'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು.
1833 ರಲ್ಲಿ ಜಾನ್ ಹೆನ್ರಿ ನ್ಯೂಮನ್ ರಚಿಸಿದ ಗೀತೆ ‘ ಲೀಡ್, ಕೈಂಡ್ಲೀ ಲೈಟ್’ ‘ ಗೀತೆಯನ್ನು ‘ದಿ ಪಿಲ್ಲರ್ಸ್ ಆಫ್ ಕ್ಲೌಡ್’’ ಹಾಡಿನ ಹೆಸರು. ಈ ಗೀತೆಯನ್ನು ತನ್ನ 31ನೆಯ ವಯಸ್ಸಿಗೆ ಪಾದ್ರಿಯಾದ ನ್ಯೂಮನ್ ಇಟಲಿಯಲ್ಲಿ ಅನಾರೋಗ್ಯದಿಂದ ಬಳಲುತ್ತ , ತನ್ನ ಇಂಗ್ಲೆಂಡಿಗೆ ಪ್ರಯಾಣಿಸುವ ಸಂದರ್ಭದಲ್ಲಿ , ಹಡಗಿನಲ್ಲಿ ರಚಿಸಿದ್ದು. ಜನಸಮುದಾಯಗಳಲ್ಲಿ, ಸೈನ್ಯಗಳಲ್ಲಿ, ಸಮೂಹ ಗೀತೆಗಳಲ್ಲಿ ಈ ಹಾಡನ್ನು ಹಲವಾರು ರಾಗಗಳಲ್ಲಿ ಜಗತ್ತಿನ ತುಂಬ ಹಾಡುತ್ತಾರೆ. ಈಗ ಇತ್ತೀಚೆಗೆ 2011 ಹಾಗೂ 2012 ರಲ್ಲಿಯೂ ಕೂಡ ಈ ಹಾಡಿಗೆ ಹೊಸ ಹೊಸ ರಾಗ ಲಯಗ¼ನ್ನು ಸಂಯೋಜಿಸುವ ಕೆಲಸ ನಡೆದಿದೆ ಎಂದರೆ ಹಾಡಿನ ಜೀವಂತಿಕೆಯನ್ನು. ಆನಪ್ರಿಯತೆಯನ್ನು ಗ್ರಹಿಸಬಹುದು. ಸುಮಧುರ ಹಾಗೂ ಜನಜನಿತವಾಗಿತ್ತೆಂದರೆ 1909 ರಲ್ಲಿ ಬ್ರಿಟನ್ ದ ಅದಿರು ಗಣಿ ದುರಂತವೊಂದರಲ್ಲಿ ನೂರಾರು ಜನ ಕಾರ್ಮಿಕರು, ಮಕ್ಕಳು ಹತರಾಗಿದ್ದು ದುರಂತ. ಅಂತಹ ಸಂದರ್ಭದಲ್ಲಿ 34 ಜನ ಒಂದೆಡೆ ಈ ಹಾಡನ್ನು ಹಾಡುತ್ತ ಜೀವ ಹಿಡಿದಿಡುತ್ತ, ಹಲವಾರು ಗಂಟೆಗಳಷ್ಟು ದೀರ್ಘ ಸಮಯದ ನಂತರ ಬದುಕಿದ ಇವರನ್ನು ಹೊರತೆಗೆಯಲಾಗುತ್ತದೆ. ಇವರನ್ನು ಆ ಕತ್ತಲೆಯ ನೆಲದಾಳದಲ್ಲಿ ಬದುಕಿಸಿದ್ದು ಈ ಗೀತೆ. ‘ಲೀಡ್, ಕೈಂಡ್ಲೀ ಲೈಟ್’, . 1912 ರಲ್ಲಿ ಮುಳುಗುತ್ತಿದ್ದ ಟೈಟಾನಿಕ್ ಹಡಗಿನಲ್ಲಿ ಮುಳುಗುತ್ತ ನೂರಾರು ಪ್ರಯಾಣಿಕರು ಬದುಕುಳಿಯುವ ಆಶೆಯೊಂದಿಗೆ ಈ ಹಾಡನ್ನು ಹಾಡುತ್ತ ಮುಳುಗಿದ್ದುದನ್ನು ಅದಾರು ಮರೆತಾರು?. ಜಗತ್ತಿನ ಅನೇಕಾನೇಕ ಸಂಸ್ಥೆಗಳು, ಸಂಘಗಳು ಈ ಹಾಡಿನ, ‘ಲೀಡ್ ಕೈಂಡ್ಲೀ ಲೈಟ್’ ನ್ನು ತಮ್ಮ ಧ್ಯೇಯವಾಕ್ಯವನ್ನಾಗಿ ಮಾಡಿಕೊಂಡಿವೆ. ಕನ್ನಡದಲ್ಲೂ ಕೂಡ, ಇದು ಅನುವಾದವೇ, ಎಂಬಷ್ಟು ಅದ್ಭುತವಾಗಿ, ಬಿ.ಎಂ.ಶ್ರೀಕಂಠಯ್ಯನವರು, ಈ ಹಾಡನ್ನು ಅನುವಾದಿಸಿದ್ದಾರೆ.ಬಿ ಎಂ ಶ್ರೀ ಯವರ 'ಇಂಗ್ಲೀಷ ಗೀತೆಗಳು', ಸಂಕಲನದ ಗೀತೆ. ನಂಬಲಸಾಧ್ಯವಾದ ಅನುವಾದ. ಹಾಡು ಯಾವುದು ಗೊತ್ತೇ, ‘ಕರುನಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು’…………….ಕಷ್ಟದಡವಿಯ ಕಳೆದು, ಬೆಟ್ಟಹೊಳೆಗಳ ಹಾದು ಇರುಳನ್ನು ನೂಕದಿಹೆಯಾ?, ಒಂದು ಓರಿಜಿನಾಲಿಟಿ ಇರುವ, ಈ ನೆಲದ ಈ ಮಣ್ಣಿನ ಕವಿತೆಯಾಗಿ ಮೂಡಿದ ಅದ್ವಿತೀಯ ಹಾಡು ಹಾಗೂ ಅಷ್ಟೇ ಪ್ರಬುದ್ಧ ಅನುವಾದ . ಹಾಡುಗಳು ಈ ಕೆಳಗಿವೆ. ಹಲವಾರು ರಾಗ ಧಾಟಿಗಳಲ್ಲಿ, ಚಿತ್ರಗೀತೆಯಾಗಿಯೂ ಕೂಡ, ಜನಪದದಲ್ಲಿ ಒಂದು ಭಾವಗೀತೆಯಾಗಿ ಹಾಸುಹೊಕ್ಕಾದ ಈ ಹಾಡುಗಳ ಮೂಲ ಮತ್ತು ಅನುವಾದಗಳು ಹೀಗಿವೆ.
'ದಿ ಪಿಲ್ಲರ್ ಆಫ್ ಕ್ಲೌಡ' "
Lead, Kindly Light, amidst th'encircling gloom, Lead Thou me on!
The night is dark, and I am far from home,
Lead Thou me on!
Keep Thou my feet; I do not ask to see
The distant scene; one step enough for me.
I was not ever thus, nor prayed that
Thou Shouldst lead me on;
I loved to choose and see my path;but now Lead Thou me on!
I loved the garish day, and, spite of fears,
Pride ruled my will.
Remember not past years!
So long Thy power hath blest me, sure it still
Will lead me on.
O'er moor and fen, o'er crag and torrent, till
The night is gone,
And with the morn those angel faces smile,
Which I have loved long since, and lost awhile!
Meantime, along the narrow rugged path,
Thyself hast trod, Lead,
Saviour, lead me home in childlike faith,
Home to my God.
To rest forever after earthly strife In the calm light of everlasting life
ಕರುನಾಳು ಬಾ ಬೆಳಕೆ ಮುಸುಕಿದಿ ಮಬ್ಬಿನಲಿ
ಕೈಹಿಡಿದು ನಡೆಸೆನ್ನನು
ಇರುಳುಗತ್ತಲೆಯಾ ಗವಿ ಮನೆದೂರ ಕನಿಕರಿಸಿ
ಕೈಹಿಡಿದು ನಡೆಸೆನ್ನನು…
ಹೇಳಿನನ್ನಡಿ ಇಡಿಸು ಬಲುದೂರ ನೋಟವನು
ಕೇಳದೊಡನೆಯೇ ಸಾಕು ನನಗೊಂದು ಹೆಜ್ಜೆ
ಮೊನ್ನೆ ಇಂತಿರದಾದೆ ನಿನ್ನ ಬೇಡದೇಹೋದೆ
ಕೈಹಿಡಿದು ನಡೆಸೆನ್ನನು
ಇಷ್ಟು ದಿನ ಸಲಹಿರುವೆ ಈ ಮೂರ್ಖನನು ನೀನು
ಮುಂದೆಯೂ ಕೈಹಿಡಿದು ನಡೆಸದಿಹೆಯಾ?
ಕಷ್ಟದಡವಿಯ ಕಳೆದು ಬೆಟ್ಟಹೊಳೆಗಳ ಹಾದು
ಇರುಳನ್ನು ನೂಕದಿಹೆಯಾ?
ಬೆಳಗಾಗ ಹೊಳೆಯದೆ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡ ದಿವ್ಯ ಮುಖ ನಗುತ
ಕರುನಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ
ಕೈಹಿಡಿದು ನಡೆಸೆನ್ನನು
Comments
ಉ: 'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು.
ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
'ಕರಣಾಳು ಬಾ ಬೆಳಕೆ' ಬಿ.ಎಂ.ಶ್ರೀ ಯವರ ಅನುವಾದ ಎಷ್ಟು ಪ್ರಬುದ್ಧವಾಗಿದೆ ಮತ್ತು ಇದು ಅವರ ಸ್ವಂತ ರಚನೆಯೋ ಎನ್ನುವಷ್ಟು ಸತ್ವಶಾಲಿ ಕವನ ಇದಾಗಿದೆ, ಇದು ಅವರ ಎಲ್ಲ ಅನುವಾದಗಳಿಗೂ ಅನ್ವಯಿಸುತ್ತದೆ. ಜಾನ್ ಹೆನ್ರಿ ನ್ಯೂಮನ್ ವಿರಚಿತ 'ಲೀಡ್ ಕೈಂಡ್ಲಿ ಲೈಟ್' ಕುರಿತು ಅನೇಕ ಕುತೂಹಲಕಾರಿ ಮಾಹಿತಿಗಳನ್ನು ನೀಡಿದ್ದೀರಿ ಓದಿ ಹರುಚವಾಯಿತು, ಧನ್ಯವಾದಗಳು.
In reply to ಉ: 'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು. by H A Patil
ಉ: 'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು.
ಆಆತ್ಮೀಯ ಪಾಟೀಲರಿಗೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಮ್ಮ ಮೆಚ್ಚುಗೆಗೆಯ ನುಡಿಗಳಿಗೆ ಧನ್ಯವಾದಗಳು ಸರ್.
ಉ: 'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು.
'ಇಂಗ್ಲಿಷ್ ಗೀತೆಗಳು' ಪುಸ್ತಕದಲ್ಲಿ ಇವತ್ತಷ್ಟೆ ಓದುತ್ತಿದ್ದೆ...ಚೆನ್ನಾಗಿದೆ..
In reply to ಉ: 'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು. by ಸುಮ ನಾಡಿಗ್
ಉ: 'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು.
ಸುಮನ್ ಜಿ, ನಮಸ್ಕಾರ. ತಮ್ಮ ಆತ್ಮಿಯತೆಯ ಮೆಚ್ಚುಗೆಗೆ ವಂದನೆಗಳು. ಪಾಟೀಲರು ಹೇಳಿದಂತೆ ಬಿ ಎಂ. ಶ್ರೀ ಕವನಗಳೆಲ್ಲವೂ ಸತ್ವಯುತವೇ, ಅವು ಅನುವಾದಗಳೇ ಇರಲಿ, ಇಲ್ಲವೆ ರಚನೆಗಳೇ ಆಗಿರಲಿ ಬಲು ಮೆಚ್ಚುಗೆಗೆ ಅರ್ಹವು.ವಂದನೆಗಳು
ಉ: 'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು.
ಇಟ್ನಾಳರೆ, ಚಿಕ್ಕಂದಿನಲ್ಲಿ ಇದು ನಮ್ಮ ಶಾಲೆಯ ಪ್ರಾರ್ಥನಾ ಗೀತೆಯಾಗಿತ್ತು. ಈ ಹಾಡನ್ನು ನೆನಪಿಸಿ ನಮ್ಮ ಬಾಲ್ಯವನ್ನು ನೆನೆಯುವಂತೆ ಮಾಡಿದ್ದೀರ ಅದಕ್ಕಾಗಿ ಧನ್ಯವಾದಗಳು. ಹಾಗೆಯೇ ಹಿರಿಯರಾದ ಹನುಮಂತ ಪಾಟೀಲರು ಅಭಿಪ್ರಾಯ ಪಟ್ಟಂತೆ ಈ ಹಾಡಿನೊಂದಿಗೆ ತಳಕು ಹಾಕಿಕೊಂಡಿರುವ ಅನೇಕ ವಿಷಯಗಳನ್ನು ಇಲ್ಲಿ ಪ್ರಸ್ತಾವಿಸಿದ್ದೀರ, ಆ ಮಾಹಿತಿಗೂ ನಿಮಗೆ ಧನ್ಯವಾದಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: 'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು. by makara
ಉ: 'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು.
