ಹೆಂಗ್ಸರಿಗ್ಯಾಕೆ ಹೊರಗಡೆ ವಿಷಯ?
ಮೊನ್ನೆ ನಮ್ಮ ಮನೆಯ ಬಾಡಿಗೆಯ ಕರಾರು ಪತ್ರವನ್ನು(ರೆಂಟಲ್ ಅಗ್ರಿಮೆಂಟ್) ನವೀಕರಿಸಿದ ಮನೆಯ ಓನರ್ ನಮ್ಮವರ ಬಳಿ ಸಹಿ ಹಾಕಲು ಕೇಳಿದರಂತೆ
ಅದಕ್ಕೆ ಇವರು ಅವಳನ್ನು ಕೇಳದೆ ಸಹಿ ಹಾಕುವುದಿಲ್ಲ ಎಂದರಂತೆ.
ಆದಕ್ಕೆ ಆ ಆಸಾಮಿ "ಅಯ್ಯೋ ಹೆಂಗಸರನ್ನೆಲ್ಲಾ ಪರ್ಮಿಶನ್ ಕೇಳ್ತಿದ್ರೆ ಅವರಿಗೆ ದೊಡ್ಡ ಕೋಡು ಬಂದು ಬಿಡುತ್ತೆ ಸುಮ್ಮನೆ ಸೈನ್ ಮಾಡಿ " ಎಂದರಂತೆ
ಇದನ್ನ ಕೇಳಿದ ನಾನು ಕೆಂಡಾಮಂಡಲಳಾಗಿ "ಏನ್ ತಾತ ಹೀಗ್ಯಾಕೆ ಕೇಳಿದ್ರಿ " ಅಂದಿದ್ದಕ್ಕೆ
ಮನೆ ಹೆಂಗಸ್ರು ಮನೆ ಒಳಗೆ ಇದ್ರೆ ಚೆನ್ನ . ಹೊರಗಡೆ ವಿಶ್ಯ ಅವರಿಗ್ಯಾಕೆ "ಎಂದರು
"ಅದೆಲ್ಲಾ ನಿಮ್ಮ ಕಾಲಕ್ಕೆ ತಾತ . ಈಗ ನಾವು ಹೊರಗಡೆ ದುಡೀತೀವಿ . ಸಂಪಾದಿಸ್ತೀವಿ . ನಿಮ್ಮಗಳಿಗಿಂತ ಹೆಚ್ಚಾಗಿ ಮಾತಾಡ್ತೀವಿ" ಎಂದೆ ನಾನು
"ನಿನ್ನ ಗಂಡ ನಿಂಗೆ ಸದರ ಕೊಟ್ಟುಬಿಟ್ಟವನೆ . ಅದಕ್ಕೆ ಹೀಂಗ್ ಮಾತಾಡ್ತೀಯಾ . ನಮ್ಮನೆ ಹೆಂಗಸರು ನೋಡು ನನ್ನ ಸೊಸೆ ಆಗ್ಲಿ ಹೆಂಡತಿ ಆಗ್ಲಿ , ಮೊಮ್ಮಗಳಾಗ್ಲಿ ಯಾರೂ ನನ್ನ ಕೇಳದೆ ಉಸಿರಾಡೋ ಹಂಗಿಲ್ಲ" ಎಂದು ಅಹಂಕಾರದಲ್ಲಿ ನುಡಿದರು.
ನಾನೂ ಬಿಡಲಿಲ್ಲ ಅವರನ್ನು ಕರೆಸ್ತೀನಿ ಇವರನ್ನು ಕರೆಸ್ತೀನಿ ಅಂತ ಬೆದರಿಕೆ ಹಾಕಿದರೂ ಆತ ಸೊಪ್ಪುಹಾಕಲಿಲ್ಲ . ಆತನ ಒಂದೇ ನಂಬಿಕೆ ಹೆಂಗಸರಿಗೆ ಸ್ವಾತಂತ್ರ ಕೊಡಬಾರದು
ಅಲ್ಲಾ ಇನ್ನೂ ಕಾಲ ಬದಲಾಗಿಲ್ಲವೇ?
ನಾವೆಲ್ಲಾ ಇಲ್ಲಿ ಸ್ತ್ರೀ ಸ್ವಾತಂತ್ರ ಅದೂ ಇದೂ ಎಂದು ಹಾರಾಡುತ್ತಿದ್ದೇವೆ . ಈ ಕುಟುಂಬಗಳಲ್ಲಿ ಇನ್ನೂ ಹೆಣ್ಣನ್ನು ತಮಗಿಂತೆ ಕೆಳಗೆಂಬಂತೆ ನೋಡುತ್ತಿದ್ದಾರಲ್ಲ.
ಅಥವ ಅವಿಭಕ್ತ ಕುಟುಂಬಗಳ ಪರಿಸ್ಠಿತಿಯೇ ಇಷ್ಟಾ?
ನೀವೇನಂತೀರಾ?
Comments
ಉ: ಹೆಂಗ್ಸರಿಗ್ಯಾಕೆ ಹೊರಗಡೆ ವಿಷಯ?
ಉ: ಹೆಂಗ್ಸರಿಗ್ಯಾಕೆ ಹೊರಗಡೆ ವಿಷಯ?
ಉ: ಹೆಂಗ್ಸರಿಗ್ಯಾಕೆ ಹೊರಗಡೆ ವಿಷಯ?
ಉ: ಹೆಂಗ್ಸರಿಗ್ಯಾಕೆ ಹೊರಗಡೆ ವಿಷಯ?
In reply to ಉ: ಹೆಂಗ್ಸರಿಗ್ಯಾಕೆ ಹೊರಗಡೆ ವಿಷಯ? by vikashegde
ಉ: ಹೆಂಗ್ಸರಿಗ್ಯಾಕೆ ಹೊರಗಡೆ ವಿಷಯ?
In reply to ಉ: ಹೆಂಗ್ಸರಿಗ್ಯಾಕೆ ಹೊರಗಡೆ ವಿಷಯ? by vikashegde
ಉ: ಹೆಂಗ್ಸರಿಗ್ಯಾಕೆ ಹೊರಗಡೆ ವಿಷಯ?
ಉ: ಹೆಂಗ್ಸರಿಗ್ಯಾಕೆ ಹೊರಗಡೆ ವಿಷಯ?
ಉ: ಹೆಂಗ್ಸರಿಗ್ಯಾಕೆ ಹೊರಗಡೆ ವಿಷಯ?
ಉ: ಹೆಂಗ್ಸರಿಗ್ಯಾಕೆ ಹೊರಗಡೆ ವಿಷಯ?
In reply to ಉ: ಹೆಂಗ್ಸರಿಗ್ಯಾಕೆ ಹೊರಗಡೆ ವಿಷಯ? by kadakolla05
ಉ: ಹೆಂಗ್ಸರಿಗ್ಯಾಕೆ ಹೊರಗಡೆ ವಿಷಯ?
In reply to ಉ: ಹೆಂಗ್ಸರಿಗ್ಯಾಕೆ ಹೊರಗಡೆ ವಿಷಯ? by roopablrao
ಉ: ಹೆಂಗ್ಸರಿಗ್ಯಾಕೆ ಹೊರಗಡೆ ವಿಷಯ?