ರಣಜಿ ಪಂದ್ಯಗಳಲ್ಲಿ ಗರಿಷ್ಟ ವಿಕೆಟ್ ದಾಖಲೆಯ ರಾಜೀಂದರ್ ಗೋಯೆಲ್

ಸಾಮಾಜಿಕ ಜಾಲತಾಣದಲ್ಲಿ ಹೀಗೆಯೇ ಕಣ್ಣಾಡಿಸುತ್ತಿರುವಾಗ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆಯವರ ಟ್ವೀಟ್ ಒಂದು ಗಮನ ಸೆಳೆಯಿತು. ಒಂದು ಕಾಲದಲ್ಲಿ ದೇಶೀಯ ಕ್ರಿಕೆಟ್ ಜಗತ್ತಿನ ಪ್ರಮುಖ ಆಧಾರ ಸ್ತಂಭವಾಗಿದ್ದ ರಾಜೀಂದರ್ ಗೊಯೆಲ್ ಅವರ ನಿಧನಕ್ಕೆ ಅಂತಿಮ ನಮನ ಸಲ್ಲಿಸುತ್ತಿದ್ದೇನೆ ಎಂಬುದು ಆ ಟ್ವೀಟ್ ನ ಸಾರ. ಅದನ್ನು ಗಮನಿಸಿದ ನನಗೆ ರಾಜೀಂದರ್ ಗೋಯೆಲ್ ಎಂಬ ವ್ಯಕ್ತಿಯ ಬಗ್ಗೆ ತಿಳಿಯುವ ಮನಸ್ಸಾಯಿತು.

Image

ಭಾರತೀಯ ಚಿತ್ರಕಲೆ ಭಾಗ೬: ಹಸೆ ಚಿತ್ತಾರಗಳು

ನಮ್ಮ ಗ್ರಾಮೀಣ ಜನರ ಜೀವನಪ್ರೀತಿ ದೊಡ್ಡದು. ಪ್ರಕೃತಿಯನ್ನು ಗಮನಿಸುತ್ತಲೇ ಅವರು ಬದುಕಿದರು. ಪ್ರಕೃತಿಯ ಆಗುಹೋಗುಗಳಿಗೆ ಸ್ಪಂದಿಸುತ್ತ ಚಿತ್ರ ಬರೆದರು; ತಮ್ಮ ನೋವುನಲಿವುಗಳನ್ನು ಹಾಡುಗಳನ್ನಾಗಿಸಿದರು. ಅವರು ಬರೆದ ಚಿತ್ರಗಳು ಅವರ ಮನಸ್ಸಿನ ಭಾವನೆಗಳಿಗೆ ಆಕೃತಿ ಕೊಡುವ ಪ್ರಯತ್ನಗಳು.

Image

ಅಂತರಾಷ್ಟ್ರೀಯ ಯೋಗ ದಿನ ; ನಿತ್ಯ ಯೋಗ ಮಾಡಿ, ಆರೋಗ್ಯವಂತರಾಗಿರಿ

ಯೋಗ ಎನ್ನುವ ಒಂದು ಕಾಯಕವನ್ನು ನಾವು ಅನಾದಿ ಕಾಲದಿಂದಲೂ ಮಾಡುತ್ತಾ ಬಂದಿದ್ದೇವೆ. ಭಾರತೀಯರ ಪಾಲಿಗಂತೂ ಯೋಗ ಎನ್ನುವುದು ಹೊಸ ವಿಚಾರ ಅಲ್ಲವೇ ಅಲ್ಲ. ನಮ್ಮ ಋಷಿ ಮುನಿಗಳ ಕಾಲದಿಂದಲೂ ಆರೋಗ್ಯ ಮತ್ತು ಮಾನಸಿಕ ಧೃಡತೆಗಾಗಿ ನಾವು ಕಾಪಾಡಿಕೊಂಡು ಬಂದ ದಿವ್ಯ ಸಂಜೀವಿನಿ ವಿದ್ಯೆಯೇ ಯೋಗ. ಯೋಗ ಮಾಡಿ ನಿರೋಗಿಯಾಗಿ ಎನ್ನುವುದು ಇತ್ತೀಚಿನ ಮಾತಲ್ಲ. ತಲತಲಾಂತರದಿಂದ ಬಂದ ಒಂದು ಪ್ರಾಚೀನ ವಿದ್ಯೆ ಅದು. ಹಲವಾರು ಆಸನಗಳು.

