ಪದ್ಮಶ್ರೀ ಪುರಸ್ಕೃತ ಎಲೆಮರೆಯ ಕಾಯಿಗಳು ! (ಭಾಗ ೧)

ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಬಳಿಕ ಪದ್ಮ ಪ್ರಶಸ್ತಿಗಳ ಮೌಲ್ಯ ಅಧಿಕವಾಗಿದೆ ಎಂದರೆ ತಪ್ಪಾಗೋಲ್ಲ. ಏಕೆಂದರೆ ಹಿಂದೆಲ್ಲಾ ಇದ್ದ ಸರಕಾರಗಳು ಈ ಪ್ರಶಸ್ತಿಗಳನ್ನು ತಮಗೆ ತೋಚಿದವರಿಗೆ, ತಮಗೆ ಉಪಕಾರ ಮಾಡಿದವರಿಗೆ ಕೊಟ್ಟು ಧನ್ಯರಾಗುತ್ತಿದ್ದರು. ಆದರೆ ಈಗ ಪದ್ಮ ಪ್ರಶಸ್ತಿಗಳು ಘೋಷಣೆಯಾಗುವಾಗ ಆ ಪಟ್ಟಿಯಲ್ಲಿರುವ ೫೦% ಹೆಸರುಗಳನ್ನು ನಾವು ಕೇಳಿಯೇ ಇರುವುದಿಲ್ಲ.

Image

ಬೋರ್ಡ್ ಪರೀಕ್ಷೆ : ಮಕ್ಕಳ ಜೊತೆ ವ್ಯವಸ್ಥೆಯ ಚೆಲ್ಲಾಟ

ರಾಜ್ಯ ಪಠ್ಯಕ್ರಮದ ೫,೮,೯ ಮತ್ತು ೧೧ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ನಡೆಸುವ ವಿಷಯದಲ್ಲಿ ತೀವ್ರ ಗೊಂದಲ ಏರ್ಪಟ್ಟಿದೆ. ಈ ತರಗತಿಗಳಿಗೆ ಹಿಂದೆಲ್ಲ ಶಾಲೆಯಿಂದಲೇ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ, ಕಳೆದ ವರ್ಷದಿಂದ ಮಂಡಳಿಯಿಂದ ಪರೀಕ್ಷೆ ನಡೆಸಲಾಗುತ್ತಿದೆ. ಒಂದು ರೀತಿಯಲ್ಲಿ ಇದು ಪಬ್ಲಿಕ್ ಪರೀಕ್ಷೆಯಿದ್ದಂತೆ.

Image

ಅಬ್ಬಬ್ಬಾ… ಈ ದೊಡ್ಡ ಮನುಷ್ಯರಿಗೆ ಎಷ್ಟೊಂದು ಅಧಿಕಾರದ ದಾಹ !

ಒಮ್ಮೆ ಗೆದ್ದರೆ ಇನ್ನೊಮ್ಮೆ, ಇನ್ನೊಮ್ಮೆ ಗೆದ್ದರೆ ಮತ್ತೊಮ್ಮೆ, ಮತ್ತೊಮ್ಮೆ ಗೆದ್ದರೆ ಮಗದೊಮ್ಮೆ, ಮಗದೊಮ್ಮೆ ಗೆದ್ದರೆ ಸಾಯುವವರೆಗೂ… ಒಟ್ಟಿನಲ್ಲಿ ಅಧಿಕಾರದಲ್ಲಿ ಇರಲೇಬೇಕು. ಅಧಿಕಾರ ಇಲ್ಲದಿದ್ದರೆ ಬದುಕುವುದೇ ಕಷ್ಟ. ರಾಜಕೀಯವೆಂಬುದು ಈ ಹಂತಕ್ಕೆ ಬಂದಿದೆಯೇ.

Image

ಹುರುಳಿ ಕಾಳಿನ ಸಾರು ಮತ್ತು ಖಾರ ಒಗ್ಗರಣೆ

Image

ಹುರುಳಿಕಾಳುಗಳನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ ಕಣ್ಣು (ತೂತು) ಪಾತ್ರೆಯಲ್ಲಿ ಹಾಕಿದಾಗ ನೀರೆಲ್ಲ ಬಸಿದು ಹೋಗುತ್ತದೆ.(ಅಂಗಡಿಯಿಂದ ತಂದದ್ದರಲ್ಲಿ ಕಲ್ಲು ಇರುತ್ತದೆ, ನೋಡಿಕೊಳ್ಳಬೇಕು) ಪರಿಮಳ ಮತ್ತು ರುಚಿಗಾಗಿ ಸ್ವಲ್ಪ ಹುರಿಯಬೇಕು.

