ಹತ್ತು ಕೋತಿ ಮರಿಗಳು!

ಹತ್ತು ಕೋತಿ ಮರಿಗಳು!

ಚಿತ್ರ

ಪುಟ್ಟದೊಂದು ಸಣ್ಣದೊಂದು ಚಿಕ್ಕದೊಂದು ಕೋತಿಮರಿ

ಕುಳ್ಳದೊಂದು ಡುಮ್ಮದೊಂದು ತೆಳ್ಳದೊಂದು ಕೋತಿಮರಿ ||

ಬೆಳ್ಳದೊಂದು ಕಪ್ಪಗೊಂದು ಕೆಂಚಗೊಂದು ಕೋತಿ ಮರಿ

ಮಳ್ಳನಂತೆ ಸುಳ್ಳನಂತೆ ಕೊನೆಯ ಕಳ್ಳ ಕೋತಿ ಮರಿ ||

ಮರದ ಮೇಲೆ ಕುಣಿಯುತಿದ್ದವೊಟ್ಟು ಹತ್ತು ಕೋತಿ ಮರಿ

ಒಟ್ಟು ಹತ್ತು ಕೋತಿ ಮರಿ! ಒಟ್ಟು ಹತ್ತು ಕೋತಿ ಮರಿ ||

 

ಹತ್ತು ಕೋತಿ ಮರಿಗಳು

ಬಾಳೆ ಹಣ್ಣು ತಿನ್ನಲು

ಒಂದಕುಸಿರು ಕಟ್ಟಿ ಉಳಿದ

ವೊಂಬತ್ತು ಕೋತಿ ಮರಿ!  || ೧||

 

ಒಂಬತ್ತು ಕೋತಿ ಮರಿಗಳು

ರಾತ್ರಿ ಮಲಗಿಕೊಂಡವು

ಒಂದು ಮತ್ತೆ ಏಳದೇನೆ

ಉಳಿದುವೆಂಟು ಕೋತಿ ಮರಿ! ||೨||

 

ಎಂಟು ಕೋತಿ ಮರಿಗಳು

ಆಟವಾಡುತಿದ್ದವು

ಒಂದು ಹೊರಗೆ ಕುಳಿತುಕೊಂಡು

ಒಳಗೆ ಏಳೆ ಕೋತಿ ಮರಿ! ||೩||

 

ಏಳು ಕೋತಿ ಮರಿಗಳು

ಬತ್ತ ಕುಟ್ಟ ಹೊರಟವು

ಒನಕೆ ಏಟಿಗೊಂದು ಸಿಕ್ಕಿ

ಈಗ ಆರು ಕೋತಿ ಮರಿ! ||೪||

 

ಆರು ಕೋತಿ ಮರಿಗಳು

ಬಟ್ಟೆ ಹೊಲೆಯುತಿದ್ದವು

ಒಂದಕ್ಕೆ ಸೂಜಿ ಚುಚ್ಚಿ

ಉಳಿದವೈದು ಕೋತಿ ಮರಿ ||೫||

 

ಐದು ಕೋತಿ ಮರಿಗಳು

ಪಟಾಕಿ ಹಚ್ಚುತಿದ್ದವು

ಕೈಯೊಳಗೇ ಸಿಡಿದುಬಿಡಲು

ಇನ್ನು ನಾಲ್ಕೆ ಕೋತಿ ಮರಿ ||೬|||

 

ನಾಲ್ಕು ಕೋತಿ ಮರಿಗಳು

ಪಗಡೆ ಕಾಯಿ ಕೊಲ್ಲಲು

ಕೋಡಗನ್ನ ಕೋಳಿ ನುಂಗಿ

ಈಗ ಮೂರೆ ಕೋತಿ ಮರಿ ||೭||

 

ಮೂರು ಕೋತಿ ಮರಿಗಳು

ಜೂಟಾಟವನಾಡಲು

ಒಂದು ಎಡವಿ ತಲೆಯು ಒಡೆದು

ಉಳಿಯಿತೆರಡು ಕೋತಿ ಮರಿ ||೮||

 

ಎರಡು ಕೋತಿಮರಿಗಳು

ಜಗಳವಾಡುತಿದ್ದವು

ಒಂದನೊಂದು ಸುಟ್ಟುಬಿಟ್ಟು

ಇನ್ನು ಒಂದೆ ಕೋತಿ ಮರಿ ||೯||

 

ಉಳಿದ ಕೊನೆಯ ಕೋತಿ ಮರಿ

ಒಂಟಿ ತನವ ತಾಳದೇ

ನೇಣು ಹಾಕಿಕೊಂಡು ಸತ್ರೆ

ಒಂದೂ ಇಲ್ಲ ಕೋತಿ ಮರಿ ||೧೦||

 

ಈ ಪದ್ಯವನ್ನು ಹಾಡೋದು ಹೇಗೆ ಅಂತ ಕೇಳಿದಿರಾ? ಈ ಕೆಳಗಿನ ವಿಡಿಯೋ ನೋಡಿ! 

<iframe width="560" height="315" src="https://www.youtube.com/embed/3-LUmj1PumA" frameborder="0" allowfullscreen></iframe>

-ಹಂಸಾನಂದಿ

 

ಕೊ: ಮಕ್ಕಳಿಗೆ ಅಂಕಿಗಳನ್ನು, ಕೂಡಿ-ಕಳೆಯೋದನ್ನು ಹೇಳಿಕೊಡುವ ಸಮಯದಲ್ಲಿ ಹೇಳಿಕೊಡಬಹುದಾದ ಹೊಸದೊಂದು ಪದ್ಯ, ನಾನೇ ಬರೆದದ್ದು :) 

 

ಕೊ.ಕೊ: ಈ ಪದ್ಯ ಇತ್ತೀಚೆಗೆ ಪ್ರದರ್ಶಿತವಾದ ನಾನು ಬರೆದ ನಾಟಕ "ಗಾಜಿನ ಮನೆ" ಗೆಂದು ಬರೆದಿದ್ದು - ಆ ಕಥೆಯ ಬೆನ್ನೆಲುಬು ಎಂದರೂ ತಪ್ಪಿಲ್ಲ! 

 

ಕೊ.ಕೊ.ಕೊ:  ಈ  ಪದ್ಯಕ್ಕೆ ಸ್ಫೂರ್ತಿ Ten Little Indians ಎನ್ನುವ ಇಂಗ್ಲಿಷ್ ಪದ್ಯ 

Rating
No votes yet

Comments

Submitted by kavinagaraj Thu, 09/03/2015 - 16:32

ಲೆಕ್ಕ ಹೇಳಿಕೊಡಲು ಕೋತಿಗಳನ್ನು ಸಾಯಿಸುವ ಬದಲು ಬೇರೆ ರೀತಿಯ ಲೆಕ್ಕಾಚಾರ ಮಾಡಬೇಕಿತ್ತೆನಿಸಿತು! ರಾಗಸಂಯೋಜನೆ, ಹಾಡಿದ ರೀತಿ, ಇತ್ಯಾದಿಗಳು ಚೆನ್ನಾಗಿವೆ.

Submitted by hamsanandi Thu, 09/03/2015 - 21:10

In reply to by kavinagaraj

ನಮಸ್ಕಾರ ಕವಿನಾಗರಾಜರೇ. ಈ ಪದ್ಯ ನಾಟಕಕ್ಕೆ ಬೇಕಾದಂತೆ ಬರೆದಿರೋದ್ರಿಂದ ಸಾಯಿಸೋದು ಅವಶ್ಯಕವಾಗಿತ್ತು :) ನಿಮ್ಮ ಅಭಿಪ್ರಾಯ ಒಪ್ಪುವಂತಹದ್ದೇ.

Submitted by kavinagaraj Fri, 09/04/2015 - 07:51

In reply to by hamsanandi

ನಿಮ್ಮ ರಚನಾತ್ಮಕತೆ, ಕ್ರಿಯಾತ್ಮಕತೆಗೆ ಸಾಯಿಸುವುದಕ್ಕಿಂತ ಹೆಚ್ಚು ಪರಿಣಾಮಕಾರಿ ಮಾರ್ಗ ಗೋಚರಿಸದೆ ಇರದು ಎಂದು ನನ್ನ ಅನಿಸಿಕೆ. ನನ್ನ ಭಾವನಾತ್ಮಕ ಅನಿಸಿಕೆಯಿದು. ಶುಭವಾಗಲಿ.

Submitted by hamsanandi Thu, 09/10/2015 - 04:24

In reply to by shridharjs

ಹೌದು, ಆದರೆ, ಅನುವಾದ ಅನ್ನುವುದಕ್ಕಿಂತ ರೂಪಾಂತರ ಅನ್ನಬಹುದು.
ನಾಟಕದ ಹೆಚ್ಚಿನ ಚಿತ್ರಗಳು - ಈ ಪುಟದಲ್ಲಿವೆ:
https://www.facebook.com/pages/Gaajina-Mane/986189721427701

Submitted by hamsanandi Thu, 09/10/2015 - 04:25

In reply to by shridharjs

ಹೌದು, ಆದರೆ, ಅನುವಾದ ಅನ್ನುವುದಕ್ಕಿಂತ ರೂಪಾಂತರ ಅನ್ನಬಹುದು.
ನಾಟಕದ ಹೆಚ್ಚಿನ ಚಿತ್ರಗಳು - ಈ ಪುಟದಲ್ಲಿವೆ:
https://www.facebook.com/pages/Gaajina-Mane/986189721427701

Submitted by hamsanandi Thu, 09/10/2015 - 04:25

In reply to by shridharjs

ಹೌದು, ಆದರೆ, ಅನುವಾದ ಅನ್ನುವುದಕ್ಕಿಂತ ರೂಪಾಂತರ ಅನ್ನಬಹುದು.
ನಾಟಕದ ಹೆಚ್ಚಿನ ಚಿತ್ರಗಳು - ಈ ಪುಟದಲ್ಲಿವೆ:
https://www.facebook.com/pages/Gaajina-Mane/986189721427701
-ಹಂಸಾನಂದಿ

Submitted by hamsanandi Thu, 09/10/2015 - 04:25

In reply to by shridharjs

ಹೌದು, ಆದರೆ, ಅನುವಾದ ಅನ್ನುವುದಕ್ಕಿಂತ ರೂಪಾಂತರ ಅನ್ನಬಹುದು.
ನಾಟಕದ ಹೆಚ್ಚಿನ ಚಿತ್ರಗಳು - ಈ ಪುಟದಲ್ಲಿವೆ:
https://www.facebook.com/pages/Gaajina-Mane/986189721427701
-ಹಂಸಾನಂದಿ