ಡಾ.ಬಿ.ಸಿ.ರಾಯ್ ನೆನಪಿನಲ್ಲಿ ‘ವೈದ್ಯರ ದಿನ'

ಭಾರತ ದೇಶದಲ್ಲಿ ಪ್ರತೀ ವರ್ಷ ಜುಲೈ ೧ನ್ನು ‘ರಾಷ್ಟ್ರೀಯ ವೈದ್ಯರ ದಿನ' ಎಂದು ಆಚರಿಸುತ್ತಾರೆ. ಇದು ನಮ್ಮ ದೇಶದ ಹೆಮ್ಮೆಯ ವೈದ್ಯ ಹಾಗೂ ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ. ಬಿಧಾನ್ ಚಂದ್ರ ರಾಯ್ ಅವರ ಜನ್ಮ ದಿನ. ಅವರು ನಮ್ಮ ದೇಶದ ವೈದ್ಯಕೀಯ ವ್ಯವಸ್ಥೆಗೆ ನೀಡಿದ ಅಮೂಲ್ಯ ಸೇವೆಯನ್ನು ಪರಿಗಣಿಸಿ ಅವರ ಜನ್ಮ ದಿನವನ್ನು ‘ವೈದ್ಯರ ದಿನ' ಎಂದು ಕರೆಯುತ್ತಾರೆ. ಹಾಗೆ ನೋಡಿದರೆ ಪ್ರತಿಯೊಂದು ದಿನವೂ ವೈದ್ಯರ ದಿನವೇ. ಯಾಕೆಂದರೆ ವೈದ್ಯ ದೇವರ ಅವತಾರವೆಂದೇ ಒಂದು ಮಾತಿದೆ. ರೋಗಿಗಳು ವೈದ್ಯರಲ್ಲಿ ದೇವರನ್ನೇ ಕಾಣುತ್ತಾರೆ.

Image

ನೀರಿನ ಸಮಸ್ಯೆಗೆ ಉತ್ತರ: ಪಾರಂಪರಿಕ ಜ್ನಾನ ಮತ್ತು ಸಂರಚನೆಗಳ ಬಳಕೆ

ಮೇ ೨೦೧೯ರಲ್ಲಿ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟ (ಎನ್.ಡಿ.ಎ.) ಕೇಂದ್ರ ಸರಕಾರದಲ್ಲಿ ಅಧಿಕಾರ ವಹಿಸಿದಾಗ ಕೈಗೊಂಡ ಮೊದಲ ನಿರ್ಧಾರಗಳಲ್ಲೊಂದು: ನೀರಿಗೆ ಸಂಬಂಧಿಸಿದ ವಿವಿಧ ಮಂತ್ರಾಲಯ ಮತ್ತು ಇಲಾಖೆಗಳನ್ನು ಜಲಶಕ್ತಿ ಮಂತ್ರಾಲಯವಾಗಿ ಒಗ್ಗೂಡಿಸಿದ್ದು.
ಈ ಮಂತ್ರಾಲಯದ ಬಹು ದೊಡ್ಡ ಜವಾಬ್ದಾರಿ: ದೇಶದಲ್ಲಿ ಬಿಗಡಾಯಿಸುತ್ತಿರುವ ನೀರಿನ ಕೊರತೆ ನಿಭಾಯಿಸುವುದು ಮತ್ತು ೨೦೨೪ರೊಳಗೆ ದೇಶದ ಪ್ರತಿಯೊಂದು ಮನೆಗೂ ಕೊಳವೆಯಲ್ಲಿ ಕುಡಿಯುವ ನೀರು ಒದಗಿಸುವುದು. ಈ ಉದ್ದೇಶ ಸಾಧನೆಗಾಗಿ ಒಂದೇ ತಿಂಗಳಿನಲ್ಲಿ ಅದು “ಜಲಶಕ್ತಿ ಅಭಿಯಾನ” ರೂಪಿಸಿತು.

Image

ಮುದುಕ ಮತ್ತು ಮುದುಕಿ

ಒಂದಾನೊಂದು ಕಾಲದಲ್ಲಿ, ಒಂದು ಸಣ್ಣ ಮನೆಯಲ್ಲಿ ಒಬ್ಬ ಮುದುಕ ಮತ್ತು ಮುದುಕಿ ವಾಸ ಮಾಡುತ್ತಿದ್ದರು. ಅವರಿಗೆ ಮಕ್ಕಳಿರಲಿಲ್ಲ. ಅವರು ಯಾವುದೇ ಪ್ರಾಣಿಗಳನ್ನು ಸಾಕುತ್ತಿರಲಿಲ್ಲ. ಮುದುಕನಿಗೆ ಜೊತೆ ಮುದುಕಿ ಮತ್ತು ಮುದುಕಿಗೆ ಜೊತೆ ಮುದುಕ ಮಾತ್ರ.

ಅದೊಂದು ಮಧ್ಯಾಹ್ನ, ಯಾವಾಗಿನಂತೆ, ಮುದುಕ ಮತ್ತು ಮುದುಕಿ ಮನೆಯ ವರಾಂಡದಲ್ಲಿ ಕುಳಿತಿದ್ದರು. ಮುದುಕಿ ಹೊಲಿಯುತ್ತಿದ್ದಳು ಮತ್ತು ಮುದುಕ ಒಂದು ಮರದ ತುಂಡಿನಿಂದ ತಟ್ಟೆ ತಯಾರಿಸುತ್ತಿದ್ದ. ಅದನ್ನು ಕತ್ತರಿಸುತ್ತಾ ಮುದುಕ ಹೇಳಿದ, “ನಾವು ಬೇಸಾಯ ಮಾಡದಿರುವುದು ಎಷ್ಟು ಒಳ್ಳೆಯದಾಯಿತು! ಇಲ್ಲವಾದರೆ ನಮಗೆ ಯಾವಾಗಲೂ ಗದ್ದೆ ಉಳುವ ಮತ್ತು ಕೊಯ್ಲು ಮಾಡುವ ಚಿಂತೆ. ಯಾವಾಗಾದರೂ ನೆರೆ ಅಥವಾ ಬಿರುಗಾಳಿ ಬಂದರೆ ನಾವು ಬೆಳೆಸಿದ್ದನ್ನೆಲ್ಲ ಕಳೆದುಕೊಂಡು ನಮಗೆ ಬಹಳ ದುಃಖವಾಗುತ್ತಿತ್ತು.”

Image

ವ್ಯಾಕರಣ

ಮೂಱಱಿಂ ಎಂಟಱವರೆಗೆ ಹತ್ತರ್ಕೆ ಹದಿನುಂಟು

ಹದಿಮೂಱು, ಹದಿನಾಲ್ಕು, ಹದಿನೈದು, ಹದಿನಾಱು, ಹದಿನೇೞು ಹಾಗೂ ಹದಿನೆಂಟು. ಆದರೆ ಹನ್ನೊಂದು, ಹನ್ನೆರಡು ಹಾಗೂ ಹತ್ತೊಂಬತ್ತು

ದುಪ್ಪಟ್ಟು (ಸೂಟು ಬೂಟಿನ ರೈತನ ಪರಿಚಯ)

ಪುಸ್ತಕದ ಲೇಖಕ/ಕವಿಯ ಹೆಸರು
ರಾಜಾರಾಂ ತಲ್ಲೂರು
ಪ್ರಕಾಶಕರು
ಬಹುರೂಪಿ ಬೆಂಗಳೂರು
ಪುಸ್ತಕದ ಬೆಲೆ
೧೩೦.೦೦ ಮುದ್ರಣ ೨೦೨೦

ಹಿರಿಯ ಲೇಖಕರಾದ ರಾಜಾರಾಂ ತಲ್ಲೂರು ಅವರ ನಾಲ್ಕನೇ ಕೃತಿ ಇದು. ನುಣ್ಣನ್ನ ಬೆಟ್ಟ (೨೦೧೭), ತಲ್ಲೂರು ಎಲ್ ಎನ್ (೨೦೧೮) ಮತ್ತು ಏನಿದು ಪೌರತ್ವ ತಿದ್ದುಪಡಿ ಕಾಯಿದೆ (೨೦೧೯) ರಾಜಾರಾಂ ತಲ್ಲೂರು ಅವರ ಪ್ರಕಟಿತ ಕೃತಿಗಳು. ಇವರಿಗೆ, ಇವರ ಕೃತಿಗಳಿಗೆ ೨೦೧೭ರಲ್ಲಿ ಅಮ್ಮ ಪ್ರಶಸ್ತಿ ಮತ್ತು ೨೦೨೦ರಲ್ಲಿ ಶಿವರಾಮ ಕಾರಂತ ಪುರಸ್ಕಾರ ಸಂದಿದೆ.

‘ಬದುಕು' ಮುಗಿಸಿದ ಸಾಹಿತಿ ಗೀತಾ ನಾಗಭೂಷಣ

‘ವಚನಕಾರರು, ತತ್ವಪದಕಾರರು, ಜನಪದರು ಅಂದು ತಮ್ಮ ಸಾಹಿತ್ಯದಿಂದ ನಿರಂತರ ಸಾವಿರಾರು ವರ್ಷಗಳ ಕಾಲ ಪಾಲಿಸಿಕೊಂಡು ಬಂದ ಜನ ಜಾಗೃತಿ, ಶಾಂತಿ ಸೌಹಾರ್ದತೆ, ಪ್ರೀತಿ ವಾತ್ಸಲ್ಯ, ಕ್ರಾಂತಿಕಾರಿ ಚಳುವಳಿಗಳ ಮೂಲಕ ಸುಧಾರಣೆ ಮತ್ತು ಜನಹಿತ ಕಾರ್ಯವನ್ನು ಇಂದಿನ ಸಾಹಿತಿಗಳು ಸಾಧಿಸಿತೋರಿಸಬೇಕಾಗಿದೆ. ಬರೀ ಶಬ್ದಗಳ ಆಡಂಬರದ ರಂಜನೀಯ ಸಾಹಿತ್ಯ ನಮಗೆ ಬೇಡ. ಸಾಹಿತ್ಯ ಒಂದು ಮಾನಸಿಕ ಸುಧಾರಣೆಯ ಸಾಧನ. ಅದು ಸಮಾಜದಲ್ಲಿಯ ಅಭ್ಯುದಯಕ್ಕಾಗಿ ದುಡಿಯಬೇಕು. ವಿಜ್ಞಾನಿಯ ತಲೆ, ಸಂತನ ಹೃದಯ ಈ ದೇಶಕ್ಕೆ ಅಗತ್ಯ ಬೇಕಾಗಿದೆ.

Image

ಆಪಾದಿತನಾಗಿ ನ್ಯಾಯಾಲಯದಲ್ಲಿ ನಿಲ್ಲುವುದು - ಕುಟುಂಬಕ್ಕೆ ಕಳಂಕ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.

ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.

