"Don't Know" - ಆಯ್ಕೆ ಯಾಕಿರಬಾರದು ಚುನಾವಣೆಗಳಲ್ಲಿ?

"Don't Know" - ಆಯ್ಕೆ ಯಾಕಿರಬಾರದು ಚುನಾವಣೆಗಳಲ್ಲಿ?

Comments

ಬರಹ

ನಮಸ್ಕಾರ,

ನನಗೆ 18 ತುಂಬುತ್ತಲೆ, ಈ ವರ್ಷದಿಂದ ಚುನಾವಣೆಗಳಲ್ಲಿ ಪಾಲ್ಗೊಳ್ಳೊ "ಭಾಗ್ಯ" ಕೂಡಿ ಬಂದಿದೆ.. ಆದರೆ ಯಾರಿಗೆ ಮತ ನೀಡಲಿ?
ನನಗೆ ಗೊತ್ತಿರೊ ಹಾಗೆ ನಮ್ಮ areaದಲ್ಲಿ ಇರೋರೆಲ್ಲ wasteಗಳು - ಯಾರಿಗೆ ಹಾಕಿದ್ರು ಅದರಿಂದ ನಮಗೆ ಯಾರಿಗೂ ಏನು ಉಪಯೋಗ ಇಲ್ಲ ಅಂತನು ಚೆನಾಗ್ ಗೊತ್ತು!
ಇನ್ನು ಅದರ ಮೇಲಿರೊರೊ ಅಷ್ತೆ - ಯಾರೆ ಗೆದ್ದರೂ ಕನ್ನಡ, ಕರ್ನಾಟಕದ ಬಗ್ಗೆ ಯಾವುದೆ ಕಾಳಜಿ ಇರೊಲ್ಲ ಅವರಿಗೆ!

ಕರ್ನಾಟಕದ ಒಬ್ಬ ಪ್ರಜೆಯಾಗಿ ಚುನಾವಣೆಗಳಲ್ಲಿ ಪಾಲ್ಗೊಳ್ಳೊದು ನನ್ನ ಕರ್ತವ್ಯ.. ಹಾಗಂತ ಮತ ಚಲಾಯಿಸುವಾಗ ಹತ್ತಾರು partyಗಳಲ್ಲಿ ಒಂದಕ್ಕೆ ಹಾಕಲೇ ಬೇಕಾಗಿ ಬರುತ್ತದೆ... ನನಗೆ ಯಾರೂ ಇಷ್ಟವಿಲ್ಲದಿದ್ದರು ಯವನೊ-ಒಬ್ಬನಿಗೆ ಸುಮ್ಮನೆ ಹಾಕಬೇಕು. ಇದು ಯಾವ ನ್ಯಾಯ ಹೇಳಿ!
ಎಷ್ಟೊ ಜನ ಇದನ್ನೆ ಒಂದು ಕಾರಣವಾಗಿ ಇಟ್ಟುಕೊಂಡು ಮತಾನೆ ಚಲಾಯಿಸೊಲ್ಲ.

ಇದನ್ನ ಬಗೆ ಹರಿಸಲಿಕ್ಕೆ, ಕೊನೆಯಲ್ಲಿ ಒಂದು ಆಯ್ಕೆ ಇರಬೇಕು "Don't Know / Can't Say" ಅಂತ... ಒಂದು ವೇಳೆ ಯಾರೂ ಹಿಡಿಸಲಿಲ್ಲ ಅಂದ್ರೆ ಇದನ್ನ ಆಯ್ದು ಬರೊದು.

ಇದರಿಂದ ತೊಂದರೆಗಳು ಆಗಬಹುದು - ಉದಾಹರಣೆಗೆ, ಈ "Don't Say / Can't Say" ಗೆ majority ಬಂದುಬಿಟ್ಟರೆ!
ಅವಾಗಲಾದರು ಗೊತ್ತಾಗುತ್ತೆ ನಮ್ಮ ರಾಜಕಾರಣಿಗಳಿಗೆ, ಜನ ಅವರಿಂದ ಎಷ್ಟು ಬೇಸತ್ತು ಹೋಗಿದರೆ ಅಂತ.

ಏನಂತೀರ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet