ಮಂಗಲ್ ಪಾಂಡೆ...ನಾನು ನೋಡಿದ ಚಿತ್ರ

0
ಮುಂಬಯಿಗೆ ಬಂದು ೨೦ ದಿನಗಳಾದವು. ಬಹಳ ಬೇಸರವಾಗುತ್ತಿತ್ತು, ಅಲ್ಲದೆ ಶನಿವಾರದ ರಜೆಯನ್ನು ಕಳೆಯುವುದು ಹೇಗೆಂದು ಯೋಚಿಸುತ್ತಿದ್ದೆ. ಹಿಂದಿನ ದಿನವಷ್ಟೇ ಬಿಡುಗಡೆಯಗಿದ್ದ, 'ಮಂಗಲ್ ಪಾಂಡೆ' ನೋಡುವ ಎಂದು ಪತ್ರಿಕೆಯಲ್ಲಿದ್ದ, ಮಲ್ಟಿಪ್ಲೆಕ್ಸೊಂದಕ್ಕೆ ಫೋನಾಯಿಸಿದೆ. ನನ್ನ ಅದೃಷ್ಟಕ್ಕೆ ಸಂಜೆ ೪.೩೦ ರ ಪ್ರದರ್ಶನಕ್ಕೆ ಟಿಕೆಟ್ ದೊರೆಯಿತು. ಇನ್ನು ಚಿತ್ರದ ಬಗ್ಗೆ ಹೇಳಬೇಕು. ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಈ ಚಿತ್ರ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ನನ್ನ ಮಟ್ಟಿಗಂತೂ ಇದು ನಿಜ. 'ಭಾವನಿ ಭಾವೈ'ನಂತ ಉತ್ತಮ ಚಿತ್ರಗಳನ್ನು ನಿರ್ದೇಶಿಸಿದ್ದ ಕೇತನ್ ಮೆಹ್ತಾ ಹೀಗೇಕೆ ಮಾಡಿದರು ಎನಿಸಿತು. ಮೊದಲಿಗೇ ಹೇಳಿಬಿಡುತ್ತೇನೆ, ಇದು 'ಲಗಾನ್'ನ ಮುಂದುವರೆದ ಭಾಗದಂತಿದೆ! ಹಾಡುಗಳು ಅನವಶ್ಯಕವಾಗಿ ತುರುಕಲ್ಪಟ್ಟಿವೆ. ನಾಯಕಿ ಪಾತ್ರಕ್ಕೆ ಹೆಚ್ಚಿನ ಅವಕಾಶವಿಲ್ಲ. ಇದು ನಾಯಕನ ಪಾತ್ರದ ಬಗ್ಗೆಯೂ ನಿಜ. 'ಚಿತ್ರಕ್ಕೆ ಸಾಕಷ್ಟು ಸಂಶೋಧನೆಯನ್ನೂ ಮಾಡಿದ್ದೇವೆ' ಎಂದು ಸಂದರ್ಶನವೊಂದರಲ್ಲಿನ ಅಮೀರನ ಮಾತು ನೆನಪಾಗಿ, ಸಂಶೋಧನೆ ನಿರೀಕ್ಷಿತ ವಲಯಗಳಲ್ಲಿ ನಡೆದಿಲ್ಲ ಎನಿಸಿತು. ಉದಾಹರಣೆಗೆ, ಕಂಪನಿ ಸೈನ್ಯದಲ್ಲಿ ಭಾರತೀಯ ಸಿಪಾಯಿಗಳ ಸ್ಥಿತಿ, ಮಂಗಳನ ಹಿನ್ನೆಲೆ ಇತ್ಯಾದಿ. ಮಂಗಳನ ಹಿನ್ನೆಲೆಯು ನಿರ್ದೇಶಕರ ಫೋಕಸ್ ಆಗಿಲ್ಲದಿರಬಹುದು. ಆದರ ಚಿತ್ರದಲ್ಲಿಯೇ ತೋರಿಸಿರುವಂತೆ, ದಂಗೆಯ ಅನೇಕ ನಿರ್ಧಾರಗಳನ್ನು ತೆಗೆದುಕೊಂಡದ್ದು, ಆತನ ಸಹವರ್ತಿ. ನಮಗೆ ಇತಿಹಾಸ ಪುಸ್ತಕಗಳಿಂದ ತಿಳಿದು ಬರುವುದಕ್ಕಿಂತ ಹೆಚ್ಚಿನದೇನು ಇಲ್ಲಿ ಕಾಣುವುದಿಲ್ಲ. ವೇಷ-ಭೂಷಣಗಳ ಬಗ್ಗೆ ಬಹಳ ಹೆಚ್ಚಿನ ಗಮನವನ್ನೇ ಹರಿಸಲಾಗಿದೆ!!! ನನಗೆ ಆಶ್ಚರ್ಯ ಹುಟ್ಟಿಸಿದ್ದು, ಈ ದಿನಗಳಲ್ಲೂ ಮೈ ತುಂಬ ಉಡಲಿಲ್ಲದೆ, ಕೊಳೆತು ನಾರುವ ಚಿಂದಿಗೆ ಬಹಳ ಹತ್ತಿರವಾದ ಬಟ್ಟೆಗಳನ್ನು ತೊಡುವ ಜನರೇ ಹೆಚ್ಚಿರುವ ಈ ದೇಶದಲ್ಲಿ, ೧೫೦ ವರ್ಷಗಳ ಹಿಂದೆ, ಪಾಮರನಿಂದ ಬಲ್ಲಿದನ ವರೆಗೆ ಆ ದಿನಗಳಲ್ಲಿ ಅಷ್ಟು ಶುಭ್ರವಾಗಿರುತ್ತಿದ್ದವೇ ವಸ್ತ್ರಗಳು? ಊರಿನ ಮುಖ್ಯ ರಸ್ತೆಯ ಸೆಟ್ ಮಾತ್ರ ಚೆನ್ನಾಗಿದೆ. ಚಿತ್ರವನ್ನು ನೋಡಿ ಹೊರಬಂದ ನಂತರ ನನಗನಿಸಿದ್ದು, ಅಮೀರ್‍ ಹಿಂದೆ ಕೈತಪ್ಪಿದ ಆಸ್ಕರನ್ನು ಈಗ ದಕ್ಕಿಸಿಕೊಳ್ಳಲು ಮತ್ತೊಂದು ಚಿತ್ರ ಮಾಡಿದ್ದಾರೆಂದು!
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾನಂತು ಈ ಚಿತ್ರ ನೊಡೊ ಶ್ರಮ ಪಡಲಿಲ್ಲ್ಲ - ಆದರೆ trailorಗಳನ್ನ ನೋಡಿದಿನಿ.

