ಪಿಂಚ್ ಆಫ್ ಪ್ರಪಂಚ

ಪುಸ್ತಕದ ಲೇಖಕ/ಕವಿಯ ಹೆಸರು
ರಂಗಸ್ವಾಮಿ ಮೂಕನಹಳ್ಳಿ
ಪ್ರಕಾಶಕರು
ಅಯೋಧ್ಯಾ, ಗಿರಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೨೦.೦೦. ಮುದ್ರಣ: ೨೦೨೦

ಪಿಂಚ್ ಆಫ್ ಪ್ರಪಂಚ ಪುಸ್ತಕವು ರಂಗಸ್ವಾಮಿ ಮೂಕನಹಳ್ಳಿ ಇವರ ಒಂಬತ್ತನೇ ಪ್ರಕಟಿತ ಪುಸ್ತಕ. ತುಮಕೂರು ಜಿಲ್ಲೆಯ ಸಿರಾದಲ್ಲಿ ಇವರ ಜನನ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಿರಾ ಮತ್ತು ಬೆಂಗಳೂರಿನಲ್ಲಿ. ಇಪ್ಪತ್ತಮೂರನೆಯ ವಯಸ್ಸಿಗೆ ದುಬಾಯಿ ಪ್ರಯಾಣ. ನಂತರ ಕೈಬೀಸಿ ಕರೆದದ್ದು ಬಾರ್ಸಿಲೋನಾ. ಇಂಗ್ಲೆಂಡ್ ನ ಇನ್ಸ್ಟಿಟ್ಯೂಟ್ ಆಫ್ ಇಂಟರ್ನಲ್ ಆಡಿಟರ್ಸ್ ಸಂಸ್ಥೆಯ ಮೂಲಕ ಸರ್ಟಿಫೈಡ್ ಇಂಟರ್ನಲ್ ಆಡಿಟರ್ ಪದವಿ. ಇದುವರೆಗೆ ಅರವತ್ತು ದೇಶಗಳ ಪ್ರಯಾಣ, ಪ್ರವಾಸ. ಆ ದೇಶಗಳ ಆರ್ಥಿಕ ಸ್ಥಿತಿಗತಿ ಬಗ್ಗೆ ನಿರಂತರ ಲೇಖನ ಕೃಷಿ ಮಾಡಿ ಇದುವರೆಗೆ ಪ್ರಕಟಿಸಿರುವ ಪುಸ್ತಕಗಳು ಎಂಟು. 

ನಮ್ಮ ಹೆಮ್ಮೆಯ ಭಾರತ (ಭಾಗ 29 - 30)

೨೯.ಜಗತ್ತಿನ ಅಪರೂಪದ ದೈತ್ಯ ಪ್ರಾಣಿ ಏಷ್ಯಾದ ಆನೆ
ಅತ್ಯಧಿಕ ಸಂಖ್ಯೆಯ ಏಷ್ಯಾದ ಆನೆಗಳು ಭಾರತದಲ್ಲಿವೆ. ಗಾತ್ರದಲ್ಲಿ ಇವು ಆಫ್ರಿಕಾದ ಆನೆಗಳಿಗಿಂತ ಸಣ್ಣವು. ಇವುಗಳ ಸೊಂಡಿಲುಗಳ ತುದಿಯಲ್ಲಿರುವ ಪುಟ್ಟ ಬೆರಳಿನಂತಹ ಭಾಗದಿಂದ ಇವು ಅತ್ಯಂತ ಸಣ್ಣ ವಸ್ತುಗಳನ್ನೂ ಎತ್ತಿಕೊಳ್ಳಬಲ್ಲವು. ಏಷ್ಯಾದ ಗಂಡಾನೆಗಳಿಗೆ ಮಾತ್ರ ಎರಡೆರಡು ದಂತಗಳಿವೆ.

ಈ ಆನೆಗಳು ದಕ್ಷಿಣ ಭಾರತದ ಮತ್ತು ಈಶಾನ್ಯ ಭಾರತದ ಕಾಡುಗಳಲ್ಲಿ ಗುಂಪುಗುಂಪಾಗಿ ವಾಸ ಮಾಡುತ್ತವೆ. ಇವು ಸಣ್ಣ ಮರಗಳನ್ನೂ ದೊಡ್ಡ ಮರಗಳ ಕೊಂಬೆಗಳನ್ನೂ ನೆಲಕ್ಕೆಳೆದು ಎಲೆಗಳನ್ನು ತಿನ್ನುತ್ತವೆ. ಕಾಡಿನಲ್ಲಿ ಇವು ಸಾಗಿದ ದಾರಿ ಇತರ ಪ್ರಾಣಿಗಳಿಗೂ ದಾರಿಯಾಗುತ್ತದೆ. "ಆನೆ ಸಾಗಿದ ದಾರಿ" ಎಂಬ ನಾಣ್ಣುಡಿಯೇ ಬಳಕೆಯಲ್ಲಿದೆ.

Image

ಬದುಕಿನಲ್ಲಿ ಬಾಗುವುದನ್ನು ಕಲಿಯಿರಿ

ತಾಮ್ರದ ಕೊಡ ಬಾವಿಯಲ್ಲಿ ಇಳಿದಾಗ ಬಾಗಿ ತನ್ನೊಳಗೆ ಪೂರ್ಣ ನೀರು ತುಂಬಿಕೊಂಡು ಮೇಲೆ ಬರುತ್ತದೆ. ಆದರೆ ಪ್ಲಾಸ್ಟಿಕ್ ಕೊಡ ಹಾಗಲ್ಲ. ನೀರು ತುಂಬಿಸಲು ಪ್ರಯಾಸ ಪಡಬೇಕು. ಬೇಗನೇ ಬಾಗುವುದೂ ಇಲ್ಲ. ಎತ್ತಿ ಕುಕ್ಕಿ ತುಂಬಿಸಬೇಕು. ತುಂಬಿದರೂ ಚೂರು ಕಡಿಮೆಯಾಗಿಯೇ ಮೇಲೆ ಬರುತ್ತದೆ. ಯಾವುದು ಬಾಗುತ್ತದೆಯೋ. ಅದು ಪೂರ್ಣ ತುಂಬಿಕೊಳ್ಳುತ್ತದೆ. ಯಾವುದು ಬಾಗುವುದಿಲ್ಲವೊ ಅದು ಅಪೂರ್ಣವೇ.

Image

ದಕ್ಷಿಣ ಭಾರತದ ಗಾಂಧಿ- ಕಾರ್ನಾಡ್ ಸದಾಶಿವ ರಾವ್

ಮಂಗಳೂರಿನ ಹೃದಯಭಾಗದಲ್ಲಿ ಒಂದು ರಸ್ತೆ ಇದೆ. ಅದನ್ನು ಎಲ್ಲರೂ ಕೆ.ಎಸ್. ಆರ್. ರಸ್ತೆ  ಅಥವಾ ಕೆ.ಎಸ್. ರಾವ್ ರಸ್ತೆ ಎಂದು ಕರೆಯುತ್ತಾರೆ. ಅದರ ವಿಸ್ತರಣಾ ರೂಪ ಹಲವರಿಗೆ ಮರೆತೇ ಹೋಗಿದೆ ಎಂದು ಕಾಣುತ್ತದೆ. ಮಹಾತ್ಮಾ ಗಾಂಧಿ ರಸ್ತೆ ಎಂಜಿ ರಸ್ತೆ ಆದಂತೆ ಮುಂದೊಂದು ದಿನ ಅಪ್ರತಿಮ ಸ್ವಾತಂತ್ರ್ಯ ಯೋಧ, ಸಮಾಜ ಸೇವಕ ಕಾರ್ನಾಡು ಸದಾಶಿವ ರಾವ್ ಅವರನ್ನು ನಮ್ಮ ಮುಂದಿನ ಪೀಳಿಗೆ ಕೇವಲ ಕೆ.ಎಸ್. ಆರ್ ಎಂದು ಗುರುತಿಸತೊಡಗುತ್ತದೆ ಎಂಬುದೇ ಬೇಸರದ ಸಂಗತಿ ಅಲ್ಲವೇ? ನಮ್ಮ ಸರಕಾರಗಳಿಗೂ ಯಾವುದಾದರೂ ರಸ್ತೆಗೆ, ವೃತ್ತಕ್ಕೆ ಅಥವಾ ಚೌಕಕ್ಕೆ ಮಹನೀಯರ ಹೆಸರು ಇಡಲಷ್ಟೇ ಆತುರ. ಆ ಮಹನೀಯರ ಬಗ್ಗೆ, ಅವರು ದೇಶಕ್ಕಾಗಿ, ಸಮಾಜಕ್ಕಾಗಿ ಮಾಡಿದ ಸತ್ಕಾರ್ಯಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶ ಇಲ್ಲವೇ ಇಲ್ಲ.