Image

ಮನಸ್ಸಿನ ಮ್ಯಾಜಿಕ್

ಪುಸ್ತಕದ ಲೇಖಕ/ಕವಿಯ ಹೆಸರು
ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈ.ಲಿ., ಕ್ರೆಸೆಂಟ್ ರಸ್ತೆ, ಬೆಂಗಳೂರು
ಪುಸ್ತಕದ ಬೆಲೆ
ರೂ: ೫೦.೦೦ ಮುದ್ರಣ : ೨೦೧೪

ನವಕರ್ನಾಟಕ ಪ್ರಕಾಶನದವರು ಡಾ. ಸಿ.ಆರ್. ಚಂದ್ರಶೇಖರ್ ಇವರ ಸಂಪಾದಕತ್ವದಲ್ಲಿ ವ್ಯಕ್ತಿ ವಿಕಸನ ಮಾಲೆ ಈ ಮಾಲಿಕೆಯಲ್ಲಿ ಹೊರತಂದ ಪುಸ್ತಕವೇ ‘ಮನಸ್ಸಿನ ಮ್ಯಾಜಿಕ್'. ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದ ಅಡ್ಡೂರು ಕೃಷ್ಣ ರಾವ್ ಇವರ ಪ್ರವೃತ್ತಿ ಬರವಣಿಗೆ. ಮಂಗಳೂರಿನ ಬಳಕೆದಾರರ ವೇದಿಕೆಯ ಸಂಚಾಲಕರಾಗಿ ಹಲವಾರು ಮಂದಿಗೆ ಸಲಹೆ ಸಹಾಯ, ಮಾರ್ಗದರ್ಶನ ಮಾಡಿಕೊಟ್ಟಿದ್ದಾರೆ.

ಬಿಳಿಆನೆ ಮತ್ತು ತಾಯಿಆನೆ

ನೂರಾರು ವರುಷಗಳ ಮುಂಚೆ, ಒಂದು ಕಾಡಿನಲ್ಲಿ ಒಂದು ಬಿಳಿಆನೆ ಇತ್ತು. ಭಾರೀ ಗಾತ್ರದ, ಬಲಶಾಲಿಯಾದ ಈ ಆನೆಯ ಚರ್ಮ ಹಾಲಿನಂತೆ ಬಿಳಿ.

ಬಿಳಿಆನೆ ತನ್ನ ತಾಯಿಯನ್ನು ಬಹಳ ಬಹಳ ಪ್ರೀತಿಸುತ್ತಿತ್ತು. ಈ ಪ್ರಪಂಚದ ಎಲ್ಲದಕ್ಕಿಂತಲೂ ಹೆಚ್ಚಾಗಿ, ತನಗಿಂತಲೂ ಹೆಚ್ಚಾಗಿ ಅದು ತನ್ನ ತಾಯಿಯನ್ನು ಪ್ರೀತಿಸುತ್ತಿತ್ತು.

ಆದರೆ ತಾಯಿಆನೆಗೆ ಕಣ್ಣು ಕಾಣಿಸುತ್ತಿರಲಿಲ್ಲ. ಬಿಳಿಆನೆ ತಾಯಿಯನ್ನು ಜೋಪಾನವಾಗಿ ನೋಡಿಕೊಳ್ಳುತ್ತಿತ್ತು. ಅವಳನ್ನು ಒಂದು ತಂಪಾದ ಗವಿಯಲ್ಲಿ ಇರಿಸಿತ್ತು. ಆ ಗವಿಯ ಎದುರಿನಲ್ಲೇ ಇದ್ದ ಸರೋವರದಲ್ಲಿ ಶುಭ್ರವಾದ ನೀರಿತ್ತು. ಆನೆಗಳಿಗೆ ನೀರೆಂದರೆ ಪಂಚಪ್ರಾಣ ತಾನೇ? ಬಿಳಿಆನೆ ನೀರಿನಲ್ಲಿ ಆಗಾಗ ಆಟವಾಡುತ್ತಿತ್ತು. ಸರೋವರದಲ್ಲಿ ನೂರಾರು ತಾವರೆ ಹೂಗಳಿದ್ದವು.

Image

ಭಾರತ-ಚೀನಾ ಗಡಿಯ ಗಲ್ವಾನ್ ಕಣಿವೆ ಹಾಗೂ ನದಿಗೆ ಆ ಹೆಸರು ಬಂದದ್ದು ಹೇಗೆ?

ಸುಮಾರು ೪ ದಶಕಗಳ ಬಳಿಕ ಭಾರತ-ಚೀನಾ ಗಡಿ ಪ್ರದೇಶ ಪ್ರಕ್ಷುಬ್ಧವಾಗಿದೆ. ಭಾರತದ ೨೦ ವೀರ ಯೋಧರು ಹುತಾತ್ಮರಾಗಿದ್ದಾರೆ. ೧೯೬೨ರಲ್ಲೇ ಭಾರತ-ಚೀನಾ ಯುದ್ಧವಾಗಿತ್ತು. ನಂತರದ ದಿನಗಳಲ್ಲಿ ಬಹುತೇಕ ಶಾಂತಿ ನೆಲೆಸಿದಂತಿದ್ದರೂ ಅಲ್ಲಿನ ಪರಿಸ್ಥಿತಿ ಯಾವಾಗಲೂ ಬೂದಿ ಮುಚ್ಚಿದ ಕೆಂಡದಂತೇ ಇತ್ತು. ಚೀನಾ ಒಳಗೊಳಗೇ ಕುದಿಯುತ್ತಲೇ ಇತ್ತು. ಕೆಲವೊಮ್ಮೆ ಅರುಣಾಚಲ ಪ್ರದೇಶದ ಭೂ ಭಾಗ ತನ್ನದೆನ್ನುತ್ತಿತ್ತು.

Image

ತುಪ್ಪದ ಅನ್ನ (ಗೀ ರೈಸ್)

Image

ಮೊದಲಿಗೆ ಬಾಸುಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು ನಂತರ ಸ್ವಲ್ಪ ನೀರು ಹಾಕಿ ಹತ್ತು ನಿಮಿಷ ನೆನೆಯಲು ಬಿಡಿ. ನಂತರ ನೀರುಳ್ಳಿ, ಮೆಣಸನ್ನು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿರಿ. ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಗೋಡಂಬಿ ಚೂರುಗಳನ್ನು ಹಾಗೂ ಒಣ ದ್ರಾಕ್ಷಿಯನ್ನು ಹುರಿದು ತೆಗೆದು ಇಟ್ಟುಕೊಳ್ಳಿರಿ.

ಬೇಕಿರುವ ಸಾಮಗ್ರಿ

ಬಾಸುಮತಿ ಅಕ್ಕಿ ೧ ಕಪ್, ನೀರುಳ್ಳಿ ೨, ಹಸಿ ಮೆಣಸು ೨-೩, ತುಪ್ಪ, ಕರಿಬೇವಿನ ಎಲೆ ೨ ಎಸಳು, ರುಚಿಗೆ ಉಪ್ಪು, ಕೊತ್ತಂಬರಿ ಸೊಪ್ಪು, ಬಿರಿಯಾನಿ ಎಲೆ, ಚಕ್ಕೆ, ಲವಂಗ, ಗೋಡಂಬಿ ಚೂರುಗಳು, ಒಣ ದ್ರಾಕ್ಷಿ, ಏಲಕ್ಕಿ, ಸೋಂಪು, ಕಾಳು ಮೆಣಸು ೧ ಚಮಚ.

ಲಂಡನ್ ಬ್ಯಾಂಕ್ ಹುದ್ದೆಗೆ ವಿದಾಯ: ಈಗ ಹಣ್ಣಿನ ತೋಟದಿಂದ ಮೂರು ಪಟ್ಟು ಆದಾಯ

ಕೇವಲ ಐದು ವರುಷಗಳ ಮುಂಚೆ ಬ್ರಿಟನಿನ ಪ್ರಸಿದ್ಧ ಬ್ಯಾಂಕಿನಲ್ಲಿ ಲಕ್ಷಗಟ್ಟಲೆ ರೂಪಾಯಿ ವೇತನದ ಉದ್ಯೋಗ; ಗಾಜಿನ ಪುಟ್ಟ ಆವರಣದೊಳಗೆ ಹಣಕಾಸಿನ ಲೆಕ್ಕಾಚಾರದ ಬದುಕು. ೨೦೧೫ರಿಂದೀಚೆಗೆ ಹಣ್ಣಿನ ಗಿಡಗಳೊಂದಿಗೆ ಬದುಕು; ೧೨,೫೦೦ ದಾಳಿಂಬೆ ಗಿಡಗಳು, ೭,೫೦೦ ಪಪ್ಪಾಯಿ ಗಿಡಗಳು ಮತ್ತು ೨೦೦ ನಿಂಬೆ ಗಿಡಗಳೊಂದಿಗೆ ಒಡನಾಟ.
ಇದು ನವದೀಪ್ ಗೊಲೇಚಾ ಎಂಬ ೩೦ ವರುಷದ ಯುವಕ ಆರ್ಥಿಕ ಸಲಹೆಗಾರ ಉದ್ಯೋಗ ತೊರೆದು,  ತನ್ನೂರಿಗೆ ಹಿಂತಿರುಗಿ ಕೃಷಿಕನಾದ ಕತೆ. ಯಾವುದೋ ಸಿನೆಮಾನ ಕತೆಯಂತೆ ತೋರುವ ಇದಕ್ಕೆ ಕಾರಣ ಒಂದು ಫೋನ್ ಕರೆ.

Image

‘ದೀಪದ ಮಹಿಳೆ’ ಫ್ಲಾರೆನ್ಸ್ ನೈಟಿಂಗೇಲ್

ಕೊರೋನಾ ಮಹಾಮಾರಿ ಈ ಪ್ರಪಂಚಕ್ಕೆ ಅಪ್ಪಳಿಸಿದ ಬಳಿಕ ನಮಗೆ ವೈದ್ಯರ, ಅದರಲ್ಲೂ ನರ್ಸ್ ಅಥವಾ ದಾದಿಯರ ಮತ್ತು ಆಯಾಗಳ ಮಹತ್ವ ಅರಿವಾಗಿದೆ. ಇವರೆಲ್ಲಾ ಮಾಡುವ ಸೇವೆಗಳನ್ನು ಗಮನಿಸಿ ಸಾಮಾಜ ಇವರನ್ನು ‘ಕೊರೋನಾ ವಾರಿಯರ್ಸ್' ಅಥವಾ ಕೊರೋನಾ ಯೋಧರು ಎಂದು ಕರೆಯಲು ಪ್ರಾರಂಭಿಸಿದೆ. ಇದು ಸತ್ಯವಾದ ಮಾತು.

Image

ಬಟಾಟೆ ರವಾ ಫ್ರೈ

Image

ಮೊದಲಿಗೆ ಬಟಾಟೆಯನ್ನು ಚೆನ್ನಾಗಿ ತೊಳೆದು ವೃತ್ತಾಕಾರದಲ್ಲಿ ತೆಳುವಾಗಿ ಕತ್ತರಿಸಿಟ್ಟುಕೊಳ್ಳಿ. ಅದಕ್ಕೆ ಫಿಷ್ ಫ್ರೈ /ಬೋಂಡಾ ಮಸಾಲವನ್ನು ನೀರಿನಲ್ಲಿ ಕಲಸಿ ಪೇಸ್ಟ್ ತರಹ ಮಾಡಿ ಚೆನ್ನಾಗಿ ತಾಗಿಸಿ. ಉಪ್ಪು ಬೇಕಾದಲ್ಲಿ ರುಚಿಗೆ ತಕ್ಕಷ್ಟು ಹಾಕಿ. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ ಮಸಾಲೆ ತಾಗಿಸಿಟ್ಟ ಬಟಾಟೆಯ ತುಂಡುಗಳನ್ನು ರವಾದಲ್ಲಿ ಹೊರಳಿಸಿ ಎಣ್ಣೆಯಲ್ಲಿ ಬಿಡಿ. ಚೆನ್ನಾಗಿ ಕಾದ ನಂತರ ಬಾಣಲೆಯಿಂದ ತೆಗೆಯಿರಿ.

ಬೇಕಿರುವ ಸಾಮಗ್ರಿ

ದೊಡ್ಡ ಗಾತ್ರದ ಬಟಾಟೆ ೨, ಬೋಂಡಾ ಮಸಾಲೆ ಅಥವಾ ಫಿಷ್ ಫ್ರೈ ಮಸಾಲೆ, ಬೇಕಾದಲ್ಲಿ ಉಪ್ಪು, ಎಣ್ಣೆ, ಸಜ್ಜಿಗೆ ರವಾ (ಉಪ್ಮಾ ರವಾ)