ಚಂದ್ರನ ಮೇಲೆ ಜಿಗಿದ ಕಪಿಲೆ ದನ

ಸುಂಯ್, ಸುಂಯ್, ಸುಂಯ್ ! ಮೋಂಟು ಮೊಲ ಹೊಲದಲ್ಲಿ ಇಪ್ಪತ್ತಡಿ ಓಡಿ, ನೆಲದಿಂದ ಸೊಂಯ್ಯನೆ ಎತ್ತರಕ್ಕೆ ಜಿಗಿಯಿತು. “ನೋಡಿ, ನಾನು ಗಾಳಿಯಲ್ಲಿ ಎತ್ತರಕ್ಕೆ ಹಾರಬಲ್ಲೆ” ಎಂದು ಹೊಲದಲ್ಲಿದ್ದ ಇತರ ಪ್ರಾಣಿಗಳಿಗೆ ಕೂಗಿ ಹೇಳಿತು.

“ಓ, ಚೆನ್ನಾಗಿ ಜಿಗಿಯುತ್ತಿ” ಎಂದಿತು ಕುರಿ. “ಚೆನ್ನಾಗಿ ಜಿಗಿಯುತ್ತಿ. ಆದರೆ ನನ್ನಷ್ಟು ಚೆನ್ನಾಗಿ ಜಿಗಿಯಲು ನಿನ್ನಿಂದಾಗದು. ನಾನು ಗೇಟಿನ ಮೇಲೆ ಜಿಗಿಯ ಬಲ್ಲೆ” ಎಂದಿತು ಕಾವಲು ನಾಯಿ. ತಕ್ಷಣವೇ ಕಾವಲು ನಾಯಿ ಓಡಿ ಹೋಗಿ, ಗೇಟಿನ ಮೇಲಕ್ಕೆ ಹಾರಿ ಬಯಲಿಗೆ ಜಿಗಿಯಿತು.

Image

ಮಕ್ಕಳ ದಿನಾಚರಣೆಗೆ ಎರಡು ಕವನಗಳು

ಇಂದು ನವಂಬರ ೧೪ ವಿಶೇಷ ದಿನ. ಶಾಲೆಗಳಿರುತ್ತಿದ್ದರೆ ಮಕ್ಕಳಿಗೆ ಒಂದು ರೀತಿಯಲ್ಲಿ ಸಂಭ್ರಮ ಸಡಗರ. ಚಾ ಚಾ ನೆಹರೂರವರ ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ನಾಡಿನ ಸಮಸ್ತ ಮಕ್ಕಳಿಗೆ ಶುಭವಾಗಲೆಂದು ಹಿರಿಯರಾದಿಯೆಲ್ಲರು ಹಾರೈಸೋಣ . ಆ ಪ್ರಯುಕ್ತ ಒಂದು ದೇಶಭಕ್ತಿ ಗೀತೆ .... ಜೈ ಹೊ 

ಮಕ್ಕಳೆಲ್ಲ ಬನ್ನಿರೆಲ್ಲ...

ಮಕ್ಕಳೆಲ್ಲ ಬನ್ನಿರೆಲ್ಲ

ದೀಪಾವಳಿ ಹಬ್ಬದ ಸಂಭ್ರಮಕ್ಕೆ ಎರಡು ಕವನಗಳು

ಭಾವಗಳ ಚಿತ್ತಾರ

ಬಣ್ಣಗಳ ಚಿತ್ತಾರ

ಬೆಳಕುಗಳ ಹರಿಕಾರ

ವರುಷ ಹರುಷದ

ಜೊತೆಗೆ ಉಲ್ಲಾಸ ಸಾಗರ//

 

ದೀಪಾವಳಿ ಮತ್ತೆ ಬಂದಿದೆ. ದೀಪವ ಬೆಳಗೋಣ ಬನ್ನಿ..

