ಪೆದ್ದಚೆರುವಿನ ರಾಕ್ಷಸ (ಕಾಡಿನ ಕಥೆಗಳು ಭಾಗ - 2)

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪ್ರಕಾಶಕರು
ಪುಸ್ತಕ ಪ್ರಕಾಶನ, ಸರಸ್ವತಿ ಪುರಂ, ಮೈಸೂರು
ಪುಸ್ತಕದ ಬೆಲೆ
ರೂ. 84/-

ನರಭಕ್ಷಕ ಹುಲಿಗಳ ಬೇಟೆಯ ಮೈನವಿರೇಳಿಸುವ ಇನ್ನೊಂದು ಕಥನ ಇದು. ಇಂಗ್ಲಿಷಿನಲ್ಲಿ ಕೆನೆತ್ ಆಂಡರ್ಸನ್ ಬರೆದಿರುವ ಈ ಅನುಭವಗಳನ್ನು ಅನುವಾದಿಸಿ, ಸಂಗ್ರಹ ರೂಪಾಂತರವಾಗಿ ನೀಡಿದ್ದಾರೆ ಪೂರ್ಣಚಂದ್ರ ತೇಜಸ್ವಿ.

ಚುನಾವಣೆ ಘೋಷಣೆಯಾಗಿದೆ...

ಮುಂದಿನ ಸುಮಾರು 75 ದಿನಗಳು ಸಾಕಷ್ಟು ಕುತೂಹಲ ಮತ್ತು ಸಂಘರ್ಷಮಯ ಸಾಮಾಜಿಕ ರಾಜಕೀಯ ವಾತಾವರಣ ನಿರ್ಮಾಣವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ವ್ಯಕ್ತಿಗಳಾದ ನಾವು ಹೆಚ್ಚು ಜವಾಬ್ದಾರಿಯಿಂದ, ತಾಳ್ಮೆಯಿಂದ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ವೈಯಕ್ತಿಕ ಹಾಗೂ ದೇಶದ ಹಿತಾಸಕ್ತಿಯಿಂದ ಬಹಳ ಮುಖ್ಯ.

Image

ಗರಿ ಗರಿ ನಿಪ್ಪಟ್ಟು

Image

ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಚಿರೋಟಿ ರವೆ, ಕಡಲೆಕಾಯಿ ಬೀಜ, ಹುರಿಗಡಲೆಗಳನ್ನು ಸೇರಿಸಿಡಿ. ಈ ಮಿಶ್ರಣಕ್ಕೆ ಇಂಗು, ವನಸ್ಪತಿ, ಈರುಳ್ಳಿ, ಕರಿಬೇವು, ಉಪ್ಪು, ಮೆಣಸಿನ ಹುಡಿ, ಎಳ್ಳು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ.

ಬೇಕಿರುವ ಸಾಮಗ್ರಿ

ಅಕ್ಕಿ ಹಿಟ್ಟು ೨ ಕಪ್, ಮೈದಾ ಹಿಟ್ಟು ೧ ಕಪ್, ಚಿರೋಟಿ ರವೆ- ಅರ್ಧ ಕಪ್, ತರಿಯಾಗಿ ಹುಡಿ ಮಾಡಿದ ಹುರಿಗಡಲೆ - ೩ ಚಮಚ, ತರಿಯಾಗಿ ಹುಡಿ ಮಾಡಿದ ಕಡಲೇಕಾಯಿ ಬೀಜ - ೩ ಚಮಚ, ಕತ್ತರಿಸಿದ ಈರುಳ್ಳಿ - ೩ ಚಮಚ, ಮೆಣಸಿನ ಹುಡಿ - ೨ ಚಮಚ, ಇಂಗು - ಅರ್ಧ ಚಮಚ, ತರಿಯಾಗಿ ಹುಡಿ ಮಾಡಿದ ಎಳ್ಳು - ೧ ಚಮಚ, ವನಸ್ಪತಿ (ಡಾಲ್ಡಾ) - ೨ ಚಮಚ, ಕತ್ತರಿಸಿದ ಬೇವಿನ ಸೊಪ್ಪು - ೨ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ಸ್ಟೇಟಸ್ ಕತೆಗಳು (ಭಾಗ ೯೦೭)- ಬದುಕಿನ ಕಲಿಕೆ

ಸನ್ನಿವೇಶಗಳು ಬದುಕು ಕಲಿಸ್ತಾವೆ ಅಂತ ಪ್ರತಿಸಲ ಮನೆಯಲ್ಲಿ ಅಪ್ಪ ಹೇಳ್ತಾನೇ ಇದ್ರು ಕೂಡ ಮಕ್ಕಳಿಗೆ ಅರ್ಥವೇ ಆಗಿರಲಿಲ್ಲ. ಅವರ ಪ್ರಕಾರ ಪ್ರತಿಯೊಂದು ನಾವು ಕಲಿತೇ ಆಗಬೇಕೇ ವಿನಃ ಸನ್ನಿವೇಶದ ರೂಪದಲ್ಲಿ ಕಲಿಯುವುದಲ್ಲ ಅನ್ನೋದಾಗಿತ್ತು. ಅದನ್ನ ಅಪ್ಪ ಎಷ್ಟೇ ವಿವರಿಸುವುದಕ್ಕೆ ಪ್ರಯತ್ನಪಟ್ಟರೂ ಅವರಿಗೆ ಅದು ಅರ್ಥನೇ ಆಗಿರಲಿಲ್ಲ. ಶಾಲೆಯಿಂದ ಪ್ರವಾಸ ನಿಗದಿಯಾಗಿತ್ತು. ಎಲ್ಲರೂ ಸಂಭ್ರಮದಿಂದ ಹೊರಟಿದ್ದರು.

