ಮರೆತುಹೋಗಿದ್ದ ಅರ್ಥ್ ಅವರ್‍.

ಮರೆತುಹೋಗಿದ್ದ ಅರ್ಥ್ ಅವರ್‍.

ಮರೆತುಹೋಗಿದ್ದ ಅರ್ಥ್ ಅವರ್‍.

ಇಂದು ಬೆಳಿಗ್ಗೆ ಗೆಳೆಯ ಆನಂದ ಫೋನ್ ಮಾಡಿದ್ದ. ಹೊಸದಾಗಿ ಮನೆ ಕಟ್ಟಿಸಿದ್ದ. ಗೃಹಪ್ರವೇಶಕ್ಕೆ ಹೋಗಿರಲಿಲ್ಲ. ಇಂದು ಬಿಡುವಿದ್ದ ಕಾರಣ ಅವನ ಮನೆಗೆ ಬರುತ್ತೇನೆಂದು ಹೇಳಿದೆ. ಇಂದು ಮಧ್ಯಾಹ್ನ ಊಟ ಮುಗಿಸಿ ಗೆಳೆಯ ಆನಂದನನ್ನು ನೋಡಲು ಕೆಂಗೇರಿಗೆ ಹೋಗಿದ್ದೆ. ಬಹಳ ದಿನಗಳ ಬಳಿಕ ಭೇಟಿ ಆಗಿದ್ದರಿಂದ ಅವನ ಜೊತೆ ಸಿಕ್ಕಾಪಟ್ಟೆ ಮಾತು. ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಸಂಜೆ ಮನೆಗೆ ಬರುವ ಹೊತ್ತಿಗೆ ೬.೩೦ ಆಗಿತ್ತು. ಬಂದೊಡನೆ ಕೈಕಾಲು ತೊಳೆದುಕೊಂಡು ಅಮ್ಮ ಕೊಟ್ಟ ಕಾಫಿ ಕುಡಿಯುತ್ತಿದ್ದೆ.

ಅಷ್ಟರಲ್ಲಿ ಹರಿ ಫೋನ್ ಮಾಡಿದ. ಹರಿಯ ಮನೆಗೆ ಹೊರಟೆ. ಹರಿಯ ಮನೆಗೆ ಹೋಗುವ ಹೊತ್ತಿಗೆ ೭.೧೫ ಆಗಿತ್ತು. ಅವನು ನಾಳೆಯ ಕಾರ್ಯಕ್ರಮದ ಬಗ್ಗೆ ಕೆಲವರಿಗೆ ಮಾಹಿತಿಯನ್ನು ನೀಡುತ್ತಿದ್ದ. ಹರಿ ಜೊತೆ ಸುಮಾರು ೧ ಘಂಟೆ ಹೊತ್ತು ಮಾತನಾಡಿ ನಾಳೆ ಬೆಳಿಗ್ಗೆ ಭೇಟಿಯಾಗುತ್ತೇನೆಂದು ಹೇಳಿ ಮನೆಗೆ ಹೊರಟೆ.

ಮನೆಗೆ ಬಂದಾಗ ನನಗೊಂದು Shock. ಎಲ್ಲರ ಮನೆಯಲ್ಲೂ ಪವರ್‍ ಇದೆ. ನಮ್ಮ ಮನೆಯಲ್ಲಿ ಮಾತ್ರ ಇಲ್ಲ. ಏನಾಯ್ತು ಅಂತ ಯೋಚನೆ ಮಾಡಿ ಕಾರನ್ನು ಪಾರ್ಕ್ ಮಾಡಿ ಒಳಗೆ ಬಂದೆ. ಅಮ್ಮ ಮತ್ತು ಅಣ್ಣ(ಅಪ್ಪ) ಮೇಣದ ಬತ್ತಿಯ ಬೆಳಕಿನಲ್ಲಿ ಕುಳಿತಿದ್ದರು.

ಯಾಕೆ ನಮ್ಮ ಮನೆಯಲ್ಲಿ ಪವರ್‍ ಇಲ್ಲ ಅಂತ ಕೇಳಿದೆ.

ಅಮ್ಮ "ನಿನ್ನೆ ನೀನೇ ತಾನೇ ಹೇಳಿದ್ದು" ಅಂತ ಅಂದರು.

ನಾನು "ನಾನೇನ್ ಹೇಳ್ದೆ?" ಅಂತ ಕೇಳಿದೆ.

ಅದಕ್ಕೆ ಅಮ್ಮ "ಇವತ್ತು ಅರ್ಥ್ ಅವರ್‍. ಅದಕ್ಕೆ ರಾತ್ರಿ ೮.೩೦ರಿಂದ ೯.೩೦ರ ವರೆಗೆ Main Switch ಆಫ್ ಮಾಡಲು ನೀನೇ ಹೇಳಿದ್ಯಲ್ಲಾ? ಅದಕ್ಕೆ Main Switch ಆಫ್ ಮಾಡಿರೋದು" ಅಂತ ಹೇಳಿದ್ರು.

"ಓಹ್ ಹೌದಲ್ಲಾ? ಮರೆತೇಹೋಗಿತ್ತು. Main Switch ಆಫ್ ಮಾಡಿ ಒಳ್ಳೆ ಕೆಲಸ ಮಾಡ್ದೆ." ಅಂತ ಅಮ್ಮನಿಗೆ ಹೇಳಿ ನಾನೂ ಮೇಣದ ಬತ್ತಿಯ ಬೆಳಕಿನಲ್ಲಿ ಕುಳಿತೆ.

ಅದಕ್ಕೆ ಅಮ್ಮ "ಈ ವಯಸ್ಸಿಗೇ ಇಷ್ಟು ಮರೆವಾದರೆ ಹೇಗೋ?" ಅಂತ ಕೇಳಿದ್ರು.

ನಾನು "ಏನೋ ಕೆಲಸದ ಟೆನ್ಷನ್ ಅಮ್ಮ. ಮರೆತ್ಹೋಯ್ತು." ಅಂತ ಹೇಳಿದೆ.

ಅದಕ್ಕವರು "ನಿನಗೆ ಕೆಲಸ ಇದ್ಬಿಟ್ರೆ ಮನೆ, ಊಟ, ನಿದ್ದೆ ಏನೂ ಬೇಡ ಅನ್ಸತ್ತೆ. ಬೇಗ ಒಂದು ಮದುವೆ ಆಗು? ಆಗ ಸರಿಹೋಗ್ತೀಯ. " ಅಂತ ಅಂದರು.

ಅಷ್ಟರಲ್ಲಿ ೯.೩೦ ಆಯ್ತು. ಸದ್ಯ, ೯.೩೦ಆಯ್ತಲ್ಲ ಅಂತ ಅಂದ್ಕೊಂಡು Main Switch ಆನ್ ಮಾಡಿದೆ.

ಇವತ್ತಿಗೆ ನನ್ನ ಮದುವೆ ವಿಷಯ ಮುಂದೆಕ್ಕೆ ಹೋಯ್ತಲ್ಲ ಅಂತ ಮನದಲ್ಲೇ ಖುಷಿ ಆಯ್ತು. :)

Rating
No votes yet

Comments