"Don't Know" - ಆಯ್ಕೆ ಯಾಕಿರಬಾರದು ಚುನಾವಣೆಗಳಲ್ಲಿ?
ನಮಸ್ಕಾರ,
ನನಗೆ 18 ತುಂಬುತ್ತಲೆ, ಈ ವರ್ಷದಿಂದ ಚುನಾವಣೆಗಳಲ್ಲಿ ಪಾಲ್ಗೊಳ್ಳೊ "ಭಾಗ್ಯ" ಕೂಡಿ ಬಂದಿದೆ.. ಆದರೆ ಯಾರಿಗೆ ಮತ ನೀಡಲಿ?
ನನಗೆ ಗೊತ್ತಿರೊ ಹಾಗೆ ನಮ್ಮ areaದಲ್ಲಿ ಇರೋರೆಲ್ಲ wasteಗಳು - ಯಾರಿಗೆ ಹಾಕಿದ್ರು ಅದರಿಂದ ನಮಗೆ ಯಾರಿಗೂ ಏನು ಉಪಯೋಗ ಇಲ್ಲ ಅಂತನು ಚೆನಾಗ್ ಗೊತ್ತು!
ಇನ್ನು ಅದರ ಮೇಲಿರೊರೊ ಅಷ್ತೆ - ಯಾರೆ ಗೆದ್ದರೂ ಕನ್ನಡ, ಕರ್ನಾಟಕದ ಬಗ್ಗೆ ಯಾವುದೆ ಕಾಳಜಿ ಇರೊಲ್ಲ ಅವರಿಗೆ!
ಕರ್ನಾಟಕದ ಒಬ್ಬ ಪ್ರಜೆಯಾಗಿ ಚುನಾವಣೆಗಳಲ್ಲಿ ಪಾಲ್ಗೊಳ್ಳೊದು ನನ್ನ ಕರ್ತವ್ಯ.. ಹಾಗಂತ ಮತ ಚಲಾಯಿಸುವಾಗ ಹತ್ತಾರು partyಗಳಲ್ಲಿ ಒಂದಕ್ಕೆ ಹಾಕಲೇ ಬೇಕಾಗಿ ಬರುತ್ತದೆ... ನನಗೆ ಯಾರೂ ಇಷ್ಟವಿಲ್ಲದಿದ್ದರು ಯವನೊ-ಒಬ್ಬನಿಗೆ ಸುಮ್ಮನೆ ಹಾಕಬೇಕು. ಇದು ಯಾವ ನ್ಯಾಯ ಹೇಳಿ!
ಎಷ್ಟೊ ಜನ ಇದನ್ನೆ ಒಂದು ಕಾರಣವಾಗಿ ಇಟ್ಟುಕೊಂಡು ಮತಾನೆ ಚಲಾಯಿಸೊಲ್ಲ.
ಇದರಿಂದ ತೊಂದರೆಗಳು ಆಗಬಹುದು - ಉದಾಹರಣೆಗೆ, ಈ "Don't Say / Can't Say" ಗೆ majority ಬಂದುಬಿಟ್ಟರೆ!
ಅವಾಗಲಾದರು ಗೊತ್ತಾಗುತ್ತೆ ನಮ್ಮ ರಾಜಕಾರಣಿಗಳಿಗೆ, ಜನ ಅವರಿಂದ ಎಷ್ಟು ಬೇಸತ್ತು ಹೋಗಿದರೆ ಅಂತ.
ಏನಂತೀರ?
Comments
ಗೊತ್ತಿಲ್ಲ ಆಯ್ಕೆ - ನನ್ನ ಅನಿಸಿಕೆ
ಈ ರೀತಿ ಪತ್ರ ವನ್ನು ಬರೆದು PMಗೆ ಹಾಗು CEC/President ge mail ಮಾಡಿ
In reply to ಈ ರೀತಿ ಪತ್ರ ವನ್ನು ಬರೆದು PMಗೆ ಹಾಗು CEC/President ge mail ಮಾಡಿ by muralihr
ವರುಷ ಹಳೆಯ ಬ್ಲಾಗಿಗೆ ಇಂದು ಉತ್ತರ!