ದೀಪಾವಳಿ- ಹೆಸರೇ ಹೇಳುವಂತೆ ದೀಪಗಳ ಹಬ್ಬ. ನಾವು ಸಣ್ಣವರಿರುವಾಗ ಆಚರಣೆಯಲ್ಲಿ ಇದ್ದ ಸಂಭ್ರಮ ಈಗ ದೊಡ್ಡವರಾದ ಮೇಲೆ ಕಮ್ಮಿ ಆಗಿದೆ ಎಂದು ನಮಗೆ ಅನಿಸಿದರೂ ಈಗಿನ ಮಕ್ಕಳಿಗೆ ದೀಪಾವಳಿ ಸಂಭ್ರಮದ ಹಬ್ಬವೇ. ಏಕೆಂದರೆ ದೀಪಾವಳಿ ಸಮಯದ ಹೊಸ ಬಟ್ಟೆಗಳು, ಹೂವು ಹಣ್ಣುಗಳು, ಸಿಹಿ ತಿಂಡಿಗಳು, ಆಕಾಶ ಬುಟ್ಟಿ, ಮನೆಗೆ ಬರುವ ಬಂಧು ಮಿತ್ರರು, ಎಣ್ಣೆ ಸ್ನಾನ, ಗೋಪೂಜೆ ಎಲ್ಲದಕ್ಕಿಂತ ಮಿಗಿಲು ಪಟಾಕಿಗಳು. ಬಾಲ್ಯದಲ್ಲಿ ನಮಗೆ ಪಟಾಕಿ ಹೊಡೆಯುವ ಸಂಭ್ರಮವೇ ಬೇರೆಯಾಗಿತ್ತು. ಪಟಾಕಿಯನ್ನು ಸಿಡಿಸಲು ಈಗಿನಂತೆ ನಿರ್ಭಂಧಗಳಿರಲಿಲ್ಲ. ಹಸಿರು ಪಟಾಕಿ, ಶಬ್ದ ರಹಿತ, ವಾಯು ಮಾಲಿನ್ಯ ರಹಿತ ಪಟಾಕಿಗಳು ಎಂಬ ತಲೆ ಬಿಸಿಯಿರಲಿಲ್ಲ.

Image

ನೀರು ತುಂಬುವ ಹಬ್ಬ (ಒಂದು ಸಣ್ಣ ಲಘುಬರಹ)

ನಾಳೆ ನರಕ ಚತುರ್ದಶಿ. ಅದರ ಹಿಂದಿನ ದಿನ, ತ್ರಯೋದಶಿಯ ಸಂಜೆ ‘ನೀರುತುಂಬುವ ಹಬ್ಬ’ ಎಂದು ಆಚರಿಸುವುದು ಪದ್ಧತಿ. ನನ್ನ ಚಿಕ್ಕಂದಿನಲ್ಲಿ, ಬೆಂಗಳೂರಿನ ನಮ್ಮ ಮನೆಯಲ್ಲಿ, ನಮ್ಮಮ್ಮ, ಹಂಡೆ, ಬಿಂದಿಗೆಗಳಲ್ಲಿ ನೀರು ತುಂಬಿಸಿಟ್ಟು, ಅದರ ಮುಂದೆ ರಂಗೋಲಿ ಬಿಡಿಸಿ, ಅವುಗಳಿಗೆ ಅರಿಶಿನ ಕುಂಕುಮವಿಟ್ಟು  ಪೂಜೆ ಮಾಡುತ್ತಿದ್ದರು. 

 

ಕನ್ನಡ ನಾಡು-ನುಡಿ (೫) : ದಾಸ ಶ್ರೇಷ್ಠರು

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅಪಾರ ಸಾಧನೆಯನ್ನು ಮಾಡಿ,*ದಾಸ ಸಾಹಿತ್ಯ*ವನ್ನು ಉಣಬಡಿಸಿದವರಲ್ಲಿ ಅಗ್ರಗಣ್ಯರು *ಪುರಂದರದಾಸರು*. ಕೋಟಿ ಸಂಪತ್ತು ತನ್ನಲ್ಲಿದ್ದರೂ, ಎಲ್ಲವನ್ನೂ ತ್ಯಜಿಸಿ, ವ್ಯಾಸರಾಯರ ಶಿಷ್ಯರಾಗಿ, ದಾಸರಾಗಿ, ಹಾಡುಗಳ ಮೂಲಕ, ಲೋಕದ ಡೊಂಕುಗಳ ತಿದ್ದಲು ಪ್ರಯತ್ನಿಸಿದವರು.ದಾಸಸಾಹಿತ್ಯವನ್ನು ಅತ್ಯಂತ ಮೇಲ್ಮಟ್ಟಕ್ಕೆ ಒಯ್ದುವುದರಲ್ಲಿ ದುಡಿದವರು.