ಇಟ್ನಾಳ್ ಅವರೇ
ಇಲ್ಲಿ ಹಲವರು
ವ್ಯಕ್ತಪಡಿಸಿರುವ ಅನಿಸಿಕೆಯ ಹಾಗೆ , ನಾನೂ ಇದನ್ನು ನನ್ನ ಪೀ ಯೂ ಸಿ ಯ ಆಂಗ್ಲ ಪುಸ್ತಕದಲ್ಲಿ ಓದಿರುವೆ .
ಇದರದೇ ದೇಶೀ ಕನ್ನಡ ಅನುವಾದ ಓದಿ ಅಚ್ಚರಿಗೊಂಡಿದ್ದೆ.. ಮೂಲಕ್ಕಿಂತ ಕನ್ನಡ ಅನುವಾದವೇ ಆಪ್ತವಾಗಿದ್ದು ಸರಳವಾಗಿದೆ .. ಇದಸ್ಟೆ ಅಲ್ಲದೆ ಕನ್ನಡದಲ್ಲಿ ಅನುವಾದಗೊಂಡ ಹಲವು ಆಂಗ್ಲ ಬರಹಗಳು -ನಮ್ಮದೇ ಮಾತ್ರ ಭಾಷೆಗೆ ಬಲು ಸೊಗಸಾಗಿ ಅನುವಾದಗೊಂಡಿವೆ ..
ಈ ಬರ್ಹದಲ್ಲಿ
ಲಿಂಕ್ ಇಲ್ಲಿದೆhttp://bit.ly/1efkrP3
ಹಾಗೆಯೇ ಈ ಹಾಡು ಪ್ರಾಮುಖ್ಯತೆ -ಇದರ ಖ್ಯಾತಿ ಇತ್ಯಾದಿ ಲಿಂಕ್ :http://en.wikipedia.org/wiki/Lead,_Kindly_Light
ಯೂಟೂಬ್ನಲ್ಲಿ :http://bit.ly/1cW4WZW
ಶ್ರೀಧರ್ ಜೀ ಅವರು ಹೇಳಿದ ಹಾಗೆ ಈ ಬರಹ ಮತ್ತೊಮ್ಮೆ ನನ್ನ್ಞನು ಕಾಲೇಜು ಲೋಕಕ್ಕೆ ಕರೆದು ಹೋಯ್ತು ...
ಶುಭವಾಗಲಿ
ನನ್ನಿ
\|/
In reply to ಉ: 'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು. by venkatb83
ಉ: 'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು.
ವೆಂಕಟರವರೇ, ತಮಗೆ ಎಷ್ಟೊಂದು ಹಚ್ಚಿಬಿಟ್ಟಿತಲ್ಲ ಬಿ ಎಂ ಶ್ರೀಯವರ ಈ ಹಾಡು. ತಮ್ಮ ಕೊಂಡಿಗಳಿಗೆ ಧನ್ಯ. ನಾನೆಂದೋ ಎಲ್ಲೋ ಓದಿದ ಕೆಲ ಮಾಹಿತಿ ಮಾತ್ರ ಈ ಲೇಖನದಲ್ಲಿ ನೀಡಿದೆ. ಅದೇ ಮಾಹಿತಿ ಒಂದು ಕೊಂಡಿಯಲ್ಲಿರುವುದನ್ನು ಓದಿ ಖುಷಿಯಾಯಿತು. ನಾನು ಓದಿದ ಲೇಖನಕ್ಕೂ ಅದೇ ಕೊಂಡಿ ಒಂದು ಕಾರಣವಿರಬಹುದು. ತಾವು ನುಡಿದಂತೆ 'ಕರುನಾಳು ಬಾ ಬೆಳಕೆ' ತುಂಬ ಆಪ್ತ ಭಾವಗಳ ಸುಂದರ ಗೀತೆ. ತಮ್ಮ ಮೆಚ್ಚುಗೆಗೆ ಧನ್ಯ ಸರ್. ವಂದನೆಗಳು
In reply to ಉ: 'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು. by makara
ಉ: 'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು.
ಶ್ರೀಧರಜಿ, ತಮ್ಮ ನೆನಪಿನ ಆಳಕ್ಕೆ ಬಾಲ್ಯಕ್ಕೆ ಕರೆದೊಯ್ದ ಕರುನಾಳು ಬಾ ಬೆಳಕೆ ಕವನದ ಲೇಖನದ ಮೆಚ್ಚುಗೆಗೆ ಧನ್ಯ ಸರ್. ತಮಗೆ ವಂದನೆಗಳು.
