ಹತ್ತು ಕೋತಿ ಮರಿಗಳು!
ಪುಟ್ಟದೊಂದು ಸಣ್ಣದೊಂದು ಚಿಕ್ಕದೊಂದು ಕೋತಿಮರಿ
ಕುಳ್ಳದೊಂದು ಡುಮ್ಮದೊಂದು ತೆಳ್ಳದೊಂದು ಕೋತಿಮರಿ ||
ಬೆಳ್ಳದೊಂದು ಕಪ್ಪಗೊಂದು ಕೆಂಚಗೊಂದು ಕೋತಿ ಮರಿ
ಮಳ್ಳನಂತೆ ಸುಳ್ಳನಂತೆ ಕೊನೆಯ ಕಳ್ಳ ಕೋತಿ ಮರಿ ||
ಮರದ ಮೇಲೆ ಕುಣಿಯುತಿದ್ದವೊಟ್ಟು ಹತ್ತು ಕೋತಿ ಮರಿ
ಒಟ್ಟು ಹತ್ತು ಕೋತಿ ಮರಿ! ಒಟ್ಟು ಹತ್ತು ಕೋತಿ ಮರಿ ||
ಹತ್ತು ಕೋತಿ ಮರಿಗಳು
ಬಾಳೆ ಹಣ್ಣು ತಿನ್ನಲು
ಒಂದಕುಸಿರು ಕಟ್ಟಿ ಉಳಿದ
ವೊಂಬತ್ತು ಕೋತಿ ಮರಿ! || ೧||
ಒಂಬತ್ತು ಕೋತಿ ಮರಿಗಳು
ರಾತ್ರಿ ಮಲಗಿಕೊಂಡವು
ಒಂದು ಮತ್ತೆ ಏಳದೇನೆ
ಉಳಿದುವೆಂಟು ಕೋತಿ ಮರಿ! ||೨||
ಎಂಟು ಕೋತಿ ಮರಿಗಳು
ಆಟವಾಡುತಿದ್ದವು
ಒಂದು ಹೊರಗೆ ಕುಳಿತುಕೊಂಡು
ಒಳಗೆ ಏಳೆ ಕೋತಿ ಮರಿ! ||೩||
ಏಳು ಕೋತಿ ಮರಿಗಳು
ಬತ್ತ ಕುಟ್ಟ ಹೊರಟವು
ಒನಕೆ ಏಟಿಗೊಂದು ಸಿಕ್ಕಿ
ಈಗ ಆರು ಕೋತಿ ಮರಿ! ||೪||
ಆರು ಕೋತಿ ಮರಿಗಳು
ಬಟ್ಟೆ ಹೊಲೆಯುತಿದ್ದವು
ಒಂದಕ್ಕೆ ಸೂಜಿ ಚುಚ್ಚಿ
ಉಳಿದವೈದು ಕೋತಿ ಮರಿ ||೫||
ಐದು ಕೋತಿ ಮರಿಗಳು
ಪಟಾಕಿ ಹಚ್ಚುತಿದ್ದವು
ಕೈಯೊಳಗೇ ಸಿಡಿದುಬಿಡಲು
ಇನ್ನು ನಾಲ್ಕೆ ಕೋತಿ ಮರಿ ||೬|||
ನಾಲ್ಕು ಕೋತಿ ಮರಿಗಳು
ಪಗಡೆ ಕಾಯಿ ಕೊಲ್ಲಲು
ಕೋಡಗನ್ನ ಕೋಳಿ ನುಂಗಿ
ಈಗ ಮೂರೆ ಕೋತಿ ಮರಿ ||೭||
ಮೂರು ಕೋತಿ ಮರಿಗಳು
ಜೂಟಾಟವನಾಡಲು
ಒಂದು ಎಡವಿ ತಲೆಯು ಒಡೆದು
ಉಳಿಯಿತೆರಡು ಕೋತಿ ಮರಿ ||೮||
ಎರಡು ಕೋತಿಮರಿಗಳು
ಜಗಳವಾಡುತಿದ್ದವು
ಒಂದನೊಂದು ಸುಟ್ಟುಬಿಟ್ಟು
ಇನ್ನು ಒಂದೆ ಕೋತಿ ಮರಿ ||೯||
ಉಳಿದ ಕೊನೆಯ ಕೋತಿ ಮರಿ
ಒಂಟಿ ತನವ ತಾಳದೇ
ನೇಣು ಹಾಕಿಕೊಂಡು ಸತ್ರೆ
ಒಂದೂ ಇಲ್ಲ ಕೋತಿ ಮರಿ ||೧೦||
ಈ ಪದ್ಯವನ್ನು ಹಾಡೋದು ಹೇಗೆ ಅಂತ ಕೇಳಿದಿರಾ? ಈ ಕೆಳಗಿನ ವಿಡಿಯೋ ನೋಡಿ!
