ರಾಜ್ ಲೀಲಾ ವಿನೋದ

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭ ನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೨೫೦.೦೦ ಮೊದಲ ಮುದ್ರಣ: ಡಿಸೆಂಬರ್ ೨೦೧೬

‘ಮನದಾಚೆ ದೂಡಿದ ಬಯಕೆ ಕನಸಾಗಿ ಕಾಡುವುದೇಕೆ?’ ಎಂಬ ಸಾಲುಗಳು ‘ರಾಜ್ ಲೀಲಾ ವಿನೋದ' ಪುಸ್ತಕದ ಮುಖಪುಟದಲ್ಲೇ ಮುದ್ರಿತವಾಗಿವೆ. ಕನ್ನಡದ ವರನಟರಾದ ಡಾ. ರಾಜ್ ಕುಮಾರ್ ಇವರ ತೀರಾ ಖಾಸಗಿ ಬದುಕಿನ ಪುಟಗಳನ್ನು ಖ್ಯಾತ ಲೇಖಕ, ಪತ್ರಕರ್ತ ರವಿ ಬೆಳಗೆರೆಯವರು ಅನಾವರಣ ಮಾಡಿದ್ದಾರೆ. ಸ್ವತಃ ಲೀಲಾವತಿಯವರೇ ತಮ್ಮ ಬದುಕಿನ ಕರುಣಾಜನಕ ಕಥೆಯನ್ನು ಈ ಲೇಖಕರ ಬಳಿ ತೆರೆದಿಟ್ಟಿದ್ದಾರೆ.

ನೀರುಳ್ಳಿ ಪಕೋಡಾ

Image

ಮೊದಲಿಗೆ ನೀರುಳ್ಳಿಯನ್ನು ಉದ್ದಕ್ಕೆ ಸಪೂರವಾಗಿ ಕತ್ತರಿಸಬೇಕು. ಅದಕ್ಕೆ ಉಪ್ಪುಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆಗ ಅದು ನೀರು ಬಿಟ್ಟು ಕೊಳ್ಳುತ್ತೆ. ಆಗ ಅದಕ್ಕೆ ಮೆಣಸಿನ ಹುಡಿ, ಜೀರಿಗೆ, ಕರಿಬೇವು ಹಾಕಿ ಚೆನ್ನಾಗಿ ಬೆರೆಸಿ ನಂತರ ಅದಕ್ಕೆ ಹಿಡಿಯುವಷ್ಟು ಕಡಲೇ ಹಿಟ್ಟು ಬೆರೆಸಿ. ಅಗತ್ಯ ಇದ್ದಲ್ಲಿ ಮಾತ್ರ ಸ್ವಲ್ಪ ನೀರು ಹಾಕಬಹುದು. ಒಂದು ಬಾಣಲೆಗೆ ಎಣ್ಣೆ ಹಾಕಿ ಒಲೆಯಲ್ಲಿ ಕಾಯಲು ಇಡಿ.

ಬೇಕಿರುವ ಸಾಮಗ್ರಿ

ನೀರುಳ್ಳಿ ೪, ಕಡಲೇ ಹಿಟ್ಟು, ರುಚಿಗೆ ಉಪ್ಪು, ಕರಿಬೇವು ೨-೩ ಎಸಳು, ಕರಿಯಲು ಎಣ್ಣೆ, ಖಾರಕ್ಕೆ ಬೇಕಾದಷ್ಟು ಮೆಣಸಿನ ಹುಡಿ, ಜೀರಿಗೆ ೧ ಚಮಚ

‘ಸಮಸ್ಯೆಗೆ ಆತ್ಮಹತ್ಯೆ ಆಯ್ಕೆಯಲ್ಲ’ ಎಂದ ಸುಶಾಂತ್ ಎಡವಿದ್ದೆಲ್ಲಿ?

