ಈ ಮಾತುಗಳಿಗೆ ಕನ್ನಡದಲ್ಲಿ ಏನನ್ನುತ್ತಾರೆ

0
ಮುಂದಿನ ಮಾತುಗಳನ್ನು ಅಚ್ಚ ಕನ್ನಡದಲ್ಲಿ ಬರೆದಿರುವೆ. ಇಲ್ಲಿ ಕೇಳಿರುವ ಮಾತುಗಳು ಕನ್ನಡದ ಮಾತುಗಳಲ್ಲ. ಇವಕ್ಕೆ ನಮ್ಮ ನುಡಿಯಲ್ಲಿ ಏನನ್ನುತ್ತಾರೆ ಎಂದು ಅಚ್ಚಕನ್ನಡ ಒಲವಿಗರು ಹೇಳಿದರೆ ಚೆನ್ನಾಗಿರುತ್ತದೆ. ಕನ್ನಡದವಲ್ಲದ ಹತ್ತು ಮಾತುಗಳು: ಕೋಪ; ಮುಖ; ಸ್ನೇಹ; ಸಂಪದ; ದಿನ; ಗೃಹಪ್ರವೇಶ; ಸ್ವಾಗತ; ಲೇಖನ; ಪುಸ್ತಕ; ಶಬ್ದ. ನಾವು ಬಳಸುವ ಮಾತುಗಳು ಬೇರೆ ಬೇರೆ ನುಡಿಗಳಿಗೆ ಸೇರಿರಬಹುದು, ಆದರೆ ಅವನ್ನು ನಮ್ಮದೇ ಮಾಡಿಕೊಂಡಿರುತ್ತೇವೆ. ಬಳಕೆಯ ಬಗೆ ಕನ್ನಡದ್ದೇ ಆಗಿರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳೋಣ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಾರ್ ಇವುಗಳು ಕನ್ನಡ ಪದಗಳಲ್ವೇ? ನನಗೆ ಗೊತ್ತೇ ಇರ್ಲಿಲ್ಲ ಮುಖವೇನೋ ಸಂಸ್ಕೃತದ ಮೂಲ. ಕನ್ನಡದಲ್ಲಿ ಮೊಗ ಅನ್ನುತ್ತಾರಲ್ವಾ? ಕೋಪಕ್ಕೆ ಕನ್ನಡದಲ್ಲಿ ಸಿಡುಕು ಅನ್ನಬಹುದಾ? ಸ್ನೇಹ - ಗೆಳೆತನ ಸಂಪದ? ದಿನ? ಗೃಹಪ್ರವೇಶ - ಮನೆ ಒಳಗೆ ಹೋಗು (ಸರಿ ಹೊಂದುವುದಿಲ್ಲ) ಸ್ವಾಗತ - ಬರಮಾಡಿಕೋ ಲೇಖನ - ಬರವಣಿಗೆ ಪುಸ್ತಕ - ಹೊತ್ತಿಗೆ ಶಬ್ದ - ನುಡಿ ಕನ್ನಡದ ಮರೆತಿರುವ ಪದಗಳನ್ನು ನೆನಪಿಸಿಕೊಳ್ಳಲು ಒಳ್ಳೆಯ ಪರೀಕ್ಷೆ. ತವಿಶ್ರೀನಿವಾಸ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಪಕ್ಕೆ ಹತ್ತಿರದ್ದು ಸಿಟ್ಟು. ಸಿಟ್ಟಿನಷ್ಟು ಚೂಪಾಗಿಲ್ಲದ್ದು ಸಿಡುಕು! ಸಂಪದಕ್ಕೆ ಹತ್ತಿರದ್ದು ತದ್ಭವ, ಐಸಿರಿ ದಿನ ಕ್ಕೆ ಕನ್ನಡ ಪದ ನನಗೂ ಗೊತ್ತಿಲ್ಲ ಗೃಹಪ್ರವೇಶ ಕ್ಕೆ ಕನ್ನಡ ಕಷ್ಟ. ಒಕ್ಕಲಾಗು ಅನ್ನುವ ಹಳೆಯ ಬಳಕೆ ಇತ್ತು ಇರಲಿ. ಮಂಗಳವಾರಕ್ಕೆ ಹಳಗನ್ನಡ ಪದ ಇತ್ತು. ಯಾರಾದರೂ ನೆನಪಿಸಿಕೊಂಡರೆ ಚೆನ್ನಾಗಿರುತ್ತೆ. ಇನ್ನೂ ಕೆಲವು ಕನ್ನಡದ್ದಲ್ಲದ ಮಾತುಗಳನ್ನು ನೋಡಿ: ಕಷ್ಟ ಸ್ವಲ್ಪ ಅಲ್ಪ ವಾರ ಪೂಜೆ ಚಂದ್ರ ಸೂರ್ಯ ನದಿ ಇವಕ್ಕೂ ಕನ್ನಡ ಹುಡುಕೋಣವೇ! ನಾಗಭೂಷಣ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಗಳವಾರಕ್ಕೆ ಹಳ್ಳಿಗಳಲ್ಲಿ ಬೇಸ್ತವಾರ ಅಂತಾರಲ್ವೇ ಕಷ್ಟ - ಕಟು ಸ್ವಲ್ಪ - ಚೂರು ಅಲ್ಫ - ತುಣುಕು ವಾರ - ಪೂಜೆ - ಚಂದ್ರ - ಸೂರ್ಯ - ನೇಸರ ನದಿ - ತೊರೆ, ಹರಿವು ತವಿಶ್ರೀನಿವಾಸ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೇಸ್ತವಾರ ಅಂದ್ರೆ ಗುರುವಾರ ಅಂತ ನಾನು ಕೇಳಿದೀನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾನುವಾರಕ್ಕೆ.. ನಮ್ಮಲ್ಲಿ "ಐತವಾರ" ಅಂತನೂ ಕರೀತಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

