ರಾಮ್ ಪ್ರಸಾದ್ ಬಿಸ್ಮಿಲ್ ಎಂಬ ಕ್ರಾಂತಿಕಾರಿಯನ್ನು ನೆನೆಯುತ್ತಾ...!

ಜೂನ್ ೧೧ ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ ಎಂಬ ಕವಿ, ಮಹಾನ್ ಕ್ರಾಂತಿಕಾರಿ, ಅಪ್ಪಟ ದೇಶಪ್ರೇಮಿ, ಸ್ವಾತಂತ್ರ್ಯ ಸಂಗ್ರಾಮದ ವೀರನ ಜನ್ಮ ದಿನ. ಕೇವಲ ಕ್ರಾಂತಿಕಾರಿಯಾಗಿ ಅಲ್ಲ ಉತ್ತಮ ವಾಗ್ಮಿ, ಕವಿಯಾಗಿಯೂ ರಾಮ್ ಪ್ರಸಾದ್ ಬಿಸ್ಮಿಲ್ ಇವರು ನಮ್ಮ ಮನದಾಳದಲ್ಲಿ ಅಮರರಾಗಿ ಉಳಿಯುತ್ತಾರೆ. ೧೮೯೭ರಲ್ಲಿ ಷಹಜಹಾನಪುರ ಎಂಬಲ್ಲಿ ಮುರಳೀಧರ ಮತ್ತು ಮೋಲಮತಿ ದಂಪತಿಗಳ ಸುಪುತ್ರರಾಗಿ ಜನಿಸುತ್ತಾರೆ.

Image

ಮೊಟ್ಟೆಯ ದೋಸೆ

Image

ಈರುಳ್ಳಿ ಮತ್ತು ಕಾಯಿಮೆಣಸನ್ನು ಸಣ್ಣಗೆ ತುಂಡರಿಸಿಕೊಳ್ಳಿ. ಗೋಧಿ ಹಿಟ್ಟಿಗೆ ಮೊಟ್ಟೆಯನ್ನು ಒಡೆದು ಹಾಕಿ ಅದರಲ್ಲೇ ಹಿಟ್ಟನ್ನು ಕಲಸಿ. ತುಂಬಾ ದಪ್ಪವಾಗದಂತೆ ಸ್ವಲ್ಪ ನೀರನ್ನು ಹಾಕ ಬಹುದು. ದೋಸೆ ಹಿಟ್ಟಿನಷ್ಟು ಹದಕ್ಕೆ ಬಂದ ಬಳಿಕ ಸಣ್ಣದಾಗಿ ಕತ್ತರಿಸಿದ ಈರುಳ್ಳಿ, ಕಾಯಿಮೆಣಸು, ಬೇವು ಮತ್ತು ಕೊತ್ತಂಬರಿ ಸೊಪ್ಪು, ರುಚಿಗೆ ಬೇಕಾದಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಬೇಕಿರುವ ಸಾಮಗ್ರಿ

ಗೋಧಿ ಹಿಟ್ಟು ೧ ಕಪ್, ಮೊಟ್ಟೆ ೨, ಈರುಳ್ಳಿ  ೧, ಕಾಯಿ ಮೆಣಸು ೨-೩, ರುಚಿಗೆ ಉಪ್ಪು, ಸ್ವಲ್ಪ ಎಣ್ಣೆ, ಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು

 

ಬಿಳಿ ಬಣ್ಣದ ಬೆಳಕು ಏಳು ಬಣ್ಣದ ಕಾಮನಬಿಲ್ಲು ಆಗುವುದು ಹೇಗೆ?

ಬೆಳಕು ಎನ್ನುತ್ತಲೇ ಎಲ್ಲೋ ಒಂದು ಕಡೆ ನಮ್ಮ ಮನಸ್ಸಲ್ಲೂ ಜ್ಯೋತಿ ಬೆಳಗಿದ ಅನುಭವ. ಬೆಳಕಿದ್ದರೆ ವಿಶ್ವದಲ್ಲಿ ಇಲ್ಲರೂ ಚಟುವಟಿಕೆಯಲ್ಲಿರುತ್ತಾರೆ. ಗಿಡಗಳು ತಮ್ಮ ಆಹಾರ ಉತ್ಪಾದಿಸಿ ನಮ್ಮ ಆಹಾರವನ್ನು ನೀಡುತ್ತವೆ. ಬೆಳಕೆಂದರೆ ಜ್ಞಾನ, ಕತ್ತಲೆಂದರೆ ಅಜ್ಞಾನ ಅಂಧಕಾರ ಹೀಗೆ ಹತ್ತು ಹಲವು ವಿಶ್ಲೇಷಣೆಗಳಿವೆ. ನಮ್ಮ ಪೂರ್ವಜರು ಕಂಡು ಹಿಡಿದ ಒಂದು ಮಹತ್ತರವಾದ ಬೆಳಕೆಂದರೆ ಬೆಂಕಿ.

Image

ಮನುಷ್ಯನ ಕ್ರೌರ್ಯವನ್ನು ತೆರೆದಿಡುವ ಕಾಂಬೋಡಿಯದ ‘ಜಿನೊಸೈಡ್’ ಮ್ಯೂಸಿಯಂ

ಮಾನವ ನಿರ್ಮಿತ ಪ್ರಪಂಚದ ಅದ್ಭುತಗಳಲ್ಲಿ ಒಂದು ಎಂದು ಖ್ಯಾತಿ ಪಡೆದ ಅಂಗ್ಕೊರ್ (Angkor) ದೇವಾಲಯಗಳಿರುವುದು  ಕ್ಯಾಂಬೋಡಿಯದ ಹಿಂದಿನ ರಾಜಧಾನಿ ಅಂಗ್ಕೊರ್ ನಗರದಲ್ಲಿ. ಇವುಗಳು ಮಾನವನ  ಪರಿಕಲ್ಪನೆ, ಸೃಜನಶೀಲತೆ (ಕ್ರಿಯೇಟಿವಿಟಿ) ಮತ್ತು   ಅಸಾಮಾನ್ಯ ಸಾಧನೆಯ ಒಂದು ಬೃಹತ್ ಪ್ರತೀಕ. ಜೊತೆಗೆ ಅದೇ ಮಾನವ ಅತ್ಯಂತ ಕ್ರೂರಿಯೂ ಆಗಬಲ್ಲ ಎಂಬ ಮಾತಿಗೆ ನಿದರ್ಶನ ಆ ದೇಶದ ಈಗಿನ ರಾಜಧಾನಿ ಪ್ನಾಮ್ ಪೆನ್ಹ್ (Phnom Penh) ನಲ್ಲಿರುವ ತುವೋಲ್ ಸ್ಲೆಂಗ್ ಹತ್ಯಾಕಾಂಡದ ವಸ್ತುಸಂಗ್ರಹಾಲಯ (Tuol Sleng Genocide Museum). 2019ರ ನವಂಬರದಲ್ಲಿ ನಾನು ಮತ್ತು ಐದು ಮಂದಿ ಬಂಧುಗಳು  ಕ್ಯಾಂಬೋಡಿಯಕ್ಕೆ ಭೇಟಿ ಕೊಟ್ಟಾಗ ಅವೆರಡನ್ನು ನೋಡುವ  ಅವಕಾಶ ಲಭಿಸಿತು.

Image

ಅಂದದ ಆರೋಗ್ಯಕ್ಕೆ ಆಪ್ತ ವೈದ್ಯ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ.ಪೂರ್ಣಿಮಾ ಕೋಡೂರು
ಪ್ರಕಾಶಕರು
ಬೆನಕ ಬುಕ್ಸ್ ಬ್ಯಾಂಕ್, ಯಳಗಲ್ಲು, ಕೋಡೂರು-ಅಂಚೆ, ಹೊಸನಗರ, ಶಿವಮೊಗ್ಗ-೫೭೭೪೪೫
ಪುಸ್ತಕದ ಬೆಲೆ
ರೂ.೫೦.೦೦ ಮುದ್ರಣ :೨೦೦೭

ಪುಸ್ತಕದ ಲೇಖಕಿಯಾದ ಡಾ.ಪೂರ್ಣಿಮಾ ಕೊಡೂರು ಇವರು ಸ್ವತಃ ಆಯುರ್ವೇದ ವೈದ್ಯೆಯೂ ಆಗಿರುವುದರಿಂದ ತಮ್ಮ ವೈದ್ಯಕೀಯ ವೃತ್ತಿಯ ಜೊತೆಗೆ ಜನರಿಗೆ ಆಪ್ತವಾಗುವ ರೀತಿಯಲ್ಲಿ ಆಯುರ್ವೇದ ಮನೆ ಮದ್ದುಗಳನ್ನು ನೀಡಿದ್ದಾರೆ. ಈ ಪುಸ್ತಕದಲ್ಲಿ ನಮಗೆ ಬರುವ ಹಲವಾರು ಕಾಯಿಲೆಗಳಿಗೆ ಮನೆ ಮದ್ದುಗಳ ವಿವರಗಳಿವೆ. ನಾವಿಂದು ನಮಗೆ ಬರುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿಕೊಳ್ಳುತ್ತೇವೆ.

ರೈತರ ಬದುಕು ಬದಲಿಸಿದ ಬಲವಾನ್ ಈರುಳ್ಳಿ

ಬಲವಾನ್ ಸಿಂಗ್ ಹರಿಯಾಣದ ಭಿವಾನಿ ಜಿಲ್ಲೆಯ ಅಲಕ್‍ಪುರ ಗ್ರಾಮದ ೫೯ ವರುಷದ ರೈತ. ವಿಜ್ನಾನಿಗಳಿಗೆ ಸರಿಮಿಗಿಲೆನುವಂತೆ ಅತ್ಯುತ್ತಮ ಗುಣವಟ್ಟದ ಈರುಳ್ಳಿ ತಳಿಯೊಂದ್ನ್ನು ಅಭಿವೃದ್ಧಿ ಪಡಿಸಿರುವುದು ಅವರ ಹೆಗ್ಗಳಿಕೆ.
ಉತ್ತಮ ಗುಣಮಟ್ಟದ ಈರುಳ್ಳಿ ಬೀಜಗಳನ್ನು ಅವರು ಖರೀದಿಸಿದ್ದು ೧೯೮೦ರ ದಶಕದಲ್ಲಿ. ಅನಂತರ, ಪ್ರತಿಯೊಂದು ಈರುಳ್ಳಿ ಬೆಳೆಯ ಫಸಲಿನಿಂದಲೂ ಅತ್ಯುತ್ತಮ ಈರುಳ್ಳಿಗಳನ್ನು ಬೀಜಕ್ಕಾಗಿ ತೆಗೆದಿಟ್ಟರು. ಈರುಳ್ಳಿಗಳ ಗಾತ್ರ, ಆಕಾರ ಮತ್ತು ಬಿಗಿತ – ಇವುಗಳ ಆಧಾರದಿಂದ ಅವರ ಆಯ್ಕೆ.

Image

ಸಾಗರ ಸಂಪನ್ಮೂಲಗಳನ್ನು ಮಾಲಿನ್ಯದಿಂದ ರಕ್ಷಿಸೋಣ ಬನ್ನಿ!!

ಜೂನ್ ೮ ವಿಶ್ವ ಸಾಗರ ದಿನ. ವಿಶ್ವ ಪರಿಸರ (ಜೂನ್ ೫)ದಿನ ಕಳೆದು ಮೂರೇ ದಿನಕ್ಕೆ ವಿಶ್ವ ಸಾಗರ ದಿನ. ಇದು ಒಂದಕ್ಕೊಂದು ಸಂಬಂಧಿತ ದಿನಗಳೇ. ಸಾಗರ ಅಥವಾ ಸಮುದ್ರ ದಿನವನ್ನು ೨೦೦೮ ಡಿಸೆಂಬರ್ ೫ರಂದು ವಿಶ್ವ ಸಂಸ್ಥೆಯು ಅಂಗೀಕರಿಸಿತು. ಸಮುದ್ರ ನಮ್ಮ ಭೂಮಿಯ ಶ್ವಾಸಕೋಶದ ರೀತಿ ಕೆಲಸ ಮಾಡುತ್ತವೆ. ಸಾಗರದಲ್ಲಿರುವ ಅಸಂಖ್ಯಾತ ಹವಳದ ಬಂಡೆಗಳು ಮತ್ತು ಲಕ್ಷಾಂತರ ಸಮುದ್ರ ಸಸ್ಯಗಳು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಇದರಿಂದ ಭೂಮಿಯ ಮೇಲೆ ಆಮ್ಲಜನಕ ಪ್ರಮಾಣ ಸರಿತೂಗಿಸಲ್ಪಡುತ್ತದೆ. ಇಲ್ಲವಾದಲ್ಲಿ ನಮಗೆ ಉಸಿರಾಡಲು ಆಮ್ಲಜನಕದ ಕೊರತೆ ಉಂಟಾಗುತ್ತಿತ್ತು.

Image

ಭಾರತೀಯ ಚಿತ್ರಕಲೆ - ಭಾಗ 4

ತಂಜಾವೂರು ಚಿತ್ರಕಲೆ
ತಮಿಳುನಾಡಿನ ತಂಜಾವೂರು ಈ ಚಿತ್ರಕಲೆಯ ಮೂಲ. ಆರಂಭದಲ್ಲಿ ಇವನ್ನು ಪ್ರಾರ್ಥನಾ ಕೋಣೆಗಳಲ್ಲಿ ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. ಆದರೆ ಈಗ ಇವು ಅಲಂಕಾರಿಕ ಚಿತ್ರಗಳಾಗಿಯೂ ಜನಪ್ರಿಯವಾಗಿವೆ.

ಈ ಚಿತ್ರಗಳು ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದವುಗಳೇ ಆಗಿರುತ್ತವೆ. ಉದಾಹರಣೆಗೆ, ದಶಾವತಾರಗಳು, ಬೆಣ್ಣೆ ಕದಿಯುವ ಬಾಲಕೃಷ್ಣ ಇತ್ಯಾದಿ. ಇಲ್ಲಿರುವ ಚಿತ್ರ ಮಹಾಶಿವನ ವಾಹನ ನಂದಿಯದು.

ಮರದ ಹಲಗೆ ತುಂಡುಗಳಲ್ಲಿ ಸ್ಕೆಚ್ ಬರೆದು, ಕಲಾವಿದರು ಬಣ್ಣ ತುಂಬುತ್ತಾರೆ. ಅವನ್ನು ಅಂದಗೊಳಿಸಲು ಬಣ್ಣದ ಕಲ್ಲುಗಳು, ಆಭರಣಗಳು ಮತ್ತು ಗಾಜಿನ ತುಂಡುಗಳನ್ನು ಬಳಸುತ್ತಾರೆ. ಚಿತ್ರಗಳ ಕಂಬಗಳು, ಮಾಲೆಗಳು ಮತ್ತು ಆಭರಣಗಳಿಗೆ ಚಿನ್ನದ ತಗಡನ್ನು ತಗಲಿಸಿ ಚಿತ್ರಗಳನ್ನು ಆಕರ್ಷಕವಾಗಿಸುತ್ತಾರೆ.

Image

ತಂದೆಯ ಮೂರು ಸೂತ್ರಗಳು

ಒಂದಾನೊಂದು ಕಾಲದಲ್ಲಿ, ಶ್ರೀಮಂತನೊಬ್ಬ ಅವನ ಇಬ್ಬರು ಮಗಂದಿರೊಂದಿಗೆ ದೂರದ ಹಳ್ಳಿಯಲ್ಲಿ ವಾಸಿಸುತ್ತಿದ್ದ.  ಅವನು ರೋಗದಿಂದ ಬಳಲುತ್ತಿದ್ದ. ಸಾಯುವ ಮುಂಚೆ ಅವನು ಇಬ್ಬರು ಮಗಂದಿರನ್ನೂ ಹತ್ತಿರ ಕರೆದ.

ತನ್ನ ಸಂಪತ್ತನ್ನು ಅವರಿಗೆ ಕೊಡುತ್ತಾ, ಆ ಸಂಪತ್ತನ್ನು ಜೋಪಾನವಾಗಿ ಇಡಲಿಕ್ಕಾಗಿ ಮೂರು ಸೂತ್ರಗಳನ್ನು ಶ್ರೀಮಂತ ಹೇಳಿದ: “ನನ್ನ ಪ್ರೀತಿಯ ಮಗಂದಿರೇ, ಜೀವಮಾನವಿಡೀ ನನ್ನ ಹಾಗೆ ಶ್ರೀಮಂತಿಕೆಯಲ್ಲಿಯೇ ಬದುಕಬೇಕು ಎಂದಾದರೆ, ನಾನು ಈಗ ಹೇಳುವ ಮೂರು ಸೂತ್ರಗಳನ್ನು ನೀವು ಪಾಲಿಸ ಬೇಕು.”

Image

ದೈನಂದಿನ ಚಟುವಟಿಕೆಗಳ ಭಾಗವಾಗಲಿ ವಿಶ್ವ ಪರಿಸರ ದಿನ

ಇಂದು ಜೂನ್ ೫, ವಿಶ್ವ ಪರಿಸರ ದಿನ. ಪರಿಸರ ದಿನವನ್ನು ವರ್ಷದಲ್ಲಿ ಒಂದು ದಿನ ನೆನಪಿಸಿಕೊಳ್ಳುವುದು, ಕಾಟಾಚಾರಕ್ಕೆ ಗಿಡ ನೆಡುವುದು, ಉದ್ದುದ್ದ ಭಾಷಣ ಮಾಡುವುದು, ಸಾಮಾಜಿಕ ಜಾಲತಾಣದಲ್ಲಿ ಗಿಡ ಮರ ಹಾಗೂ ಪರಿಸರದ ಫೋಟೋಗಳನ್ನು ಹಾಕಿ ಶುಭಾಷಯ ಕೋರುವುದಕ್ಕೆ ಸೀಮಿತವಾಗಬಾರದು. ಪ್ರತಿಯೊಂದು ದಿನ ಪರಿಸರ ದಿನವಾಗಬೇಕು. ನಮ್ಮ ದೈನಂದಿನ ಚಟುವಟಿಕೆಗಳ ಭಾಗವಾಗಬೇಕು.

Image