ಮೊದಲ ತೊದಲು ನುಡಿ
ಮೊದಲ ಕಂದನ ತೊದಲ ನುಡಿಯದು
ನವ್ಯಕಾವ್ಯದ ಆಲಾಪದ ತೇರು
ಮೊದಲ ಹೆಜ್ಜೆಯ ಸವಿಯ ಪಾದವು
ಗದ್ಯಪದ್ಯ ಪ್ರಲಾಪದ ಬೇರು...
ಮಗುವು ನಗುತಿಹೆ ಮನೆಯ ತುಂಬವು
- Read more about ಮೊದಲ ತೊದಲು ನುಡಿ
- Log in or register to post comments
ಮೊದಲ ಕಂದನ ತೊದಲ ನುಡಿಯದು
ನವ್ಯಕಾವ್ಯದ ಆಲಾಪದ ತೇರು
ಮೊದಲ ಹೆಜ್ಜೆಯ ಸವಿಯ ಪಾದವು
ಗದ್ಯಪದ್ಯ ಪ್ರಲಾಪದ ಬೇರು...
ಮಗುವು ನಗುತಿಹೆ ಮನೆಯ ತುಂಬವು
ಝೆನ್ ಗುರುವಿನ ಬಳಿ ಶಿಷ್ಯನೊಬ್ಬ ಕೇಳಿದ, “ಸೌಂದರ್ಯ ಎಂದರೇನು?" ಗುರುವಿನ ಉತ್ತರ: “ಸೌಂದರ್ಯವನ್ನು ಮೊದಲು ನೋಡಲು ಕಲಿಯಬೇಕು.” ಆಗ ಶಿಷ್ಯ ಅಮಾಯಕನಂತೆ ಪ್ರಶ್ನಿಸಿದ, “ಎಲ್ಲಿ? ಹೇಗೆ?”
ಗುರು ಅವನನ್ನು ಊರಿನ ಕೆರೆಯ ಬಳಿಗೆ ಕರೆದೊಯ್ದು ಕೇಳಿದರು, “ಕೆರೆ ಹೇಗಿದೆ?” ಶಿಷ್ಯ ಕೆರೆಯನ್ನೊಮ್ಮೆ ನೋಡಿ ಹೇಳಿದ, “ಕೆರೆ ಶಾಂತವಾಗಿದೆ.” “ಬಾಗಿ ನೋಡು, ಏನು ಕಾಣಿಸುತ್ತಿದೆ?” ಎಂದು ಪುನಃ ಪ್ರಶ್ನಿಸಿದರು ಗುರು. ಶಿಷ್ಯ ಬಾಗಿ ನೋಡಿ, "ನನ್ನ ಮುಖ ಕಾಣಿಸುತ್ತಿದೆ” ಎಂದು ಉತ್ತರಿಸಿದ.
ಅದಾಗಿ ಒಂದು ತಿಂಗಳ ನಂತರ ಗುರು ಮತ್ತು ಶಿಷ್ಯ ಪುನಃ ಅದೇ ಕೆರೆಯ ಬಳಿಗೆ ಬಂದರು. ಈಗಲೂ ಗುರುವಿನ ಅದೇ ಪ್ರಶ್ನೆಗೆ ಅದೇ ಉತ್ತರ ನೀಡಿದ ಶಿಷ್ಯ. ಐದಾರು ಸಲ ಇದರ ಪುನರಾವರ್ತನೆ ಆಯಿತು.
ಸಂತಾನರೂಪದಲ್ಲಿ ಯಾರು ಮರುಜನ್ಮಿಸುತ್ತಾರೆ ಎಂದರೆ...
ಪೂರ್ವ ಜನ್ಮ ಕರ್ಮದ ಫಲವಾಗಿ ಈ ಜನ್ಮದಲ್ಲಿ ತಂದೆ-ತಾಯಿ ಅಕ್ಕತಂಗಿ ಅಣ್ಣತಮ್ಮ ಪತಿ ಪತ್ನಿ ಬಂಧುಬಾಂಧವರು ಇತ್ಯಾದಿ ಸಂಬಂಧಗಳು ಬಾಂಧವ್ಯಗಳು ನಮ್ಮೊಂದಿಗೆ ಬೆಸೆಯುತ್ತೇವೆ. ಸಂಬಂಧಗಳು ನಮಗೆ ಈ ಜನ್ಮದಲ್ಲೂ ಏನಾದರೂ ಕೊಡುವದಿರುತ್ತೆ ಪಡೆಯುದಿರುತ್ತೆ. ಹಾಗೆಯೇ ಪುತ್ರ ಅಥವಾ ಪುತ್ರಿಯ ರೂಪದಲ್ಲಿ ಪೂರ್ವಜನ್ಮದ ಸಂಬಂಧಿಯೆ ಜನ್ಮ ಪಡೆಯತ್ತಾರೆ. ಶಾಸ್ತ್ರ ಪುರಾಣದಲ್ಲಿ ಇದನ್ನೇ ನಾಲ್ಕು ಪ್ರಕಾರವಾಗಿ ಹೇಳಲಾಗಿದೆ.
ಸಂಸ್ಕೃತ ವರ್ಣಮಾಲೆಯ ಹಿನ್ನೆಲೆಯನ್ನು ಇಟ್ಟುಕೊಂಡು *ಕನ್ನಡ* ವರ್ಣಮಾಲೆಯ ರಚನೆಯಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬರುತ್ತಿದೆ. ಕನ್ನಡದ ವರ್ಣಮಾಲೆಯ ಬಗ್ಗೆ , ಒಟ್ಟು ಎಷ್ಟು ಅಕ್ಷರಗಳನ್ನು ಒಳಗೊಂಡಿದೆ ಎಂಬ ಬಗ್ಗೆ, ವಿದ್ವಾಂಸರಲ್ಲಿಯೇ ಏಕತಾನತೆಯಿಲ್ಲ. ಭಾಷಾ ಬೆಳವಣಿಗೆಯ ಹಂತಗಳು, ಭಾಷಾ ಪ್ರಭೇದಗಳು ಬದಲಾವಣೆಯಾದಂತೆ, ಕನ್ನಡದ ಕೆಲವು ಅಕ್ಷರಗಳು ಇಲ್ಲವಾಯಿತು. ಹಳತು ಹೋಗಿ ಹೊಸ ಅಕ್ಷರಗಳು ಬಂದು ಸೇರಿಕೊಂಡಿತು.
ಪ್ರತಿ ವರುಷ ನವಂಬರ್ ತಿಂಗಳು ಕನ್ನಡಿಗರಿಗೆ ಕನ್ನಡ ಹಬ್ಬ. ಕನ್ನಡದಲ್ಲಿ ಏನಾದರೂ ಬರೆಯುವುದು ಕೂಡ ಕನ್ನಡ ಹಬ್ಬದ ಸಂಭ್ರಮಾಚರಣೆ, ಅಲ್ಲವೇ?
"ಲೇಖನ ಬರೆಯಿರಿ” ಎಂದಾಗ “ಯಾವುದರ ಬಗ್ಗೆ ಬರೆಯಲಿ?” ಎಂಬುದು ಹಲವರು ಕೇಳುವ ಪ್ರಶ್ನೆ. ಒಮ್ಮೆ ಸುತ್ತಮುತ್ತ ಕಣ್ಣು ಹಾಯಿಸಿದರೆ ಸಾಕು; ಲೇಖನಕ್ಕೆ ಹೂರಣ ಆಗಬಹುದಾದ ನೂರಾರು ವಿಷಯಗಳು ನಿಮಗೇ ಕಾಣಿಸುತ್ತವೆ.
*ಅರ್ಪಣೆ!*
ಎಲ್ಲೋ ಹಾರುತಿಹ ಹಕ್ಕಿ
ನನ್ನೊಳಗೆ ಹೊಕ್ಕಿ..!
ಬಡಿದೇಳಿಸುತಿದೆ
ಉತ್ಸಾಹ ಉಕ್ಕಿ.!!
ನವಿಲುಗರಿಯನ್ನು ಮುಕುಟದಲ್ಲಿ ಹೊಂದಿರದ ಶ್ರೀಕೃಷ್ಣನ ಮುಖವನ್ನು ಕಲ್ಪಿಸಿಕೊಳ್ಳುವುದೂ ನಮಗೆ ಅಸಾಧ್ಯ. ಯಾವುದೇ ಯಕ್ಷಗಾನವಿರಲಿ, ನಾಟಕವಿರಲಿ ಅಥವಾ ಮಕ್ಕಳ ಛದ್ಮವೇಷ ಸ್ಪರ್ಧೆಯಿರಲಿ, ಕೃಷ್ಣನ ಪಾತ್ರ ಇದೆಯೆಂದರೆ ಅದಕ್ಕೆ ನವಿಲುಗರಿ ಬೇಕೇ ಬೇಕು. ಈ ನವಿಲು ಗರಿ ಕೃಷ್ಣನ ಮುಕುಟದ ಶೋಭೆಯನ್ನು ಹೆಚ್ಚಿಸಿರುವುದಂತೂ ನಿಜ. ಆದರೆ ನೀವೆಂದಾದರೂ ಕೃಷ್ಣನ ಮುಕುಟಕ್ಕೆ ಈ ನವಿಲುಗರಿ ಹೇಗೆ ಹತ್ತಿಕೊಂಡಿತು? ಕೃಷ್ಣನು ತನ್ನ ಮುಕುಟದಲ್ಲಿ ನವಿಲುಗರಿಗೆ ಏಕೆ ಪ್ರಾಮುಖ್ಯತೆ ನೀಡಿದ ಎಂದು ಗೊತ್ತೇ? ಅದು ತಿಳೀಯಬೇಕಾದರೆ ನೀವು ರಾಮಾಯಣದ ಸಮಯಕ್ಕೆ ಹೋಗಲೇ ಬೇಕು. ವಿಷ್ಣುವಿನ ದಶಾವತಾರಗಳಲ್ಲಿ ರಾಮ ಹಾಗೂ ಕೃಷ್ಣ ಬರುತ್ತಾರೆ.