ಸುಶಾಂತ್ ಸಿಂಗ್ ರಾಜಪೂತ್ ಎಂಬ ಬಾಲಿವುಡ್ ನ ಸುರದ್ರೂಪಿ, ಉದಯೋನ್ಮುಖ ನಟ ಆತ್ಮಹತ್ಯೆ ಮಾಡಿಕೊಂಡ ಎನ್ನುತ್ತಲೇ ಈ ಭಾನುವಾರವೂ ಕರಾಳ ಭಾನುವಾರವಾಯಿತಾ ಎಂದು ಮನಸ್ಸು ಚೀರಿತು. ಕಳೆದ ಭಾನುವಾರ ಕನ್ನಡ ಚಿತ್ರರಂಗದ ನಟ ಚಿರಂಜೀವಿ ಸರ್ಜಾ ನಿಧನರಾಗಿದ್ದರು. ಅವರದ್ದಾದರೆ ಆರೋಗ್ಯ ಸಮಸ್ಯೆ. ಆದರೆ ಕೇವಲ ೩೪ ವರ್ಷ ಪ್ರಾಯದ ಈ ಉದಯೋನ್ಮುಖ ನಟನಿಗೆ ಏನಾಗಿತ್ತು? ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂಬುದು ಪ್ರಾಥಮಿಕ ವರದಿ.

Image

ಭಾರತೀಯ ಚಿತ್ರಕಲೆ - ಭಾಗ 5

ಮುರಾಲ್ ಚಿತ್ರಕಲೆ
ಇವು ಗೋಡೆಚಿತ್ರಗಳು. ಈ ಚಿತ್ರಕಲೆಯ ಮೂಲ ರಾಜಸ್ಥಾನದ ಷೆಖಾವತಿ ಪ್ರದೇಶ. ರಜಪೂತ ದಳಪತಿ ರಾವ್ ಷೇಖಾನಿಂದಾಗಿ ಅಲ್ಲಿಗೆ ಈ ಹೆಸರು. ಅಲ್ಲಿನ ಶ್ರೀಮಂತ ಸಮುದಾಯದ ಜನರು ಅಲಂಕಾರಕ್ಕಾಗಿ ತಮ್ಮ ಮನೆಗಳ ಗೋಡೆಗಳಲ್ಲಿ ಚಿತ್ರ ಬರೆಸಲು ಶುರು ಮಾಡಿದರು. ಇದು ಹಲವಾರು ಪಟ್ಟಣಗಳಲ್ಲಿ ಈ ಚಿತ್ರ ರಚನೆಗೆ ನಾಂದಿ.

ಗೋಡೆಗಳು, ಚಾವಣಿಗಳು, ಕಂಬಗಳು ಮತ್ತು ಕಿಟಕಿಗಳ ಕಮಾನುಗಳಲ್ಲಿಯೂ ಕಲಾಕಾರರು ಚಿತ್ರ ಬಿಡಿಸಿದರು. ಹೂಗಳ ವಿನ್ಯಾಸ, ಪ್ರಾಣಿಗಳು, ಪಕ್ಷಿಗಳು, ಧಾರ್ಮಿಕ ಸಂಗತಿಗಳು ಮತ್ತು ಮಹಾಕಾವ್ಯಗಳ ದೃಶ್ಯಗಳು - ಇವನ್ನು ಚಿತ್ರಿಸಿದರು. ಆರಂಭದಲ್ಲಿ ಕಲಾಕಾರರು ಸ್ಥಳೀಯ ಬಣ್ಣಗಳನ್ನೇ ಬಳಸಿದರು. ಕ್ರಮೇಣ ಕೆಂಪು, ನೀಲಿ ಇಂತಹ ಬೆಳಗುವ ಕೃತಕ ಬಣ್ಣಗಳಿಂದ ಚಿತ್ರಿಸಿದರು.

Image

ದಪ್ಪ ಅವಲಕ್ಕಿ ಒಗ್ಗರಣೆ

Image

ಮೊದಲಿಗೆ ದಪ್ಪ ಅವಲಕ್ಕಿಯನ್ನು ನೀರಿನಲ್ಲಿ ತೊಳೆದು ಒಂದು ಬೌಲ್ ನಲ್ಲಿ ಹಾಕಿಡಿ. ನಂತರ ಒಂದು ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಕಾದ ಬಳಿಕ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ,ಕರಿಬೇವಿನ ಸೊಪ್ಪು, ಜೀರಿಗೆ, ಒಣಮೆಣಸು, ಸಣ್ಣದಾಗಿ ಕತ್ತರಿಸಿದ ನೀರುಳ್ಳಿ ಹಾಕಿ. ನೀರುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ನಂತರ ಅದಕ್ಕೆ ದಪ್ಪ ಅವಲಕ್ಕಿ, ಟೋಮೇಟೋ, ಅರಸಿನ ಹುಡಿಯನ್ನು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ.ಚೆನ್ನಾಗಿ ಮಿಕ್ಸ್ ಮಾಡಿ.

ಬೇಕಿರುವ ಸಾಮಗ್ರಿ

ದಪ್ಪ ಅವಲಕ್ಕಿ ೧ ಕಪ್, ಟೊಮೆಟೋ ೧ , ನೀರುಳ್ಳಿ ೧, ಒಣ ಮೆಣಸು ೨-೩, ಅರಸಿನ ಹುಡಿ ಅರ್ಧ ಚಮಚ, ಸಾಸಿವೆ, ಜೀರಿಗೆ, ಕಡಲೇ ಬೇಳೆ, ಉದ್ದಿನ ಬೇಳೆ, ಜೀರಿಗೆ ತಲಾ ೧ ಸಣ್ಣ ಚಮಚ, ರುಚಿಗೆ ಉಪ್ಪು, ಎಣ್ಣೆ, ಕರಿಬೇವಿನ ಸೊಪ್ಪು, ಖಾರ ಬೇಕಿದ್ದಲ್ಲಿ ಮೆಣಸಿನ ಹುಡಿ, ಕೊತ್ತಂಬರಿ ಸೊಪ್ಪು

 

ಯಕ್ಷಗಾನ ಪುರಾಣ ಜ್ಞಾನ ದರ್ಶನ

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ಕೃಷ್ಣ ಶೆಟ್ಟಿ (ಕುಡು ಮಲ್ಲಿಗೆ)
ಪ್ರಕಾಶಕರು
ಪರಿಣಿತ ಪ್ರಕಾಶನ, ಶಾಂತಿನಗರ, ಕಾವೂರು ಅಂಚೆ, ಮಂಗಳೂರು-೫೭೫೦೧೫
ಪುಸ್ತಕದ ಬೆಲೆ
೨೫೦.೦೦ ಮೊದಲ ಮುದ್ರಣ: ೨೦೧೧

‘ಕುಡು ಮಲ್ಲಿಗೆ’ ನಾಮಾಂಕಿತದಿಂದ ಖ್ಯಾತಿ ಪಡೆದ ಕೆ.ಕೃಷ್ಣ ಶೆಟ್ಟಿಯವರದ್ದು ಬಹುಮುಖ ಪ್ರತಿಭೆ. ಹುಟ್ಟಿದ್ದು ಮಲೆನಾಡಿನ ಕುಡುಮಲ್ಲಿಗೆಯಲ್ಲಿ. ಇವರು ಕಲಿತದ್ದು ಕಮ್ಮಿಯಾದರೂ ಅನುಭವ ಇವರನ್ನು ಪಕ್ವರನ್ನಾಗಿಸಿದೆ. ವೃತ್ತಿ ಸಂಬಂಧ ಮುಂಬೈ, ಉಡುಪಿಗಳಲ್ಲಿ ತಿರುಗಾಡಿದರೂ ನೆಲೆ ನಿಂತದ್ದು ಮಂಗಳೂರಿನಲ್ಲಿ.