Image

ಅಕ್ಷರಗಳ ಮಾಂತ್ರಿಕ ರವಿ ಬೆಳಗೆರೆಯ ನೆನಪಿನಲ್ಲಿ…

ಇಂದು ಬೆಳಿಗ್ಗೆ ಏಳುವಾಗಲೇ ನನ್ನ ಪಾಲಿಗೆ ಶುಕ್ರವಾರ ‘ಬ್ಲ್ಯಾಕ್ ಫ್ರೈಡೇ' ಆಗಿತ್ತು. ಕನ್ನಡದ ಖ್ಯಾತ ಪತ್ರಕರ್ತ, ಲೇಖಕ, ನಿರೂಪಕ ರವಿ ಬೆಳಗೆರೆಯವರು ಇನ್ನಿಲ್ಲ ಎಂಬ ಸುದ್ದಿ ತಿಳಿದು ಮನಸ್ಸಿಗೆ ತುಂಬಾನೇ ಖೇದವಾಯಿತು. ಒಬ್ಬ ಲೇಖಕನಾಗಿ ನಾನು ಅವರ ಬರಹಗಳನ್ನು ತುಂಬಾ ಮೆಚ್ಚಿ ಕೊಂಡಿದ್ದೇನೆ. ಅವರ ಬಗೆಗಿನ ಬಹಳಷ್ಟು ವಿವರಗಳು ದೃಶ್ಯ ಮಾಧ್ಯಮದಲ್ಲಿ ಇವತ್ತು ದಿನವಿಡೀ ತೋರಿಸುವುದರಿಂದ ನಾನು ಅಧಿಕವಾಗಿ ಹೇಳಲೇನೂ ಹೋಗುವುದಿಲ್ಲ. ನನ್ನ ಅವರ ನಡುವಿನ ಸಣ್ಣಗಿನ ಒಡನಾಟದ ಬಗ್ಗೆ ಒಂದೆರಡು ಮಾತುಗಳನ್ನು ಬರೆಯಲಷ್ಟೇ ಈ ಲೇಖನ ಮುಡಿಪು.

Image

ಅಶ್ರುತರ್ಪಣ

ಬಾಳ ಪಯಣದಲ್ಲಿ ಹಾದಿ ತೋರಿಸುತ

ಜೀವನ ಪೂರ್ತಿ ಜೀವವನು ಸವೆಸಿದಳು

ಕಷ್ಟಕಾಲದಲ್ಲಿ ಕೈ ಹಿಡಿದು ನಗುನಗುತಲಿ

ಬಾಳ ರಥವನು ಗಜದಂತೆ ಎಳೆದಳು

 

ಕೂಲಿನಾಲಿಯ ಮಾಡುತ ಬದುಕಿ

ನಮ್ಮ ಹೆಮ್ಮೆಯ ಭಾರತ (ಭಾಗ 27 - 28)

೨೭.ಜಗತ್ತಿನ ಅತಿ ವಿಸ್ತಾರವಾದ ನದಿಬಯಲು
ಸಿಂಧೂ - ಗಂಗಾ - ಬ್ರಹ್ಮಪುತ್ರ ನದಿಬಯಲು ಜಗತ್ತಿನ ಅತಿ ವಿಸ್ತಾರವಾದ ನದಿಬಯಲು. ಇದರ ಉದ್ದ ೩,೨೦೦ ಕಿಮೀ. ಇದರ ಒಂದು ಭಾಗ ಭಾರತದಲ್ಲಿದ್ದರೆ, ಇನ್ನೊಂದು ಭಾಗ ಪಾಕಿಸ್ಥಾನದಲ್ಲಿದೆ. ಭಾರತದಲ್ಲಿರುವ ಭಾಗದ ಉದ್ದ ೨,೪೦೦ ಕಿಮೀ. ಮತ್ತು ಸರಾಸರಿ ಅಗಲ ೧೫೦ರಿಂದ ೩೦೦ ಕಿಮೀ. ಇದು ವ್ಯಾಪಿಸಿರುವ ಪ್ರದೇಶ ೭.೮ ಲಕ್ಷ ಚದರ ಕಿಮೀ.