ಬಿಟ್ ಕಾಯಿನ್ ಮತ್ತು ಬ್ಲಾಕ್ ಚೈನ್ ತಂತ್ರಜ್ಞಾನದ ಬಗ್ಗೆ ಈಗೀಗ ಬಹಳಷ್ಟು ಮಾತುಗಳು ಕೇಳಿ ಬರುತ್ತಿವೆ. ಬಿಟ್ ಕಾಯಿನ್ಸ್ ಬಗ್ಗೆ ಜನ ಸಾಮಾನ್ಯರಿಗೆ ಏನೇನೂ ತಿಳಿದಿಲ್ಲ. ಸುಮ್ಮನೇ ವಿವರಗಳನ್ನು ಕೊಡುತ್ತಾ ಹೋದರೆ ಅರ್ಥವೂ ಆಗಲಾರದು. ಅದಕ್ಕಾಗಿಯೇ ವಿಠಲ್ ಶೆಣೈ ಅವರು ಕಾದಂಬರಿ ರೂಪದಲ್ಲಿ ‘ನಿಗೂಢ ನಾಣ್ಯ' ಎಂಬ ಪುಸ್ತಕವನ್ನು ಬರೆದು ಓದುಗ ಪ್ರಭುವಿನ ಮಡಿಲಿಗೆ ಹಾಕಿದ್ದಾರೆ. ‘ನಿಗೂಢ ನಾಣ್ಯ' ಬಹಳ ಹಿಂದೆಯೇ ‘ಮೈಲ್ಯಾಂಗ್ ಬುಕ್ಸ್’ ಎಂಬ ಇ-ಬುಕ್ಸ್ ಮತ್ತು ಆಡಿಯೋ ಬುಕ್ಸ್ ಮಾರುವ ಸಂಸ್ಥೆಯ ಮೂಲಕ ಪ್ರಕಟವಾಗಿತ್ತು. ಬಹಳಷ್ಟು ಜನಪ್ರಿಯವೂ ಆಗಿತ್ತು.
ನನ್ನ ಮಾತು
ನನ್ನ ಎಡೆಗೆ
ಸಾಗಿ ಬರಲಿ ಎಂದಿಗು
ಎನ್ನ ಒಲವೆ
ಬಾಳ ಪಯಣ
ನಿನ್ನ ಜೊತೆಗೆ ಮುಂದೆಗು
ನಮ್ಮ ಬದುಕಿನ ದಾರಿಯಲ್ಲಿ ಕಲ್ಲು ಮುಳ್ಳುಗಳು, ನಾನಾರೀತಿಯ ಅಡಚಣೆಗಳು ಬರಬಹುದು. ಅದನ್ನೆಲ್ಲ ದಾಟಿಕೊಂಡು, ಮುಂದೆ ಮುಂದೆ ಸಾಗುವವನೇ ನಿಜವಾದ ಸಾಧಕ. ಹಾಗಾದರೆ ಸಾಗಲು ಸುಮ್ಮನೆ ಕೈಕಟ್ಟಿ ಕುಳಿತರೆ ಆಗುತ್ತದೆಯೇ? ಇಲ್ಲ.ಇದಕ್ಕೆ ಬೇಕು ಸತತ *ಪರಿಶ್ರಮ*. ತೆಂಗಿನ ಕಾಯಿ ಎಲ್ಲಿಂದ ಸಿಗುತ್ತದೆ? ತಕ್ಷಣ *ಮರದಿಂದ* ಹೇಳ್ತೇವೆ. ಮರಕ್ಕೆ ಎಲ್ಲಿಂದ ಬರುತ್ತದೆ? ಆಲೋಚನೆ ಮಾಡುತ್ತೇವೆ. ಸಾಕಷ್ಟು ನೀರು, ಗೊಬ್ಬರ ಹಾಕಿದಾಗ, ಸರಿಯಾಗಿ ಆ ಗಿಡವನ್ನು ಸಾಕಿದಾಗ ಫಲ ಬಂದೇ ಬರುತ್ತದೆ. ಹಾಗಾದರೆ ಇಲ್ಲಿ *ಕಠಿಣ ಪರಿಶ್ರಮ* ಅಗತ್ಯವೆಂದಾಯಿತು.