ಅಜ್ಜಿಯ ಉಪಾಯ ಮತ್ತು ಹುಲಿ

ಒಂದಾನೊಂದು ಕಾಲದಲ್ಲಿ ಪರ್ವತದ ಬುಡದಲ್ಲಿ ಅಜ್ಜಿಯೊಬ್ಬಳು ವಾಸ ಮಾಡುತ್ತಿದ್ದಳು. ಆ ಪರ್ವತದಲ್ಲಿ ಒಂದು ಹುಲಿಯಿತ್ತು. ಅದು ಅಜ್ಜಿಯ ಮೂಲಂಗಿ ಹೊಲಕ್ಕೆ ಆಗಾಗ ಬರುತ್ತಿತ್ತು.

ಅಜ್ಜಿ ಕಷ್ಟ ಪಟ್ಟು ಬೆಳೆಸಿದ ಮೂಲಂಗಿಗಳನ್ನು ಎಳೆದು ಎಳೆದು ಇಡೀ ಹೊಲವನ್ನು ಹುಲಿ ಹಾಳು ಮಾಡುತ್ತಿತ್ತು. ತನ್ನ ಹಸಿವು ನೀಗಿಸಲಿಕ್ಕಾಗಿ ಹುಲಿ ಮೂಲಂಗಿ ಎಳೆದು ಹಾಕುತ್ತಿದ್ದರೆ ಅಜ್ಜಿ ಸುಮ್ಮನಿರುತ್ತಿದ್ದಳು. ಆದರೆ, ಉಪಟಳ ಮಾಡಲಿಕ್ಕಾಗಿಯೇ ಹುಲಿ ಹಾಗೆ ಮಾಡುತ್ತಿತ್ತು. ಇದರಿಂದಾಗಿ ಅಜ್ಜಿಗೆ ಭಾರೀ ಕೋಪ ಬರುತ್ತಿತ್ತು.

Image

ಸ್ಪೆಷಲ್ ಬಟಾಟೆ ಪಲ್ಯ

Image

ಮೊದಲಿಗೆ ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ಬೆಳ್ಳುಳ್ಳಿ, ಸಾಸಿವೆ, ಉದ್ದಿನ ಬೇಳೆ, ಒಣಮೆಣಸು, ಕರಿಬೇವು, ಸಣ್ಣದಾಗಿ ಕತ್ತರಿಸಿದ ನೀರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಸಣ್ಣದಾಗಿ ಕತ್ತರಿಸಿದ ಬಟಾಟೆ, ಕತ್ತರಿಸಿದ ಟೋಮೇಟೋ, ಸಣ್ಣದಾಗಿ ಕತ್ತರಿಸಿದ ಹಸಿ ಮೆಣಸು ಹಾಕಿ. ಬಟಾಟೆ ಬೇಯಲು ಬೇಕಾದಷ್ಟು ನೀರನ್ನು ಹಾಕಿ.

ಬೇಕಿರುವ ಸಾಮಗ್ರಿ

ಹದ ಗಾತ್ರದ ಬಟಾಟೆ ೨, ನೀರುಳ್ಳಿ ೧, ಟೋಮೇಟೋ ೨, ಕಾಯಿ ಮೆಣಸು ೨-೩, ಕೊತ್ತಂಬರಿ ಸೊಪ್ಪು, ರುಚಿಗೆ ಉಪ್ಪು, ಸ್ವಲ್ಪ ಇಂಗು, ಅರಸಿನ ಹುಡಿ ಅರ್ಧ ಚಮಚ

ಒಗ್ಗರಣೆಗೆ: ಸ್ವಲ್ಪ ಸಾಸಿವೆ, ಬೆಳ್ಳುಳ್ಳಿ ೩-೪ ಎಸಳು, ಉದ್ದಿನ ಬೇಳೆ ೧ ಚಮಚ, ಒಣ ಮೆಣಸು ೨, ಸ್ವಲ್ಪ ಎಣ್ಣೆ, ಕರಿಬೇವಿನ ಸೊಪ್ಪು