Image

ಬಾಳಿಗೊಂದು ಚಿಂತನೆ (14) - ಸೋಲು - ಗೆಲುವು

ನಾವೆಲ್ಲರು *ಗೆಲುವು*ಸಿಕ್ಕಾಗ ಹಿಗ್ಗುತ್ತೇವೆ. ಸಂತೋಷ ಪಡುತ್ತೇವೆ. ಎಲ್ಲರೊಂದಿಗೆ ಹಂಚಿಕೊಳ್ಳುತ್ತೇವೆ. *ಸೋಲು* ಬಂದಾಗ ಕುಗ್ಗುತ್ತೇವೆ, ಮನಸ್ಸು ಮುದುಡುತ್ತದೆ. ಅಯ್ಯೋ, ನನಗೆ ಹೀಗಾಯಿತಲ್ಲ? ಎಂದು ಹಲುಬುತ್ತೇವೆ. ಆ *ಸೋಲನ್ನು* ಸಹ ನಾವು ನಮ್ಮ ಸಮವಯಸ್ಕರೊಂದಿಗೆ, ನಮ್ಮ ಕುಟುಂಬದ ಸದಸ್ಯರೊಂದಿಗೆ, ನಮ್ಮ ಆತ್ಮೀಯ ಸ್ನೇಹಿತರೊಂದಿಗೆ ಹೇಳಿಕೊಂಡು, ಮನಸ್ಸು ಹಗುರ ಮಾಡಿಕೊಳ್ಳೋಣ. ಅವರಿಂದ ಏನಾದರೂ ಉತ್ತಮ ಸಲಹೆಗಳು ಸಿಗಲೂಬಹುದು.

Image

ಲಾಟೀನು ಹೊತ್ತ ಕುರುಡ

ವೃದ್ಧನಾದ ಗುರುವೊಬ್ಬ, ಶೃದ್ಧೆ ಸಾಲದ ತನ್ನ ಶಿಷ್ಯರಿಗೆ ಈ ಕೆಳಗಿನ ಕಥೆ ಹೇಳುತ್ತಿದ್ದನಂತೆ-

ಒಂದು ದಿನ ಒಬ್ಬ ಕುರುಡ ತನ್ನ ಸ್ನೇಹಿತನ ಮನೆಗೆ ಹೋಗಿದ್ದ. ಅಲ್ಲಿಂದ ತಿರುಗಿ ಮನೆಗೆ ಹೊರಟಾಗ ರಾತ್ರಿಯಾಗಿ ಹೋಗಿತ್ತು. ಕುರುಡ ತನ್ನ ಮಿತ್ರನಿಗೆ ಹೇಳಿದ - ‘ಅಪ್ಪಾ ಮಿತ್ರಾ, ರಾತ್ರಿ ಕತ್ತಲು, ನಿನ್ನ ಲಾಟೀನು ಕೊಡು, ಒಯ್ಯುತ್ತೇನೆ.’ ಎಂದ. 

Image

ಅಲೆಕ್ಸಾಂಡರನ ದಂಡಯಾತ್ರೆ ಮತ್ತು ಹಿಂದೂ ಗುರು ಫಣೀಶ

ಅಲೆಕ್ಸಾಂಡರ್ ‘ದಿ ಗ್ರೇಟ್' ಎಂಬ ಗ್ರೀಕ್ (ಗ್ರೀಸ್) ಚಕ್ರವರ್ತಿಯ ಬಗ್ಗೆ ಇತಿಹಾಸ ಜ್ಞಾನವಿರುವ ಯಾರಿಗೆ ತಾನೇ ಗೊತ್ತಿಲ್ಲ? ಇಡೀ ವಿಶ್ವವನ್ನು ಜಯಿಸಿ ‘ವಿಶ್ವ ವಿಜೇತ’ನಾಗಬೇಕೆಂಬ ಕನಸು ಹೊತ್ತ ಅಲೆಕ್ಸಾಂಡರ್ ಅದರಲ್ಲಿ ಅಸಫಲವಾಗುತ್ತಾನೆ. ಅಲೆಕ್ಸಾಂಡರ್ ಬದುಕಿದ್ದು ಕೇವಲ ೩೩ ವರ್ಷ ಮಾತ್ರ. ಆದರೆ ಅವನ ಸಾಹಸ ಕಥೆಗಳು ಈಗಲೂ ಜನಜನಿತ. ಇವನು ಭಾರತದಲ್ಲೂ ಸುಮಾರು ೧೯ ತಿಂಗಳು ತನ್ನ ದಂಡಯಾತ್ರೆಯನ್ನು ಮಾಡಿದ್ದ. ಅವನಿಗೆ ಜಮ್ಮುವಿನ ರಾಜ ಪುರೂರವ ಅಥವಾ ಪೋರಸ್ ಮಾತ್ರ ತೀವ್ರ ಪೈಪೋಟಿ ನೀಡಿದ್ದ. ಅಲೆಕ್ಸಾಂಡರ್ ವಿರುದ್ಧ ವೀರಾವೇಷದಿಂದ ಹೋರಾಡಿದ್ದ ವೀರ ಪುರೂರವ.

Image