ಭಾಗ - ೭ ವೇದ ಗಣಿತ ಕಿರು ಪರಿಚಯ: ಕಟಪಯಾದಿ ಸಂಖ್ಯೆಗಳ ಮೂಲಕ ಮಾಯಾಚೌಕ - ೨

ಭಾಗ - ೭ ವೇದ ಗಣಿತ ಕಿರು ಪರಿಚಯ: ಕಟಪಯಾದಿ ಸಂಖ್ಯೆಗಳ ಮೂಲಕ ಮಾಯಾಚೌಕ - ೨

ಚಿತ್ರ

ಭಾಗ - ೭ ವೇದ ಗಣಿತ ಕಿರು ಪರಿಚಯ: ಕಟಪಯಾದಿ ಸಂಖ್ಯೆಗಳ ಮೂಲಕ ಮಾಯಾಚೌಕ - ೨
ವಿಷಯ  - ಮಾಯಾ ಚೌಕಗಳಲ್ಲಿರುವ ಅಂಕೆಗಳನ್ನು ಕಟಪಯಾದಿ ಪದ್ಧತಿಯ ಮೂಲಕ ಸೂಚಿಸುವ ಕ್ರಮ. 
ವಿವರಣೆ - ೧) ಆಚಾರ್ಯ ನಾಗಾರ್ಜುನನು ವಿವರಿಸಿರುವ ಕಟಪಯಾದಿ ಸೂತ್ರದಂತೆ ಮಾಯಾ ಚೌಕಗಳ ಸೂತ್ರವು ಈ ವಿಧವಾಗಿ ಇದೆ. (ಚಿತ್ರ - ೭.೧) 
 
ನೀಲಂ ಚಾಪಿ ದಯಾ ಚಲೊ    
ನಟ ಭುವಂ ಖಾರೀ ವರಂ   
ರಾಗಿನಂ ಭೂಪೋ ಮಾರೋ ವಗೊ   
ಜರಾ ಚರ ನಿಭಂ ತಾನಂ
 
೨. ಕಟಪಯಾದಿ ಪದ್ಧತಿಯಂತೆ ಆ ಶಬ್ದಗಳನ್ನು ಬಿಡಿಸಿದಾಗ ಅದರ ಬೆಲೆಗಳು ಈ ಕೆಳಗಿನಂತೆ ಇರುತ್ತವೆ (ಚಿತ್ರ - ೭. ೨) 
 
೩. ಮೇಲಿನ ಕೋಷ್ಟಕದಂತೆ (ಚಿತ್ರ - ೭. ೨) ತಯಾರಾದ ಮಾಯಾ ಚೌಕವು ಈ ಕೆಳಗಿನಂತಿರುತ್ತದೆ (ಚಿತ್ರ - ೭.೩) 
 
30 16 18 36    
10 44 22 24   
32 14 20 34   
28 26 40 06
 
೪. ಮೇಲಿನ ಮಾಯಾ ಚೌಕದಲ್ಲಿ (ಚಿತ್ರ - ೭.೩) ಯಾವುದೇ ಅಡ್ಡ ಸಾಲಿನ ಮೊತ್ತವು = ೧೦೦ ಆಗಿರುತ್ತದೆ. 
೩೦+೧೬+೧೮+೩೬=೧೦೦ 30+16+18+36 = 100
೧೦+೪೪+೨೨+೨೪=೧೦೦ 10+44+22+24 = 100
೫. ಮೇಲಿನ ಮಾಯಾ ಚೌಕದಲ್ಲಿ (ಚಿತ್ರ - ೭.೩) ಯಾವುದೇ ಕಂಬ ಸಾಲಿನ ಮೊತ್ತವು = ೧೦೦ ಆಗಿರುತ್ತದೆ. 
೩೦+೧೦+೩೨+೨೮ = ೧೦೦ 30+10+32+28 = 100
೧೬+೪೪+೧೪+೨೬ = ೧೦೦ 16+44+14+26 = 100
೬. ಮೇಲಿನ ಮಾಯಾ ಚೌಕದಲ್ಲಿ (ಚಿತ್ರ - ೭.೩) ಯಾವುದೇ ಕರ್ಣರೇಖೆಯಲ್ಲಿನ ಸಂಖ್ಯೆಗಳ ಮೊತ್ತವು = ೧೦೦ ಆಗಿರುತ್ತದೆ. 
೩೦+೪೪+೨೦+೦೬ = ೧೦೦ 30+44+20+06 = 100
೩೬+೨೨+೧೪+೨೮ = ೧೦೦ 36+22+14+28 = 100
 
ಗಮನಿಸಿ: 
೧) ಕಡೆಯ ಅಡ್ಡ ಸಾಲನ್ನು ಮೊದಲಿನ ಅಡ್ಡ ಸಾಲಾಗಿ ಇರಿಸಿದರೆ ಅಥವಾ ಕಡೆಯ ಕಂಬ ಸಾಲನ್ನು ಮೊದಲೇ ಕಂಬ ಸಾಲಾಗಿ ಇರಿಸಿದಾಗಲೂ ಸಹ ಸಂಖ್ಯೆಗಳನ್ನು ಅಡ್ಡವಾಗಿ, ಲಂಬವಾಗಿ ಅಥವಾ ಕರ್ಣವಾಗಿ ಕೂಡಿಸಿದಾಗಲೂ ಸಹ ಮೊತ್ತವು ಬದಲಾಗುವುದಿಲ್ಲ (ಈ ಉದಾಹರಣೆಯಲ್ಲಿ ಒಟ್ಟು ಮೊತ್ತವು - ೧೦೦ ಆಗಿರುತ್ತದೆ). 
೨) ಕಡೆಯ ಸಾಲನ್ನು ಮೊದಲನೇ ಸಾಲಿನ ಮುಂಚೆ ಇರಿಸಿದಾಗ ಮಾಯಾಚೌಕದ ಸ್ಥಿತಿ ಈ ಕೆಳಕಂಡಂತೆ ಇರುತ್ತದೆ (ಚಿತ್ರ - ೭.೪)
 
28 26 40 06   
30 16 18 36   
10 44 22 24   
32 14 20 34
 
೩) ಕಡೆಯ ಕಂಬ ಸಾಲನ್ನು ಮೊದಲನೇ ಕಂಬ ಸಾಲಿನ ಮುಂಚೆ ಇರಿಸಿದಾಗ ಮಾಯಾಚೌಕದ ಸ್ಥಿತಿ ಈ ಕೆಳಕಂಡಂತೆ ಇರುತ್ತದೆ (ಚಿತ್ರ - ೭.೫) 
 
06 28 26 40   
36 30 16 18   
24 10 44 22   
34 32 14 20
 
ಆಂಗ್ಲ ಮೂಲ: ಶ್ರೀಯುತ ಡಾ. ರೇಮೆಳ್ಳ ಅವಧಾನಿಗಳು ರಚಿಸಿರುವ ವೇದ ಗಣಿತ - ೪, ಪ್ರಕಟಣೆ: ಶ್ರೀ ವೇದಭಾರತಿ, ಭಾಗ್ಯನಗರ VEDIC MATHEMATICS - 4  (PUBLISHED BY SHRI VEDA BHARATHI, AUTHOR: Dr. Remella Avadhanulu) 
***
ಈ ಸರಣಿಯ ಹಿಂದಿನ ಲೇಖನ’ಕ್ಕಾಗಿ ’ಭಾಗ - ೬ ವೇದ ಗಣಿತ ಕಿರು ಪರಿಚಯ: ಕಟಪಯಾದಿ ಸಂಖ್ಯೆಗಳ ಮೂಲಕ ಮಾಯಾಚೌಕ - ೧’ ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%AC-%E0%B2%B5...
 
 
 
 
 

Rating
No votes yet

Comments

Submitted by makara Fri, 04/14/2017 - 21:50

ವೇದಗಣಿತ ಸರಣಿಯ ಈ ಲೇಖನವನ್ನು ನೋಡಿ. ಈ ಸರಣಿಯ ಅಂಚೆಗಳನ್ನು ಹಂಚಿಕೊಳ್ಳುತ್ತಿರುವ ಫೇಸ್ ಬುಕ್ಕಿನ ಮಿತ್ರರಾದ ಶ್ರೀಯುತ ನಾಗೇಶ್, ಗೋಪಿನಾಥ್ ಹಾಗು ಶ್ರೀಮತಿ ಭಾರತಿಯವರಿಗೆ ಹಾಗೂ ಓದಿ ಪ್ರೋತ್ಸಾಹಿಸುತ್ತಿರುವ ಇತರೇ ಸ್ನೇಹಿತರಿಗೆ ನನ್ನ ಹೃತ್ಪೂರ್ವಕ ವಂದನೆಗಳು. ಶ್ರೀಧರ್ ಬಂಡ್ರಿ :)https://sampada.net/blog/%E0%B2%AD%E0%B2%BE%E0%B2%97-%E0%B3%AE-%E0%B2%B5...