ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೮) - ಚಿತ್ರಾಂಗದ

ಉಲೂಪಿ ಜೊತೆ ಜೊತೆಯಲ್ಲೇ ಸಾಗಿ ಬರುವ ಇನ್ನೊಂದು ಮಹಾಭಾರತದ ಪಾತ್ರವೆಂದರೆ ಚಿತ್ರಾಂಗದ. ಅರ್ಜುನನ ಮೂರನೇ ಪತ್ನಿ. ಇವಳನ್ನೂ ಅರ್ಜುನ ಅವನ ದೇಶಾಂತರದ ತೀರ್ಥಯಾತ್ರೆಯ ಸಮಯದಲ್ಲೇ ಮದುವೆಯಾಗುತ್ತಾನೆ. ಇವಳಿಂದ ಭಬ್ರುವಾಹನ ಎಂಬ ಮಗನನ್ನೂ ಪಡೆಯುತ್ತಾನೆ. ಇವೆಲ್ಲದರ ವೃತ್ತಾಂತವನ್ನು ಓದೋಣ ಬನ್ನಿ,

Image

ಪುಸ್ತಕನಿಧಿ - 6. ಬಾಜೀರಾವ್ ಮಸ್ತಾನಿ - ಸರಜೂ ಕಾಟ್ಕರ್ ಅವರ ಕಾದಂಬರಿ

ಡಾ. ಸರಜೂ ಕಾಟ್ಕರ್  ಅವರ ಈ ಕಾದಂಬರಿಯು ಉಚಿತವಾಗಿ VIVIDLIPI ಎಂಬ App ನಲ್ಲಿ ಈ-ಬುಕ್ ರೂಪದಲ್ಲಿ ಇದೆ.  

 ಇದೇ ಕಥೆಯ ಚಲನಚಿತ್ರವನ್ನು ನೀವು ಹಿಂದಿ ಭಾಷೆಯಲ್ಲಿ ನೋಡಿರಬಹುದು. ಮರಾಠ ಸಾಮ್ರಾಜ್ಯದ  ಬ್ರಾಹ್ಮಣ ಪೇಶ್ವೆ ಬಾಜಿರಾಯನು ಶೂರ ಧೀರ. ಹಿಂದೂ ಸಾಮ್ರಾಜ್ಯದ ರಕ್ಷಣೆಗಾಗಿ ಖಡ್ಗ ಹಿಡಿದು ಕ್ಷತ್ರಿಯ ಕರ್ಮವನ್ನು ಮಾಡುತ್ತಿರುವನು. ಈತನಿಗೆ ಈಗಾಗಲೇ ಮದುವೆಯಾಗಿದ್ದರೂ ಮುಸ್ಲಿಂ ನರ್ತಕಿಯಾದ ಮಸ್ತಾನಿಯ ಪ್ರೇಮದಲ್ಲಿ ಬಿದ್ದು ಅವಳನ್ನು ಮದುವೆಯಾಗುವನು. ಅವಳಿಗೆ ಒಂದು ಗಂಡು ಮಗುವಾಗುವುದು. ಅವಳನ್ನು ಪುಣೆಯ ಸಂಪ್ರದಾಯಸ್ಥ ಬ್ರಾಹ್ಮಣ ಸಮಾಜ ಸ್ವೀಕರಿಸುವುದಿಲ್ಲ. 

ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೭) - ಉಲೂಪಿ

ನಾವು ಕೇಳಿದ, ಓದಿದ ಮಹಾಭಾರತದ ಕಥೆಗಳಲ್ಲಿ ಉಲೂಪಿ ಅಥವಾ ಉಲ್ಲೂಪಿಯ ನೇರ ಉಲ್ಲೇಖಗಳು ಕಂಡು ಬರುವುದು ಕಮ್ಮಿ. ಆದರೆ ಉಲೂಪಿಯ ಬಗ್ಗೆ ವಿಷ್ಣು ಪುರಾಣ ಹಾಗೂ ಭಾಗವತ ಪುರಾಣಗಳಲ್ಲಿ ಉಲ್ಲೇಖವಿದೆ. ಉಲೂಪಿ ಓರ್ವ ನಾಗ ಕನ್ಯೆ. ನಾಗ ರಾಜ ಕೌರವ್ಯನ ಮಗಳು. ಗಂಗಾ ನದಿಯ ಆಳದಲ್ಲಿ ಇರುವ ನಾಗ ಸಾಮ್ರಾಜ್ಯವನ್ನು ಕೌರವ್ಯ ರಾಜನು ಆಳುತ್ತಿದ್ದ. ಉಲೂಪಿಯು ಓರ್ವ ಸಮರ್ಥ ಯೋಧಳಾಗಿದ್ದಳು. ಉಲೂಪಿ ಜೊತೆ ಹಲವಾರು ಕತೆಗಳು ಜೋಡಿಸಲ್ಪಟ್ಟಿವೆ. ಉಲೂಪಿ ಅರ್ಜುನನ ಎರಡನೇ ಪತ್ನಿ. 

Image

ದಿಕ್ಕು ತೋಚದಾದಾಗ ದೇವರಿಗೆ ಶರಣಾಗಿ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.

ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.

Image

ಜನಸಾಮಾನ್ಯರ ದನಿಯಾದ ಹಲ್ದಾರ್ ನಾಗ್ ಎಂಬ ಕವಿ

ಕೆಲವು ವರ್ಷಗಳ ಹಿಂದೆ ಭರತಬಾಲಾ ನಿರ್ದೇಶನದಲ್ಲಿ ‘ವರ್ಚುವಲ್ ಭಾರತ್’ ಎಂಬ ಸಂಸ್ಥೆ ಸಾವಿರ ಚಿತ್ರಗಳ ಪ್ರಯಾಣ (A 1000 film journey, one story at a time) ಎಂಬ ಕಿರು ಸಾಕ್ಷ್ಯ ಚಿತ್ರಗಳ ಸರಣಿಯನ್ನು ಪ್ರಾರಂಭಿಸಿತ್ತು. ಈ ಸರಣಿಯಲ್ಲಿ ಹಲವಾರು ಎಲೆ ಮರೆಯ ಕಾಯಿಗಳಂತಿರುವ ಸಾಧಕರ ಬದುಕನ್ನು ಹೊರ ಜಗತ್ತಿಗೆ ತೆರೆದಿಡುವ ಪ್ರಯತ್ನ ಮಾಡಿತ್ತು. ಅವರು ಗುರುತಿಸಿದ ಓರ್ವ ವ್ಯಕ್ತಿಯೇ ಹಲ್ದಾರ್ ನಾಗ್ ಅಥವಾ ಹಲ್ದೋರ್ ನಾಗ್.

Image

5 ಪೈಸೆ ವರದಕ್ಷಿಣೆ

ಪುಸ್ತಕದ ಲೇಖಕ/ಕವಿಯ ಹೆಸರು
ವಸುಧೇಂದ್ರ
ಪ್ರಕಾಶಕರು
ಛಂದ ಪುಸ್ತಕ, ಬನ್ನೇರುಘಟ್ಟ ರಸ್ತೆ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೬೦.೦೦ ಮೊದಲ ಮುದ್ರಣ ೨೦೧೬

ಆಕರ್ಷಕವಾದ ಹೆಸರನ್ನು ಹೊಂದಿರುವ ೫ ಪೈಸೆ ವರದಕ್ಷಿಣೆ ಎಂಬ ಪುಸ್ತಕವು ವಸುಧೇಂದ್ರ ಇವರ ಸುಲಲಿತ ಪ್ರಬಂಧಗಳ ಸಂಗ್ರಹ. ಸುಲಲಿತ ಪ್ರಬಂಧಗಳನ್ನು ಬರೆಯುವುದರಲ್ಲಿ ವಸುಧೇಂದ್ರ ಇವರದ್ದು ಎತ್ತಿದ ಕೈ. ಈ ಪುಸ್ತಕದಲ್ಲಿ ೨೪ ಪುಟ್ಟ ಪುಟ್ಟ ಪ್ರಬಂಧಗಳಿವೆ. ಚೆನ್ನಾಗಿ ಓದಿಸಿಕೊಂಡೂ ಹೋಗುತ್ತದೆ. ೫ ಪೈಸೆಯನ್ನು ಒಂದೊಂದು ಪೈಸೆಯಾಗಿ ವಿಂಗಡಿಸಿ ಒಂದೊಂದರ ಅಡಿಯಲ್ಲಿ ೪-೬ ಪ್ರಬಂಧಗಳು ಬರುವಂತೆ ಮಾಡಿದ್ದಾರೆ. 

ವಿನೋಬಾ ಭಾವೆಯವರ ಪಪ್ಪಾಯಿ ಹಣ್ಣಿನ ಕತೆ

ವಿನಾಯಕ ನರಹರಿ ಭಾವೆಯೇ ನಮಗೆಲ್ಲಾ ಚಿರಪರಿಚಿತರಾಗಿರುವ ವಿನೋಬಾ ಭಾವೆ. ವಿನೋಬಾಬಾವೆಯವರು ಮಹಾತ್ಮಾ ಗಾಂಧಿಯವರ ಒಡನಾಡಿಯಾಗಿದ್ದರು. ಉತ್ತಮ ಲೇಖಕರೂ, ಬಹುಭಾಷಾ ಪಂಡಿತರೂ ಆಗಿದ್ದರು. ಹುಟ್ಟಿದ್ದು ಮಹಾರಾಷ್ಟ್ರದಲ್ಲಾದರೂ ಅವರಿಗೆ ಕನ್ನಡ ಭಾಷೆಯ ಅರಿವು ಚೆನ್ನಾಗಿಯೇ ಇತ್ತು. ಕನ್ನಡ ಲಿಪಿಯನ್ನು ಅವರು ‘ಲಿಪಿಗಳ ರಾಣಿ' ಎಂದು ಕರೆಯುತ್ತಿದ್ದರು. ಸೆಪ್ಟೆಂಬರ್ ೧೧, ೧೮೯೫ರಲ್ಲಿ ಜನಿಸಿದ ಇವರು ‘ಭೂದಾನ’ ಚಳುವಳಿಯ ಹರಿಕಾರರೆಂದೇ ಖ್ಯಾತಿ ಪಡೆದಿದ್ದಾರೆ. ಶ್ರೀಮಂತ ಜಮೀನ್ದಾರರ ಮನವೊಲಿಸಿ ಎಕರೆಗಟ್ಟಲೆ ಭೂಮಿಯನ್ನು ದಾನವಾಗಿ ಪಡೆದು ಬಡ ರೈತರಿಗೆ ಹಸ್ತಾಂತರ ಮಾಡಿದ ಕೀರ್ತಿ ಇವರದ್ದು. ನವೆಂಬರ್ ೧೫, ೧೯೮೨ರಲ್ಲಿ ತಮ್ಮ ೮೭ನೇ ವಯಸ್ಸಿನಲ್ಲಿ ನಿಧನಹೊಂದುತ್ತಾರೆ.

Image

ಕೊರೋನಾ ಅವ - ಲಕ್ಷಣ

    ಆಕಾಶ ತಲೆಯ ಮೇಲೆ  ಬಿದ್ದಂತೆ ಕುಳಿತಿದ್ದ ಗುಂಡಾಚಾರಿಯನ್ನು  ನೋಡಿ, ಒಳಬಂದ ಅವನ ಸ್ನೇಹಿತ, ಕಾಶಿಗೆ ಆಶ್ಚರ್ಯವಾಯಿತು.
    `ಏನು ಗುಂಡಣ್ಣ, ಹೀಗೆ ಕೂತಿದ್ದೀಯಾ?’ ಕಾಶಿ ಪ್ರಶ್ನಿಸಿದ. ನಿಟ್ಟುಸಿರುಬಿಟ್ಟ ಗುಂಡನೆಂದ - `ಕರೋನಾ ವಕ್ಕರಿಸಿದೆ ಕಣೋ.' ಆರಡಿ ದೂರ ಹಾರಿ ಬಿದ್ದ ಕಾಶಿ - `ಟೆಸ್ಟ್ ಮಾಡಿಸಿದ್ಯಾ?'
    `ಟೆಸ್ಟ್ ಮಾಡ್ಲಿಲ್ಲ, ಟೇಸ್ಟ್ ಮಾಡಿದೆ, ಗೊತ್ತಾಯ್ತು'
    `ಅಂದ್ರೆ. . . ?'

ಲೋಕಸಂಗ್ರಹ ಎಂದರೇನು ?

ಭಗವದ್ಗಿತೆಯಲ್ಲಿ 'ಲೋಕಸಂಗ್ರಹ ' ದ  ಪ್ರಸ್ತಾಪ ಇದೆ. 

ಈ ಶಬ್ದದ ಕುರಿತು ಅಂತರ್ಜಾಲದಲ್ಲಿ ಹುಡುಕಾಡಿದಾಗ ತಿಳಿದು ಬಂದ ಸಂಗತಿ ಈ ಕೆಳಗಿದೆ.

ಸಾಮಾನ್ಯ ಜನರನ್ನು ತಪ್ಪುದಾರಿಗೆ ಹೋಗದಂತೆ ಧರ್ಮದ ಮರ್ಯಾದೆಯಲ್ಲಿರಲು ದಾರಿ ತೋರಿಸಲು ಮಾಡುವ ಕೆಲಸವನ್ನು ಆಚಾರ್ಯ ಶಂಕರರು 'ಲೋಕಸಂಗ್ರಹ' ಎಂದಿದ್ದಾರೆ. ಲೋಕಕ್ಕೆ ಮಾದರಿಯಾಗಿ, ನೋಡಿದೊಡನೆಯೇ ಕೆಟ್ಟದಾರಿ ಬೇಡ, ಒಳ್ಳೆಯ ದಾರಿಯಲ್ಲಿ ಸಾಗಬೇಕೆಂಬ ಪ್ರೇರಣೆ ನೀಡುವ ಸಾಧು-ಮಹಾತ್ಮರೇ ನಿಜವಾದ ಲೋಕಸಂಗ್ರಹ ಮಾಡುವವರು. ಕೇವಲ ಸಮಾಜಸೇವೆ ಲೋಕಸಂಗ್ರಹವಾಗದು. ವೈಯಕ್ತಿಕ ಜೀವನದಲ್ಲಿ ಧರ್ಮದ ಆಚರಣೆ ಮಾಡಿ, ಸಾಮಾನ್ಯ ಜನರ ಜೀವನದಲ್ಲಿ ಪರಿಣಾಮವಾಗುವಂತೆ ಮಾಡುವುದೇ ಲೋಕಸಂಗ್ರಹ.