ಸತ್ಯದ ವ್ಯಥೆ.

ಸತ್ಯದ ವ್ಯಥೆ.

ಒಬ್ಬನು ಸತ್ಯವನ್ನು ಕೂಗಿ ಸಾರಿದ‌

ಯಾರೂ ಕಿವಿಗೊಡಲಿಲ್ಲ, 

ಇನ್ನೊಬ್ಬ ಸುಳ್ಳನ್ನು ಮೆಲ್ಲನುಸುರಿದ 

ಎಲ್ಲರೂ ತಲೆದೂಗಿದರು.

Submitted by ashwin jamadagni Mon, 12/23/2013 - 15:19

In reply to by sathishnasa

ನಿಜ ಆದರೆ ಈ ಕಲಿಯುಗದಲ್ಲಿ ಯಾವುದು ಸತ್ಯ, ಯಾವುದು ಮಿತ್ಯ ಎಂದು ತಿಳಿಯುವುದೇ ಕಷ್ಟಕರ. ಉದಾಹರಣೆಗೆ ಕಂಚಿ ಶ್ರೀ ಗಳ ಮೇಲೆ ಕೆಲವು ಆರೋಪಗಳು ಬಂದವು ಆಗ ಬೇರೆಯವರೊಂದಿಗೆ ಅವರ ಸಮುದಾಯದವರೂ ಅವರನ್ನು ದೂರಿದರು. ಈಗ ಆ ಆಪಾದನೆಗಳಿಂದ ಮುಕ್ತರಾದರು ಈಗ ದೂರಿದವರು ಬೈಗುಳಗನ್ನೆಲ್ಲವನ್ನು ಹಿಂಪಡೆಯಲು ಸಾದ್ಯವೇ.. 

 

Submitted by sathishnasa Mon, 12/23/2013 - 21:28

In reply to by ashwin jamadagni

ಯಾವುದನ್ನೆ ಆಗಲಿ ತೆಗೆದುಕೊಂಡಲ್ಲಿ ಮಾತ್ರ ಹಿಂತಿರುಗಿಸಬಹುದು  ಅಥವಾ ಹಿಂಪಡೆಯ ಬಹುದು ಹಾಗೆ ಈ ಬೈಗುಳಗಳು ಅದನ್ನು ಕಂಚಿಶ್ರೀಗಳು ಪಡೆದಿಲ್ಲ ಎಂದು ಕೊಳ್ಳಬೇಕು ಅಲ್ಲವೆ? ಹಾಗಾಗಿ ಆ ಬೈಗುಳಗಳು ದೂರಿದವರಿಗೆ ಸೇರುತ್ತದೆ ,,,,,,ಸತೀಶ್

Submitted by makara Sun, 09/29/2013 - 06:55

ನಿಮ್ಮ ಮಾತು ನಿಜ ಸತೀಶರೆ,
ಸತ್ಯಕ್ಕೂ ಕಾಲ ಕೂಡಿಬರಬೇಕು ಮತ್ತು ಸುಳ್ಳಿನ ಆಯುಷ್ಯ ಮುಗಿದಿರಬೇಕು.
@ಜಮದಗ್ನಿ
ಚುಟುಕಾಗಿ ಕಟುವಾದ ಸತ್ಯವನ್ನೇ ಹೇಳಿದ್ದೀರಿ.