ಓ--ಮನಸೇ.....ಕವನ
ಓ...ಮನಸೇ....
ನೀನಿರುವುದು ಕಣ ಕಣಗಳಲಿ
ಕಾಣದಿರುವುದು ಕಣ್ಣು ಕಣ್ಣುಗಳಲಿ
ಕರೆದು ಜಯಿಸುವರುಂಟು ನಿನ್ನ,
ಕರೆಯದೇ-ಕೇಳದೇ ನೀ ಬರುವೆ,
ಗೆಲುವಿನ-ಒಲವಿನ ಒಡನಾಟಕೆ.
ಕೈಕೊಡುವೆ ಆಗಾಗ
ಅಂಗಲಾಚಿದಾ...ಗ
ಅಂತೆಯೇ ಅರಿತಾ...ಗ
ಆದೆಯಾ? ಅಮೃತಮಯ!!!
ಬರೀ ವಿಸ್ಮಯ!!!
ನಿನ್ನ ಆಕಾರ, ವಿಕಾರ, ವಿನಿಮಯ
ಆಳುವೆ ನಮ್ಮೆಲ್ಲರ ಅಂತರಂಗ ಕಾಯ,
ಆಚಾರ, ವಿಚಾರ, ಗಮನೀಯ.
ಚಲಿಸುವೇ ನೀ
ಚಂಚಲದಿಂದ... ಚೈತನ್ಯದವರೆಗೆ
ಆದರೂ ಆಗಿಹೆ ನೀ
ಶಾಶ್ವತ-ಅನನ್ಯ.
ಆತ್ಮವಷ್ಟೇ ಅಲ್ಲ ನೀನು
ಪರಮಾತ್ಮನೂ ಹೌದು ನೀನು
ಮೋಹ, ನೇಹ, ಕಲಹ ವಲ್ಲದ ನೀನು
ದಾಸೋಹಂ ಎಂದರೆ ನಾನು
ಕೇಳುವೆಯೇನೋ???????????
Rating
Comments
ಉ: ಓ--ಮನಸೇ.....ಕವನ
In reply to ಉ: ಓ--ಮನಸೇ.....ಕವನ by makrumanju
ಉ: ಓ--ಮನಸೇ.....ಕವನ
ಉ: ಓ--ಮನಸೇ.....ಕವನ
In reply to ಉ: ಓ--ಮನಸೇ.....ಕವನ by Yashwanth
ಉ: ಓ--ಮನಸೇ.....ಕವನ
In reply to ಉ: ಓ--ಮನಸೇ.....ಕವನ by rasikathe
ಉ: ಓ--ಮನಸೇ.....ಕವನ
In reply to ಉ: ಓ--ಮನಸೇ.....ಕವನ by manjunath s reddy
ಉ: ಓ--ಮನಸೇ.....ಕವನ