ಮೈಸೂರು ಅರಸರ್ಇಗೆ..' ಲೇಖನ ಓದಿದೆ, ಶ್ರೀಕಂಠದತ್ತ ಒಡೆಯರರ ನಿಧನ ವಾರ್ತೆ ತಿಳಿದು ಒಂದು ರೀತಿಯ ವಿಷಾದವಾಯಿತು. ಅವರ ವಶಕ್ಕಿರುವು ಶಾಪ ಆ ವಂಶ ಸಾಗಿಬಂದ ಇತಿಹಾಸ ಒಂದು ರೀತಿಯ ಜಿಜ್ಞಾಸೆಯನ್ನು ಹುಟ್ಟು ಹಾಕುವಂತಹುದು, ನನಗೆ ತಿಳಿದ ಮಟ್ಟಿಗೆ ಅವರಿಗೆ ಸಂತಾನವಿಲ್ಲ ವೆನ್ನುವುದು, ಅವರು ಆರೋಗ್ಯವಾಗಿದ್ದರು ಸಾವಿನ ನಿರೀಕ್ಷೆಯೆ ಇರಲಿಲ್ಲ ಅದು ಯಾವಾಗ ಹೇಗೆ ಬರುತ್ತದೆ ಎನ್ನುವುದೆ ತಿಲೀಳಯುವುದಿಲ್ಲ, ಅವರ ಆತ್ಮಕ್ಕೆ ಶಾಂತಿ ದೊರೆಯಲಿ.

Submitted by ಗಣೇಶ Tue, 12/10/2013 - 23:54

ಪಾರ್ಥರೆ,
-ನಿಮ್ಮೆಲ್ಲ ಪ್ರಶ್ನೆಗಳಿಗೂ ಸಾಧ್ಯವಾದಷ್ಟು ತರ್ಕಬದ್ದ ಉತ್ತರ ಇಲ್ಲಿದೆhttp://www.youtube.com/watch?v=QAXIDR6oLUUhttp://www.youtube.com/watch?v=k42DJjddEYQhttp://www.youtube.com/watch?v=vFffHie6zF8http://www.youtube.com/watch?v=DZW3-Caipx0http://www.youtube.com/watch?v=nrlwCYSivps
ಇದು ನಾಡಿಗರ (ನೀವು ಕೊಟ್ಟ ಕೊಂಡಿ) ಬರಹಕ್ಕೆ ಹಂಸಾನಂದಿಯವರು ನೀಡಿದ ಪ್ರತಿಕ್ರಿಯೆಯಲ್ಲಿ ಕೊಟ್ಟ ಕೊಂಡಿಯಲ್ಲಿ ಸಿಕ್ಕಿದ್ದು..