ನನ್ನ ಚೆಲುವೆ

ನನ್ನ ಚೆಲುವೆ

ನನ್ನ ಚೆಲುವೆ, ನನ್ನ ಒಲವೆ
ಆ ನಿನ್ನ ನಗುವೆ ನಿನ್ನ ವಡವೆ
ನನ್ನ ಮನಸೇ, ನನ್ನ ಕನಸೇ
ಯಾವ ಮನಸಿಗೆ ಕಾದಿರುವೆ

ನನ್ನ ಸುಮವೆ, ಅತಿಕ್ರಮವೆ
ಆ ನಿನ್ನ ರೂಪವೇ ನನ್ನ ಪ್ರತಿರೂಪವೇ
ನನ್ನ ಉಸಿರೆ, ನಿನ್ನ ಹೆಸರೇ
ಆ ನಿನ್ನ ಹೆಸರ ಈ ನನ್ನ ಹೃದಯದಿ ಕೊರೆದಿರುವೆ

ನನ್ನ ಕಾವ್ಯವೇ, ಶೃಂಗಾರವೇ
ಆ ನಿನ್ನ ಮಾತೇ ಸುಪ್ರಭಾತವೆ
ನನ್ನ ರಾಗವೇ, ಅನುರಾಗವೇ
ಆ ನಿನ್ನ ಗೆಜ್ಜೆ ಸದ್ದು ನನ್ನ ಗಾನವೇ

ನನ್ನ ಜೀವವೇ, ಮರುಜೀವವೇ
ಆ ನಿನ್ನ ಚೆಲುವೆಗೆ, ಈ ನಿನ್ನ ಪ್ರೀತಿ ತಿಳಿದಿದೆಯೇ
ನನ್ನ ಪ್ರೀತಿಯೇ, ನಿನ್ನ ರೀತಿಯೇ
ಯಾರಿಗು ತಿಳಿಯದು ನನ್ನ ಹಾಗೆಯೇ

Rating
No votes yet

Comments