ಯಾರೊ ಸ್ನೇಹಿತ joke ಮಾಡ್ತಿದ್ದ "ಏ, oscarಗೋಸ್ಕರ ಮಾಡಿದ್ ಪಿಚ್ಚರ್ ಅಂತೆ ಮಗ!" ಅಂತ ;)

ರೋಹಿತ್'ರವರು ಹೇಳಿದ ಉಡುಪುಗಳ ವಿಶಯಕ್ಕೆ ಬಂದರೆ - ನನಗೆ ದೇವದಾಸ್ ಚಿತ್ರ ನೆನಪಿಗೆ ಬಂತು - ಅದರಲ್ಲು ಹೀಗೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು.. trailerಗಳನ್ನ ನೋಡಿದರೆ ಹಾಗೇ ಅನ್ನಿಸತ್ತೆ. ಎಷ್ಟು ಕಲರ್ ಕಲರ್ ಆಗಿದೇ ಅಂದ್ರೆ ಒಳ್ಳೆ ಪಿಕ್‍ನಿಕ್‍ಗೆ ಹೋದ ಅನುಭವವಾಗತ್ತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ದಿನಗಳಲ್ಲೂ ಮೈ ತುಂಬ ಉಡಲಿಲ್ಲದೆ, ಕೊಳೆತು ನಾರುವ ಚಿಂದಿಗೆ ಬಹಳ ಹತ್ತಿರವಾದ ಬಟ್ಟೆಗಳನ್ನು ತೊಡುವ ಜನರೇ ಹೆಚ್ಚಿರುವ ಈ ದೇಶದಲ್ಲಿ, ೧೫೦ ವರ್ಷಗಳ ಹಿಂದೆ, ಪಾಮರನಿಂದ ಬಲ್ಲಿದನ ವರೆಗೆ ಆ ದಿನಗಳಲ್ಲಿ ಅಷ್ಟು ಶುಭ್ರವಾಗಿರುತ್ತಿದ್ದವೇ ವಸ್ತ್ರಗಳು?

ಒಳ್ಳೆಯ ಅಬ್ಸರ್ವೇಶನ್, ರೋಹಿತ್ :) ನೋಡಿದ್ರಾ, ಬಾಲಿವುಡ್‌ನವರು ಚಿತ್ರದ ಧೂಮ್ ಧಾಮ್ ಮಾಡಹೋಗಿ ಸತ್ಯಕ್ಕೆ ಎಷ್ಟು ದೂರವಾಗುತ್ತಾರೆ ಅಂತ?

ಪೀರಿಯಡ್ ಸಿನಿಮಾ ನೋಡಬೇಕೆಂದರೆ [kn:ಅಕಿರಾ ಕುರೋಸಾವಾ|ಅಕಿರಾ ಕುರೋಸಾವಾರವರ] ಚಿತ್ರ ನೋಡ್ಬೇಕು. ಅವರ ಯೊಜಿಂಬೊ, ರಾನ್, ಕಗೆಮುಶ ಎಲ್ಲವೂ ಕಲಾತ್ಮಕವಾಗಿಯೂ ನಂಬುವಂತೆಯೂ ಇವೆ.

--

"ಹೊಸ ಚಿಗುರು, ಹಳೆ ಬೇರು"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ ಎಂದು ಅಂತರಜಾಲದಲ್ಲಿ ಓದಿದೆ. ಮಂಗಲ ಪಾಂಡೆ ಹುಟ್ಟಿದ ಊರಿನಲ್ಲಂತೂ ಈ ಚಿತ್ರ ಬಿಡುಗಡೆಯಾಗಲಿಲ್ಲ. ಜನರ ಪ್ರತಿಭಟನೆ ಅಷ್ಟು ಜೋರಾಗಿತ್ತು. ಸಿಗೋಣ, -ಪವನಜ ----------- Think globally, Act locally
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.