veena.
ನೀವು ಹೇಳಿದ್ದು ಸರಿ. ನನಗೆ ಇನ್ನೊಂದು ಗೊಂದಲ ಇದೆ. ಮಂಗಳವಾರ (ಮಂಗಳ =ಶುಭ), ಹೆಸರಿನಲ್ಲೆ ಮಂಗಳವನ್ನಿಟ್ಟುಕೊಂಡು, ಆ ದಿನ ಯಾವ ಒಳ್ಳೆಯ ಕೆಲಸವನ್ನೂ ಮಾಡುವುದಿಲ್ಲ ಏಕೆ ?
ಕೂದಲನ್ನು, ಉಗುರನ್ನು ಕತ್ತರಿಸುವ ಹಾಗಿಲ್ಲ, (ಇದೆನೂ ಅಂತಹ ಒಳ್ಳೆಯ ಕೆಲಸವಲ್ಲ ಬಿಡಿ) ಹೊಸ ಬಟ್ಟೆ ತೊಡುವ ಹಾಗಿಲ್ಲ, ಇನ್ನೂ ಹೀಗೇ ಏನೇನೋ, ಆದರೆ ಮಂಗಳ ಗೌರಿ ಹಬ್ಬವನ್ನಂತೂ ಮಾಡುತ್ತರೆ.
ಈ ವಿಷಯ ಯಾವಾಗಲೂ ನನ್ನನ್ನು ಕಾಡುತ್ತಿರುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಗಳವಾರ ನಮ್ಮಲ್ಲಿ ಕೌರದ ಅಂಗಡಿಗೆ ವಾರದ ರಜೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊಗ, ಹೊತ್ತಿಗೆ, ಐಸಿರಿ ಇವೆಲ್ಲವು ಸಂಸ್ಕೃತಜನ್ಯ ತದ್ಭವಗಳು. ನಾವು ಇಂದು ಧಾರಾಳವಾಗಿ ಬಳಸುವ ತತ್ಸಮ ತದ್ಭವಗಳೆಲ್ಲವಕ್ಕೂ ಅಚ್ಚಗನ್ನಡ ಪದಗಳು ಇರಲೇ ಬೇಕಾಗಿಲ್ಲ. ಸಂಸ್ಕೃತಾಗಮನದ ಪೂರ್ವದಲ್ಲಿದ್ದ ಕನ್ನಡಿಗ/ದ್ರಾವಿಡರಿಗೆ ಯಾವುದರ ಪರಿಕಲ್ಪನೆಯೇ ಇರಲಿಲ್ಲವೊ ಅವುಗಳಿಗೆ ಕನ್ನಡ/ದ್ರಾವಿಡ ಪದಗಳು ಹುಟ್ಟಿರುವುದೆ ಇಲ್ಲ. ದ್ರಾವಿಡರಲ್ಲಿ ವಾರದ ಕಲ್ಪನೆ ಪ್ರಾಯಶಃ ಇರಲಿಲ್ಲ; ಸಾವಿರಕ್ಕೆ ಮೇಲ್ಪಟ್ಟ ಸಂಖ್ಯೆಗಳಿಗೆ ಹೆಸರುಗಳಿರಲಿಲ್ಲ, ಹೀಗೆ. "ಪುಸ್ತಕ"ಕ್ಕೆ ನೇರ ಸಂವಾದಿಯಾದ ಯಾವುದೆ ಕನ್ನಡಪದ ಕಾಣಸಿಗದಿದ್ದರೂ, ನಮ್ಮ ಪುಸ್ತಕಗಳು ಮೂಲತಃ ಓಲೆ ಕಟ್ಟುಗಳೇ ಆದ್ದರಿಂದ "ಓಲೆ ಕಟ್ಟು" ಎನ್ನುವುದನ್ನೆ ಪುಸ್ತಕದ ಕನ್ನಡ ರೂಪ ಎನ್ನಬಹುದೇನೊ. ವೆಂ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