 

ಸ್ಪೆಷಲ್ ಶಾವಿಗೆ ಒಗ್ಗರಣೆ

Image

ಮೊದಲು ಶಾವಿಗೆಯನ್ನು ಕಾವಲಿಯಲ್ಲಿ ಹಾಕಿ ಹುರಿಯಿರಿ. ನಂತರ ಬಾಣಲೆಗೆ ತೆಂಗಿನ ಎಣ್ಣೆ ಹಾಕಿ ಅದಕ್ಕೆ ಕತ್ತರಿಸಿದ ಕಾಯಿಮೆಣಸು, ಕತ್ತರಿಸಿದ ಈರುಳ್ಳಿ, ಉದ್ದಿನ ಬೇಳೆ, ಕಡಲೇ ಬೇಳೆ, ಕರಿ ಬೇವಿನ ಸೊಪ್ಪು ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಹುರಿದ ಶ್ಯಾವಿಗೆಯನ್ನು ಹಾಕಿ, ಒಲೆಯನ್ನು ಸಣ್ಣದು ಮಾಡಿ, ಬೇಯಲು ಬೇಕಾದಷ್ಟು ನೀರನ್ನು ಹಾಕಿ ಸರಿಯಾಗಿ ಮಗುಚಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ.

ಬೇಕಿರುವ ಸಾಮಗ್ರಿ

ವರ್ಮಸೆಲ್ಲಿ ಶ್ಯಾವಿಗೆ ೧ ಕಪ್, ನೀರುಳ್ಳಿ ೧, ಕಾಯಿ ಮೆಣಸು ೩-೪, ಉದ್ದಿನ ಬೇಳೆ ೧ ಚಮಚ , ಕಡಲೇ ಬೇಳೆ ೧ ಚಮಚ, ಸ್ವಲ್ಪ ತೆಂಗಿನ ಎಣ್ಣೆ, ರುಚಿಗೆ ಉಪ್ಪು, ಬೇಕಾದಲ್ಲಿ ಸ್ವಲ್ಪ ಸಕ್ಕರೆ, ಕರಿಬೇವಿನ ಸೊಪ್ಪು

ರಾಮ್ ಪ್ರಸಾದ್ ಬಿಸ್ಮಿಲ್ ಎಂಬ ಕ್ರಾಂತಿಕಾರಿಯನ್ನು ನೆನೆಯುತ್ತಾ...!

ಜೂನ್ ೧೧ ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ ಎಂಬ ಕವಿ, ಮಹಾನ್ ಕ್ರಾಂತಿಕಾರಿ, ಅಪ್ಪಟ ದೇಶಪ್ರೇಮಿ, ಸ್ವಾತಂತ್ರ್ಯ ಸಂಗ್ರಾಮದ ವೀರನ ಜನ್ಮ ದಿನ. ಕೇವಲ ಕ್ರಾಂತಿಕಾರಿಯಾಗಿ ಅಲ್ಲ ಉತ್ತಮ ವಾಗ್ಮಿ, ಕವಿಯಾಗಿಯೂ ರಾಮ್ ಪ್ರಸಾದ್ ಬಿಸ್ಮಿಲ್ ಇವರು ನಮ್ಮ ಮನದಾಳದಲ್ಲಿ ಅಮರರಾಗಿ ಉಳಿಯುತ್ತಾರೆ. ೧೮೯೭ರಲ್ಲಿ ಷಹಜಹಾನಪುರ ಎಂಬಲ್ಲಿ ಮುರಳೀಧರ ಮತ್ತು ಮೋಲಮತಿ ದಂಪತಿಗಳ ಸುಪುತ್ರರಾಗಿ ಜನಿಸುತ್ತಾರೆ.

Image