ಒಂಟಿತನ
ಮನುಷ್ಯ ತನ್ನ ಜೀವನದಲ್ಲಿ ಒಂದುದಿನ ಆದರೂ ಈ ಒಂಟಿತನವನ್ನು ಅನುಭವಿಸುತ್ತಾನೆ. ಅವನ ಜೀವನದಲ್ಲಿ ಒಂದು ಸಾರಿ ಆದರೂ ಈ ಹಾಡನ್ನು ಹಾಡುತ್ತಾನೆ "ಮೇರಾ ಜೀವನ ಕೋರಾ ಕಾಗಸ ಕೋರಾ ಹಿ ರೇಹಗಯ ಜೋ ಲಿಕಾತ ಒ ಆಸುಒಕೆ ಸಂಘ ಬಹಗಯಾ ". ಈ ಒಂಟಿತನಕ್ಕೆ ನೂರಾರು ಕಾರಣಗಳು ಇರುತ್ತವೆ .ಮನುಷ್ನನ್ನು ತಾನು ತುಂಬ ಪ್ರೀತಿಸುವ ವ್ಯಕ್ತಿಯನ್ನು ಕಳೆದುಕೊಂಡಾಗ, ಅವನನ್ನು ಯಾರು ಪ್ರೀತಿಸದೆ ಇದಾಗ, ಜೀವನದಲ್ಲಿ Failure ಆದಾಗ, ಹೀಗೆ ನೂರಾರು ಕಾರಣಗಳು ಇರುತ್ತವೆ.ಆದರೆ ಈ ಒಂಟಿತನದಿಂದ ಮನುಷ್ಯ ಮಾನಸಿಕವಾಗಿ ಕ್ಷೀಣತೆಗೆ ಒಳಗಾಗುತ್ತಾನೆ , ಒಬ್ಬನೇ ಮಾತಾಡೋಕೆ ಶುರುಮಾಡುತ್ತನೆ, ದುಷ್ಟ ಚಟಕ್ಕೆ ಒಳಗಾಗುತ್ತಾನೆ, ಒಂಟಿಯಾಗಿ ಇರಲು ಬಯಸುತ್ತಾನೆ.ಬೇಗನೇ ಸಿಟ್ಟಾಗುತ್ತಾನೆ, ಜೀವನದ ಮೇಲೆ ಬೇಜಾರಾಗುತ್ತಾನೆ, ಸಣ್ಣ ಸಣ್ಣ ವಿಷಯಗಳಿಗೆ ಕೋಪಗೊಳುತ್ತಾನೆ. ಒಮ್ಮೊಮ್ಮೆ ತುಂಬ ಕೆಟ್ಟ ನಿಣ೯ಯಗಳನ್ನು ತೆಗಿದು ಕೊಳ್ಳುತ್ತಾನೆ.ಆತ್ಮಹತ್ಯೆ ಮಾಡಿಕೋಳ್ಳು ಹಂತ. ನಿಣ೯ಯವನ್ನು ತೆಗೆದುಕೊಳುತ್ತಾನೆ.ಆದರಿಂದ ಈ ಒಂಟಿತನದಿಂದ ಹೊರ ಬನ್ನಿ ಬೇಗ. ನಿಮಗೆ ಇಷ್ಟ ಆದ ಕೆಲಸದಲ್ಲಿ ತೊಡಿಗಿಸಿ ಕೊಳ್ಳಿ, ಯಾವಗಳು ಜನರ ಜೊತೆ ಇರಿ,ಒಂಟಿಯಾಗಿ ಇರಬೆಡಿ, ಮನುಷ್ಯ ಹುಟ್ಟಿದಮೇಲೆ ಒಂದು ದಿನ ಸಾಯಲೇಬೆಕು ಅಂತ ನಿಮ್ಮ ಮನಸ್ಸಿಗೆ ಹೇಳಿ . ಕಾಲ ಕಳೆದ ಹಾಗೆ ಎಲ್ಲಾ ಕಡಿಮೆಯಾಗುತ್ತದೆ. ಭೂತಕಾಲದ ಬಗೆ ಯೋಚನೆಮಾಡ ಬೇಡಿ.ಅದನ್ನು ಬದಲಾಯಿಸಳು ಆಗೋದಿಲ್ಲ. ಅದರ ನೆನಪುಗಳನ್ನು ನಿಮ್ಮ ಜೊತೆ ಇಟ್ಟಿಕೊಳ್ಳಿ. ವತ೯ಮಾನ ಕಾಲದಲ್ಲಿ ಬದುಕಿರಿ. ಭವಿಷ್ಯಕಾಲದ ಬಗ್ಗೆ ಯೋಚನೆಮಾಡಿ ನಿಣ೯ಯಗಳನ್ನು ತೆಗೆದುಕೊಳಿ.ಜೀವನದಲ್ಲಿ Failure ಆದ ಮೇಲೆ ಮತ್ತೆ ಪ್ರಯತ್ನ ಮಾಡಿ ಒಂದಲ್ಲ ಒಂದು ದಿನ Success ಆಗುತ್ತಿರಿ.ನೋವು ನಲಿವು ಅನೋದು ಜೀವನದ ರೈಲಿನ ಎರಡೂ ಕಂಬಿಗಳು ನಡುವೆ ನಮ್ಮ ಈ ಪ್ರಯಾಣ ನಗುತ್ತಾ ಸಾಗಲಿ ಯಾವಗಳು.
Comments
ಉ: ಒಂಟಿತನ
ಒಳ್ಳೆಯ ವಿಚಾರ.
ಪೂರಕವಾಗಿ ಈ ಲೇಖನವನ್ನೂ ಅವಕಾಶವಾದರೆ ಗಮನಿಸಬಹುದು: http://kavimana.blogspot.in/2014/12/blog-post_14.html
In reply to ಉ: ಒಂಟಿತನ by kavinagaraj
ಉ: ಒಂಟಿತನ
ಧನ್ಯವಾದಗಳು ಸರ್.
In reply to ಉ: ಒಂಟಿತನ by Nagaraj Bhadra
ಉ: ಒಂಟಿತನ
ನಿಮ್ಮ. ಲೇಖನವನ್ನು ಓದಿದ್ದಿನಿ ಸರ್.ಒಳ್ಳೆಯ. ಲೇಖನ.ಒಂಟಿತನದ ಬಗ್ಗೆ ವಿಸ್ತಾರವಾಗಿದೆ ನಿಮ್ಮ. ಲೇಖನ ಸರ್.