Image

ಇಂಜಿನಿಯರಿಂಗ್ ಶಿಕ್ಷಣಕ್ಕೆ ವಿದಾಯ, ದೇಸಿ ಬೀಜರಕ್ಷಣೆ ದೀಕ್ಷೆ

ತಮಿಳ್ನಾಡಿನ ಡಿಂಡಿಗಲ್ ಜಿಲ್ಲೆಯ ಕುಟ್ಟಿಯ ಗೌಂಡನ್‍ಪುಡುರ್ ಗ್ರಾಮದಲ್ಲಿದೆ ಆಧಿಯಾಗೈ ಪರಮೇಶ್ವರನ್ ಅವರ ಆರು ಎಕ್ರೆ ಫಾರ್ಮ್.
ಅಲ್ಲಿ ನಿರಂತರವಾದ ನೀರಿನಾಸರೆಯಿಲ್ಲ. ಆದರ ಪರಮೇಶ್ವರನ್‍ಗೆ ತನ್ನ ಬೆಳೆಗಳು ಉಳಿದು ಬೆಳೆಯುತ್ತವೆಂಬ ವಿಶ್ವಾಸ. ಯಾಕೆಂದರೆ ಅವೆಲ್ಲವೂ ಒಣ ಪ್ರದೇಶಕ್ಕೆ ಸೂಕ್ತವಾದ ದೇಸಿ ಬೀಜಗಳಿಂದ ಬೆಳೆಸಿದವುಗಳು.

Image

ನಾಡ ಪ್ರಭು ಕೆಂಪೇಗೌಡ ಮತ್ತು ಕವಿ ಬಂಕಿಮ ಚಂದ್ರರಿಗೆ ನಮೋ ನಮಃ

ನಾವು ಈ ದಿನ (ಜೂನ್ ೨೭) ದಂದು ಇಬ್ಬರು ಮಹಾನ್ ವ್ಯಕ್ತಿಗಳನ್ನು ಸ್ಮರಿಸಲೇ ಬೇಕಾದ ದಿನ. ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಹಾಗೂ ಭಾರತ ಸ್ವಾತಂತ್ರ್ಯ ಯೋಧರ ನರನಾಡಿಗಳಲ್ಲಿ ತಮ್ಮ ‘ವಂದೇ ಮಾತರಂ’ ಹಾಡಿನ ಮೂಲಕ ದೇಶಭಕ್ತಿಯ ಸಂಚಲನ ಮೂಡಿಸಿದ ಕವಿ ಬಂಕಿಮ ಚಂದ್ರ ಚಟ್ಟೋಪಾಧ್ಯಾಯರ ಜನ್ಮದಿನ. ನಾವು ಸದಾ ಸ್ಮರಿಸಬೇಕಾದ ಈ ಎರಡು ಮಹಾನ್ ವ್ಯಕ್ತಿಗಳಿಗೆ ಅಕ್ಷರ ನಮನ ಸಲ್ಲಿಸೋಣ.

Image

ಸ್ವಾಮಿ ಮತ್ತು ಅವನ ಸ್ನೇಹಿತರು

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಆರ್.ಕೆ. ನಾರಾಯಣ್ ಕನ್ನಡಕ್ಕೆ: ಎಚ್.ವೈ.ಶಾರದಾ ಪ್ರಸಾದ್
ಪ್ರಕಾಶಕರು
ಪ್ರ: ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ
ಪುಸ್ತಕದ ಬೆಲೆ
ಬೆಲೆ: ೪೦.೦೦ ಮೊದಲ ಮುದ್ರಣ: ೧೯೯೫

ಸ್ವಾಮಿ ಮತ್ತು ಅವನ ಸ್ನೇಹಿತರು ಖ್ಯಾತ ಸಾಹಿತಿ ಆರ್.ಕೆ.ನಾರಾಯಣ್ ಅವರ ಮಾಲ್ಗುಡಿ ಡೇಸ್ ಎಂಬ ಕಥಾ ಸಂಕಲನದ ಒಂದು ಕಥಾ ಭಾಗ. ಕನ್ನಡದ ಖ್ಯಾತ ನಟ, ನಿರ್ದೇಶಕ ಶಂಕರ್ ನಾಗ್ ಈ ಕಥೆಗಳನ್ನು ಕಿರುತೆರೆಗೆ ಧಾರವಾಹಿ ರೂಪದಲ್ಲಿ ತಂದಿದ್ದು ಎಲ್ಲರಿಗೂ ತಿಳಿದ ವಿಷಯ. ಹಿಂದಿಯಲ್ಲಿ ಬಹಳ ಹಿಂದೆ ಪ್ರಸಾರವಾದ ಮಾಲ್ಗುಡಿ ಡೇಸ್ ಈಗ ಮತ್ತೆ ಕನ್ನಡಕ್ಕೆ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.