ಉ: 'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು.
A good Article Thanks Itnal Sir
In reply to ಉ: 'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು. by sri.ja.huddar
ಉ: 'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು.
ಹುದ್ದಾರ ಶ್ರೀನಿವಾಸ ಅವರೆ, ತಮ್ಮ ಪ್ರತಿಕ್ರಿಯೆಗೆ ಧನ್ವ, ನಿಜವಾಗಿಯೂ ಈ ಹಾಡಿನ ಕುರಿತು ನನಗ ಸೂಕ್ತ ತಿಳುವಳಿಕೆ ನೀಡಿದ ಖ್ಯಾತ ಶಿಕ್ಷಣ ತಜ್ಞ ಹಾಗೂ ಶಿಕ್ಷಣ ಇಲಾಖೆಯ ನಿವೃತ್ತ ಉನ್ನತ ಅಧಿಕಾರಿಗಳಾದ ಪ್ರೊ. ಎ ಜಿ ಸಬರದ ಅವರಿಗೆ ನಿಜ ಮೆಚ್ಚುಗೆ ಹೋಗಬೇಕು, ಏಕೆಂದರೆ ನಾವು ಆಗಾಗ ಕೂಡಿದಾಗ, ಈ ಹಾಡಿನ ಮೂಲ ಸಹಿತ ಬಾಯಿಪಾಠ ಹೇಳುತ್ತ ಈ 'ಕರನಾಳು ಬಾ ಬೆಳಕೆ' ಬಗ್ಗೆ ನನಗೆ ಆಸ್ಥೆ ತುಂಬಿದರು. ಹೀಗಾಗಿ ಈ ಸಂದರ್ಭದಲ್ಲಿ ನಾನು ಅವರನ್ನು ನೆನೆಯುತ್ತೇನೆ. ಈ ಲೇಖನವನ್ನು ಅವರಿಗೆ ಅರ್ಪಿಸುತ್ತೇನೆ. ಧನ್ಯವಾದಗಳು
ಉ: 'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು.
ಕೆಲ ಹಾಡುಗಳೇ ಹಾಗೆ ಸದಾ ಕಾಡುತ್ತ ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಆ ಪೈಕಿ "ಎದೆ ತುಂಬಿ ಹಾಡಿದೆನು", "ಮಲಗು ಮುದ್ದಿನ ಮಗುವೇ" , " ಇತನಾ ಶಕ್ತಿ ಹಮೇ ದೇನಾ ದಾತಾ", "ಹಮ್ ಹೋಂಗೇ ಕಾಮಯಾಬ್" , ಈ ಹಾಡುಗಳು ಎಲ್ಲ ವಯೋಮಾನದವರಿಗೂ ಇಷ್ಟ. ನಿಮ್ಮ ಲೇಖನ ಹಾಡಿನ ಹಿಂದಣ ಹಿಸ್ಟರಿ ಹೇಳುತ್ತದೆ ವಂದನೆಗಳು.
In reply to ಉ: 'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು. by sri.ja.huddar
ಉ: 'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು.
ಕೆಲ ಹಾಡುಗಳೇ ಹಾಗೆ ಸದಾ ಕಾಡುತ್ತ ಮನಸ್ಸಿಗೆ ನೆಮ್ಮದಿ ನೀಡುತ್ತವೆ.ಹೌದು, ತಾವಂದಂತೆ ಕೆಲ ಹಾಡುಗಳು ತುಂಬ ತುಂಬ ಮೆಚ್ಚುಗೆಯಾಗಿ ಯಾವಾಗಲೂ ಗೆಳೆಯರಂತೆ ಜೊತೆಯಾಗಿಯೇ ಇರುತ್ತವೆ, ನಾಲಿಗೆ ಮೇಲೆ, ಎದೆಯಲ್ಲಿ,..........ಧನ್ಯವಾದಗಳು
ಉ: 'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು.
ನಮಸ್ಕಾರಗಳು ಸರ್
ತುಂಬಾ ಚನ್ನಾಗಿದೆ ಸರ್.ಕುಸಿಯಾತು.
In reply to ಉ: 'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು. by ravindra n angadi
ಉ: 'ಲೀಡ್ ಕೈಂಡ್ಲೀ ಲೈಟ್' (ಕರುಣಾಳು ಬಾ ಬೆಳಕೆ) ಹಾಡಿನ ಕುರಿತೊಂದಿಷ್ಟು.
ರವೀಂದ್ರರವರೇ, ತಮ್ಮ ಮೆಚ್ಚುಗೆಗೆ ಧನ್ಯವಾದಗಳು