ಅವನರಸಿ ಹೊರಟಿದೆ ಮನ

ಅರಿಯದೂರಿಗೆ ಹೊರಟಿದೆ ನನ್ನೀಮನ

ಅರಸಿ ಅವನೊಲವ ಸೊಗಸನು

ಅನುಪಮದೂಯ್ಯಾಲೆಯಲಿ ಅವಿತು

ಆಲಂಗಿಸಿದ ಅವನಾಡಿದ ನುಡಿಯನು||

 

ಆಕಸ್ಮಿಕ ಭೇಟಿಯ ಅನುಲಂಘನೀಯ ಕ್ಷಣ

ಅಗಲಿದ ಫುಟ್ಬಾಲ್ ದಂತಕತೆ -ಡೀಗೊ ಮರಡೋನಾ

೮೦-೯೦ರ ದಶಕದಲ್ಲಿ ಡೀಗೊ ಮರಡೋನಾ ಎಂದರೆ ಕ್ರೀಡಾ ಪ್ರೇಮಿಗಳ ಕಿವಿ ನೆಟ್ಟಗಾಗುತ್ತಿತ್ತು. ಮರಡೋನಾ ಫುಟ್ಬಾಲ್ ಆಟದಲ್ಲಿ ತೋರಿದ ಮಾಂತ್ರಿಕತೆಗೆ ಅದು ಸಾಟಿಯಾಗಿತ್ತು. ನಮಗೆ ಸಚಿನ್ ತೆಂಡೂಲ್ಕರ್ ಎಂದರೆ ಹೇಗೆ ಮೈರೋಮಾಂಚನವಾಗುತ್ತದೆಯೋ ಅದೇ ರೀತಿ, ಅರ್ಜೆಂಟೀನಾ ದೇಶದವರಿಗೆ ಮರಡೋನಾ. ಸಚಿನ್ ಹಾಗೂ ಮರಡೋನಾ ಅವರ ಜರ್ಸಿ ನಂಬರ್ ೧೦. ಮರಡೋನಾ ಅವರ ಕಾಲಿನಲ್ಲಿ ನಿಜಕ್ಕೂ ಮಾಂತ್ರಿಕತೆ ಇತ್ತು. ನೀವು ಈಗಲೂ ಯೂಟ್ಯೂಬ್ ಮೊದಲಾದ ಚಾನೆಲ್ ಗಳಲ್ಲಿ ಮರಡೋನಾ ಆಟವನ್ನು ವೀಕ್ಷಿಸಿದರೆ ಈ ವಿಷಯ ನಿಮ್ಮ ಗಮನಕ್ಕೆ ಬಂದೇ ಬರುತ್ತದೆ.

Image

ಶ್ರೀ ತುಳಸಿ ನಮೋಸ್ತುತೇ

ಧ್ಯಾಯೇಚ್ಛ ತುಳಸೀಂ ದೇವೀಂ ಶ್ಯಾಮಾಂ ಕಮಲಲೋಚನಾಂ/

ಪ್ರಸನ್ನಾಂ ಪದ್ಮ ಕಲ್ಹಾರ ವರಾಭಯ ಚತುರ್ಭುಜಾಂ//ಕಿರೀಟ ಹಾರ ಕೇಯೂರ ಕುಂಡಲಾದಿ ವಿಭೂಷಿತಾಂ/

ಧವಲಾಂಕುಶ ಸಂಯುಕ್ತಾಂ ನಿಷೇದುಷೀಂ//

ಶ್ರೀ ತುಳಸಿ ಪ್ರಣಾಮ ಸ್ತೋತ್ರ

Image

ನಮ್ಮ ಹೆಮ್ಮೆಯ ಭಾರತ (ಭಾಗ 31 - 32)

೩೧.ಸಿಂಹಬಾಲದ ಕೋತಿ
ಪುರಾತನ ಸ್ಪಿಷೀಸ್ ಆಗಿರುವ ಸಿಂಹಬಾಲದ ಕೋಟಿ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡು ಬರುತ್ತದೆ. ಇವುಗಳಿಗೆ ಕಪ್ಪು ಬಣ್ಣದ ನಯವಾದ ರೋಮಗಳಿವೆ. ಮುಖಕ್ಕೆ ಮುಖವಾಡ ಇಟ್ಟಂತೆ ಕಂದು ಬಣದ ಕೂದಲು ಆವರಿಸಿಕೊಂಡಿದೆ. ಸಿಂಹದ ಬಾಲದಂತಹ ಬಾಲವಿರುವ ಕಾರಣ ಇವುಗಳಿಗೆ ಈ ಹೆಸರು.

ಮಳೆಕಾಡಿನ ಮರಗಳಲ್ಲಿ ಇವುಗಳ ವಾಸ. ಹಣ್ಣುಗಳು ಮತ್ತು ಎಲೆಗಳು ಪ್ರಧಾನ ಆಹಾರ. ಅವಲ್ಲದೆ, ಬೀಜಗಳು, ಚಿಗುರುಗಳು, ಬೇರುಗಳು ಮತ್ತು ಮರಗಳ ತೊಗಟೆಯನ್ನೂ ತಿನ್ನುತ್ತವೆ. ಹಲ್ಲಿಗಳು, ಕಪ್ಪೆಗಳು, ಕೀಟಗಳು ಮತ್ತು ಮೊಟ್ಟೆಗಳನ್ನೂ ತಿನ್ನುತ್ತವೆ.

Image

ತುಳಸಿ ಪೂಜೆಯ ಭಕ್ತಿ ಗೀತೆಗಳು

ಶ್ರೀ ತುಳಸಿ - ವಿಷ್ಣು ಪ್ರಿಯೆ

ಅಮ್ಮಾ ಬಾರಮ್ಮ ಶ್ರೀ ತುಳಸಿ ಬಾರಮ್ಮ

ವಿಷ್ಣು ಪ್ರಿಯೆ ಶುಭದಾಯಕಿ ಬಾರಮ್ಮ

ಧಾರಿಣೀ ದೇವಿ ಒಲಿದು ಬಾರಮ್ಮ

ಪದುಮನಾಭನ ಹೃದಯವೇಣಿಯೇ ಬಾರಮ್ಮ//

 

ತುಳಸಿ ಪೂಜೆ ಮತ್ತು ಅದರ ವಿಶೇಷತೆ

ಇಂದು ಮತ್ತು ನಾಳೆ ತುಳಸಿ ಹಬ್ಬ. ಎರಡು ದ್ವಾದಶಿ ಬಂದಿರುವುದರಿಂದ ಗುರುವಾರ ಕೆಲವರಿಗೆ ಮತ್ತೆ ಶುಕ್ರವಾರ ಕೆಲವರಿಗೆ ತುಳಸಿ ಹಬ್ಬ. ಅವರವರ ಮನೆಯ, ಮನದ ಆಚರಣೆಗೆ ತಕ್ಕಂತೆ ಆಚರಿಸಿ.

ದೀಪಾವಳಿಯ ನಂತರ ಆಚರಿಸುವ ಹಬ್ಬ ತುಳಸಿ ಹಬ್ಬ ಅಥವಾ ತುಳಸಿ ಮದುವೆ. ಶ್ರೀ ತುಳಸಿಯೊಂದಿಗೆ ಶ್ರೀ ವಿಷ್ಣುವಿನ ವಿವಾಹ ಮಾಡುವುದೇ ತುಳಸಿ ಮದುವೆಯ ವಿಧಿಯಾಗಿದೆ.

Image

ಅಗೊಳಿ ಮಂಞಣೆ ಬೀಮೆ

ಪುಸ್ತಕದ ಲೇಖಕ/ಕವಿಯ ಹೆಸರು
ಅಂಶುಮಾಲಿ
ಪ್ರಕಾಶಕರು
ತುಳು ಕೂಟ, ಉಡುಪಿ
ಪುಸ್ತಕದ ಬೆಲೆ
ರೂ.100.00

*ಅಂಶುಮಾಲಿ ಅವರ ತುಳು ನಾಟಕ "ಅಗೊಳಿ ಮಂಞಣೆ ಬೀಮೆ"*

 " ಅಗೊಳಿ ಮಂಞಣೆ ಬೀಮೆ", ಅಂಶುಮಾಲಿಯವರು ಸುಮಾರು 1980 - 81ರಲ್ಲಿ ರಚಿಸಿದ ಮತ್ತು 1985ರಲ್ಲಿ ಮಂಗಳೂರಿನ "ತುಳು ಕೂಟ" ನಡೆಸಿದ "ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಸ್ಮಾರಕ ತುಳು ನಾಟಕ ರಚನಾ ಸ್ಪರ್ಧೆ" ಯಲ್ಲಿ ತೃತೀಯ ಬಹುಮಾನ ಪಡೆದ ನಾಟಕ. ಇದನ್ನು ನಾಲ್ಕು ದಶಕಗಳ ಬಳಿಕ ಉಡುಪಿಯ "ತುಳು ಕೂಟ" ಪ್ರಕಾಶಿಸಿದೆ. 88 ಪುಟಗಳ ಕೃತಿಯ ಬೆಲೆ ನೂರು ರೂಪಾಯಿ.

ಮನೆಯಂಗಳದಲ್ಲಿರುವ ತುಳಸಿ ಕಟ್ಟೆಯ ಮಹಿಮೆ

ದೀಪಾವಳಿ ಕಳೆದು ೧೨ನೇ ದಿನಕ್ಕೆ ಬರುವ ಉತ್ಥಾನ ದ್ವಾದಶಿ ಎಂದರೆ ತುಳಸಿ ಪೂಜೆಯ ಸಂಭ್ರಮದ ದಿನ. ಕರಾವಳಿ ಜಿಲ್ಲೆಗಳಲ್ಲಿ ಇದನ್ನು ಹೆಚ್ಚಾಗಿ ಆಚರಿಸುತ್ತಾರೆ. ಕೆಲವೆಡೆ ದೀಪಾವಳಿಗಿಂತಲೂ ವಿಜೃಂಭಣೆಯಿಂದ ಆಚರಿಸುತ್ತಾರೆ. ಹಿಂದೂಗಳ ಮನೆಗಳನ್ನು ಹಾಗೂ ಮನಸ್ಸುಗಳನ್ನು ತುಳಸಿ ವೃಕ್ಷವು ಏಕಪ್ರಕಾರವಾಗಿ ಅಲಂಕರಿಸುತ್ತದೆ. ಅಂಗಳದಲ್ಲಿ ತುಳಸಿ ವೃಂದಾವನ (ಕಟ್ಟೆ)ವಿರುವ ಮನೆಗಳನ್ನು ಆಸ್ತಿಕ ಹಿಂದೂಗಳ ಮನೆಗಳೆಂದು ಸುಲಭವಾಗಿ ಗುರುತಿಸಬಹುದು.

ತುಳಸಿ ಕಾನನಂ ಯತ್ರ ಯತ್ರಪದ್ಮವ ನಾನಿಚ|

Image