ತುಂಬಾ ಗಾಬರಿಯಾಗುವುದು ಬೇಡ…!

ದೇಶದ ಚುನಾವಣೆ ಘೋಷಣೆಯಾಗಿದೆ. ಚುನಾವಣಾ ಆಯೋಗ ಅನೇಕ ನೀತಿ ನಿಯಮಗಳನ್ನು ಜಾರಿ ಮಾಡಿದೆ. ಅವುಗಳಲ್ಲಿ ಸೋಷಿಯಲ್ ಮೀಡಿಯಾಗಳ ಮೇಲಿನ ಕೆಲವು ನಿಯಂತ್ರಣಗಳು ಸೇರಿವೆ. ಮೂಲಭೂತವಾಗಿ ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯ ಗಣರಾಜ್ಯ. ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲಿನ ಹಕ್ಕು.

Image

ಸ್ಟೇಟಸ್ ಕತೆಗಳು (ಭಾಗ ೯೦೯)- ಸ್ವಚ್ಛ

ಸ್ವಲ್ಪವಾದರೂ ಶುದ್ಧವಾಗೋ, ಮನಸ್ಸಿನೊಳಗಿನ ಒಂದಷ್ಟು ಕೆಟ್ಟ ಆಲೋಚನೆಗಳನ್ನು ತೊಳೆದುಕೋ, ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸಬೇಡ, ಜ್ಞಾನಯುತವಾದದ್ದನ್ನ ಅಳವಡಿಸಿಕೋ, ಒಳ್ಳೆಯ ವಿಚಾರವನ್ನು ಮಾತನಾಡು, ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸಬೇಡ.

Image

ಕರ್ಮಫಲ

ಅಮೇರಿಕಾ ದೇಶದಲ್ಲಿ ಅಬ್ರಹಾಂ ಲಿಂಕನ್ ಎನ್ನುವ ವ್ಯಕ್ತಿ ರಾಷ್ಟ್ರಾಧ್ಯಕ್ಷನಾಗಿದ್ದನು. ಬಹಳ ಹೆಸರುವಾಸಿ, ದೊಡ್ಡ ಮನುಷ್ಯ. ಆತ ಅಷ್ಟು ಅದ್ಭುತವಾಗಿ ಬದುಕಿದ್ದನು. ಆತನ ಜೀವನ ಚರಿತ್ರೆ ಓದಿದರೆ ನಮಗೆ ಮಾರ್ಗದರ್ಶನ ಉಂಟಾಗುತ್ತದೆ, ಬದುಕಿಗೆ ದಾರಿ ತೋರಿಸುತ್ತದೆ. ಒಮ್ಮೆ ಒಂದು ಘಟನೆ ಆಯಿತು. ನಮ್ಮಲ್ಲಿ ಹೇಗೆ ವಿಧಾನಸಭೆ ಲೋಕಸಭೆ ಇದೆಯೋ ಹಾಗೆ ಅಮೆರಿಕದಲ್ಲಿ ಪಾರ್ಲಿಮೆಂಟ್ ಸಭೆ ಇದೆ.

Image

ಅಪ್ಪ

ಅಪ್ಪ ಗೋಡೆ ಹಿಡಿದುಕೊಂಡು ಹೋಗುತ್ತಿದ್ದರು. ಅಪ್ಪ ಕೈಯಿಟ್ಟಲ್ಲೆಲ್ಲ ಗೋಡೆಯ ಬಣ್ಣ ಸ್ವಲ್ಪ ಸ್ವಲ್ಪವೇ ಮಸುಕಾಗುತ್ತಿತ್ತು. ಇದನ್ನು ಕಂಡು ಹೆಂಡತಿಯ ಮುಖಭಾವ ಬದಲಾಗುತ್ತಿದ್ದುದನ್ನು ನಾನು ಗಮನಿಸಿದೆ. ಅದೊಂದು ದಿನ ಅಪ್ಪ ಎಂದಿನಂತೆಯೇ ಗೋಡೆಯ ಮೇಲೆ ಕೈ ಇಟ್ಟಿದ್ದರು. ಮಂಡಿ ನೋವಿಗೆ ಎಣ್ಣೆ ಹಚ್ಚಿದ್ದರೋ ಏನೋ ಕೈ ಗುರುತು ಗೋಡೆ ಮೇಲೆ ಗಾಢವಾಗಿ ಅಂಟಿಕೊಂಡಿತು.