ಬೇಕಿರುವ ಸಾಮಗ್ರಿ

ಹುರುಳಿ ಕಾಳು, ಉಪ್ಪು, ಖಾರದ ಪುಡಿ, ಹಸಿಮೆಣಸು, ಸಾರಿನ ಪುಡಿ, ಹುಣಸೇ ರಸ, ಬೆಲ್ಲ, ಹಸಿ ಶುಂಠಿ, ಕಾಳುಮೆಣಸು, ಇಂಗು, ಒಣಮೆಣಸು, ಜೀರಿಗೆ, ಸಾಸಿವೆ, ಅರಸಿನ ಹುಡಿ, ಬೆಳ್ಳುಳ್ಳಿ, ಕರಿಬೇವು, ಕೊತ್ತಂಬರಿ ಸೊಪ್ಪು

ಒಗ್ಗರಣೆಗೆ: ಎಣ್ಣೆ ಅಥವಾ ತುಪ್ಪ, ಒಣಮೆಣಸು, ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ, ಜೀರಿಗೆ, ಅರಸಿನ, ಕರಿಬೇವು, ನೀರುಳ್ಳಿ, ಕಾಯಿ ಮೆಣಸು, ಬೆಲ್ಲ, ಉಪ್ಪು, ತೆಂಗಿನಕಾಯಿ ತುರಿ 

 

ಸ್ಟೇಟಸ್ ಕತೆಗಳು (ಭಾಗ ೯೦೪)- ಆಟ

ಆ ಮರದ ಕೆಳಗೆ ಹೊಸತೊಂದು ಆಟ ಶುರುವಾಗಿದೆ. ನೋಡುವುದಕ್ಕೆ ಸುತ್ತ ಸಾವಿರ ಜನ ನಿಂತಿದ್ದಾರೆ. ಅಲ್ಲಿ ಆಟವನ್ನು ನಡೆಸ್ತಾ ಇರುವವರು ಯಾರು ಅನ್ನೋದು ಯಾರಿಗೂ ಗೊತ್ತಾಗ್ತಾ ಇಲ್ಲ. ಪ್ರತಿ ಆಟಕ್ಕೂ ಒಬ್ಬ ನಾಯಕನಾಗಿ ಮುಂದೆ ಬಂದು ತಮ್ಮ ಚಾಲಾಕಿತನವನ್ನು ಪ್ರದರ್ಶಿಸುತ್ತಿದ್ದಾರೆ. ಯಾರು ಚೆನ್ನಾಗಿ ಆಡಬಹುದು ಅನ್ನೋದನ್ನ ಅಲ್ಲಿ ನಿಂತ ಹಲವರು ಏನೇನೋ ಮಾತನಾಡಿಕೊಳ್ಳುತ್ತಿದ್ದಾರೆ.

Image

ನಿಷ್ಪಾಪಿ ಸಸ್ಯಗಳು (ಭಾಗ ೪೦) - ಹಾಡೆ ಬಳ್ಳಿ

ನಾವು ಸಣ್ಣವರಿದ್ದಾಗ ಒಂದು ಜಾತಿಯ ಬಳ್ಳಿಯಿಂದ ಎಲೆಗಳನ್ನು ತಂದು ಸ್ವಲ್ಪ ನೀರು ಹಾಕಿ ಕಿವುಚಿ ಸಣ್ಣ ಸಣ್ಣ ಗೆರಟೆಗಳಿಗೆ ಹೊಯ್ದು ಇಡ್ಲಿ ಮಾಡುವ ಆಟವನ್ನಾಡುತ್ತಿದ್ದೆವು. ಈ ಸೊಪ್ಪಿನ ರಸವು ಸ್ವಲ್ಪವೇ ಹೊತ್ತಿನೊಳಗೆ ಗೆರಟೆಯಲ್ಲಿ ಗಟ್ಟಿಯಾಗಿ ಇಡ್ಲಿಯಂತೆಯೇ ಕೈಗೆ ಸಿಗುತ್ತಿತ್ತು. ಮೆತ್ತಗೆ ಮೆತ್ತಗೆ ಇರುತ್ತಿದ್ದ ಇಡ್ಲಿಯಂತಹ ಈ ವಸ್ತುವನ್ನು ಮುಟ್ಟುವುದೇ ಸೊಗಸೆನಿಸುತ್ತಿತ್ತು.

Image

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೪) - ವಿನಾಯಕ

‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ ೧೯೦೯ರ ಆಗಸ್ಟ್ ೯ರಂದು ಜನಿಸಿದರು.

Image

ಒಲವ ವೃಷ್ಟಿ

ಪುಸ್ತಕದ ಲೇಖಕ/ಕವಿಯ ಹೆಸರು
ವಿಶ್ವನಾಥ ಅರಬಿ
ಪ್ರಕಾಶಕರು
ಸಂಗೀತ ಜಗತ್ತು ಪ್ರಕಾಶನ, ವಿಜಯಪುರ
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೪

ಉದಯೋನ್ಮುಖ ಕವಿ ವಿಶ್ವನಾಥ ಅರಬಿ ಇವರು ತಮ್ಮ ನೂತನ ಕವನ ಸಂಕಲನ ‘ಒಲವ ವೃಷ್ಟಿ' ಯನ್ನು ಇತ್ತೀಚೆಗೆ ಹೊರತಂದಿದ್ದಾರೆ. ಈ ಸಂಕಲನಕ್ಕೆ ವಿಶ್ವನಾಥ ಅರಬಿ ಇವರು ಬರೆದ ಮುನ್ನುಡಿಯ ಕೆಲವು ಸಾಲುಗಳು ನಿಮ್ಮ ಓದಿಗಾಗಿ...