ಬಾಳೆ ಎಲೆಯಲ್ಲಿ ಹಲಸಿನ ಹಣ್ಣಿನ ಕಡುಬು
ಮೇಲೆ ಹೇಳಿದ ಎಲ್ಲಾ ವಸ್ತುಗಳನ್ನು ಕಡಿಯುವ ಕಲ್ಲಿನಲ್ಲಿ ನೀರು ಹಾಕದೇ ರುಬ್ಬಬೇಕು. ರುಬ್ಬುವ ಹಿಟ್ಟು ನಯವಾದಾಗ ಒಂದು ಪಾತ್ರೆಯಲ್ಲಿ ತೆಗೆದು ಇಡಿ. ಬಾಳೆ ಎಲೆಯನ್ನು ಒಲೆಯಲ್ಲಿ ಬಾಡಿಸಿ ಅದರ ಮೇಲೆ ಮೊದಲು ರುಬ್ಬಿದ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಹರಡಿ, ಮಡಚಿ ಇಡ್ಲಿ ಬೇಯಿಸುವ ಪಾತ್ರೆಯಲ್ಲಿ ಹಬೆಯಲ್ಲಿ ಬೇಯಿಸಿ. ೪೦ ರಿಂದ ೪೫ ನಿಮಿಷ ಬೇಯಿಸಿ. ನಂತರ ಪಾತ್ರೆಯ ಮುಚ್ಚಳ ತೆಗೆದು ಬೆಂದಿದೆಯಾ ಎಂದು ಪರೀಕ್ಷಿಸಿ. ಸರಿಯಾಗಿ ಬೆಂದ ಬಳಿಕ ಒಲೆಯಿಂದ ಪಾತ್ರೆಯನ್ನು ಕೆಳಗಿಳಿಸಿ. ತುಪ್ಪ ಹಾಗೂ ಉಪ್ಪಿನಕಾಯಿ ಜೊತೆ ತಿನ್ನಲು ಬಲು ರುಚಿಕರ. ಮಳೆಗಾಲದಲ್ಲಿ ಹಲಸಿನ ಹಣ್ಣು ದೊರೆತಾಗ ಈ ತಿಂಡಿಯನ್ನು ಮಾಡಬಹುದು.
ಹಲಸಿನ ಸೊಳೆ ೨ ಕಪ್, ಬೆಳ್ತಿಗೆ ಅಕ್ಕಿ ಅರ್ಧ ಕಪ್, ಬೆಲ್ಲ ರುಚಿಗೆ ತಕ್ಕಷ್ಟು, ತೆಂಗಿನ ತುರಿ ೪ ಚಮಚ, ರುಚಿಗೆ ತಕ್ಕಷ್ಟು ಉಪ್ಪು. ಸ್ವಲ್ಪ ಏಲಕ್ಕಿ
- Read more about ಬಾಳೆ ಎಲೆಯಲ್ಲಿ ಹಲಸಿನ ಹಣ್ಣಿನ ಕಡುಬು
- Log in or register to post comments