ಮರೆಯಲ್ಲಿ

ಮರೆಯಲ್ಲಿ

ಕವನ

ಮರೆಯಲ್ಲಿ

ಬಯಕೆಗಳು ಹಲವಾರು

ಬತ್ತದ ಎದೆಯಲ್ಲಿ

ಕನಸುಗಳು ನೂರಾರು

ಭಾವದ ಹೊಳೆಯಲ್ಲಿ

ನನಸಾಗಲು ಕಾತರಿಸುತಿವೆ

ವಾಸ್ತವದ ಲೋಕದಲಿ

ಎಲ್ಲವೂ ಅಡಗಿಹುದು

ನನ್ನೆದೆಯ ಮರೆಯಲ್ಲಿ

Comments

Submitted by ashoka_15 Fri, 02/21/2014 - 23:15

ಚಿಕ್ಕದಾದರು ಚೊಕ್ಕವಾದ ಕವನ‌,,,,,, 

 

ಕರೆತರುವರಿಲ್ಲಾ ಹಡಗಿರುವ ಬಯಕೆಗಳ ಮರೆಯಲ್ಲಿ,

ಕೊಂಡೊಯ್ಯುವರಿಲ್ಲ ನೂರಾರು ಕನಸುಗಳ ಎದೆಯಲ್ಲಿ

ನನಸಾಗಲು ಬಿಡುವರೆ ವಾಸ್ತವದ ಲೋಕದಲ್ಲಿ

ಅದಕ್ಕಾಗಿಯೆ ಅವಿಚಿರುವೆ ಬಯಕೆಗಳ ಮರೆಯಲ್ಲಿ.