Image

ಹಲವಾರು ಪ್ರಯೋಜನಗಳ ಒಂದೆಲಗ ಸಸ್ಯ

‘ಒಂದೆಲಗ' ಹೆಸರೇ ಹೇಳುವಂತೆ ಒಂದೇ ಎಲೆಯನ್ನು ಹೊಂದಿರುವ ಸಸ್ಯ. ಇದೊಂದು ಔಷಧೀಯ ಸಸ್ಯವಾಗಿಯೂ, ಆಹಾರ ಯೋಗ್ಯ ಸೊಪ್ಪಾಗಿಯೂ ಹಲವಾರು ವರ್ಷಗಳಿಂದ ಬಳಕೆಯಲ್ಲಿದೆ. ಆಡುಭಾಷೆಯಲ್ಲಿ ಇಲಿ ಕಿವಿ ಎಂದೂ, ತುಳು ಭಾಷೆಯಲ್ಲಿ ‘ತಿಮರೆ' ಎಂದೂ, ಕೊಂಕಣಿಯಲ್ಲಿ ‘ಏಕ್ ಪಾನೀ’ ಅಥವಾ ಏಕ್ ಪಾನ್ ಎಂದೂ ಕರೆಯುತ್ತಾರೆ. ಒಂದೆಲಗವು ನೆಲವನ್ನೇ ನೆಚ್ಚಿಕೊಂಡು ಬಳ್ಳಿಯಂತೆ ಬೆಳೆಯುವ ಒಂದು ಸಸ್ಯವಾಗಿದ್ದು.

Image

ಪ್ರಕೃತಿ

ಪುಸ್ತಕದ ಲೇಖಕ/ಕವಿಯ ಹೆಸರು
ಹಾ ಮ ಸತೀಶ
ಪ್ರಕಾಶಕರು
ಕಥಾಬಿಂದು ಪ್ರಕಾಶನ, ಕುಂಜತ್ ಬೈಲ್, ಮಂಗಳೂರು
ಪುಸ್ತಕದ ಬೆಲೆ
ರೂ. ೫೦.೦೦, ಮುದ್ರಣ: ೨೦೨೪

“ವೃತ್ತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ, ಪ್ರವೃತ್ತಿಯಲ್ಲಿ ಕವಿ, ಸಾಹಿತಿ, ನಾಟಕಕಾರ, ಹಾಡುಗಾರ ಶ್ರೀ ಹಾ ಮ ಸತೀಶರ ಗಝಲ್ ಸಂಕಲನ ‘ಪ್ರಕೃತಿ' ಪ್ರೀತಿ ಬದುಕು ಸಂಕಲನಕ್ಕೆ ನನ್ನ ಅನುಭವದ ಒಂದೆರಡು ಸಾಲುಗಳನ್ನು ಬರೆಯಲು ಸಂತಸಪಡುತ್ತೇನೆ. ನಾನು ಕಂಡ ಹಾಗೆ ಸತೀಶರು ಸಾಹಿತ್ಯ ಪ್ರಪಂಚದ ದೈತ್ಯ ಪ್ರತಿಭೆ, ಎಲೆಯ ಮರೆಯ ಕಾಯಿ ಎನ್ನಬಹುದು.

ಬಾಹ್ಯ ಸಾಧನೆಯ ಶಿಖರವೇರಲು ನಾವು ಮಾಡಬೇಕಾದ ಪ್ರಯತ್ನವೇನು?