< ಸಂಸ್ಕೃತಾಗಮನದ ಪೂರ್ವದಲ್ಲಿದ್ದ ಕನ್ನಡಿಗ/ದ್ರಾವಿಡರಿಗೆ ಯಾವುದರ ಪರಿಕಲ್ಪನೆಯೇ ಇರಲಿಲ್ಲವೊ ಅವುಗಳಿಗೆ ಕನ್ನಡ/ದ್ರಾವಿಡ ಪದಗಳು ಹುಟ್ಟಿರುವುದೆ ಇಲ್ಲ. >

ಹೌದು. ಈಗಿನ ಕಂಪ್ಯುಟರ್ ನ ಕಲ್ಪನೆ ಇಲ್ಲಿ ಬೆಳೆದುದಲ್ಲ, ಹಾಗಾಗಿ ಅದಕ್ಕೆ ಕನ್ನಡ ಒರೆ ಇಲ್ಲ. ಆದರೆ ಅದು ಮಾಡುವ ಕೆಲಸದ ನೆಲೆಯ ಮೇಲೆ, ಕನ್ನಡದ್ದೇ ಒರೆಯನ್ನು ಕಂಡುಕೊಳ್ಳಲಾದೀತು. ಆದರೆ ಎಲ್ಲ ಕನ್ನಡಿಗರೂ ಒಟ್ಟಾಗಿ ಅದನ್ನೇ ಬಳಸುವ ಮನಸ್ಸು ಮಾಡಬೇಕಾಗುತ್ತೆ.

ಕಂಪ್ಯುಟರ್ ಗೆ ನಾವು ಕೆಲವರು ಕಲೆತು ಕಂಡುಕೊಂಡ ಅಚ್ಚಕನ್ನಡ ಒರೆ, "ಎಣಿಸಿಗೆ", ಆದರೆ ಎಲ್ಲರಲ್ಲೂ ಒಮ್ಮತ ಮೂಡಬೇಕು, ಆದರೆ ಹೊರಗಿನ ಒರೆಯನ್ನು ಇದ್ದಕ್ಕಿದ್ದಂತೆ ಬಳಸಬೇಕೆನ್ನುವವರೇ ಹೆಚ್ಚು.

ಹೀಗಾದರೆ ನುಡಿ ಬೆಳೆದೀತು ಹೇಗೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಪ - ಮುಳಿಸು, ಮುನಿಸು; ಕ್ರಿಯಾಪದವಾಗಿ ಮುನಿ, ಮುಳಿ ಮುಖ - ಮೋರೆ ಸ್ನೇಹ - ಕೆಳೆತನ ಲೇಖನ - ಬರಹ ಚಂದ್ರ - ತಿಂಗಳು ಸ್ವಲ್ಪ - ಕೊಂಚ ಸ್ವಾಗತ - ಎದುರುಗೊಳ್ಳುವುದು (-ತಿಸು, -ಗೊಳ್ಳು)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.