ಈ ನದಿಬಯಲು ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರ ನದಿಗಳ ಹಾಗೂ ಅವುಗಳ ಉಪನದಿಗಳ ಬಯಲುಗಳನ್ನು ಒಳಗೊಂಡಿದೆ. ಇದು ಜಗತ್ತಿನಲ್ಲೇ ಜನಸಾಂದ್ರತೆ ಅತ್ಯಂತ ಹೆಚ್ಚಾಗಿರುವ ಪ್ರದೇಶಗಳಲ್ಲಿ ಒಂದಾಗಿದೆ. ಹಾಗೂ ಇದು ಬಹಳ ಫಲವತ್ತಾದ ನದಿಬಯಲು. ಯಾಕೆಂದರೆ ಈ ನದಿಗಳೂ ಉಪನದಿಗಳೂ ಹೊತ್ತು ತರುವ ಮೆಕ್ಕಲು ಮಣ್ಣು ಇಲ್ಲಿ ತುಂಬಿಕೊಂಡಿದೆ.

Image

ಪರಿಸರ ಸ್ನೇಹಿ ಬಿದಿರಿನ ಉತ್ಪನ್ನಗಳು

ಪರಿಸರ ಮಾಲಿನ್ಯ ನಮ್ಮ ದೇಶದ ಅತೀದೊಡ್ಡ ಸಮಸ್ಯೆಯಾಗಿ ಪರಿವರ್ತನೆಯಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಪ್ಲಾಸ್ಟಿಕ್ ಎಂದರೆ ತಪ್ಪಾಗಲಾರದು. ನಾವಿನ್ನೂ ಈ ಪ್ಲಾಸ್ಟಿಕ್ ಪೆಡಂಭೂತಕ್ಕೆ ಪರ್ಯಾಯವನ್ನು ಕಂಡುಹುಡುಕಿಲ್ಲ. ಮಣ್ಣಿನಲ್ಲಿ ಕರಗುವ ಪ್ಲಾಸ್ಟಿಕ್ ಕಂಡು ಹಿಡಿದರೆ ಬಹಳಷ್ಟು ಉಪಕಾರವಿದೆ. ಆದರೆ ಪ್ಲಾಸ್ಟಿಕ್ ಉತ್ಪನ್ನಗಳಿಗೆ ಪರ್ಯಾಯವಾಗಿ ನಾವು ಬಿದಿರು ಬಳಸಬಹುದು. ಕಳೆದ ವರ್ಷ ‘ಸಂಪದ’ದಲ್ಲಿ ಶ್ರೀ ಅಡ್ಡೂರು ಕೃಷ್ಣ ರಾವ್ ಇವರು ಬಿದಿರಿನ ಬಾಟಲಿ ಬಗ್ಗೆ ಒಂದು ಲೇಖನ ಬರೆದಿದ್ದರು. ಅದು ಅಸ್ಸಾಂನ ಡಿಬಿ ಇಂಡಸ್ಟ್ರೀಸ್ ನ ಸ್ಥಾಪಕರಾದ ಧೃತಿಮಾನ್ ಬೋರಾ ಸಾಧನೆ ಬಗ್ಗೆ ಬೆಳಕು ಚೆಲ್ಲಿದ ವಿಷಯವಾಗಿತ್ತು. ಅವರು ತಯಾರಿಸಿದ ಬಿದಿರಿನ ಬಾಟಲಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಅರ್ಥಪೂರ್ಣ ಲೇಖನ.

Image