ಹೆಂಗ್ಸರಿಗ್ಯಾಕೆ ಹೊರಗಡೆ ವಿಷಯ?

ಹೆಂಗ್ಸರಿಗ್ಯಾಕೆ ಹೊರಗಡೆ ವಿಷಯ?

Comments

ಬರಹ

ಮೊನ್ನೆ ನಮ್ಮ ಮನೆಯ ಬಾಡಿಗೆಯ ಕರಾರು ಪತ್ರವನ್ನು(ರೆಂಟಲ್ ಅಗ್ರಿಮೆಂಟ್) ನವೀಕರಿಸಿದ ಮನೆಯ ಓನರ್ ನಮ್ಮವರ ಬಳಿ ಸಹಿ ಹಾಕಲು ಕೇಳಿದರಂತೆ
ಅದಕ್ಕೆ ಇವರು ಅವಳನ್ನು ಕೇಳದೆ ಸಹಿ ಹಾಕುವುದಿಲ್ಲ ಎಂದರಂತೆ.
ಆದಕ್ಕೆ ಆ ಆಸಾಮಿ "ಅಯ್ಯೋ ಹೆಂಗಸರನ್ನೆಲ್ಲಾ ಪರ್ಮಿಶನ್ ಕೇಳ್ತಿದ್ರೆ ಅವರಿಗೆ ದೊಡ್ಡ ಕೋಡು ಬಂದು ಬಿಡುತ್ತೆ ಸುಮ್ಮನೆ ಸೈನ್ ಮಾಡಿ " ಎಂದರಂತೆ
ಇದನ್ನ ಕೇಳಿದ ನಾನು ಕೆಂಡಾಮಂಡಲಳಾಗಿ "ಏನ್ ತಾತ ಹೀಗ್ಯಾಕೆ ಕೇಳಿದ್ರಿ " ಅಂದಿದ್ದಕ್ಕೆ
ಮನೆ ಹೆಂಗಸ್ರು ಮನೆ ಒಳಗೆ ಇದ್ರೆ ಚೆನ್ನ . ಹೊರಗಡೆ ವಿಶ್ಯ ಅವರಿಗ್ಯಾಕೆ "ಎಂದರು
"ಅದೆಲ್ಲಾ ನಿಮ್ಮ ಕಾಲಕ್ಕೆ ತಾತ . ಈಗ ನಾವು ಹೊರಗಡೆ ದುಡೀತೀವಿ . ಸಂಪಾದಿಸ್ತೀವಿ . ನಿಮ್ಮಗಳಿಗಿಂತ ಹೆಚ್ಚಾಗಿ ಮಾತಾಡ್ತೀವಿ" ಎಂದೆ ನಾನು
"ನಿನ್ನ ಗಂಡ ನಿಂಗೆ ಸದರ ಕೊಟ್ಟುಬಿಟ್ಟವನೆ . ಅದಕ್ಕೆ ಹೀಂಗ್ ಮಾತಾಡ್ತೀಯಾ . ನಮ್ಮನೆ ಹೆಂಗಸರು ನೋಡು ನನ್ನ ಸೊಸೆ ಆಗ್ಲಿ ಹೆಂಡತಿ ಆಗ್ಲಿ , ಮೊಮ್ಮಗಳಾಗ್ಲಿ ಯಾರೂ ನನ್ನ ಕೇಳದೆ ಉಸಿರಾಡೋ ಹಂಗಿಲ್ಲ" ಎಂದು ಅಹಂಕಾರದಲ್ಲಿ ನುಡಿದರು.
ನಾನೂ ಬಿಡಲಿಲ್ಲ ಅವರನ್ನು ಕರೆಸ್ತೀನಿ ಇವರನ್ನು ಕರೆಸ್ತೀನಿ ಅಂತ ಬೆದರಿಕೆ ಹಾಕಿದರೂ ಆತ ಸೊಪ್ಪುಹಾಕಲಿಲ್ಲ . ಆತನ ಒಂದೇ ನಂಬಿಕೆ ಹೆಂಗಸರಿಗೆ ಸ್ವಾತಂತ್ರ ಕೊಡಬಾರದು

ಅಲ್ಲಾ ಇನ್ನೂ ಕಾಲ ಬದಲಾಗಿಲ್ಲವೇ?
ನಾವೆಲ್ಲಾ ಇಲ್ಲಿ ಸ್ತ್ರೀ ಸ್ವಾತಂತ್ರ ಅದೂ ಇದೂ ಎಂದು ಹಾರಾಡುತ್ತಿದ್ದೇವೆ . ಈ ಕುಟುಂಬಗಳಲ್ಲಿ ಇನ್ನೂ ಹೆಣ್ಣನ್ನು ತಮಗಿಂತೆ ಕೆಳಗೆಂಬಂತೆ ನೋಡುತ್ತಿದ್ದಾರಲ್ಲ.

ಅಥವ ಅವಿಭಕ್ತ ಕುಟುಂಬಗಳ ಪರಿಸ್ಠಿತಿಯೇ ಇಷ್ಟಾ?

ನೀವೇನಂತೀರಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet