ಪುಸ್ತಕದ ಲೇಖಕ/ಕವಿಯ ಹೆಸರು
ಎಸ್.ಜಿ.ಸಿದ್ದರಾಮಯ್ಯ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೨೫.೦೦, ಮುದ್ರಣ: ೨೦೧೯
ಪ್ರೊ. ಎಸ್. ಜಿ.ಸಿದ್ಧರಾಮಯ್ಯ ಅವರು ಕನ್ನಡ ಕಾವ್ಯಲೋಕದ ನೆಲದನಿಯ ಸಂವೇದನೆ. ಅವರ ಕಾವ್ಯಕಾರಣದ ದೇಸಿ ನುಡಿಗಟ್ಟುಗಳು ಕನ್ನಡ ಸಾಹಿತ್ಯದ ಕಾವ್ಯ ತೆನೆಯನ್ನು ಸದಾ ಹಸಿರಾಗಿಡುವುದರಲ್ಲಿ ಸಾವಯವ ಸಂಬಂಧವನ್ನು ಹೊಂದಿವೆ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿಯನ್ನು ಪಡೆದು ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ವೃತ್ತಿಜೀವನ ಪ್ರಾರಂಭಿಸಿದ ಸಿದ್ಧರಾಮಯ್ಯನವರು ರಾಜ್ಯದ ಹಲವು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿಯೂ, ಪ್ರಾಂಶುಪಾಲರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕವನ, ನಾಟಕ, ವಿಮರ್ಶೆ ಸೇರಿದಂತೆ ಹಲವು ಕೃತಿಗಳನ್ನು ರಚಿಸಿರುವ ಸಿದ್ಧರಾಮಯ್ಯ ಅವರು ಕ್ರಿಯಾಶೀಲ ಹಾಗೂ ಸೃಜನಾತ್ಮಕ ಬರವಣಿಗೆಯ ಕಣಜ. ಅವರ ಬರವಣಿಗೆಗಾಗಿ ಪು.ತಿ.ನ.