<iframe width="560" height="315" src="https://www.youtube.com/embed/3-LUmj1PumA" frameborder="0" allowfullscreen></iframe>
-ಹಂಸಾನಂದಿ
ಕೊ: ಮಕ್ಕಳಿಗೆ ಅಂಕಿಗಳನ್ನು, ಕೂಡಿ-ಕಳೆಯೋದನ್ನು ಹೇಳಿಕೊಡುವ ಸಮಯದಲ್ಲಿ ಹೇಳಿಕೊಡಬಹುದಾದ ಹೊಸದೊಂದು ಪದ್ಯ, ನಾನೇ ಬರೆದದ್ದು :)
ಕೊ.ಕೊ: ಈ ಪದ್ಯ ಇತ್ತೀಚೆಗೆ ಪ್ರದರ್ಶಿತವಾದ ನಾನು ಬರೆದ ನಾಟಕ "ಗಾಜಿನ ಮನೆ" ಗೆಂದು ಬರೆದಿದ್ದು - ಆ ಕಥೆಯ ಬೆನ್ನೆಲುಬು ಎಂದರೂ ತಪ್ಪಿಲ್ಲ!
ಕೊ.ಕೊ.ಕೊ: ಈ ಪದ್ಯಕ್ಕೆ ಸ್ಫೂರ್ತಿ Ten Little Indians ಎನ್ನುವ ಇಂಗ್ಲಿಷ್ ಪದ್ಯ
Comments
ಉ: ಹತ್ತು ಕೋತಿ ಮರಿಗಳು!
ಹಾಡು ಕೇಳಲು, ವಿಡಿಯೋ ನೋಡಿ: https://www.youtube.com/watch?v=3-LUmj1PumA
ಉ: ಹತ್ತು ಕೋತಿ ಮರಿಗಳು!
ಲೆಕ್ಕ ಹೇಳಿಕೊಡಲು ಕೋತಿಗಳನ್ನು ಸಾಯಿಸುವ ಬದಲು ಬೇರೆ ರೀತಿಯ ಲೆಕ್ಕಾಚಾರ ಮಾಡಬೇಕಿತ್ತೆನಿಸಿತು! ರಾಗಸಂಯೋಜನೆ, ಹಾಡಿದ ರೀತಿ, ಇತ್ಯಾದಿಗಳು ಚೆನ್ನಾಗಿವೆ.
In reply to ಉ: ಹತ್ತು ಕೋತಿ ಮರಿಗಳು! by kavinagaraj
ಉ: ಹತ್ತು ಕೋತಿ ಮರಿಗಳು!
ನಮಸ್ಕಾರ ಕವಿನಾಗರಾಜರೇ. ಈ ಪದ್ಯ ನಾಟಕಕ್ಕೆ ಬೇಕಾದಂತೆ ಬರೆದಿರೋದ್ರಿಂದ ಸಾಯಿಸೋದು ಅವಶ್ಯಕವಾಗಿತ್ತು :) ನಿಮ್ಮ ಅಭಿಪ್ರಾಯ ಒಪ್ಪುವಂತಹದ್ದೇ.
In reply to ಉ: ಹತ್ತು ಕೋತಿ ಮರಿಗಳು! by hamsanandi
ಉ: ಹತ್ತು ಕೋತಿ ಮರಿಗಳು!
ನಿಮ್ಮ ರಚನಾತ್ಮಕತೆ, ಕ್ರಿಯಾತ್ಮಕತೆಗೆ ಸಾಯಿಸುವುದಕ್ಕಿಂತ ಹೆಚ್ಚು ಪರಿಣಾಮಕಾರಿ ಮಾರ್ಗ ಗೋಚರಿಸದೆ ಇರದು ಎಂದು ನನ್ನ ಅನಿಸಿಕೆ. ನನ್ನ ಭಾವನಾತ್ಮಕ ಅನಿಸಿಕೆಯಿದು. ಶುಭವಾಗಲಿ.
ಉ: ಹತ್ತು ಕೋತಿ ಮರಿಗಳು!
ಸರ್, ನಿಮ್ಮ ನಾಟಕ ಅಗಾಥಾ ಕ್ರಿಸ್ಟಿ ಯವರ "and then there were none" ರ ಅನುವಾದವೆ?
In reply to ಉ: ಹತ್ತು ಕೋತಿ ಮರಿಗಳು! by shridharjs
ಉ: ಹತ್ತು ಕೋತಿ ಮರಿಗಳು!
ಹೌದು, ಆದರೆ, ಅನುವಾದ ಅನ್ನುವುದಕ್ಕಿಂತ ರೂಪಾಂತರ ಅನ್ನಬಹುದು.
ನಾಟಕದ ಹೆಚ್ಚಿನ ಚಿತ್ರಗಳು - ಈ ಪುಟದಲ್ಲಿವೆ:
https://www.facebook.com/pages/Gaajina-Mane/986189721427701