Image

ಬೆಂಬಲದ ಫಲವೇ ಸಫಲತೆ

ಒಂದು ಭಾನುವಾರ. ನನ್ನೆಲ್ಲಾ ಕೆಲಸಗಳನ್ನು ಮುಗಿಸಿ ಟಿವಿಯ ಮುಂದೆ ಬಂದು ಕುಳಿತೆ. ಕೆಲಕಾಲ ಮನೋರಂಜನಾ ಕಾರ್ಯಕ್ರಮಗಳನ್ನು ನೋಡಿದ ನಂತರ ವಾರ್ತೆಯಲ್ಲಿ ಏನಿದೆ ನೋಡೋಣ ಎಂದು ಚಾನೆಲ್ ಬದಲಾಯಿಸಿದೆ. ಅಂದು ಅಲ್ಲಿ ಬಂದ ವಿಚಾರವಾರ್ತೆ ನನ್ನ ಮನ ಕಲಕಿತು.

Image

ಸಿ ಎ ಎ: ಅಮೇರಿಕದ ಅಧಿಕಪ್ರಸಂಗ

ಭಾರತ ಸರಕಾರವು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮೂಲಕ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನಗಳಲ್ಲಿ ಧಾರ್ಮಿಕ ಕಾರಣಗಳಿಗಾಗಿ ದೌರ್ಜನ್ಯ ಎದುರಿಸುತ್ತಿರುವ ಹಿಂದುಗಳು, ಕ್ರೈಸ್ತರು, ಸಿಕ್ಕರು, ಜೈನರು, ಬೌದ್ಧರು ಮತ್ತು ಪಾರ್ಸಿಗಳಿಗೆ ತನ್ನ ಪೌರತ್ವ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

Image

ರಂಜಾನ್ ಉಪವಾಸದ ಹೊತ್ತು ಮತ್ತು ಸಿಎಎ ಅನುಷ್ಠಾನದ ಸಂದರ್ಭದಲ್ಲಿ...

ಭಾರತೀಯ ಮುಸ್ಲಿಮರ ಬಗ್ಗೆ ಒಂದು ಅಭಿಪ್ರಾಯ. ಧರ್ಮದ ಆಧಾರದಲ್ಲಿ ನಿರ್ಧರಿಸಬೇಕೆ ? ಸಂವಿಧಾನದ ಆಧಾರದ ಮೇಲೆ ನಿರ್ಧರಿಸಬೇಕೆ ? ಸತ್ಯ ಮತ್ತು ಸಮನ್ವಯದ ಆಧಾರದ ಮೇಲೆ ನಿರ್ಧರಿಸಬೇಕೆ ? ನೈತಿಕತೆಯ ಆಧಾರದ ಮೇಲೆ ನಿರ್ಧರಿಸಬೇಕೆ ? ಅವರ ನಡವಳಿಕೆಗಳ ಆಧಾರದ ಮೇಲೆ ನಿರ್ಧರಿಸಬೇಕೆ ? ಐತಿಹಾಸಿಕ ಮತ್ತು ಜಾಗತಿಕ ಪರಿಸ್ಥಿತಿಯ ಮೇಲೆ ನಿರ್ಧರಿಸಬೇಕೆ ?

Image

ಸ್ಟೇಟಸ್ ಕತೆಗಳು (ಭಾಗ ೯೦೬)- ಕಾಲ ಉತ್ತರ

ದೂರದಲ್ಲಿ ನಿಂತ ಆತನ ಕಣ್ಣಾಲಿಗಳು ತುಂಬಿಕೊಂಡಿದ್ದವು. ಆತನಿಗೆ ೧೬ ವರ್ಷಗಳ ಹಿಂದಿನ ಘಟನೆಗಳು ಕಣ್ಣ ಮುಂದೆ ಹಾಗೆಯೇ ಹಾದುಹೋದವು. ಆ ದಿನ ಯಾರೂ ಕೊತೆ ಇರಲಿಲ್ಲ. ನೀನು ನಮ್ಮವನು, ನಿಮಗೆ ನಾವಿದ್ದೇವೆ ಅಂತ ಹೇಳಿಕೊಳ್ಳುವವರು ಯಾರೂ ಇರಲಿಲ್ಲ. ದೇವರು ಮತ್ತು ನಂಬಿದ ಗೆಳೆಯರು ಮಾತ್ರ ಸುತ್ತ ನಿಂತಿದ್ರು. ಆತ ಗಟ್ಟಿಯಾಗಿ ಕೈ ಹಿಡಿದಿದ್ದ, ಆಕೆಯೂ ನಂಬಿದಳು.

Image