ಎತ್ತರದ ಬೆಟ್ಟದ ಮೇಲೆ ನಿಂತು ಕೆಳಗೆ ನೋಡಿದಾಗ ಗಿಡ ಮರಗಳು ಮುಖ್ಯವಾಗಿ ಮನುಷ್ಯರು ಅತ್ಯಂತ ಚಿಕ್ಕದಾಗಿ ಕಾಣುತ್ತಾರೆ. ಇದನ್ನೇ ಒಂದು ಸಂಕೇತವಾಗಿ ಬಳಸಿಕೊಂಡು ನೋಡಿದಾಗ… ನಾವು ಸಾಧನೆಯಲ್ಲಿ ಎತ್ತರೆತ್ತರಕ್ಕೆ ಏರಿದಾಗ ನಮ್ಮ ಸುತ್ತಮುತ್ತಲಿನ ಜನ ನಮಗಿಂತ ಕೆಳಗಿರುವಂತೆ ಭಾಸವಾಗುತ್ತದೆ.

Image

ಸ್ಟೇಟಸ್ ಕತೆಗಳು (ಭಾಗ ೯೦೮)- ಸುಳ್ಳು

ಅವನು ಮಾತನಾಡೋದು ಕಡಿಮೆ. ಆಗಾಗ ಏನಾದರೂ ಒಂದು ಮಾತನ್ನ ಉದುರುಸ್ತಾ ಇರ್ತಾನೆ. ಅದರಲ್ಲಿ ಅರ್ಥಾನೂ ಇರುತ್ತೆ. ಕೆಲವೊಂದು ಸಲ ಅರ್ಥ ಆಗೋದು ತಡವಾಗುತ್ತೆ .ಹೀಗಿದ್ದವ ಮೊನ್ನೆ ಒಂದು ದೊಡ್ಡ ಮಾತನಾಡಿದ್ದ." ಸುಳ್ಳು ಮಾತನಾಡುತ್ತೆ ಸುಳ್ಳಿನ ಒಳಗೊಂದು ಅರ್ಥ ಇರುತ್ತೆ ನಾವು ಆ ಸುಳ್ಳನ್ನ ಅರ್ಥಮಾಡಿಕೊಳ್ಳೋದಿಲ್ಲ ನೇರವಾಗಿ ಅವರು ಹೇಳುವ ಸುಳ್ಳನ್ನೇ ತಿಳಿದುಕೊಂಡು ಬಿಡುತ್ತೇವೆ.

Image

ದಾಹ ಶಮನವು ರೋಗಕ್ಕೆ ಮೂಲವಾಗದಿರಲಿ...

ಬೇಸಿಗೆಯ ಸುಡು ಬಿಸಿಲು. ಕುಡಿಯುವ ನೀರಿಗೂ ಹಾಹಾಕಾರ. ಎಲ್ಲೆಲ್ಲೂ ಗಮನ ಸೆಳೆಯುತ್ತಿದೆ 'ಸಾಪ್ಟ್ ಡ್ರಿಂಕ್ಸ್'. ವಯಸ್ಸಿನ ಭೇದವಿಲ್ಲದೆ ಪ್ರತಿಯೊಬ್ಬರೂ ಯಥೇಚ್ಛವಾಗಿ ಇದರ ದಾಸರಾಗಿದ್ದೇವೆ. ದಾಹವನ್ನು ನೀಗಿಸಲು ಬಣ್ಣ ಬಣ್ಣದ 'ಕೂಲ್ ಡ್ರಿಂಕ್ಸ್' ಗೆ ಪರ್ಯಾಯವೇ ಇಲ್ಲದಂತೆ ಭಾಸವಾಗುತ್ತಿದೆ. ಇವುಗಳ ಸೇವನೆ ಚಟವಾಗಿ ಕಾಡುತ್ತಿರುವುದು ಸಹಜವಾಗಿದೆ. 

Image