ಈ ಮಾತುಗಳಿಗೆ ಕನ್ನಡದಲ್ಲಿ ಏನನ್ನುತ್ತಾರೆ

ಈ ಮಾತುಗಳಿಗೆ ಕನ್ನಡದಲ್ಲಿ ಏನನ್ನುತ್ತಾರೆ

ಮುಂದಿನ ಮಾತುಗಳನ್ನು ಅಚ್ಚ ಕನ್ನಡದಲ್ಲಿ ಬರೆದಿರುವೆ. ಇಲ್ಲಿ ಕೇಳಿರುವ ಮಾತುಗಳು ಕನ್ನಡದ ಮಾತುಗಳಲ್ಲ. ಇವಕ್ಕೆ ನಮ್ಮ ನುಡಿಯಲ್ಲಿ ಏನನ್ನುತ್ತಾರೆ ಎಂದು ಅಚ್ಚಕನ್ನಡ ಒಲವಿಗರು ಹೇಳಿದರೆ ಚೆನ್ನಾಗಿರುತ್ತದೆ. ಕನ್ನಡದವಲ್ಲದ ಹತ್ತು ಮಾತುಗಳು: ಕೋಪ; ಮುಖ; ಸ್ನೇಹ; ಸಂಪದ; ದಿನ; ಗೃಹಪ್ರವೇಶ; ಸ್ವಾಗತ; ಲೇಖನ; ಪುಸ್ತಕ; ಶಬ್ದ. ನಾವು ಬಳಸುವ ಮಾತುಗಳು ಬೇರೆ ಬೇರೆ ನುಡಿಗಳಿಗೆ ಸೇರಿರಬಹುದು, ಆದರೆ ಅವನ್ನು ನಮ್ಮದೇ ಮಾಡಿಕೊಂಡಿರುತ್ತೇವೆ. ಬಳಕೆಯ ಬಗೆ ಕನ್ನಡದ್ದೇ ಆಗಿರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳೋಣ.
Rating
No votes yet

Comments