ಕನ್ನಡ ಸಾಹಿತ್ಯೋತ್ಸವದಲ್ಲಿ ಲೋಕಾರ್ಪಣೆಗೊಂಡವು ಎಂಟು ಮುತ್ತುಗಳು !

ಶ್ರೀಮತಿ ರತ್ನಾ ಟಿ. ಕೆ. ಭಟ್ ತಲಂಜೇರಿ ಹಾಗೂ ಹಾ. ಮ. ಸತೀಶ ಇಬ್ಬರೂ ನನ್ನ ಆತ್ಮೀಯರು, ಆಪ್ತರು, ಸಾಹಿತ್ಯ ಚಟುವಟಿಕೆಯ ಒಡನಾಡಿಗಳು. 1990ರ ದಶಕದಲ್ಲಿ ನಾನು ಹುಟ್ಟೂರು ಕುಂಬಳೆಯಲ್ಲಿದ್ದಾಗ ಪರಿಚಯವಾಗಿ ಹತ್ತಿರವಾದವರು.

Image

ಕರ್ಪೂರಿ ಠಾಕೂರ್ ಎಂಬ ನೈಜ ಭಾರತ ರತ್ನ !

ಈ ವರ್ಷ ಘೋಷಣೆಯಾದ ಐದು ಭಾರತ ರತ್ನಗಳ ಪೈಕಿ ಮೊದಲ ಗೌರವ ಸಂದದ್ದು ಕರ್ಪೂರಿ ಠಾಕೂರ್ ಎಂಬ ವ್ಯಕ್ತಿಗೆ. ಹಲವರ ಮನದಲ್ಲಿ ಮೂಡಿದ ಸಂದೇಹವೆಂದರೆ ‘ಯಾರು ಈ ಕರ್ಪೂರಿ ಠಾಕೂರ್?’ ತದ ನಂತರ ದೂರದರ್ಶನ, ವಾರ್ತಾ ಪತ್ರಿಕೆಗಳಲ್ಲಿ ನೋಡಿಯೋ, ಓದಿಯೋ ಎಲ್ಲರೂ ಈ ಅಪರೂಪದ ವ್ಯಕ್ತಿಯ ಬಗ್ಗೆ ತಿಳಿದುಕೊಂಡರು. ಈಗಿನ ರಾಜಕೀಯದಲ್ಲಂತೂ ನಾವು ಇಂತಹ ವ್ಯಕ್ತಿಯನ್ನು ನೋಡಲು ಸಾಧ್ಯವೇ ಇಲ್ಲ.

Image

ಭೂಗರ್ಭ ಯಾತ್ರೆ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಜೂಲ್ಸ್ ವೆರ್ನ್, ಕನ್ನಡಕ್ಕೆ: ಎಂ. ಗೋಪಾಲಕೃಷ್ಣ ಅಡಿಗ
ಪ್ರಕಾಶಕರು
ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಜೆ ಸಿ ರಸ್ತೆ, ಬೆಂಗಳೂರು ೫೬೦೦೦೨
ಪುಸ್ತಕದ ಬೆಲೆ
ರೂ. ೫೦.೦೦, ಮುದ್ರಣ: ೨೦೦೭

ಜೂಲ್ಸ್ ವೆರ್ನ್, ಫ್ರೆಂಚ್ ಭಾಷೆಯಲ್ಲಿ ವೈಜ್ಞಾನಿಕ ಲೇಖನಗಳನ್ನು ಬರೆಯುವವರಲ್ಲಿ ಪ್ರಮುಖರು. ಇವರ ’ಎ ಜರ್ನಿ ಟು ದ ಸೆಂಟರ್ ಆಫ್ ದ ಅರ್ತ್’ ಎಂಬ ರೋಚಕವಾದ ಕೃತಿಯ ಸಂಗ್ರಹಾನುವಾಗಿದೆ ಈ ಕೃತಿ. ಇದನ್ನು ಎಂ. ಗೋಪಾಲಕೃಷ್ಣ ಅಡಿಗರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕೃತಿ ಮೊದಲು ಪ್ರಕಟವಾದದ್ದು ೧೯೭೯ರಲ್ಲಿ. ಆಗ ಅದನ್ನು ಪ್ರಕಾಶಿಸಿದ್ದು ಬೆಂಗಳೂರಿನ ಜಗತ್ ಸಾಹಿತ್ಯ ಮಾಲೆ ಇವರು.

ಕೋಡಿಮಠದ ಭವಿಷ್ಯವಾಣಿ…!

ಕೋಡಿಹಳ್ಳಿ ಮಠದ ಸ್ವಾಮಿಗಳ ಭವಿಷ್ಯವಾಣಿ ರಾಜ್ಯದ ಮಾಧ್ಯಮಗಳಲ್ಲಿ ಹಲವಾರು ವರ್ಷಗಳಿಂದ ಬಹಳ ಪ್ರಾಮುಖ್ಯತೆ ಪಡೆಯುತ್ತದೆ. ಕಳೆದ 40-50 ವರ್ಷಗಳಿಂದ ಅವರ ಭವಿಷ್ಯವಾಣಿ ಗಮನಿಸಿದಾಗ ಒಂದಷ್ಟು ನಿಜವಾಗಿರುವುದು ಸಹ ವಾಸ್ತವ.

Image

ಸ್ಟೇಟಸ್ ಕತೆಗಳು (ಭಾಗ ೮೮೭)- ರೀತು

ಅಮ್ಮ ನನಗೆ ಹೇಗೆ ಪ್ರತಿಕ್ರಿಯೆ ಕೊಡಬೇಕು ಅಂತಾನೇ ಗೊತ್ತಾಗ್ತಾ ಇಲ್ಲ. ನಿಜ ಹೇಳಬೇಕು ಅಂತ ಅಂದ್ರೆ ತುಂಬಾ ನೋವಾಗ್ತಾ ಇದೆ. ಆದರೆ ಇಷ್ಟು ಜನರ ಮುಂದೆ ನಾನು ಅತ್ತು ಬಿಟ್ಟರೆ... ನೀವೆಲ್ಲರೂ ನನ್ನನ್ನ ಸಮಾಧಾನ ಮಾಡೋಕೆ ಅಂತ ಬರುತ್ತೀರಿ, ಆಗ ಆ ದಿನದ ನಾಟಕ ತಯಾರಿ ಕಷ್ಟ ಆಗೋದಿಲ್ವಾ? ಅದಕ್ಕೆ ಸುಮ್ಮನಿದ್ದೆ.

Image

"ಮರಣಕ್ಕಿಂತ ದೊಡ್ಡ ಸತ್ಯವೊಂದಿಲ್ಲ"...!

ನನಗೊಂದು ಮಾರ್ಮಿಕ ಬರಹ ಗೀಚಬೇಕೆಂದು ಮನಸ್ಸಿಗೆ ಹುಚ್ಚಾಸೆ. ಅದು ನನ್ನನ್ನು ಅನ್ವಯಿಸಿ ಜೀವನದ ಮರ್ಮಗಳ ಬಗ್ಗೆ ಅದುಮಿಡಲಾಗದ ಭಾವನೆಗಳು. ಭಗವಂತನ ಸೃಷ್ಠಿಯಲ್ಲಿ ಶ್ರೇಷ್ಠ ಸೃಷ್ಠಿಯೆಂದು ಧರ್ಮ ಗ್ರಂಥಗಳು ಉದಾರವಾಗಿ ವ್ಯಾಖ್ಯಾನಿಸಲ್ಪಟ್ಟ ಮನುಷ್ಯ ಕುಲ ನಮ್ಮದು. ಆದರೆ ನಮಗೇನಾಗಿದೆ?..... ನಾವು ನಮ್ಮ ಸ್ವಾರ್ಥವೇ ಪ್ರಧಾನವಾಗಿ ಬದುಕ ತೊಡಗಿದೆವು.

Image

ಪುಟ್ಟ ಕಥೆ - ಸ್ನೇಹ ಅಮರ

ಒಮ್ಮೆ ಒಬ್ಬ ಶ್ರೀಮಂತನ ಹೆಂಡತಿಯು ಮನೆಯ ಆಳಿನ ಜೊತೆಯಿರುವುದನ್ನು ನೋಡಿದನು. ತಕ್ಷಣ ಅವನಿಗೆ ಆಘಾತವಾಗಿ ಸಿಟ್ಟು ಬಂದು ತನ್ನ ಬಂದೂಕಿನಿಂದ ಅವನನ್ನು ಶೂಟ್ ಮಾಡಿದನು. ಅದೇ ಕ್ಷಣಕ್ಕೆ ಶ್ರೀಮಂತನ ಗೆಳೆಯ ಅಲ್ಲಿಗೆ ಬಂದು ಪೊಲೀಸರಿಗೆ ಕರೆ ಮಾಡಿ ಅವರನ್ನು ಕರೆಸುತ್ತಾನೆ.

Image

ವೃತ್ತಿ ನಿರತರ ವೃತ್ತಿ ಧರ್ಮ...

ಪತ್ರಕರ್ತರು: ಕೇವಲ ನಿರೂಪಕರಲ್ಲ - ಮನರಂಜನೆ ನೀಡುವವರಲ್ಲ - ಜನರನ್ನು ಆಕರ್ಷಿಸುವವರಲ್ಲ - ವ್ಯಾಪಾರಿಗಳಲ್ಲ - ಜನಪ್ರಿಯತೆಯ ಹಿಂದೆ ಹೋಗುವವರಲ್ಲ - ಜನರನ್ನು ಮೆಚ್ಚಿಸುವವರು ಮಾತ್ರವಲ್ಲ, ಜೊತೆಗೆ ಮುಖ್ಯವಾಗಿ ವಿವೇಚನೆಯಿಂದ ಪರಿಶೀಲಿಸಿ ಎಷ್ಟೇ ಕಷ್ಟವಾದರೂ ಸತ್ಯವನ್ನು ಧೈರ್ಯವಾಗಿ ಹೇಳುವವರು.

Image

ಹಿಂದೂ ಜೀವನಮೌಲ್ಯಗಳು: ನಾಗರಿಕತೆಯ ದಾರಿದೀಪಗಳು

ಹಿಂದುತ್ವ ಜಗತ್ತಿನ ಅತ್ಯಂತ ಪುರಾತನ ನಾಗರಿಕತೆ. ಜೊತೆಗೆ, ಇದು ಜ್ವಲಂತವಾದ ಮತ್ತು ಆಂತರಿಕ ಸತ್ವದಿಂದ ಪುಟಿಯುತ್ತಿರುವ ನಾಗರಿಕತೆ ಎಂಬುದು ಗಮನಿಸಬೇಕಾದ ಸಂಗತಿ.

ಇದು ಹೇಗಾಯಿತು? ಹೇಗೆಂದರೆ, ಹಿಂದುತ್ವ ಒಂದು ಧರ್ಮ ಎನ್ನುವುದಕ್ಕಿಂತಲೂ ಅದೊಂದು “ಬದುಕುವ ರೀತಿ” (ವೇ ಆಫ್ ಲೈಫ್). ಶತಮಾನಗಳು ಉರುಳಿದಂತೆ, ಹಿಂದುತ್ವವು ಕೆಲವು ಉದಾತ್ತ ಮೌಲ್ಯಗಳು, ತತ್ವಗಳು ಮತ್ತು ನಂಬಿಕೆಗಳನ್ನು ಬೆಳೆಸಿಕೊಂಡಿದೆ. ಈ ಮೂಲಭೂತ ಮೌಲ್ಯಗಳೇ ಹಿಂದುತ್ವವು ನಿರಂತರವಾಗಿ ವಿಕಾಸ ಹೊಂದುತ್ತಿರುವುದಕ್ಕೆ ಕಾರಣ.

Image